Monday, September 25, 2006
ಇತಿಹಾಸದ ಸುಳ್ಳು ಚಿತ್ರಣ ಬೇಡ
"ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆ ಗಟ್ಟಿಗೊಳಿಸುವುದು ಅಸಾಧ್ಯ"
ವಿದ್ಯಾಮಂತ್ರಿ ಶಂಕರಮೂರ್ತಿಯವರು, ಮೊದಲು ಇದ್ದ ಕನ್ನಡದ ಬದಲಿಗೆ ಫಾರಸಿಯನ್ನು ಮೈಸೂರು ರಾಜ್ಯದ ಆಡಳಿತ ಭಾಷೆಯಾಗಿ ಮಾಡಿಕೊಂಡ ಟಿಪ್ಪುಸುಲ್ತಾನನು ಒಬ್ಬ ಕನ್ನಡ ವಿರೋಧಿ ಎಂದು ಹೇಳಿದುದಕ್ಕೆ ನಿರೀಕ್ಷಿತ ವಲಯಗಳಲ್ಲಿ ನಿರೀಕ್ಷಿತ ಗುಂಪುಗಳಿಂದ ವಿರೋಧ ವ್ಯಕ್ತವಾಗುತ್ತಿರುವುದು, ಅವರು ರಾಜೀನಾಮೆ ಕೊಡದಿದ್ದರೆ, ಮುಖ್ಯಮಂತ್ರಿಗಳು ಅವರನ್ನು ವಜಾ ಮಾಡದಿದ್ದರೆ, ಉಗ್ರ ಹೋರಾಟ ಪ್ರಾರಂಭಿಸುವುದಾಗಿ ಎಚ್ಚರಿಕೆ ಕೊಡುತ್ತಿರುವುದು ಕರ್ನಾಟಕ ರಾಜಕೀಯದ ಸದ್ಯದ ರಂಜಕ ಸುದ್ದಿಯಾಗಿದೆ. ಈ ವಿಷಯದಲ್ಲಿ ತಾವು ಸಾರ್ವಜನಿಕ ಚರ್ಚೆಗೆ ಸಿದ್ಧವಾಗಿರುವುದಾಗಿ ಸಚಿವರು ಪುನಃ ಸಮರ್ಥಿಸಿಕೊಂಡಿದ್ದಾರೆ.
ನಿನ್ನೆ(೨೧-೯-೨೦೦೬) ಅದಕ್ಕಾಗಿಯೇ ತಮ್ಮ ಸಂಗಡಿಗರಾದ ಕೆ. ಮರುಳಸಿದ್ದಪ್ಪ, ಕಾಂಗ್ರೆಸ್‌ನ ಮಾಜಿ ಪ್ರಾಥಮಿಕ ವಿದ್ಯಾಮಂತ್ರಿ ಪ್ರೊ.ಬಿ.ಕೆ. ಚಂದ್ರಶೇಖರ್ ಸಂಗಡ ಒಂದು ಮಾಧ್ಯಮಗೋಷ್ಠಿ ಯನ್ನು ಕರೆದ ನಟ, ನಿರ್ದೇಶಕ, ನಾಟಕ ಕಾರ ಗಿರೀಶ್ ಕಾರ್ನಾಡರು ಟಿಪ್ಪುಕುರಿತು ನಾಟಕ ಬರೆದಿರುವ ತಾವು ಶಂಕರಮೂರ್ತಿಯವರೊ ಡನೆ ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಘೋಷಿಸಿದ್ದಾರೆ. ಇದನ್ನು ನಾನು ಮೆಚ್ಚುತ್ತೇನೆ. ಆದರೆ ಅವರು ಮತ್ತು ಅವರ ಸಂಗಡಿಗರು ಶಂಕರಮೂರ್ತಿಗಳ ಮಾತು ಅಪಾಯಕಾರಿ, ರಾಷ್ಟ್ರಘಾತಕ ಎಂಬ ತೀರ್ಪನ್ನೂ ನೀಡಿ ಬಿಟ್ಟಿದ್ದಾರೆ. ಈ ಚರ್ಚೆಯ ರಾಜಕೀಯ ಒಳ ಸುಳಿಗಳನ್ನು ಚರ್ಚಿಸುವುದು ಇಲ್ಲಿ ನನ್ನ ಉದ್ದೇಶವಲ್ಲ. ಕಾರ್ನಾಡರನ್ನು ಒಬ್ಬ ಸಾಹಿತಿ, ಕಲಾವಿದ ಎಂದು ಮಾತ್ರ ಭಾವಿಸಿ, ನಾನು ಕೆಳಗಿನ ನಾಲ್ಕು ಮಾತುಗಳನ್ನು ಹೇಳಲಿಚ್ಛಿಸುತ್ತೇನೆ.
ಅವರ `ತುಘಲಕ್' ನಾಟಕವು ಪ್ರಕಟವಾದ ಹೊಸತರಲ್ಲಿಯೇ ನಾನು ಓದಿದೆ. ಅದರ ರಚನಾ ಕೌಶಲ ಚೆನ್ನಾಗಿದೆ. ಹಾಸ್ಯ ಗಂಭೀರಗಳ ಮಿಶ್ರಣ ಪರಿಣಾಮಕಾರಿಯಾಗಿದೆ. ನಿರ್ದೇಶನಕ್ಕೆ ತುಂಬ ಅವಕಾಶವಿದೆ. ಆಗ ಯೂರೋಪಿನಲ್ಲಿ ಪ್ರಭಾವಶಾಲಿ ಲೇಖಕನಾಗಿದ್ದ ಎಕ್ಸಿಸ್ಟೆಂಶಿಯಲಿಸ್ಟ್ ಕಾಮೂನ `ಕಾಲಿಗುಲ' ನಾಟಕದ ಮಾದರಿಯಲ್ಲಿ ಅದರ ಪ್ರಭಾವದಿಂದ ರಚಿತವಾಗಿದೆ. ನಾನು ತಿಳಿದ ಐತಿಹಾಸಿಕ ಮಹಮ್ಮದ್ ಬಿನ್ ತುಘಲಕ್‌ನ ಪಾತ್ರಕ್ಕಿಂತ ಇಲ್ಲಿ ಅವನನ್ನು ಆದರ್ಶೀಕರಿಸಿದ್ದಾರೆ ಎಂಬುದು ನನ್ನ ಭಾವನೆಯಾಗಿತ್ತು. ಆ ಕುರಿತು ಹೆಚ್ಚು ಸಂಶೋಧನೆ ಮಾಡುವ ಆಸಕ್ತಿಯಾಗಲಿ ವ್ಯವಧಾನವಾಗಲಿ ನನಗೆ ಆಗ ಇರಲಿಲ್ಲ.
ಅನಂತರ, ಸುಮಾರು ನಲವತ್ತು ವರ್ಷಗಳ ಮೇಲೆ, ಅವರ `ಟಿಪೂ ಸುಲ್ತಾನ್ ಕಂಡ ಕನಸು' ಎಂಬ ನಾಟಕವನ್ನು ಓದಿದೆ. ನಾನು ತಿಳಿದ ಟಿಪ್ಪುವಿಗೆ ಅವರು ಸಂಪೂರ್ಣ ವಾಗಿ ಬಿಳಿ ಬಣ್ಣ ಬಳಿದು ಅವನನ್ನೊಬ್ಬ ಧೀರೋದಾತ್ತ ದುರಂತ ನಾಯಕನನ್ನಾಗಿ ಮಾಡಿದ್ದಾರೆ ಎನಿಸಿತು. ಏಕೆಂದರೆ ಹಳೆ ಮೈಸೂರಿನವನಾದ ನನಗೆ ಟಿಪ್ಪುವಿನ ವಿಷಯ ಸಹಜವಾಗಿಯೇ ಹೆಚ್ಚು ವಿವರವಾಗಿ ತಿಳಿದಿತ್ತು.
ಈ ನಡುವೆ ಕಾರ್ನಾಡರ ರಾಜಕೀಯ ಹಿನ್ನೆಲೆಯ ಹೇಳಿಕೆಗಳು, ಚಟುವಟಿಕೆಗಳು, ಧರಣಿ ಮೊದಲಾದವನ್ನು ಗಮನಿಸಿ ಅವರೊಬ್ಬ ಕಟ್ಟಾ ಎಡಪಂಥೀಯರು ಎಂಬುದನ್ನು ಅರ್ಥಮಾಡಿಕೊಂಡಿದ್ದೆ. ಅದು ಅವರ ಸ್ವಂತ ಅನಿಸಿಕೆ ಮತ್ತು ಚಟುವಟಿಕೆಗಳು. ಪ್ರತಿಯೊಬ್ಬನಿಗೂ ಅವನವನ ನಂಬಿಕೆಗಳಿರುತ್ತವೆ ಎಂಬ ದೂರ ಭಾವದಲ್ಲಿದ್ದೆ. `ಟಿಪೂ ಸುಲ್ತಾನ್ ಕಂಡ ಕನಸು' ಓದಿದ ಮೇಲೆ `ತುಘಲಕ್' ಮತ್ತು ಟಿಪ್ಪುವಿನ ಬಗೆಗೆ ತುಸು ವಿವರವಾಗಿ ಅಧ್ಯಯನ ಮಾಡಿ ಈ ನಾಟಕಕಾರರಿಗೆ ಇತಿಹಾಸದ ಸತ್ಯದ ಬಗೆಗಿರುವ ನಿಷ್ಠೆಯು ಎಷ್ಟು ಮಟ್ಟಿನದು ಎಂಬುದನ್ನು ತಿಳಿಯಬೇಕೆನ್ನಿಸಿತು. ಅಧ್ಯಯನದಲ್ಲಿ ತೊಡಗಿದೆ. ಇತಿಹಾಸ ನನಗೆ ಮೊದಲಿನಿಂದ ಆಸಕ್ತಿ ಇರುವ ವಿಷಯ. ಅದರಲ್ಲಿಯೂ ಭಾರತೀಯ ಇತಿಹಾಸವನ್ನು ತಕ್ಕಮಟ್ಟಿಗೆ ಓದಿಯೂ ಇದ್ದೇನೆ.
ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ ಎಂದು ಬೆನ್ನುಡಿಯಲ್ಲಿ ಹೇಳಿದ್ದರೂ `ತುಘಲಕ್' ನಾಟಕ ವನ್ನು ಆಡಿದ ಕಡೆಯಲ್ಲೆಲ್ಲ ನೋಡಿದವರ ಮನಸ್ಸಿನಲ್ಲೆಲ್ಲ ಆಡಿದವರ ಮನಸ್ಸಿನಲ್ಲಿ ಕೂಡ ಅವನೇ ನಿಜವಾದ ಸುಲ್ತಾನ ಎಂಬ ಭಾವನೆ ಹುಟ್ಟಿತ್ತು. `ನನ್ನ ಅಧಿಕಾರಿಗಳಿಂದ ಒಬ್ಬ ಬ್ರಾಹ್ಮಣನಿಗೆ ಅನ್ಯಾಯ ವಾಯಿತು. ಆ ಅನ್ಯಾಯವನ್ನು ಅಳಿಸಿ ನಾನು ನ್ಯಾಯದ ಮಾರ್ಗವನ್ನು ಅನುಸರಿಸಲಿಕ್ಕೆ ಸಿದ್ಧನಿದ್ದೇನೆ ಎಂಬುದನ್ನು ನೀವು ಕಂಡಿರಿ. ಧರ್ಮ ದ್ವೇಷದಿಂದ ಒಡೆದು ಚೂರಾಗಿದ್ದ ನಮ್ಮ ರಾಜ್ಯದ ಇತಿಹಾಸದಲ್ಲಿ ಇದೊಂದು ಅವಿಸ್ಮರಣೀಯ ಗಳಿಗೆ. ನನಗೆ ರಾಜ್ಯದಲ್ಲಿ ಸಮತೆ ಬೇಕು, ಪ್ರಗತಿ ಬೇಕು, ತರ್ಕಶುದ್ಧ ನ್ಯಾಯ ಬೇಕು. ಶಾಂತಿ ಇದ್ದರೆ ಸಾಕಾಗಲಿಲ್ಲ. ಜೀವಕಳೆ ಬೇಕು'. `ಎಲ್ಲಕ್ಕೂ ಮಹತ್ತ್ವದ ಮಾತೆಂದರೆ ದೌಲತಾಬಾದ್ ಮುಖ್ಯತಃ ಹಿಂದೂ ಜನರ ನಗರವಾಗಿದೆ. ನನ್ನ ರಾಜಧಾನಿಯನ್ನು ಅಲ್ಲಿಗೊಯ್ದು ನನಗೆ ಹಿಂದೂ ಮುಸಲ್ಮಾನರಲ್ಲಿ ಹೆಚ್ಚಿನ ಮೈತ್ರಿ ಬೆಳೆಸಬೇಕಾಗಿದೆ' ಎಂಬ ಸುಲ್ತಾನನ ಮಾತು. `ಬ್ರಾಹ್ಮಣನೊಡನೆ ಮುಸಲ್ಮಾನ ಗೆಳೆಯನನ್ನು ಕಂಡರೆ ಸುಲ್ತಾನರು ಹಿರಿ ಹಿರಿ ಹಿಗ್ಗುತ್ತಾರೆ' ಎಂಬ ಮಾತು ಗಳು ಸುಲ್ತಾನನು ಅಕ್ಬರನಿಗಿಂತ ಇನ್ನೂರ ಮೂವತ್ತು ವರ್ಷ ಮೊದಲು ಅಕ್ಬರನಿಗಿಂತ ಹೆಚ್ಚು ಪರಧರ್ಮ ಸಹಿಷ್ಣುವೂ ಸರ್ವ ಸಮಾನ ಭಾವದವನೂ ಎಂಬ ಭಾವನೆಯನ್ನು ಕೊಡುತ್ತದೆ. ಆದರೆ ಇದೇ ಸುಲ್ತಾನನಲ್ಲವೆ ಐತಿಹಾಸಿಕವಾಗಿ ದೇವಗಿರಿ ಎಂಬ ಹಿಂದೂ ಹೆಸರನ್ನು ದೌಲತ್ತಾಬಾದ್ ಎಂಬ ಮುಸ್ಲಿಂ ಹೆಸರಿಗೆ ಬದಲಾಯಿಸಿದವನು? ಕ್ರಿಸ್ತಶಕ ೧೩೨೭ರಲ್ಲಿ ಅವನ ವಿರುದ್ಧ ದಂಗೆ ಎದ್ದಿದ್ದ ದಕ್ಷಿಣದ ತುಂಗಭದ್ರಾ ತೀರದ ಕಂಪ್ಲಿಯ ರಾಜನ ಹನ್ನೊಂದು ಗಂಡು ಮಕ್ಕಳನ್ನು ಒಟ್ಟಿಗೆ ಸೆರೆ ಹಿಡಿದು ಇಸ್ಲಾಮಿಗೆ ಮತಾಂತರಿಸಿದ ಎಂದು ಇಬನ್ ಬತ್ತೂತನು ದಾಖಲಿಸಿದ್ದಾನೆ. (Ibn Battuta, The Rehla of Ibn Battuta, English translation by Dr.Mahdi Hussain 1953, P 95. ಈಶ್ವರೀ ಪ್ರಸಾದರ Qaraunah Turks in India. Vol I, Allahabad 1936 P 65-66. Mahdi Hussain: TugalaQ Dynasty, calutta 1963 P 207-208. Quoted in Muslim Slave System in Medieval India by K.S.Lal. Aditya Prakashan. New Delhi, 1994, P 56)
ಆದರೆ (Ibn Battuta, The Rchla of Ibn Battuta, eng.translation by Dr.Mahdi Hussain 1953, ಪುಟ 95. ಈಶ್ವರೀ ಪ್ರಸಾದರ Qaraunah Turks in India. Vol I, Allahabad 1936 P 65-66. Mahdi Hussain: Tugalaq Dynasty, calcutta 1963 P207-208. Quoted in muslim slave system in medieval India by K.S.lal. Aditya Prakashan. New Delhi, 1994, P 56) ಇದೇ ಮಹಮ್ಮದ್ ಬಿನ್ ತುಘಲಕನು ಹಿಂದೂ ದೇವಾಲಯವನ್ನು ನಾಶಮಾಡಿ ಅವೇಜಾಗಳಲ್ಲಿ ಮಸೀದಿಗಳನ್ನು ಕಟ್ಟಿಸದೆ ಬಿಟ್ಟವನಲ್ಲ. ಆಂಧ್ರಪ್ರದೇಶದ ನಿಜಾಮಾಬಾದ್ ಜಿಲ್ಲೆಯ ಬೋಧನ್‌ನಲ್ಲಿ ದೇವಲ್ ಮಸೀದಿ ಎಂಬ ಒಂದು ಮಸೀದಿ ಇದೆ. ಹೆಸರೇ ಹೇಳುವಂತೆ ಅದೊಂದು ದೇವಾಲಯವನ್ನು ಒಡೆದು ಕಟ್ಟಿದ ಮಸೀದಿ. ಮಹಮ್ಮದ್ ಬಿನ್ ತುಘಲಕ್‌ನ ಆಡಳಿತದಲ್ಲಿ ಕಟ್ಟಿಸಿದ್ದೆಂದು ಹೇಳುವ ಎರಡು ಶಾಸನಗಳು ಇನ್ನೂ ಇವೆ. ಜಿ. ಯಜ್‌ದಾನಿಯವರು Epigraphia Indomosliemica 1919-1920 ಪುಟ ೧೬ರಲ್ಲಿ ಹೇಳುತ್ತಾರೆ: `ಹೆಸರೇ ಹೇಳುವಂತೆ ದೇವಲ್ ಮಸೀದಿಯು ಮೂಲ ಜೈನ ಮಂದಿರವಾಗಿದ್ದು ಮಹಮ್ಮದ್ ತುಘಲಕನು ಡೆಕ್ಕನ್ನನ್ನು ಗೆದ್ದಾಗ ಈ ಮಂದಿರವನ್ನು ಮಸೀದಿಯಾಗಿ ಮಾರ್ಪಡಿಸಿದ. ಈ ಕಟ್ಟಡವು ನಕ್ಷತ್ರಾಕೃತಿಯಲ್ಲಿತ್ತು. ಆದರೆ ಮುಸ್ಲಿಮರು (ತುಘಲಕನು) ಗರ್ಭಗೃಹವನ್ನು ತೆಗೆದು ಉಪದೇಶ ವೇದಿಕೆ ನಿರ್ಮಿಸುವುದನ್ನು ಬಿಟ್ಟು ಹೆಚ್ಚು ಬದಲಾವಣೆ ಮಾಡಿಲ್ಲ. ಮೂಲದ ಕಂಬಗಳು ಹಾಗೆಯೇ ಇವೆ. ಕಂಬಗಳ ಮೇಲೆ ಕೆತ್ತಿರುವ ತೀರ್ಥಂಕರರ ವಿಗ್ರಹಗಳು ಇವತ್ತಿಗೂ ಇವೆ.' (ಸೀತಾರಾಮ ಗೋಯೆಲ್: Hindu Temples: What happend to them? Vol II ಪುಟ ೬೭ ನೋಡಿ)
ಅಬೂನಾಸಿರ್ ಐಸಿಯು ಹೇಳುವ ಪ್ರಕಾರ ಸುಲ್ತಾನ್ ಮಹಮ್ಮದ್ ಬಿನ್ ತುಘಲಕನು ಇಸ್ಲಾಮಿಕನ ಬಾವುಟಗಳನ್ನು ಹಿಂದೆ ಎಂದೂ ತಲುಪದ ಎಡೆಗಳಿಗೆ ಒಯ್ದು ಹಾರಿಸಿದ; ಹಿಂದೆ ಎಂದೂ ಕೇಳದ ಕಡೆಗಳಲ್ಲಿ ಕುರಾನಿನ ಶ್ಲೋಕಗಳನ್ನು ಕೇಳಿಸಿದ. ಅಗ್ನಿಪೂಜಕ ಮಂತ್ರಗಳನ್ನು ನಿಲ್ಲಿಸಿ ಅಜಾನನ್ನು ಮೊಳಗಿಸಿದ. (S.A.A. ರಿಜ್ವಿ: ತುಘಲಕ್ ಕಾಲೀನ ಭಾರತ. ಅಲಿಗಡ್, 1956, 1ನೇ ಸಂಪುಟ, ಪುಟ ೩೨೫) ಇವನನ್ನು ಪರಮತ ಸಹಿಷ್ಣುವೆಂದು ಚಿತ್ರಿಸಲು ಈ ನಾಟಕಕಾರರಿಗೆ ಮಾರ್ಕ್ಸಿಸ್ಟ್ ಪ್ರಚಾರವನ್ನು ಬಿಟ್ಟು ಬೇರೆ ಯಾವ ಆಧಾರವಿತ್ತು ?
ಸುಲ್ತಾನ್ ಮಹಮ್ಮದ್ ತುಘಲಕ್‌ನ ಗುಲಾಮ ಬೇಟೆಯು ದೂರ ದೇಶಗಳಲ್ಲೆಲ್ಲಾ ಕುಖ್ಯಾತವಾಗಿತ್ತು. ಅವನ ಈ ಹುರುಪಿನ ಬಗೆಗೆ ಶಿಹಾಬುದ್ದೀನ್ ಅಹಮದ್ ಅಬ್ಬಾಸ್ ಬರೆದಿದ್ದಾನೆ: `ಕಾಫಿರರ ಮೇಲೆ ಯುದ್ಧ ಮಾಡುವ ಸುಲ್ತಾನನ ಉತ್ಸಾಹ ಎಂದಿಗೂ ಕಡಿಮೆಯಾಗಿಲ್ಲ. ಅವರು ಬೇಟೆಯಾಡಿದ ಕೈದಿಗಳ ಸಂಖ್ಯೆ ಎಷ್ಟಿರುತ್ತೆಂದರೆ ಪ್ರತಿ ದಿನವೂ ಸಾವಿರಾರು ಗುಲಾಮರನ್ನು ತೀರ ಹೀನ ಬೆಲೆಗೆ ಮಾರುತ್ತಿದ್ದರು. (ಮಸಾಲಿಕ್-ಉಲ್-ಅಬಸರ್ ಫಿ ಮುಮಾ ಲಿಕ್-ಉಲ್-ಅಂಸರ್. Translated in E.D. III, P 580. ಹಿಂದೀ ಅನುವಾದ ರಿಜ್ವಿಯ ತುಘಲಕ್ ಕಾಲೀನ ಭಾರತ). ಯುದ್ಧದಲ್ಲಿ ಮಾತ್ರವಲ್ಲ ವಿದೇಶ ಮತ್ತು ಹಿಂದೂಸ್ತಾನಿ ಗುಲಾಮರನ್ನು ಕೊಂಡು ಸಂಗ್ರಹಿಸುವ ಶೋಕಿ ಅವನಿಗೆ ಬಹಳ ಇತ್ತು. ಪ್ರತಿ ಯುದ್ಧ ಅಥವಾ ದಂಗೆಯನ್ನು ಅಡಗಿಸುವಾಗಲೂ ಸುಲ್ತಾನನು ಹಿಡಿಸಿ ತರುತ್ತಿದ್ದ ಕಾಫಿರ್(ಮುಸ್ಲಿಮೇತರ) ಹೆಂಗಸು ಕೈದಿಗಳ ಸಂಖ್ಯೆ ಎಷ್ಟಿರುತ್ತಿತ್ತೆಂದರೆ ಇಬನ್ ಬತ್ತೂತ ಬರೆದಿದ್ದಾನೆ: `ಒಂದು ಸಲ ದಿಲ್ಲಿಯಲ್ಲಿ ಬಹಳ ಜನ ಹೆಂಗಸು ಕೈದಿಗಳನ್ನು ಜಮಾಯಿಸಿದರು. ಅವರಲ್ಲಿ ಹತ್ತು ಜನರನ್ನು ವಜೀರರು ನನಗೆ ಕಳಿಸಿದರು. ಅವರಲ್ಲಿ ಒಬ್ಬಳನ್ನು ನಾನು ಅವರನ್ನು ತಂದವನಿಗೇ ಕೊಟ್ಟೆ. ಆದರೆ ಅವನಿಗೆ ತೃಪ್ತಿಯಾಗಲಿಲ್ಲ. ನನ್ನ ಜತೆಗಾರನು ಮೂವರು ಚಿಕ್ಕ ಹುಡುಗಿಯರನ್ನು ತೆಗೆದುಕೊಂಡ. ಉಳಿದವರು ಏನಾದರೋ ನಾನು ಕಾಣೆ. (ಇಬನ್ ಬತ್ತೂತ, ಮೇಲ್ಕಾಣಿಸಿದ ಗ್ರಂಥ ಪುಟ ೧೨೩). ಸುಲ್ತಾನ್ ಮಹಮ್ಮದನ ಬಗೆಗೆ ಶಿಹಾಬುದ್ದೀನ್ ಅಲ್ ಉಮರಿ ಹೇಳು ತ್ತಾನೆ: ರಾಜಕುಮಾರನಾಗಿದ್ದಾಗ ಅವನು ಬೇಟೆಗೆ ಹೋದಾಗ ೧೨೦೦ ಹಕೀಮರು, ಅಶ್ವಾರೋಹಿಗಳಾಗಿ ಗಿಡಗಳನ್ನು ಹಾರಿ ಬಿಡುವ ಹತ್ತು ಸಾವಿರ ಪರಿಣತರು. ಮುನ್ನೂರು ಜನ ತಮ್ಮಟೆ ಬಾರಿಸುವವರು, ಬೇಟೆಯ ಸಾಮಾನುಗಳನ್ನು ಮಾರುವ ಮೂರು ಸಾವಿರ ವ್ಯಾಪಾರಿಗಳು, ಜತೆಯಲ್ಲಿ ಊಟ ಮಾಡುವ ಐನೂರು ಜನರು, ಗುಲಾಮ ಸಂಗೀತಗಾರರಲ್ಲದೆ ಸಂಬಳ ಪಡೆಯುವ ಒಂದು ಸಾವಿರ ಸಂಗೀತಗಾರರು, ಒಂದು ಸಾವಿರ ಕವಿಗಳು ಹೋಗುತ್ತಿದ್ದರು. (ಶಿಹಾಬುದ್ದೀನ್ ಅಲ್ ಉಮರಿ: ಮೇಲ್ಕಾಣಿಸಿದ ಗ್ರಂಥ. ಪುಟ ೫೭೮-೮೦).
ಈ ಸುಲ್ತಾನನನ್ನು ಯಾವ ಬಗೆಯ ಆದರ್ಶದ ಬೆನ್ನು ಹತ್ತಿದ ರಾಜನೆನ್ನಬೇಕು ?
`ಟಿಪೂ ಸುಲ್ತಾನ್ ಕಂಡ ಕನಸು' ನಾಟಕದಲ್ಲೂ ಗಿರೀಶ್ ಕಾರ್ನಾಡರ ಮನಸ್ಸು ಇದೇ ರೀತಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಿದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಹಳೆ ಮೈಸೂರಿನ ಸಂತೆ ಜಾತ್ರೆಗಳಲ್ಲಿ ಮಾರುಕಟ್ಟೆಯ ಮೂಲೆಗಳಲ್ಲಿ ಇತಿಹಾಸದ ಅಧ್ಯಯನವಿಲ್ಲದ, ಅರೆ ಓದು ಬರಹ ಬಲ್ಲ ಲಾವಣಿಕಾರರು ಟಿಪ್ಪುವನ್ನು ವೈಭವೀಕರಿಸಿ ಬರೆದ ಲಾವಣಿಗಳನ್ನು ದಮಡಿ ಬಾರಿಸಿಕೊಂಡು ಹಾಡುತ್ತಿದ್ದರು. ಮುಸಲ್ಮಾನರು ಅದರಲ್ಲೂ ಮುಸಲ್ಮಾನ ವ್ಯಾಪಾರಿಗಳು ಈ ಲಾವಣಿ ಕಾರರಿಗೆ ಹಣ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಹಾಗೆಯೇ ಟಿಪ್ಪುವನ್ನು ವೈಭವೀಕರಿಸಿದ ನಾಟಕಗಳು. ಬ್ರಿಟಿಷರ ವಿರುದ್ಧ ಚಳವಳಿ ಮಾಡುತ್ತಿದ್ದಾಗ ಅವರ ವಿರುದ್ಧ ಹೋರಾಡಿದನೆಂಬ ಏಕೈಕ ಕಾರಣದಿಂದ ಆತನನ್ನು ಭಾರತ ದೇಶದ ಭಕ್ತನೆಂದು ಚಿತ್ರಿಸಿ ನಾಟಕ ಬರೆದರು. ಪ್ರೇಕ್ಷಕರು ಆ ಚಿತ್ರವನ್ನೆಲ್ಲಾ ನಿಜವಾದ ಇತಿಹಾಸವೆಂದು ನಂಬಿದರು. ಸ್ವಾತಂತ್ರ್ಯಾನಂತರವಂತೂ ಮಾರ್ಕ್ಸಿಸ್ಟರು, ಓಟು ಬ್ಯಾಂಕಿನವರು, ನಿಷ್ಠ ಮುಸ್ಲಿಮ ಕಲಾವಿದರು, ನಾಟಕಕಾರರು, ಚಲನಚಿತ್ರ ತಯಾರಕರು ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಬಿಂಬಿಸಿದರು. ನಿಜವಾದ ಇತಿಹಾಸ ಸತ್ತೇ ಹೋಯಿತು. ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟ ಪ್ರಸಂಗವನ್ನು ಎತ್ತಿಕೊಂಡು ಬ್ರಿಟಿಷರು ಎಂಥ ಕಟುಕರೆಂದು ಚಿತ್ರಿಸಿದರು. ಮೇಲೆ ಹೇಳಿದ ಟಿಪ್ಪುವನ್ನು ರಾಷ್ಟ್ರೀಯ ನಾಯಕನೆಂದು ಚಿತ್ರಿಸುವ ಸಂಪ್ರದಾಯಕ್ಕೆ ಬದ್ಧರಾದ ಗಿರೀಶ್ ಕಾರ್ನಾಡರೂ ಈ ಪ್ರಸಂಗವನ್ನು ಎತ್ತಿಕೊಂಡು ಟಿಪ್ಪುವಿನ ಬಾಯಿಯಲ್ಲಿ `ನಮ್ಮ ನಾಡಿನಲ್ಲೊಂದು ಹೊಸ ಭಾಷೆ ಬಂದಿದೆ. ಹೊಸ ಸಂಸ್ಕೃತಿ ಬಂದಿದೆ. ಅಂಗ್ರೇ ಜಿ ! ಏಳು-ಎಂಟು ವರ್ಷದ ಕಂದಮ್ಮಗಳನ್ನು ಯುದ್ಧ ಕೈದಿಯಾಗಿ ಬಳಸಬಲ್ಲ ಸಂಸ್ಕೃತಿ' ಎಂಬ ಸಮಾಜ ಶಾಸ್ತ್ರದ ದಾರ್ಶನಿಕ ಮಾತನ್ನು ಹಾಕುತ್ತಾರೆ.
ಆದರೆ ಯುದ್ಧ ಬಂಧಿಗಳನ್ನು ತೆಗೆದುಕೊಳ್ಳುವುದು ಭಾರತವನ್ನಾಳಿದ ಮುಸ್ಲಿಂ ದೊರೆಗಳ ಸಂಪ್ರದಾಯವೇ ಆಗಿತ್ತು. ಅದನ್ನು ಬ್ರಿಟಿಷರು ಇಲ್ಲಿ ಅನುಸರಿಸಿದರು ಎಂಬ ಸತ್ಯ ಕಾರ್ನಾಡರಿಗೆ ತಿಳಿದಿಲ್ಲ ಅಥವಾ ತಿಳಿದಿದ್ದರೂ ಮರೆ ಮಾಚಿದ್ದಾರೆ. ಔರಂಗಜೇಬನ ಸೇನಾಪತಿ ಮೀರ್ ಜುಮ್ಲಾನು ಅಸ್ಸಾಮಿನ ರಾಜನನ್ನು ಸೋಲಿಸಿದಾಗ ಅವನಲ್ಲಿದ್ದ ಚಿನ್ನ, ಬೆಳ್ಳಿ, ನಗದನ್ನೆಲ್ಲ ದೋಚಿ, ಬಲವಂತವಾಗಿ ಕೇಳಿದ ಇನ್ನಷ್ಟು ನಗದನ್ನು ಒಪ್ಪಿಸುವವರೆಗೆ ರಾಜನ ಮಗಳು ಮತ್ತು ಗಂಡು ಮಕ್ಕಳು; ಬುರ್ಹ ಗೋಹೆನ್, ಬಾರ್ ಗೊಹೇನ್, ಘಡ ದೊನಿಯಾಪುಖಾನ್ ಮತ್ತು ಬಡ್ ಪತ್ರಾಪುಖಾನ್ ಎಂಬ ನಾಲ್ವರು ಸಾಮಂತರ ಗಂಡು ಮಕ್ಕಳನ್ನು ಯುದ್ಧ ಬಂಧಿಗಳಾಗಿರುವಂತೆ ಬಲಾತ್ಕರಿಸಿ ಕೊಂಡೊಯ್ದನೆಂದು ಔರಂಗಜೇಬನ ಅಧಿಕೃತ ಇತಿಹಾಸದಲ್ಲೇ ಬರೆದಿದೆ. (ಮಾಸಿರ್ -ಇ-ಅಲಂಗೀರ್, ಪುಸ್ತಕ ಬರೆದವನು ಸಾಕಿ ಮುಸ್ತಾದ್ ಖಾನ್, ಐದನೆಯ ವರ್ಷ, ೫ನೇ ಜಮಾದ್, ಅಲ್ ಹಿಜಿರಾ ೧೦೭೨, ೫. ಜನವರಿ ೧೬೬೩) ಮೊಘಲರ ಕಾಲದಲ್ಲಿ ರಾಜಪೂತ ರಾಜರುಗಳು ತಮ್ಮ ಒಬ್ಬನಾದರೂ ಮಗನನ್ನು ಬಾದಶಹನ ಆಸ್ಥಾನದಲ್ಲಿ ಇಡಬೇಕಾಗಿತ್ತು. ಅವರು ವಸ್ತುತಃ ಯುದ್ಧಬಂಧಿಗಳೇ. ಅಕ್ಬರ್‌ನಿಂದ ಆರಂಭವಾಗಿ ಮುಂದುವರಿದ ಪದ್ಧತಿ ಸೋತ ರಾಜಪೂತ ರಾಜನು ತನ್ನ ಮಗಳನ್ನು ಬಾದಶಹರಿಗೆ ಕೊಟ್ಟು ಮದುವೆ ಮಾಡಬೇಕಾದದ್ದು ಕೂಡ ವಸ್ತುತಃ ಯುದ್ಧ ಬಂಧಿಯಾಗಿಯೇ. ಮಹಾರಾಣಾ ಪ್ರತಾಪನು ಅವನ ಮಗನನ್ನು ತನ್ನ ಆಸ್ಥಾನಕ್ಕೆ ಕಳಿಸಬೇಕೆಂದು ಅಕ್ಬರನು ಕೇಳಿದ್ದ. ಆದರೆ ಪ್ರತಾಪನು ಒಪ್ಪಲಿಲ್ಲ. ಮುಂದೆ ಶಹಜಹಾನನೆಂದು ನಾಮಕರಣ ಮಾಡಿಕೊಂಡ ಖುರ್ರಮ್ ತನ್ನ ತಂದೆ ಜಹಾಂಗೀರನ ವಿರುದ್ಧ ದಂಗೆ ಎದ್ದು ಸೋತಾಗ ಜಹಾಂಗೀರನು ಖುರ್ರಮನ ಇಬ್ಬರು ಮಕ್ಕಳು ಎಂದರೆ ತನ್ನ ಮೊಮ್ಮಕ್ಕಳು, ದಾರಾ ಮತ್ತು ಔರಂಗಜೇಬರುಗಳನ್ನು ಯುದ್ಧ ಬಂಧಿಗಳನ್ನಾಗಿ ತೆಗೆದುಕೊಂಡಿದ್ದ. ಬ್ರಿಟಿಷನಾದ ಕಾರ್ನ್‌ವಾಲೀಸನು ಟಿಪ್ಪುವಿನ ಇಬ್ಬರು ಮಕ್ಕಳನ್ನು ನೋಡಿಕೊಂಡಷ್ಟು ಮುಚ್ಚಟೆಯಿಂದ, ಮುಸ್ಲಿಮ ದೊರೆಗಳು ತಮ್ಮ ಯುದ್ಧ ಬಂಧಿಗಳನ್ನು ಎಂದೂ ನೋಡಿಕೊಳ್ಳುತ್ತಿರಲಿಲ್ಲ. ಯುದ್ಧಬಂಧಿಗಳು ಅನ್ಯ ಧರ್ಮೀಯರಾದರೆ ಅವರನ್ನು ಧರ್ಮಾಂತರಿಸದೆ ಬಿಡುತ್ತಿರಲಿಲ್ಲ.
ಟಿಪ್ಪುವು ಮಕ್ಕಳನ್ನು ಯುದ್ಧ ಬಂಧಿಗಳಾಗಿ ಇಟ್ಟ ಕರಾರು ಯಾವುದು? ಯುದ್ಧದಲ್ಲಿ ಸೋತ ನಂತರ ಇಂತಿಷ್ಟು ಹಣವನ್ನು ಬ್ರಿಟಿಷರಿಗೆ ಕೊಡುವುದಾಗಿ ಅವನು ಒಪ್ಪಿಕೊಂಡ. ಸದ್ಯದಲ್ಲಿ ಕೈಲಿ ಹಣವಿರಲಿಲ್ಲ. ಹೊಂದಿಸಿಕೊಡುವ ತನಕ ಒತ್ತೆ ಇಡಲು ಬೇರೇನೂ ಇರಲಿಲ್ಲ. ಅವನ ಬರಿ ಮಾತನ್ನು, ಆಣೆ ಪ್ರಮಾಣಗಳನ್ನು ಬ್ರಿಟಿಷರು ನಂಬಿ ಹೋಗಬಹುದಿತ್ತೆ? ಮಕ್ಕಳನ್ನು ಒಯ್ಯುವುದು ಬ್ರಿಟಿಷರ ಉದ್ದೇಶವಾ ಗಿರಲಿಲ್ಲ. ಒತ್ತೆ ಇಡಲು ಟಿಪ್ಪುವಿನ ಹತ್ತಿರ ಬೇರೆ ಏನೂ ಇರಲಿಲ್ಲ. ಒತ್ತೆ ಇರಿಸಿಕೊಂಡ ಮಕ್ಕಳ ಯೋಗಕ್ಷೇಮವನ್ನು ಬ್ರಿಟಿಷರು ಚೆನ್ನಾಗಿಯೇ ನೋಡಿಕೊಂಡರು.
ಟಿಪ್ಪುವನ್ನು ಕನ್ನಡದ ಕುವರನೆಂದು ಕೆಲವು ರಾಜ ಕಾರಣಿಗಳು ಭಾಷಣ ಮಾಡುವುದು ಹೊಸತಲ್ಲ. ಆದರೆ ಒಡೆಯರ ಕಾಲದಲ್ಲಿ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ಟಿಪ್ಪು ಬದಲಿಸಿ ಫಾರಸಿ ಭಾಷೆಯನ್ನು ತಂದ. ಹಳೆ ಮೈಸೂರಿನ ಕಂದಾಯ ಇಲಾಖೆಗೆ ಸೇರಿದ ಶ್ಯಾನುಭೋಗರ ಮನೆತನದ ನನಗೆ ಆಗಿನ ಕಂದಾಯದ ಲೆಕ್ಕಗಳ ಪರಿಚಯವಿದೆ. ಖಾತೆ, ಖಿರ್ದಿ, ಪಹಣಿ, ಖಾನೀಸು ಮಾರಿ, ಗುದಸ್ತಾ, ತಖ್ತೆ, ತರಿ, ಖುಷ್ಕಿ, ಬಾಗಾಯ್ತು, ಬಂಜರು, ಜಮಾಬಂದಿ, ಅಹವಾಲು, ಖಾವಂದ್, ಅಮ ಲ್ದಾರ್, ಶಿರಸ್ತೇದಾರ್ ಹೀಗೆ ಆಡಳಿತದ ಪ್ರತಿಯೊಂದು ಶಬ್ದವೂ ಫಾರಸಿಯಾದದ್ದು ಟಿಪ್ಪುವಿನ ಕಾಲದಲ್ಲಿ ಸೇರಿದ್ದು.
ಊರುಗಳ ಮೂಲ ಹೆಸರುಗಳನ್ನೆಲ್ಲ ಟಿಪ್ಪುವು ಬದಲಿಸಿದ್ದ. ಬ್ರಹ್ಮಪುರಿಯನ್ನು ಸುಲ್ತಾನ್ ಪೇಟ್ ಎಂದು ಬದಲಿಸಿದ. ಕೇರಳದ ಕಾಳೀಕೋಟೆ-ಈಗಿನ ಕಲ್ಲೀಕೋಟೆಯನ್ನು ಫರೂಕಾಬಾದ್; ಚಿತ್ರದುರ್ಗ ವನ್ನು ಫಾರ್ರುಕ್ ಯಬ್ ಹಿಸ್ಸಾರ್; ಕೊಡಗನ್ನು ಜಫರಾಬಾದ್; ದೇವನಹಳ್ಳಿಯನ್ನು ಯೂಸುಫಾಬಾದ್; ದಿಂಡಿಗಲ್ ಅನ್ನು ಖಲೀಲಾಬಾದ್; ಗುತ್ತಿ ಯನ್ನು ಫೈಜ್ ಹಿಸ್ಸಾರ್; ಕೃಷ್ಣಗಿರಿಯನ್ನು ಫಲ್ಕ್ ಇಲ್ ಅಜಮ್; ಮೈಸೂರನ್ನು ನಜರಾಬಾದ್(ಈಗ ನಜರ್‌ಬಾದ್ ಎನ್ನುವುದು ಮೈಸೂರಿನ ಒಂದು ಮೊಹಲ್ಲಾ ಆಗಿದೆ); ಪೆನುಗೊಂಡವನ್ನು ಫಕ್ರಾಬಾದ್; ಸಂಕ್ರಿದುರ್ಗವನ್ನು ಮುಜ್ಜಫರಾಬಾದ್; ಸಿರಾವನ್ನು ರುಸ್ತುಮಾಬಾದ್; ಸಕಲೇಶಪುರವನ್ನು ಮಂಜ್ರಾಬಾದ್ ಎಂದು ಬದಲಿಸಿದ. ಇವೆಲ್ಲ ಟಿಪ್ಪುವಿನ ರಾಷ್ಟ್ರೀಯತೆಯನ್ನು, ಕನ್ನಡ ನಿಷ್ಠೆಯನ್ನು ಅನ್ಯಧರ್ಮ ಸಹಿಷ್ಣುತೆಯನ್ನು ತೋರಿಸುತ್ತದೆಯೆ?
`ಟಿಪೂ ಸುಲ್ತಾನ್ ಕಂಡ ಕನಸು' ಎಂಬ ತಮ್ಮ ನಾಟಕದ ಹೆಸರನ್ನು ಗಿರೀಶ್ ಕಾರ್ನಾಡರು `ಟಿಪ್ಪು ಸುಲ್ತಾನನ ಕನಸುಗಳು' ಎಂಬ ಟಿಪ್ಪುವು ಸ್ವತಃ ಅಕ್ಷರಗಳಲ್ಲಿ ಫಾರ್ಸಿ ಭಾಷೆಯಲ್ಲಿ ಬರೆದಿಡುತ್ತಿದ್ದ ಕಿರು ಹೊತ್ತಗೆ, ಅದರ ಇಂಗ್ಲಿಷ್ ಸಂಪಾದಕ ಮೇಜರ್ ಬೀಟ್‌ಸನ್ ಕೊಟ್ಟ ಹೆಸರಿನಿಂದ ತೆಗೆದುಕೊಂಡಿದ್ದಾರೆ. ಈ ಇಂಗ್ಲಿಷ್ ಅನುವಾದವನ್ನು ನಾನು ಓದಿದ್ದೇನೆ. ತಾನು ಬರೆಯುವಾಗ, ಬರೆದದ್ದನ್ನು ಓದುವಾಗ ಯಾರೂ ನೋಡಬಾರದೆಂದು ಟಿಪ್ಪುವು ಕಳವಳ ಪಡುತ್ತಿದ್ದ. ಶ್ರೀರಂಗಪಟ್ಟಣದ ಅರಮನೆಯ ಕಕ್ಕಸಿನಲ್ಲಿ ಪತ್ತೆ ಹಚ್ಚಿದ್ದಾಗಿ ಟಿಪ್ಪುವಿನ ಅತ್ಯಂತ ನಂಬಿಕೆಯ ಸೇವಕ ಹಬೀ ಬುಲ್ಲಾಹನು ಅದನ್ನು ಗುರುತಿಸಿ ಟಿಪ್ಪುವೇ ಬರೆದದ್ದೆಂದು ಹೇಳಿದ. ಅದರ ಮೂಲ ಮತ್ತು ಇಂಗ್ಲಿಷ್ ಅನುವಾದಗಳು ಲಂಡನ್ನಿನ ಇಂಡಿಯಾ ಆಫೀಸಿನಲ್ಲಿವೆ. ಅದನ್ನು ಓದಿದರೆ ಟಿಪ್ಪುವು ಎಂಥ ಧರ್ಮಾಂಧನೆಂಬುದು ಇನ್ನಷ್ಟು ಖಚಿತವಾಗುತ್ತದೆ. ಅದರಲ್ಲೆಲ್ಲ ಹಿಂದೂಗಳನ್ನು ಕಾಫಿರರೆಂದೇ ಕರೆಯುತ್ತಾನೆ. ಇಂಗ್ಲಿಷರನ್ನು ಕ್ರೈಸ್ತ ರೆಂದು ನಿರ್ದೇಶಿಸುತ್ತಾನೆ. ಉದ್ದನೆಯ ಗಡ್ಡ ಬಿಟ್ಟ ಮೌಲ್ವಿಗಳು ಆತನ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಾರೆ. ತಾನು ಮೆಕ್ಕಾ ಯಾತ್ರೆ ಹೋಗಿದ್ದಂತೆ ಕನಸು ಕಾಣುತ್ತಾನೆ. ಸ ಪ್ರವಾದಿ ಮೊಹಮ್ಮದರು(೫) `ಟಿಪ್ಪುವನ್ನು ಬಿಟ್ಟು ನಾನು ಸ್ವರ್ಗದೊಳಕ್ಕೆ ಹೆಜ್ಜೆ ಇಡುವುದಿಲ್ಲವೆಂದು ಹೇಳಿದರು' ಎಂದು ಒಬ್ಬ ಉದ್ದನೆಯ ಗಡ್ಡದ ಅರಬನು ಹೇಳುತ್ತಾನೆ. ಮುಸ್ಲಿಮರಲ್ಲದ ಸಮಸ್ತರನ್ನೂ ಮುಸ್ಲಿಮರಾಗಿ ಮುಸ್ಲಿಮೇತರ ರಾಜ್ಯವನ್ನು ಸಂಪೂರ್ಣ ಮುಸ್ಲಿಂ ರಾಜ್ಯವಾಗಿ ಪರಿವರ್ತಿಸುವ ಕನಸು ಕಾಣುತ್ತಾನೆ.
ಈ ಇಡೀ ಕಿರುಹೊತ್ತಗೆಯಲ್ಲಿ ಭಾರತವನ್ನು ಆಧುನೀಕರಿಸುವ ಕಿಂಚಿತ್ ಆಲೋಚನೆಯೂ ಇಲ್ಲ. ತನಗೆ ದೊಡ್ಡ ಮುಳುವಾಗಿದ್ದ ಇಂಗ್ಲಿಷರನ್ನು (ಅವರನ್ನು ಉದ್ದಕ್ಕೂ ಕ್ರೈಸ್ತರೆಂದು ಜಾತಿವಾಚಕದಿಂದ ನಿರ್ದೇಶಿಸುತ್ತಾನೆ) ಓಡಿಸುವ ಬಯಕೆ ಇದೆ.
ಮಲಬಾರ್ ಮತ್ತು ಕೊಡಗುಗಳಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸಿದ ಟಿಪ್ಪು ಮೈಸೂರು ಪ್ರಾಂತ್ಯದಲ್ಲಿ ಆ ದುಸ್ಸಾಹಸಕ್ಕೆ ಹೋಗಲಿಲ್ಲ. ೧೭೯೧ ರಲ್ಲಿ ಮೂರನೇ ಮೈಸೂರು ಯುದ್ಧ ವಾಗಿ ಸೋತು ಬ್ರಿಟಿಷರಿಗೆ ದೊಡ್ಡ ಮೊತ್ತದ ಸಂಪತ್ತನ್ನು ರಾಜ್ಯದ ಮುಖ್ಯ ಭಾಗಗಳನ್ನೂ ಒಪ್ಪಿಸಿ ಮಕ್ಕಳನ್ನು ಯುದ್ಧ ಬಂಧಿಯಾಗಿ ಕೊಟ್ಟ ಮೇಲೆ ಶೃಂಗೇರಿ ಮಠಕ್ಕೆ ಕಾಣಿಕೆ ಸಲ್ಲಿಸುವ ಮೂಲಕ ಹಿಂದೂಗಳ ಅಸಮಾಧಾನವನ್ನು ಕಡಿಮೆ ಮಾಡಲು ಪ್ರಯತ್ನಿಸಿದುದನ್ನು ಇವತ್ತಿನ ಜಾತ್ಯತೀತವಾದಿಗಳು ದೊಡ್ಡದು ಮಾಡಿ ಅವನನ್ನೊಬ್ಬ ಧರ್ಮ ಸಹಿಷ್ಣುನೆಂದು ಬಿಂಬಿಸುತ್ತಿದ್ದಾರೆ. ಆಫ್‌ಘಾನ್ ದೊರೆ ಜಿಮಾಳ್‌ಶಾಹನಿಗೆ ಮತ್ತು ತುರ್ಕಿಯ ಖಲೀಫನಿಗೆ ಭಾರತದ ಮೇಲೆ ದಂಡೆತ್ತಿ ಬಂದು ಇಸ್ಲಾಂ ರಾಜ್ಯವನ್ನು ಸಂಪೂರ್ಣವಾಗಿ ಸ್ಥಾಪಿಸುವಂತೆ ಟಿಪ್ಪು ಕಾಗದ ಬರೆದಿದ್ದ. ೧೭೯೬ರಲ್ಲಿ ಮೈಸೂರಿನ ರಾಜರ ಅರಮನೆಯನ್ನು ಲೂಟಿ ಮಾಡಿದಾಗ ಅರಮನೆಯ ಗ್ರಂಥಾಲಯದಲ್ಲಿದ್ದ ಅಮೂಲ್ಯ ಗ್ರಂಥಗಳು ತಾಳೆಯೋಲೆಯ ಹಸ್ತಪ್ರತಿಗಳು ಮತ್ತು ಕಡತಗಳನ್ನು ಕುದುರೆಗಳಿಗೆ ಹುರುಳಿ ಬೇಯಿಸಲು ಇಂಧನವಾಗಿ ಉಪಯೋಗಿಸುವಂತೆ ಅಪ್ಪಣೆ ಮಾಡಿದ.
ಮಲಬಾರಿನ ಮುಸ್ಲಿಮರು ಮಲೆಯಾಳಂ ಭಾಷೆಯನ್ನು, ತಮಿಳುನಾಡಿನ ಮುಸ್ಲಿಮರು ಮನೆಯಲ್ಲಿ ತಮಿಳನ್ನು ಇಂದಿಗೂ ಮಾತನಾಡುತ್ತಾರೆ. ಓದಿ ಬರೆಯುತ್ತಾರೆ. ಆದರೆ ಮೈಸೂರಿನ ಮುಸ್ಲಿಮರು ಇಂದಿಗೂ ಉರ್ದು ಮಾತನಾಡುವುದು. ಕನ್ನಡದಲ್ಲಿ ಓದಿ ಬರೆಯದೆ ಇರುವುದು. ಕನ್ನಡ ರಾಜ್ಯ ಭಾಷಾ ಮುಖ್ಯವಾಹಿನಿಯಲ್ಲಿ ಸೇರದೆ ಇರುವುದು ಟಿಪ್ಪು ಆರಂಭಿಸಿದ ಫಾರ್ಸಿ ಮತ್ತು ಉರ್ದು ವಿದ್ಯಾಭ್ಯಾಸ ಪದ್ಧತಿಯಿಂದ.
ನನ್ನ ಮೂಲಭೂತ ಪ್ರಶ್ನೆ ಎಂದರೆ ಐತಿಹಾಸಿಕ ವಸ್ತು ಮತ್ತು ವ್ಯಕ್ತಿಗಳನ್ನು ಪಾತ್ರಗಳಾಗಿ ಚಿತ್ರಿಸುವಾಗ ಸಾಹಿತಿಯು ವಹಿಸಬಹುದಾದ ಸ್ವಾತಂತ್ರ್ಯ ಯಾವ ರೀತಿಯದು? ಕಾಲ್ಪನಿಕ ಪಾತ್ರಗಳನ್ನು ತನಗಿಷ್ಟ ಬಂದಂತೆ ರಚಿಸುವ ಸ್ವಾತಂತ್ರ್ಯ ಸಾಹಿತಿಗೆ ಯಾವತ್ತೂ ಇದೆ. ಏಕೆಂದರೆ ಅದು ಆತನ ಸ್ವಂತ ಸೃಷ್ಟಿ. ಆದರೆ ಐತಿಹಾಸಿಕ ಪಾತ್ರವನ್ನು ಚಿತ್ರಿಸುವಾಗ ಐಸಿಹಾಸಿಕ ಸತ್ಯಕ್ಕೆ ಅವನು ನಿಷ್ಠನಾಗಿರಬೇಕು. ಸರ್ವ ಸಮ್ಮತ ವಾದ ಐತಿಹಾಸಿಕ ಸತ್ಯತೆಯೆಂಬುದೇ ಇಲ್ಲ. ಇತಿಹಾಸಕಾರನು ವ್ಯಾಖ್ಯಾನಿಸಿದಂತೆಯೇ ಅದರ ಸತ್ಯ ಎಂದು ಹೇಳುವವರೂ ಇದ್ದಾರೆ. ಸಾಹಿತಿಯು ಯಾವುದಾದರೊಂದು ಸಿದ್ಧಾಂತಕ್ಕೆ ಬದ್ಧನಾಗಿದ್ದರೆ ಆ ಸಿದ್ಧಾಂತವು ಅಥವಾ ಆ ಸಿದ್ಧಾಂತದ ಗುಂಪು ಹೇಳಿ ನಿರ್ದೇಶಿಸದಂತೆಯೇ ಇತಿಹಾಸದ ಪ್ರತಿಯೊಂದು ಘಟನೆ ಮತ್ತು ಪಾತ್ರಗಳನ್ನು ಅರ್ಥೈಸುವುದು ಅವನಿಗೆ ಅನಿವಾರ್ಯವಾಗುತ್ತದೆ. ಕಮ್ಯುನಿಸ್ಟ್, ಜೆ.ಎನ್.ಯು.ಗುಂಪು. ವಾಮ ಪಂಥೀಯ ಎಂಬ ಒಳ ಜಾತಿ, ಉಪ ಜಾತಿಗಳು ಏನೇ ಇದ್ದರೂ ಗಿರೀಶ್ ಕಾರ್ನಾಡರು ಮಾರ್ಕ್ಸಿಸ್ಟ್ ಪಂಥಕ್ಕೆ ಸೇರಿದವರು. ಇಸ್ಲಾಂನಲ್ಲಿ ಸಮಾಜವಾದವಿದೆ. ಹಿಂದೂಗಳಲ್ಲಿ ಇಲ್ಲ ಎಂದು ನಂಬಿದ ಗುಂಪು ಇದು. ಶೀತ ಯುದ್ಧವಾಗುತ್ತಿದ್ದಾಗ ಬಂಡವಾಳಶಾಹಿ ಅಮೆರಿಕ ವಿರುದ್ಧವಾಗಿ ಅರಬರ ಸ್ನೇಹವನ್ನು ಗಳಿಸುವ ಹುನ್ನಾರದಿಂದ ಸ್ಟಾಲಿನ್ ಇಸ್ಲಾಮಿನ ಸಾಮಾಜಿಕ ನ್ಯಾಯವನ್ನು ಮತ್ತೊಮ್ಮೆ ಒತ್ತಿ ಹೇಳಿದ. ಭಾರತದ ಇತಿಹಾಸದ ಮುಸ್ಲಿಂ ವ್ಯಕ್ತಿಗಳನ್ನು ವಿಮರ್ಶಾತ್ಮಕವಾಗಿ ನೋಡಲು ಅವರಿಗೆ ಸಾಧ್ಯವಿಲ್ಲದಂತಾಯಿತು. ಜೊತೆಗೆ ಹಿಂದೂವಾದದ ಬಿಜೆಪಿಯನ್ನು ಹೊಡೆಯಲು ಮುಸ್ಲಿಮರನ್ನು ಎತ್ತಿ ಕಟ್ಟಿ ಬೆಂಬಲಿಸುವ ಒಳ ಸನ್ನಾಹ. ಆದುದರಿಂದ ಕಾರ್ನಾಡರಂಥ ಬುದ್ಧಿಜೀವಿಗಳು ರಾಜಕೀಯವಾಗಿ ಯಾವಾಗಲೂ ಬಿಜೆಪಿಯ ವಿರುದ್ಧ ಗದ್ದಲ ಮಾಡಲು ಸಿದ್ಧವಾಗಿ ನಿಂತಿರುತ್ತಾರೆ. ದತ್ತ ಜಯಂತಿಯ ವಿಷಯವಾಗಲಿ, ಶಾಲೆಯಲ್ಲಿ ಸರಸ್ವತಿ ಪ್ರಾರ್ಥನೆಯ ವಿಷಯದಲ್ಲಿಯಾಗಲಿ ಸಮಯ ಕಾಯುತ್ತಿರುತ್ತಾರೆ. ಇಷ್ಟೊಂದು ಸೈದ್ಧಾಂತಿಕ ಬದ್ಧತೆ ಇರುವ ಲೇಖಕರು ತಮ್ಮ ಸೃಜನಶಕ್ತಿಯನ್ನು ತಮ್ಮ ಸಿದ್ಧಾಂತದ ಅಡಿಯಾಳಾಗಿ ದುಡಿಸಿಕೊಳ್ಳುತ್ತಾರೆ. ಅವರಿಗೆ ಕಲೆ ಎನ್ನುವುದು ತಮ್ಮ ರಾಜಕೀಯ ನಂಬಿಕೆಗಳ ಒಂದು ಸಾಧನ ಮಾತ್ರವಾಗಿ ಬಿಡುತ್ತದೆ. ಸಾಹಿತಿಯು ರಾಜಕೀಯದಿಂದ ತಟಸ್ಥವಾಗಿರಬೇಕು. ಅಕಸ್ಮಾತ್ ರಾಜಕೀಯಕ್ಕೆ ಇಳಿದರೂ ತನ್ನ ಬರವಣಿಗೆಯಲ್ಲಿ ಅದರಿಂದ ತಟಸ್ಥನಾಗಬೇಕು (ಅದು ಕಷ್ಟ ಸಾಧ್ಯ) ಎಂದು ನಾನು ನಂಬಿದ್ದೇನೆ. ರಾಜಕಾರಣದ ಆಯಾಮವಿಲ್ಲದ ಕಲೆ, ನೀತಿ ಅರ್ಥ. ಇತಿಹಾಸ ಆಧ್ಯಾತ್ಮ ಯಾವುದೂ ಇಲ್ಲವೆಂದು ವಾಮಪಂಥೀಯರು ಹೇಳುತ್ತಾರೆ.
ನನ್ನ ಈ ಲೇಖನದ ಉದ್ದೇಶ ಶಂಕರಮೂರ್ತಿ ಯವರನ್ನು ಬೆಂಬಲಿಸುವುದಲ್ಲ. ಮುಸ್ಲಿಂ ಐತಿಹಾಸಿಕ ವ್ಯಕ್ತಿಗಳನ್ನು ಹೀಗಳೆಯುವುದೂ ಅಲ್ಲ. ಭಾರತ ದೇಶದಲ್ಲಿರುವ ಮುಸ್ಲಿಮರೆಲ್ಲರೂ ನಮ್ಮ ಭ್ರಾತೃಗಳು. ಈ ಭ್ರಾತೃತ್ವದ ಬುನಾದಿಯ ಮೇಲೆಯೇ ನಮ್ಮ ರಾಷ್ಟ್ರೀಯತೆ ಗಟ್ಟಿಗೊಳ್ಳಬೇಕು. ಹಾಗೆಂದು ಇತಿ ಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲು ಸಾಧ್ಯವಿಲ್ಲ. ಹಿಂದೂಗಳ ತಪ್ಪು ನೆಪ್ಪುಗಳನ್ನು ನಾವು ನಿರ್ಭಯವಾಗಿ ಚರ್ಚಿಸಿ ಸರಿ ಪಡಿಸಲು ಆರಂಭಿಸಿ ಒಂದು ಶತಮಾನವಾಯಿತು. ಇಂಥ ಮುಕ್ತ ಚರ್ಚೆ ವಿಮರ್ಶೆಗಳಿಂದ ಹಿಂದೂ ಸಮಾಜವು ಗಟ್ಟಿಯಾಗುತ್ತಿದೆ. ಮುಸ್ಲಿಂ ಆಡಳಿತದಲ್ಲಿ ನಡೆದ ವಾಸ್ತವಾಂಶಗಳನ್ನು ಮುಕ್ತವಾಗಿ ಬರೆಯುವು ದರಿಂದ ಅವರಿಗೆ ಅಪಮಾನಮಾಡಿದಂತೆ ಆಗುವುದಿಲ್ಲ. ನಾವೆಲ್ಲ ಇತಿಹಾಸದಿಂದ ಪಾಠ ಕಲಿಯಬೇಕು. ಇತಿಹಾಸದ ವಾಸ್ತವತೆಯನ್ನು ಹೇಳಿದರೆ ಎಲ್ಲಿ ಯಾರು ಮುನಿಸಿಕೊಳ್ಳುತ್ತಾರೋ ಎಂಬ ಅಂಜಿಕೆಯಿಂದ ಸತ್ಯವನ್ನು ಮುಚ್ಚಿ ಸುಳ್ಳು ಇತಿಹಾಸವನ್ನು ಸೃಷ್ಟಿಸಿದರೆ ಅಂಥ ಸುಳ್ಳು ಬುನಾದಿಯ ಮೇಲೆ ಗಟ್ಟಿ ಕಟ್ಟಡವನ್ನು ಕಟ್ಟಲು ಸಾಧ್ಯವಿಲ್ಲ. ಹಿಂದಿನವರ ತಪ್ಪುಗಳಿಗೆ ಇಂದಿನವರನ್ನು ದೂಷಿಸುವುದು ಅಪಕತ್ವತೆಯ ಕುರುಹು. ಹಿಂದಿನವರೊಡನೆ ತಮ್ಮನ್ನು ತಾವು ಸಮೀಕರಿಸಿಕೊಂಡು ವಾರಸುದಾರರಂತೆ ಕಲ್ಪಿಸಿಕೊಂಡು ಉಬ್ಬುವುದು ಅಥವಾ ಕುಗ್ಗುವುದು ಅಷ್ಟೇ ಅಪಕತ್ವತೆಯ ಲಕ್ಷಣ.
ಎಸ್.ಎಲ್. ಭೈರಪ್ಪ. [ಸೆಪ್ಟೆಂಬರ್ ೨೪, ೨೦೦೬, ವಿಜಯ ಕರ್ನಾಟಕ]
Thursday, August 24, 2006
ವಂದೇ ಮಾತರಂಗೆ ಕಡೆವಂದೇ ಹೇಳಹೊರಟವರ ಕುರಿತು
ವಿಶ್ವೇಶ್ವರ ಭಟ್:
ಪತ್ರಕರ್ತ ಚೋ.ರಾಮಸ್ವಾಮಿ ಹೇಳುತ್ತಿದ್ದರು, `ನಮ್ಮ ರಾಜಕಾರಣಿಗಳು ಎಂಥ ನೀಚ ಮಟ್ಟಕ್ಕೆ ಬೇಕಾದರೂ ಹೋಗಲೂ ಹೇಸದವರು. ಅದಕ್ಕೆ ಭಾರತದ ರಾಜಕಾರಣದಲ್ಲಿ ಅಸಂಖ್ಯಉದಾಹರಣೆಗಳು ಸಿಗುತ್ತವೆ. ಗಡಿಯಲ್ಲಿನ ನಮ್ಮ ಬೇಹುಗಾರನ ಸುಳಿವನ್ನು ಶತ್ರು ದೇಶದ ಸೈನಿಕರಿಗೆ ಹೇಳುವುದರಿಂದ ಹಿಡಿದು ರಕ್ಷಣೆ, ಬಾಹ್ಯಾಕಾಶ, ಅಣುಸ್ಥಾವರ, ದೇಶದ ಭದ್ರತೆಗೆ ಸಂಬಂಸಿದ ಅಮೂಲ್ಯ, ಸೂಕ್ಷ್ಮ ಮಾಹಿತಿಯನ್ನು ಸಹಾ ಮಾರಾಟಕ್ಕಿಡಬಲ್ಲರು. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಮಾರಾಟ ಮಾಡುವ ಸಂದರ್ಭ ಬಂದರೆ, ಚೌಕಾಶಿ ಮಾತುಕತೆಗೆ ಕುಳಿತುಕೊಳ್ಳಬಲ್ಲರು'. ಚೋ ಏರಿದ ದನಿಯಲ್ಲಿ ಪಟಾಕಿಸರಕ್ಕೆ ಬೆಂಕಿಯಿಟ್ಟವರಂತೆ ಸಡಸಡ ಮಾತಾಡುವಾಗ ವಿಷಯವನ್ನು ಉತ್ಪ್ರೇಕ್ಷಿಸಬಹುದೇನೋ ಎಂದೆನಿಸುತ್ತದೆ. ಆಗ ಅವರು ಹೇಳುತ್ತಿದ್ದರು -ನಾನು ಹೀಗೆ ಮಾತಾಡಿದರೆ ನಿಮಗೆ ಅನಿಸುತ್ತದೆ ಈ ಚೋ.ರಾಮಸ್ವಾಮಿಗೆ ಬುದ್ಧಿಯಿಲ್ಲ. ಬಾಯಿಗೆ ಬಂದಿದ್ದನ್ನೆಲ್ಲ ಹೇಳುತ್ತಾನೆ. ರಾಜಕಾರಣಿಗಳನ್ನು ಹೀನಾಯಮಾನವಾಗಿ ಬೈಯುತ್ತಾನೆ ಅಂತ ಒಳಗೊಳಗೆ ಅಂದುಕೊಳ್ಳುತ್ತಾರೆ. ನನ್ನ ಮಾತಿನ ಮರ್ಮ ತಕ್ಷಣ ಅವರಿಗೆ ಅರ್ಥವಾಗದಿರಬಹುದು. ಆದರೆ ನನ್ನ ಮಾತು ಅವರಿಗೆ ಅರ್ಥವಾಗಲು ಹೆಚ್ಚು ದಿನ ಬೇಕಾಗುವುದಿಲ್ಲ.
ಯಾಕೋ ಎಂದೋ ಹೇಳಿದ ಚೋ ಮಾತು ಮನಸ್ಸಿನ ಮುಂದೆ ಹಾದು ಹೋಯಿತು.
`ವಂದೇ ಮಾತಾರಂ' ಕುರಿತು ಎದ್ದಿರುವ ವಿವಾದವನ್ನೇ ನೋಡಿ. ನಮ್ಮ ಸ್ವಾರ್ಥ ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಹೋಗಬಲ್ಲರೆಂಬುದಕ್ಕೆ ನಿದರ್ಶನ. ವೋಟ್‌ಬ್ಯಾಂಕ್ ರಾಜಕಾರಣದ ಮುಂದೆ ನಮ್ಮ ದೇಶ, ದೇಶಗೀತೆ, ಧ್ಯೇಯ, ಮೌಲ್ಯ, ದೇಶಹಿತ ಯಾವುದೂ ಪ್ರಯೋಜನಕ್ಕೆ ಬರುವುದಿಲ್ಲ. ಸ್ವಾತಂತ್ರ್ಯ ಹೋರಾಟಕ್ಕೆ ಧ್ಯೇಯದೀವಿಗೆಯಾಗಿ ಅಸಂಖ್ಯ ಭಾರತೀಯರ ಅಪದಮನಿ, ಅಭಿದಮನಿಗಳಲ್ಲಿ ಸೂರ್ತಿ ಕಾರಂಜಿ ಸೃಜಿಸಿದ ಗೀತೆ -`ವಂದೇ ಮಾತರಂ' ಸಹ ರಾಜಕಾರಣಿಗಳ ಕೈಯಲ್ಲಿ ಹೇಗೆ ದಾಳವಾಗುತ್ತದೆ ನೋಡಿ.
`ವಂದೇ ಮಾತರಂ' ವಿವಾದ ಆರಂಭವಾಗುವುದು ಹೀಗೆ.
ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಅರ್ಜುನ್ ಸಿಂಗ್ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆಯುತ್ತಾರೆ. ವಿಷಯ ಏನಂದ್ರೆ -`ಸೆಪ್ಟೆಂಬರ್ ೭ರಂದು ವಂದೇ ಮಾತರಂ ಶತಮಾನೋತ್ಸವ ನಿಮಿತ್ತ, ಅಂದು ಬೆಳಗ್ಗೆ ೧೧ಕ್ಕೆ ದೇಶಾದ್ಯಂತ ಎಲ್ಲ ಶಾಲೆಗಳಲ್ಲಿ ಈ ರಾಷ್ಟ್ರಗೀತೆ(ವಂದೇ ಮಾತರಂ)ಯ ಮೊದಲ ಎರಡು ಪಲ್ಲವಿಗಳನ್ನು ಕಡ್ಡಾಯವಾಗಿ ಹಾಡಬೇಕು. ' ಈ ಪತ್ರ ಬರುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದರು. `ವಂದೇ ಮಾತರಂ'ನ್ನು ಹಾಡುವಂತೆ ಅದರಲ್ಲಿ ಸೂಚಿಸಲಾಗಿತ್ತು. ಮುಲಾಯಂ ಸಿಂಗ್‌ರು ಅಜುನ್‌ಸಿಂಗ್ ಅವರ ಪತ್ರವನ್ನು ಅನುಮೋದಿಸಿದ್ದರು.
ಯಾವಾಗ ಮುಲಾಯಂ ಸಿಂಗ್ ಯಾದವ್‌ರ ಸುತ್ತೋಲೆ ಹೊರಬಿತ್ತೋ, ಉತ್ತರ ಪ್ರದೇಶದ ಮುಸ್ಲಿಂ ಸಮುದಾಯದ ಹಿರಿಯರು, ಧರ್ಮಗುರುಗಳು, ಮೌಲ್ವಿಗಳು ರಾತ್ರೋ ರಾತ್ರಿ ಸಭೆ ಸೇರಿದರು. ವಂದೇ ಮಾತರಂ ವಿರುದ್ಧ ದನಿಎತ್ತಲು ನಿರ್ಧರಿಸಿದರು. ಪ್ರಮುಖ ಇಸ್ಲಾಮಿಕ್ ಸಂಘಟನೆಗಳ ಪೈಕಿ ಒಂದಾದ ಫಿರಂಗಿ ಮಹಲ್ ಅಧ್ಯಕ್ಷ ಮೌಲಾನ ಖಲೀದ್ ರಶೀದ್ ಹೇಳಿದರು -`ಮುಸ್ಲಿಂ ವಿದ್ಯಾರ್ಥಿಗಳು ವಂದೇಮಾತರಂ ಹಾಡುವುದು ಇಸ್ಲಾಂ ವಿರೋ. ನಮ್ಮ ಸಮುದಾಯದವರ್‍ಯಾರೂ ಇದನ್ನು ಹಾಡಬಾರದು. ವಂದೇಮಾತರಂ ಹಾಡಿದರೆ ಇಸ್ಲಾಮ್‌ಗೆ ಅವಹೇಳನ ಮಾಡಿದ ಹಾಗೆ. ಸೆಪ್ಟೆಂಬರ್ ೭ರಂದು ಮುಸ್ಲಿಂ ವಿದ್ಯಾರ್ಥಿಗಳು ಇದನ್ನು ಹಾಡಕೂಡದೆಂದು ನಾನು ಕರೆ ಕೊಡುತ್ತೇನೆ.'
ದಿಲ್ಲಿಯ ಜಮಾ ಮಸೀದಿ ಶಾಹಿ ಇಮಾಮ್ ಸಯ್ಯದ್ ಅಹಮದ್ ಬುಖಾರಿ ಮಿಂಚಿನಂತೆ ಕಾರ್ಯಪ್ರವೃತ್ತರಾದರು. ತಕ್ಷಣ ತಮ್ಮ ಬೆಂಬಲಿಗರೊಂದಿಗೆ ಮುಸ್ಲಿಂ ಸಮುದಾಯದ ಹಿರಿಯರೊಂದಿಗೆ ಸಭೆ ಸೇರಿ ಅನಂತರ ಕರೆ ಕೊಟ್ಟರು -`ವಂದೇಮಾತರಂನ್ನು ಯಾವ ಕಾರಣಕ್ಕೂ ಹಾಡಕೂಡದು. ಅದು ಇಸ್ಲಾಮಿನ ನಂಬಿಕೆಗಳಿಗೆ ವಿರುದ್ಧವಾಗಿದೆ. ಒಂದು ವೇಳೆ ವಂದೇ ಮಾತರಂನ್ನು ಹಾಡಲೇ ಬೇಕೆಂಬ ಒತ್ತಡ ಹೇರುವುದೆಂದರೆ ನಮ್ಮ ಸಮುದಾಯವನ್ನು ತುಳಿದಂತೆ. ಇಸ್ಲಾಂ ಪ್ರಕಾರ ಒಬ್ಬನು ತನ್ನ ದೇಶವನ್ನು ಪ್ರೀತಿಸುವುದು, ಗೌರವಿಸುವುದು ತಪ್ಪಲ್ಲ. ಅಷ್ಟೇ ಅಲ್ಲ ಸಂದರ್ಭ ಬಂದರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬಹುದು. ಆದರೆ ಯಾರನ್ನಾದರೂ ಪೂಜಿಸುವ ಪ್ರಶ್ನೆ ಎದುರಾದರೆ, ಅಲ್ಲಾಹನನ್ನು ಮಾತ್ರ ಪೂಜಿಸಬೇಕು. ಮುಸ್ಲಿಮನಾದವನು ತನ್ನ ತಂದೆ, ತಾಯಿ, ಮಾತೃಭೂಮಿ ಹಾಗೂ ಪ್ರವಾದಿಯನ್ನು ಉನ್ನತ ಸ್ಥಾನದಲ್ಲಿರಿಸಿ ಗೌರವಿಸಿದರೂ, ಇವರೆಲ್ಲರನ್ನೂ ಪೂಜಿಸುವಂತಿಲ್ಲ. ಸ್ವಾತಂತ್ರ್ಯ ನಂತರದಿಂದ ಕೇಂದ್ರದ ಹಾಗೂ ರಾಜ್ಯಗಳ ಎಲ್ಲ ಸರ್ಕಾರಗಳು ಮುಸ್ಲಿಮರನ್ನು ತುಳಿಯುತ್ತಿವೆ. ವಂದೇಮಾತರಂ ಹಾಡಬೇಕೆಂಬ ಸುತ್ತೋಲೆ ಈ ದಿಸೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಎಸಗಿದ ಮತ್ತೊಂದು ಗದಾಪ್ರಹಾರ. ಸ್ವಯಂಪ್ರೇರಿತರಾಗಿ ಯಾರಾದರೂ ಹಾಡುವುದಾದರೆ ನನ್ನ ಆಕ್ಷೇಪವಿಲ್ಲ. ಆದರೆ ಹಾಡಲೇ ಬೇಕೆಂಬ Pಕ್ಷಿಟ್ಟಳೆ, ಕಟ್ಟುಪಾಡು ವಿಸಿದರೆ, ಅದನ್ನು ಬಲವಾಗಿ ಪ್ರತಿಭಟಿಸಬೇಕಾದೀತಿ. ಇಂಥ ಸುತ್ತೋಲೆ ವಾಪಸ್ ಪಡೆಯುವಂತೆ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದೀತು. ದೇಶವನ್ನು ಪೂಜಿಸುವುದು ವಂದೇ ಮಾತರಂ ಉದ್ದೇಶ ಅಲ್ಲ. ಈ ಹಾಡಿನಲ್ಲಿ ದೇಶವನ್ನು ತಾಯಿಗೆ ಹೋಲಿಸಲಾಗಿದೆ ಹಾಗೂ ಜನರನ್ನು ಆಕೆಯ ಮಕ್ಕಳೆಂದು ಚಿತ್ರಿಸಲಾಗಿದೆ. ಈ ವಾದವನ್ನು ನಾವು ಒಪ್ಪುವುದಿಲ್ಲ. ಇದು ನಮ್ಮ ಧರ್ಮಕ್ಕೆ ವಿರೋಧವಾದುದು. '
ಅರ್ಜುನ್ ಸಿಂಗ್ ಸುತ್ತೋಲೆ ಕೇವಲ ೨೪ ಗಂಟೆಗಳಲ್ಲಿ ಮುಸ್ಲಿಂ ಸಮುದಾಯದಲ್ಲಿ ಅದೆಂಥ ಸಂಚಲನವನ್ನುಂಟು ಮಾಡಿತೆಂದರೆ, ದೇಶದೆಲ್ಲೆಡೆಯಿರುವ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ತಮ್ಮ ಊರುಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ, ವಂದೇ ಮಾತರಂನ್ನು ಹಾಡಬೇಕೆಂಬ ಪ್ರಸ್ತಾಪವನ್ನು ವಿರೋಸಿದರು.
ಅರ್ಜುನ್ ಸಿಂಗ್ ಮುಸ್ಲಿಂ ಸಮುದಾಯದ ಅಂತರಂಗ ತುಮುಲವೇನೆಂಬುದು ತಟ್ಟನೆ ಅರ್ಥವಾಯಿತು. ತಮ್ಮ ಮೊದಲಿನ ಆದೇಶದಿಂದ ದೇಶಾದ್ಯಂತವಿರುವ ಮುಸ್ಲಿಮರಿಗೆ ಅಸಮಾಧಾನವಾಗಿದೆಯೆಂದು ಮನವರಿಕೆಯಾಯಿತು. ಅದು ರಾಷ್ಟ್ರಗೀತೆಯ ವಿಚಾರವಾಗಿರಬಹುದು ಅಥವಾ ಇನ್ನಿತರ ಯಾವುದೇ ವಿಷಯವಾಗಿರಬಹುದು, ಅಲ್ಪಸಂಖ್ಯಾತರನ್ನು ಎದುರು ಹಾಕಿಕೊಳ್ಳುವುದುಂಟಾ? ಅರ್ಜುನ್ ಸಿಂಗ್ ಮತ್ತೊಂದು ಸುತ್ತೋಲೆ ಕಳಿಸಿದರು. ಅಂದು ಭಾನುವಾರ ಸರಕಾರಿ ಕಚೇರಿಗೆ ರಜೆಯಿದ್ದರೂ ತಮ್ಮ ಸಿಬ್ಬಂದಿಯನ್ನು ಕರೆದು ಆದೇಶ ಹೊರಡಿಸಿದರು. ವಾರಣಸಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದರು -`ವಂದೇಮಾತರಂನ್ನು ಹಾಡಲೇಬೇಕೆಂಬ ಕಡ್ಡಾಯವಿಲ್ಲ. ಹಾಡಬಹುದು ಅಥವಾ ಬಿಡಬಹುದು' ಎಂದು ಬಿಟ್ಟರು.
ಆಗಲೇ ಮುಸ್ಲಿಂ ಸಮುದಾಯ ನಿಟ್ಟುಸಿರುಬಿಟ್ಟಿದ್ದು. ಅರ್ಜುನ್‌ಸಿಂಗ್ ಹೇಳಿದ್ದಕ್ಕೆ ಕಾಂಗ್ರೆಸ್ ಠಸ್ಸೆ ಒತ್ತಿತ್ತು. ಆ ಪಕ್ಷದ ವಕ್ತಾ ಅಭಿಷೇಕ್ ಮನು ಸಿಂಘ್ವಿ ಹೇಳಿದರು -`ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರೇರಣೆ ಮೂಡಿಸಿದ, ದೇಶಕ್ಕಾಗಿ ಬಲಿದಾನಗೈದ ಅಸಂಖ್ಯ ಜನರಿಗೆ ಸೂರ್ತಿಯಾದ ವಂದೇಮಾತರಂ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಈ ರಾಷ್ಟ್ರಕ್ಕೆ ಅಪಾರ ಗೌರವವಿದೆ. ಆದರೂ ಯಾವುದೋ ಒಂದು ಸಮುದಾಯ ಅಥವಾ ಗುಂಪು ವಂದೇ ಮಾತರಂ ಹಾಡುವುದರ ಬಗ್ಗೆ ಬೇರೆ ರೀತಿ ಯೋಚಿಸಿದರೆ ಅವರು ಹಾಡಬಹುದು, ಇಲ್ಲವೇ ಬಿಡಬಹುದು. ಅದು ಅವರಿಗೆ ಬಿಟ್ಟ ವಿಚಾರ. ಈ ವಿಷಯದಲ್ಲಿ ಕೇಂದ್ರ ಮಂತ್ರಿ ಅರ್ಜುನ್ ಸಿಂಗ್ ನಿರ್ಧಾರವನ್ನು ಕಾಂಗ್ರೆಸ್ ಸಮ್ಮತಿಸುತ್ತದೆ. ವಂದೇ ಮಾತರಂನ್ನು ಹಾಡಲೇಬೇಕೆಂಬ ನಿಯಮ ಕಡ್ಡಾಯವೇನಿಲ್ಲ. ಅದು ಐಚ್ಛಿಕ. '
ಯಾವ ವಾರಾಣಸಿ ಅಖಿಲ ಭಾರತ ಕಾಂಗ್ರೆಸ್ ಅವೇಶನದಲ್ಲಿ ೧೯೦೫ರಲ್ಲಿ ವಂದೇ ಮಾತರಂನ್ನು ಹಾಡಲಾಗಿದ್ದೋ ಹಾಗೂ ರಾಷ್ಟ್ರೀಯ ಹಾಡು ಎಂದು ಮಾನ್ಯ ಮಾಡಿ ಸ್ವೀಕರಿಸಲಾಗಿತ್ತೋ, ಅದೇ ವಾರಾಣಸಿಯಲ್ಲಿ ಅರ್ಜುನ್ ಸಿಂಗ್ `ವಂದೇ ಮಾತರಂನ್ನು ಹಾಡಿದರೆ ಹಾಡಿ ಬಿಟ್ಟರೆ ಬಿಡಿ' ಎಂದು ಅಪ್ಪಣೆ ಕೊಡಿಸಿದ್ದರು.
೧೮೭೬ರಲ್ಲಿ ಬಂಕಿಮ್‌ಚಂದ್ರ ಚಟರ್ಜಿ ವಂದೇ ಮಾತರಂ ಬರೆದಾಗ ಅದು ಸ್ವಾತಂತ್ರ್ಯದ ರಣಕಹಳೆಯಂತೆ ಎಲ್ಲ ದೇಶಭಕ್ತರ ಬಾಯಲ್ಲಿ ಮೊಳಗತೊಡಗಿತು. `ವಂದೇ ಮಾತರಂ' ಘೋಷಣೆಯಿಲ್ಲದೇ ಯಾವ ಕಾರ್ಯಕ್ರಮವೂ ಆರಂಭವಾಗುತ್ತಿರಲಿಲ್ಲ. ಕೊನೆಗೊಳ್ಳುತ್ತಿರಲಿಲ್ಲ. ವಂದೇ ಮಾತರಂ ಅಂದರೆ ಪ್ರಖರ ದೇಶಪ್ರೇಮ, ದೇಶಭಕ್ತಿಯ ಸಂಕೇತ. ಈ ಘೋಷಣೆಗೆ ಇಡೀ ದೇಶವಾಸಿಗಳನ್ನು ಬಡಿದೆಬ್ಬಿಸುವ ಃಶಕ್ತಿಯಿತ್ತು. ಒಂದು ಹಂತದಲ್ಲಿ ವಂದೇಮಾತರಂ ಘೋಷಣೆಯನ್ನು ಬ್ರಿಟಿಷರು ನಿಷೇಸಿದ್ದರು. ಇದನ್ನು ಪ್ರತಿಭಟಿಸಿ ಘೋಷಣೆ ಕೂಗಿದರೆಂಬ ಕಾರಣಕ್ಕೆ ಸಹಸ್ರಾರು ಜನರನ್ನು ಅವರು ಜೈಲಿಗೆ ಹಾಕಿದ್ದರು. ವಂದೇ ಮಾತರಂ ಅಂದ್ರೆ ಭಾರತವನ್ನು ಪ್ರೀತಿಸುವವರೆಲ್ಲರ ರಾಷ್ಟ್ರೀಯ ಮಂತ್ರ. ೧೮೯೬ರಲ್ಲಿ ಕೋಲ್ಕತಾ ಕಾಂಗ್ರೆಸ್ ಅವೇಶನದಲ್ಲಿ ಸ್ವತಃ ರವೀಂದ್ರ ನಾಥ ಟಾಗೋರ್‌ರು ವಂದೇ ಮಾತರಂ ಹಾಡಿದ್ದರು. ಲಾಲಾ ಲಜಪತರಾಯ್ ಲಾಹೋರ್‌ನಿಂದ ವಂದೇ ಮಾತರಂ ಹೆಸರಿನ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಗುಂಡಿಗೆ ಬಲಿಯಾದ, ನೇಣಿಗೆ ಶರಣಾದ ಅದೆಷ್ಟೋ ದೇಶಪ್ರೇಮಿಗಳ ಕೊನೆಯ ಉದ್ಗಾರ -ವಂದೇ ಮಾತರಂ!
ಅನೇಕ ವರ್ಷಗಳ ಕಾಲ ವಂದೇ ಮಾತರಂ ನಮ್ಮ ರಾಷ್ಟ್ರಗೀತೆಯೂ ಆಗಿತ್ತು. ಅನಂತರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಗ `ಜನಗಣಮನ' ರಾಷ್ಟ್ರಗೀತೆಯಾಯಿತು. ಇದರ ಹಿಂದಿನ ರಾಜಕೀಯ, ಉದ್ದೇಶ ಅದೇನೇ ಇರಲಿ, ಜನಗಣಮನಕ್ಕಿಂತ ವಂದೇಮಾತರಂನಲ್ಲೇ ರಾಷ್ಟ್ರಭಕ್ತಿಯ ಅದಮ್ಯ ಸುರಣವಿದೆಯೆಂಬ ಅಭಿಪ್ರಾಯವಿದೆ. ಅಂತಿಮವಾಗಿ ವಂದೇಮಾತರಂ ಬದಲಿಗೆ `ಜನಗಣಮನ'ವನ್ನೇ ರಾಷ್ಟ್ರಗೀತೆಯಾಗಿ ಆಯ್ಕೆ ಮಾಡಲಾಯಿತು. ೧೯೫೦ರ ಜನವರಿ ೨೪ರಂದು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಕಾನ್‌ಸ್ಟಿಟುಯೆಂಟ್ ಅಸೆಂಬ್ಲಿ ಉದ್ದೇಶಿಸಿ ಮಾತನಾಡುತ್ತಾ ಹೇಳಿದ್ದು ಉಲ್ಲೇಖಾರ್ಹ -`ಜನಗಣಮನ ಪದಗಳುಳ್ಳ ಹಾಡನ್ನು ಭಾರತದ ರಾಷ್ಟ್ರಗೀತೆ(anthem)ಯಾಗಿ ವಂದೇ ಮಾತರಂನ್ನು ರಾಷ್ಟ್ರೀಯ ಹಾಡಾಗಿ(national song) ಸ್ವೀಕರಿಸಲಾಗಿದೆ. ಆದರೂ ವಂದೇ ಮಾತರಂ ಹಾಡಿಗೆ ಜನಗಣಮನದಷ್ಟೇ ಸಮನಾದ ಗೌರವ ಮತ್ತು ಸ್ಥಾನಮಾನವಿದೆ' ರಾಷ್ಟ್ರಪತಿಯವರ ಈ ಘೋಷಣೆಯನ್ನು ಇಡೀ ಅಸೆಂಬ್ಲಿ ಮೇಜುಕುಟ್ಟಿ ಸ್ವಾಗತಿಸಿತ್ತು. ಆನಂತರ ನಮ್ಮ ಸಂವಿಧಾನದಲ್ಲೂ ಸಹ ವಂದೇ ಮಾತರಂನ್ನು ಸಂಸತ್ತಿನಲ್ಲೂ ಹಾಡುವ ಸಂಪ್ರದಾಯವಿದೆ.
ಹೀಗಿರುವಾಗ ಒಂದು ಕೋಮಿನ ಕೆಲ ನಾಯಕರು ಆಕ್ಷೇಪಿಸಿದರೆಂಬ ಕಾರಣಕ್ಕೆ, ವೋಟ್‌ಬ್ಯಾಂಕ್ ರಾಜಕಾರಣಕ್ಕೆ ವಂದೇ ಮಾತರಂ ಬಗ್ಗೆ ಸರಕಾರ ಹಾಗೂ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿರ್ಧಾರ ದುಗ್ಭ್ರಮೆ ಮೂಡಿಸುವಂಥದ್ದು. ಜಗತ್ತಿನ ಬೇರಾವ ದೇಶದಲ್ಲೂ ಘಟಿಸದ, ಊಹಿಸಲೂ ಆಗದಂಥ ಘಟನೆಗೆ ನಾವೆಲ್ಲ ಸಾಕ್ಷಿಯಾಗಬೇಕಿರುವುದು ದುರ್ದೈವ. ಇದು ರಾಷ್ಟ್ರಕ್ಕೆಸಗಲಾದ ಅವಮಾನವಲ್ಲದೇ ಮತ್ತೇನು? ಈ ದೇಶದಲ್ಲಿ ನೆಲೆಸುವ ಪ್ರತಿಯೊಬ್ಬರೂ ರಾಷ್ಟ್ರ, ರಾಷ್ಟ್ರೀಯತೆಯನ್ನು ಪ್ರತಿನಿಸುವ ಸಂಕೇತಗಳಿಗೆ ತಲೆಬಾಗಲೇಬೇಕು. ಇಂದು ರಾಷ್ಟ್ರೀಯ ಹಾಡಿಗೆ ಆಕ್ಷೇಪಿಸುವವರು ನಾಳೆ ರಾಷ್ಟ್ರಧ್ವಜದ ಬಗ್ಗೆ ತಕರಾರು ತೆಗೆಯಬಹುದು. ಅವರನ್ನು ಓಲೈಸಲು ಸರಕಾರ ಮಣಿಯುವುದಿಲ್ಲವೆನ್ನುವ ಗ್ಯಾರಂಟಿಯೇನು? ರಾಷ್ಟ್ರಗೀತೆಗೂ ಇದೇ ಒತ್ತಡ ಬಂದರೆ? ಆಗಲೂ ನಮ್ಮ ಮಾನಗೆಟ್ಟ ಸರಕಾರಗಳು ಮಣಿಯಲಾರವೆಂಬ ಗ್ಯಾರಂಟಿಯೇನು?
ಈ ದೇಶದ ಘೋಷವಾಕ್ಯಕ್ಕೇ ಅದರ ಶತಮಾನೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಈ ಗತಿ ಬಂದರೂ ಯಾರೂ ಕ್ಕಾರದ ಘೋಷಣೆ ಹಾಕುತ್ತಿಲ್ಲ. ಏನೆನ್ನೋಣ?
Thursday, August 10, 2006
ತಿರುಪತಿಯಲ್ಲಿ ಮತಾಂತರ
ತಿರುಮಲ ತಿರುಪತಿ ಸಂರಕ್ಷಣಾ ಸಮಿತಿ (ಕರ್ನಾಟಕ)
ನಂ. ೫೫, ಯಾದವ ಸ್ಮೃತಿ, ಶೇಷಾದ್ರಿಪುರ, ೧ನೇ ಮುಖ್ಯ ರಸ್ತೆ, ಬೆಂಗಳೂರು - ೫೬೦೦೨೦
(ಪ್ರಕಟಣೆಯ ಕೃಪೆಗಾಗಿ)
ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಪರಮ ಪವಿತ್ರ ಕ್ಷೇತ್ರ ಭೂವೈಕುಂಠವೆನಿಸಿರುವ ತಿರುಮಲ ತಿರುಪತಿ ಪರಿಸರದಲ್ಲಿ ಅನೇಕ ರೀತಿಯ ಕ್ರಿಸ್ತೀಕರಣ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.
ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು, ಪೇಜಾವರ ಮಠ, ಉಡುಪಿ ಇವರ ಆದೇಶದಂತೆ ಸತ್ಯ ಶೋಧನಾ ಸಮಿತಿಯೊಂದು ಎರಡು ದಿನಗಳ ಕಾಲ ತನಿಖೆ ನಡೆಸಿದೆ. ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶ್ರೀ ಬಿಕ್ಷಾಪತಿಯವರ ನೇತೃತ್ವದ ಈ ಸಮಿತಿ ತನ್ನ ವರದಿಯಲ್ಲಿ ತಿರುಮಲ ತಿರುಪತಿ ಶ್ರೀ ಕ್ಷೇತ್ರದಲ್ಲಿ ತೀವ್ರವಾಗಿ ನಡೆಯುತ್ತಿರುವ ಕ್ರಿಸ್ತೀಕರಣದ ಚಟುವಟಿಕೆಗಳನ್ನು ಬಹಿರಂಗಗೊಳಿಸಿದೆ.
ಸತ್ಯ ಶೋಧನಾ ಸಮಿತಿಯು ಬಹಿರಂಗಗೊಳಿಸಿರುವ ವರದಿಯ ಸಂಕ್ಷಿಪ್ತ ರೂಪ
ಸಮಿತಿಯು ದಿನಾಂಕ ೨೧, ೨೨ ಜೂನ್ ೨೦೦೬ರಂದು ತಿರುಪತಿ-ತಿರುಮಲಕ್ಕೆ ಭೇಟಿ ನೀಡಿದಾಗ ೫೦ಕ್ಕೂ ಹೆಚ್ಚು ಸಾರ್ವಜನಿಕರು ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ತಮ್ಮ ಗಮನಕ್ಕೆ ಬಂದ ಚಟುವಟಿಕೆಗಳನ್ನು ವಿವರಿಸಿದ್ದಾರೆ.
ಅಲ್ಲದೆ ಸಮಿತಿಯು TTDಯ ನಿರ್ವಾಹಕ ಮುಖ್ಯಸ್ಥ ಶ್ರೀ APVN ಶರ್ಮಾ, IAS ರವರನ್ನು ದಿನಾಂಕ ೨೨-೬-೦೬ರಂದು ಭೇಟಿ ಮಾಡಿತು. ಅದೇ ಸಂದರ್ಭದಲ್ಲಿ ಶ್ರೀ ಧರ್ಮಾ ರೆಡ್ಡಿ, ವಿಶೇಷಾಧಿಕಾರಿಗಳು, ಶ್ರೀ ಅರವಿಂದ ಕುಮಾರ್, IPS, ಮುಖ್ಯ ಸುರಕ್ಷಾ ಅಧಿಕಾರಿ, ಶ್ರೀ ರಾಮಚಂದ್ರ ರೆಡ್ಡಿ, ಕಾನೂನು ಅಧಿಕಾರಿ ಇವರೂ ಉಪಸ್ಥಿತರಿದ್ದರು. ಈ ಎಲ್ಲರೂ ನೀಡಿದ ಮಾಹಿತಿಯ ವಿಶ್ಲೇಷಣೆಯಿಂದ ಹೊರಬಂದ ಸತ್ಯಾಂಶಗಳು:
೧. ಕ್ರೈಸ್ತಮತ ಪ್ರಚಾರ ಮತ್ತು ಮತಾಂತರ ಪ್ರಯತ್ನದ ಚಟುವಟಿಕೆಗಳು
ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಗಳು ಹಾಗೂ ಮಿಶನರಿಗಳು ತಿರುಪತಿ-ತಿರುಮಲದಲ್ಲಿ ತಮ್ಮ ಮತಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕಾಲೇಜುಗಳಲ್ಲಿ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಗೆ, ತಿರುಮಲದಿಂದ ತಿರುಪತಿಗೆ ಬಸ್‌ನಲ್ಲಿ ಬರುವಾಗ ಯಾತ್ರಾರ್ಥಿಗಳಿಗೆ, ಧರ್ಮದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಬೈಬಲ್ ಹಂಚುವ ಪ್ರಕರಣಗಳ ಬಗ್ಗೆ ದೂರುಗಳು ದಾಖಲಾಗಿವೆ.
೨. TTDಯ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತಮತ ಪ್ರಚಾರ
* ಶ್ರೀ ವೇಂಕಟೇಶ್ವರ ವಿಶ್ವವಿದ್ಯಾಲಯದ (SV University) ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೇವಸಂಗೀತಂ ವಿದ್ಯಾರ್ಥಿಗಳಿಗೆ ಕ್ರೈಸ್ತಮತ ಪ್ರಚಾರ ಮಾಡುವುದಲ್ಲದೆ ಚರ್ಚ್‌ಗೆ ಹೋಗಲು ಬಲವಂತ ಮಾಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ.
* ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಮತಿ ವೀಣಾ ನೋಬಲ್ ದಾಸ್ ವಿಶ್ವವಿದ್ಯಾಲಯದ ಕಾಲೇಜುಗಳಿಂದ ವೇಂಕಟೇಶ್ವರ ಮತ್ತು ಪದ್ಮಾವತಿಯರ ಭಾವಚಿತ್ರಗಳನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಯೇಸುಕ್ರಿಸ್ತನ ಭಾವಚಿತ್ರ ಮತ್ತು ಶಿಲುಬೆಗಳನ್ನು ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಣೆಗೆ ತಿಲಕ ಇಡುವುದನ್ನು ನಿಷೇಧಿಸಿದ್ದಾರೆ.
೩. TTDಯಲ್ಲಿ ಉದ್ಯೋಗ
* TTDಯ ಕೆಲವು ಹುದ್ದೆಗಳಿಗೆ ಕ್ರೈಸ್ತರು ಮತ್ತು ಮುಸಲ್ಮಾನರನ್ನು ಕಾನೂನು ಮೀರಿ ನೇಮಿಸಿಕೊಳ್ಳಲಾಗಿದೆ. ಹೀಗಾಗಿ ತಿರುಮಲದಲ್ಲಿ ನೆಲೆಸಿರುವ ೪೦ ಕ್ರೈಸ್ತ ಕುಟುಂಬಗಳು ಪ್ರಾರ್ಥನಾಕೂಟ, ಸಭೆಗಳನ್ನು ನಡೆಸುತ್ತಿದ್ದಾರೆ. ತೋಟಗಾರಿಕೆ ಮೇಲ್ವಿಚಾರಕರಾಗಿರುವ ಕ್ರೈಸ್ತಮತಸ್ಥರಾದ ಗೋಪೀನಾಥ್ ``ಆ ಕಪ್ಪು ಶಿಲೆಗೆ ಹೂವಿನ ಹಾರ ಏಕೆ ಹಾಕುತ್ತೀರಿ?'' ಎಂದು ಶ್ರೀ ವೇಂಕಟೇಶ್ವರನ ಮೂರ್ತಿಯನ್ನು ಭಕ್ತಾದಿಗಳ ಎದುರೇ ನಿಂದಿಸುತ್ತಾರೆ.
ಗುತ್ತಿಗೆ ಕೆಲಸಗಾರರನ್ನು (Contract employees) ತೆಗೆದುಕೊಳ್ಳುವಾಗಲೂ ಹಿಂದುಗಳಲ್ಲದವರನ್ನು ಕಾನೂನಿನ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತಿದೆ. ಸುಮಾರು ೪೦ ಮುಸ್ಲಿಂ ಕುಟುಂಬಗಳು ಅಂಗಡಿ ಮುಂಗಟ್ಟು ತೆರೆದು ತಿರುಮಲದಲ್ಲಿ ನೆಲೆಸಿವೆ.
೪. ತಿರುಮಲದಲ್ಲಿ ನಡೆಯುತ್ತಿರುವ ಇತರ ಕಾನೂನುಬಾಹಿರ ಚಟುವಟಿಕೆಗಳು
* TTD ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಶ್ರದ್ಧೆಯ ಫಲವಾಗಿ ತಿರುಮಲ-ತಿರುಪತಿಯಲ್ಲಿ ಮದ್ಯಮಾರಾಟ, ಮಾಂಸಮಾರಾಟ, ಜೂಜು, ಗೋಹತ್ಯೆಯಂತಹ ಘೋರಕೃತ್ಯಗಳು ನಡೆಯುತ್ತಿವೆ.
* ನಾಗಲಾಪುರದ TTD ಕಲ್ಯಾಣಮಂಟಪವನ್ನೇ ಕ್ರೈಸ್ತ ಪಾದ್ರಿಗಳು ತಮ್ಮ ಪ್ರಾರ್ಥನಾಸಭೆಗಳಿಗೆ ಉಪಯೋಗಿಸುತ್ತಿದ್ದಾರೆ.
* ಹೊಸದಾಗಿ ರಚನೆಯಾಗಿರುವ TTDಯ ಮಂಡಳಿಗೆ ಮತಾಂತರಿತ ವ್ಯಕ್ತಿ ಶ್ರೀ ರೋಸಯ್ಯ, IAS ರವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ತಿರುಮಲದಲ್ಲಿ ಭಕ್ತಾದಿಗಳ ಇಚ್ಛೆಗೆ ವಿರುದ್ಧವಾಗಿ mallಗಳು, food courtಗಳು ಮುಂತಾದ ಮನರಂಜನಾ ಚಟುವಟಿಕೆಗಳನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಲು ಮುಂದಾಗಿದೆ.
೫. ಪವಿತ್ರ ಸಪ್ತಗಿರಿ
`ತಿರುಮಲದ ಎಲ್ಲ ಏಳು ಬೆಟ್ಟಗಳೂ ಶ್ರೀ ವೇಂಕಟೇಶ್ವರನ ಅಧೀನ, ಅವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ' ಎಂದು ಆಂಧ್ರಪ್ರದೇಶದ ಉಚ್ಚನ್ಯಾಯಾಲಯದ ವಿಭಾಗೀಯ ಪೀಠವು ತನ್ನ ತೀರ್ಪೊಂದರಲ್ಲಿ ಆದೇಶ ಹೊರಡಿಸಿದೆ. ಈ ತೀರ್ಪನ್ನು ಮತ್ತು
ಕೋಟ್ಯಂತರ ಭಕ್ತಾದಿಗಳ ಭಾವನೆಗಳನ್ನು ತಿರಸ್ಕರಿಸಿ ತಿರುಮಲದ ಎರಡೇ ಬೆಟ್ಟಗಳನ್ನೊಳಗೊಂಡ ಸುಮಾರು ೨೭ ಚದರ ಕಿ. ಮೀ. ಕ್ಷೇತ್ರವನ್ನು ಮಾತ್ರ ತಿರುಮಲದ ಅಧೀನಕ್ಕೆ ಬಿಟ್ಟು ಉಳಿದ ಕ್ಷೇತ್ರವನ್ನು ಅದರ ವ್ಯಾಪ್ತಿಯಿಂದ ಹೊರತೆಗೆದು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಯೋಚನೆ ನಡೆದಿದೆ.
೬. TTDಯ ಸಂಪನ್ಮೂಲ
`ಹಿಂದು ಧರ್ಮ ಪರಿರಕ್ಷಣಾ ಸಮಿತಿ'ಯ `ಹಿಂದು' ಪದ ಕೈಬಿಟ್ಟು ಅದನ್ನು `ಧರ್ಮ ಪ್ರಚಾರ ಪರಿಷತ್' ಎಂದು ಮರುನಾಮಕರಣ ಮಾಡಲಾಗಿದೆ. ತಿರುಮಲದಲ್ಲಿ ಭಕ್ತಾದಿಗಳ ಕೊಡುಗೆಯಿಂದ ಸಂಗ್ರಹವಾಗುವ ಧನರಾಶಿಯು ಹಿಂದುಧರ್ಮದ ಪ್ರಚಾರಕ್ಕಾಗಿ, ತತ್ಸಂಬಂಧಿತ ಉಪನ್ಯಾಸಗಳು, ಹರಿಕಥೆ, ಪ್ರವಚನ, ಗಾಯನಸಭೆ ಇತ್ಯಾದಿಗಳಿಗೆ, ಹಿಂದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿನಿಯೋಗವಾಗಬೇಕಿತ್ತು. ಆದರೆ, ಇಂತಹ ಕಾರ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಮಾಡುತ್ತಲೇ ಇಲ್ಲ. ಬದಲಾಗಿ ಇತರ ಚಟುವಟಿಕೆಗಳಿಗೆ ಹಣವನ್ನು ವಿನಿಯೋಗಿಸಲಾಗುತ್ತಿದೆ. ಬಹುದೊಡ್ಡ ಜಾಗವನ್ನು ಮಸೀದಿ ಕಟ್ಟಲು ದಾನ ಮಾಡಲಾಗಿದೆ.
ಸಮಿತಿಯ ಸದಸ್ಯರು:
ಶ್ರೀ ಜಸ್ಟಿಸ್ ಜಿ. ಬಿಕ್ಷಾಪತಿ, ನಿವೃತ್ತ ನ್ಯಾಯಾಧೀಶರು, ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ
ಶ್ರೀ ಟಿ. ಎಸ್. ರಾವ್, IPS, ನಿವೃತ್ತ ಪೋಲೀಸ್ ಮಹಾ ನಿರ್ದೇಶಕರು, ಆಂಧ್ರಪ್ರದೇಶ ಸರಕಾರ
ಶ್ರೀಮತಿ ಡಾ ಪಿ. ಗೀರ್ವಾಣಿ, ನಿವೃತ್ತ ಉಪಕುಲಪತಿ, ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ತಿರುಪತಿ
ಶ್ರೀ ಡಾ ಆರ್. ಶ್ರೀಹರಿ, ನಿವೃತ್ತ ಉಪಕುಲಪತಿ, ದ್ರವಿಡ ವಿಶ್ವವಿದ್ಯಾಲಯ, ಕುಪ್ಪಂ
ನಂ. ೫೫, ಯಾದವ ಸ್ಮೃತಿ, ಶೇಷಾದ್ರಿಪುರ, ೧ನೇ ಮುಖ್ಯ ರಸ್ತೆ, ಬೆಂಗಳೂರು - ೫೬೦೦೨೦
(ಪ್ರಕಟಣೆಯ ಕೃಪೆಗಾಗಿ)
ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಪರಮ ಪವಿತ್ರ ಕ್ಷೇತ್ರ ಭೂವೈಕುಂಠವೆನಿಸಿರುವ ತಿರುಮಲ ತಿರುಪತಿ ಪರಿಸರದಲ್ಲಿ ಅನೇಕ ರೀತಿಯ ಕ್ರಿಸ್ತೀಕರಣ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.
ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು, ಪೇಜಾವರ ಮಠ, ಉಡುಪಿ ಇವರ ಆದೇಶದಂತೆ ಸತ್ಯ ಶೋಧನಾ ಸಮಿತಿಯೊಂದು ಎರಡು ದಿನಗಳ ಕಾಲ ತನಿಖೆ ನಡೆಸಿದೆ. ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶ್ರೀ ಬಿಕ್ಷಾಪತಿಯವರ ನೇತೃತ್ವದ ಈ ಸಮಿತಿ ತನ್ನ ವರದಿಯಲ್ಲಿ ತಿರುಮಲ ತಿರುಪತಿ ಶ್ರೀ ಕ್ಷೇತ್ರದಲ್ಲಿ ತೀವ್ರವಾಗಿ ನಡೆಯುತ್ತಿರುವ ಕ್ರಿಸ್ತೀಕರಣದ ಚಟುವಟಿಕೆಗಳನ್ನು ಬಹಿರಂಗಗೊಳಿಸಿದೆ.
ಸತ್ಯ ಶೋಧನಾ ಸಮಿತಿಯು ಬಹಿರಂಗಗೊಳಿಸಿರುವ ವರದಿಯ ಸಂಕ್ಷಿಪ್ತ ರೂಪ
ಸಮಿತಿಯು ದಿನಾಂಕ ೨೧, ೨೨ ಜೂನ್ ೨೦೦೬ರಂದು ತಿರುಪತಿ-ತಿರುಮಲಕ್ಕೆ ಭೇಟಿ ನೀಡಿದಾಗ ೫೦ಕ್ಕೂ ಹೆಚ್ಚು ಸಾರ್ವಜನಿಕರು ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ತಮ್ಮ ಗಮನಕ್ಕೆ ಬಂದ ಚಟುವಟಿಕೆಗಳನ್ನು ವಿವರಿಸಿದ್ದಾರೆ.
ಅಲ್ಲದೆ ಸಮಿತಿಯು TTDಯ ನಿರ್ವಾಹಕ ಮುಖ್ಯಸ್ಥ ಶ್ರೀ APVN ಶರ್ಮಾ, IAS ರವರನ್ನು ದಿನಾಂಕ ೨೨-೬-೦೬ರಂದು ಭೇಟಿ ಮಾಡಿತು. ಅದೇ ಸಂದರ್ಭದಲ್ಲಿ ಶ್ರೀ ಧರ್ಮಾ ರೆಡ್ಡಿ, ವಿಶೇಷಾಧಿಕಾರಿಗಳು, ಶ್ರೀ ಅರವಿಂದ ಕುಮಾರ್, IPS, ಮುಖ್ಯ ಸುರಕ್ಷಾ ಅಧಿಕಾರಿ, ಶ್ರೀ ರಾಮಚಂದ್ರ ರೆಡ್ಡಿ, ಕಾನೂನು ಅಧಿಕಾರಿ ಇವರೂ ಉಪಸ್ಥಿತರಿದ್ದರು. ಈ ಎಲ್ಲರೂ ನೀಡಿದ ಮಾಹಿತಿಯ ವಿಶ್ಲೇಷಣೆಯಿಂದ ಹೊರಬಂದ ಸತ್ಯಾಂಶಗಳು:
೧. ಕ್ರೈಸ್ತಮತ ಪ್ರಚಾರ ಮತ್ತು ಮತಾಂತರ ಪ್ರಯತ್ನದ ಚಟುವಟಿಕೆಗಳು
ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಗಳು ಹಾಗೂ ಮಿಶನರಿಗಳು ತಿರುಪತಿ-ತಿರುಮಲದಲ್ಲಿ ತಮ್ಮ ಮತಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕಾಲೇಜುಗಳಲ್ಲಿ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಗೆ, ತಿರುಮಲದಿಂದ ತಿರುಪತಿಗೆ ಬಸ್‌ನಲ್ಲಿ ಬರುವಾಗ ಯಾತ್ರಾರ್ಥಿಗಳಿಗೆ, ಧರ್ಮದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಬೈಬಲ್ ಹಂಚುವ ಪ್ರಕರಣಗಳ ಬಗ್ಗೆ ದೂರುಗಳು ದಾಖಲಾಗಿವೆ.
೨. TTDಯ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತಮತ ಪ್ರಚಾರ
* ಶ್ರೀ ವೇಂಕಟೇಶ್ವರ ವಿಶ್ವವಿದ್ಯಾಲಯದ (SV University) ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೇವಸಂಗೀತಂ ವಿದ್ಯಾರ್ಥಿಗಳಿಗೆ ಕ್ರೈಸ್ತಮತ ಪ್ರಚಾರ ಮಾಡುವುದಲ್ಲದೆ ಚರ್ಚ್‌ಗೆ ಹೋಗಲು ಬಲವಂತ ಮಾಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ.
* ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಮತಿ ವೀಣಾ ನೋಬಲ್ ದಾಸ್ ವಿಶ್ವವಿದ್ಯಾಲಯದ ಕಾಲೇಜುಗಳಿಂದ ವೇಂಕಟೇಶ್ವರ ಮತ್ತು ಪದ್ಮಾವತಿಯರ ಭಾವಚಿತ್ರಗಳನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಯೇಸುಕ್ರಿಸ್ತನ ಭಾವಚಿತ್ರ ಮತ್ತು ಶಿಲುಬೆಗಳನ್ನು ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಣೆಗೆ ತಿಲಕ ಇಡುವುದನ್ನು ನಿಷೇಧಿಸಿದ್ದಾರೆ.
೩. TTDಯಲ್ಲಿ ಉದ್ಯೋಗ
* TTDಯ ಕೆಲವು ಹುದ್ದೆಗಳಿಗೆ ಕ್ರೈಸ್ತರು ಮತ್ತು ಮುಸಲ್ಮಾನರನ್ನು ಕಾನೂನು ಮೀರಿ ನೇಮಿಸಿಕೊಳ್ಳಲಾಗಿದೆ. ಹೀಗಾಗಿ ತಿರುಮಲದಲ್ಲಿ ನೆಲೆಸಿರುವ ೪೦ ಕ್ರೈಸ್ತ ಕುಟುಂಬಗಳು ಪ್ರಾರ್ಥನಾಕೂಟ, ಸಭೆಗಳನ್ನು ನಡೆಸುತ್ತಿದ್ದಾರೆ. ತೋಟಗಾರಿಕೆ ಮೇಲ್ವಿಚಾರಕರಾಗಿರುವ ಕ್ರೈಸ್ತಮತಸ್ಥರಾದ ಗೋಪೀನಾಥ್ ``ಆ ಕಪ್ಪು ಶಿಲೆಗೆ ಹೂವಿನ ಹಾರ ಏಕೆ ಹಾಕುತ್ತೀರಿ?'' ಎಂದು ಶ್ರೀ ವೇಂಕಟೇಶ್ವರನ ಮೂರ್ತಿಯನ್ನು ಭಕ್ತಾದಿಗಳ ಎದುರೇ ನಿಂದಿಸುತ್ತಾರೆ.
ಗುತ್ತಿಗೆ ಕೆಲಸಗಾರರನ್ನು (Contract employees) ತೆಗೆದುಕೊಳ್ಳುವಾಗಲೂ ಹಿಂದುಗಳಲ್ಲದವರನ್ನು ಕಾನೂನಿನ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತಿದೆ. ಸುಮಾರು ೪೦ ಮುಸ್ಲಿಂ ಕುಟುಂಬಗಳು ಅಂಗಡಿ ಮುಂಗಟ್ಟು ತೆರೆದು ತಿರುಮಲದಲ್ಲಿ ನೆಲೆಸಿವೆ.
೪. ತಿರುಮಲದಲ್ಲಿ ನಡೆಯುತ್ತಿರುವ ಇತರ ಕಾನೂನುಬಾಹಿರ ಚಟುವಟಿಕೆಗಳು
* TTD ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಶ್ರದ್ಧೆಯ ಫಲವಾಗಿ ತಿರುಮಲ-ತಿರುಪತಿಯಲ್ಲಿ ಮದ್ಯಮಾರಾಟ, ಮಾಂಸಮಾರಾಟ, ಜೂಜು, ಗೋಹತ್ಯೆಯಂತಹ ಘೋರಕೃತ್ಯಗಳು ನಡೆಯುತ್ತಿವೆ.
* ನಾಗಲಾಪುರದ TTD ಕಲ್ಯಾಣಮಂಟಪವನ್ನೇ ಕ್ರೈಸ್ತ ಪಾದ್ರಿಗಳು ತಮ್ಮ ಪ್ರಾರ್ಥನಾಸಭೆಗಳಿಗೆ ಉಪಯೋಗಿಸುತ್ತಿದ್ದಾರೆ.
* ಹೊಸದಾಗಿ ರಚನೆಯಾಗಿರುವ TTDಯ ಮಂಡಳಿಗೆ ಮತಾಂತರಿತ ವ್ಯಕ್ತಿ ಶ್ರೀ ರೋಸಯ್ಯ, IAS ರವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ತಿರುಮಲದಲ್ಲಿ ಭಕ್ತಾದಿಗಳ ಇಚ್ಛೆಗೆ ವಿರುದ್ಧವಾಗಿ mallಗಳು, food courtಗಳು ಮುಂತಾದ ಮನರಂಜನಾ ಚಟುವಟಿಕೆಗಳನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಲು ಮುಂದಾಗಿದೆ.
೫. ಪವಿತ್ರ ಸಪ್ತಗಿರಿ
`ತಿರುಮಲದ ಎಲ್ಲ ಏಳು ಬೆಟ್ಟಗಳೂ ಶ್ರೀ ವೇಂಕಟೇಶ್ವರನ ಅಧೀನ, ಅವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ' ಎಂದು ಆಂಧ್ರಪ್ರದೇಶದ ಉಚ್ಚನ್ಯಾಯಾಲಯದ ವಿಭಾಗೀಯ ಪೀಠವು ತನ್ನ ತೀರ್ಪೊಂದರಲ್ಲಿ ಆದೇಶ ಹೊರಡಿಸಿದೆ. ಈ ತೀರ್ಪನ್ನು ಮತ್ತು
ಕೋಟ್ಯಂತರ ಭಕ್ತಾದಿಗಳ ಭಾವನೆಗಳನ್ನು ತಿರಸ್ಕರಿಸಿ ತಿರುಮಲದ ಎರಡೇ ಬೆಟ್ಟಗಳನ್ನೊಳಗೊಂಡ ಸುಮಾರು ೨೭ ಚದರ ಕಿ. ಮೀ. ಕ್ಷೇತ್ರವನ್ನು ಮಾತ್ರ ತಿರುಮಲದ ಅಧೀನಕ್ಕೆ ಬಿಟ್ಟು ಉಳಿದ ಕ್ಷೇತ್ರವನ್ನು ಅದರ ವ್ಯಾಪ್ತಿಯಿಂದ ಹೊರತೆಗೆದು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಯೋಚನೆ ನಡೆದಿದೆ.
೬. TTDಯ ಸಂಪನ್ಮೂಲ
`ಹಿಂದು ಧರ್ಮ ಪರಿರಕ್ಷಣಾ ಸಮಿತಿ'ಯ `ಹಿಂದು' ಪದ ಕೈಬಿಟ್ಟು ಅದನ್ನು `ಧರ್ಮ ಪ್ರಚಾರ ಪರಿಷತ್' ಎಂದು ಮರುನಾಮಕರಣ ಮಾಡಲಾಗಿದೆ. ತಿರುಮಲದಲ್ಲಿ ಭಕ್ತಾದಿಗಳ ಕೊಡುಗೆಯಿಂದ ಸಂಗ್ರಹವಾಗುವ ಧನರಾಶಿಯು ಹಿಂದುಧರ್ಮದ ಪ್ರಚಾರಕ್ಕಾಗಿ, ತತ್ಸಂಬಂಧಿತ ಉಪನ್ಯಾಸಗಳು, ಹರಿಕಥೆ, ಪ್ರವಚನ, ಗಾಯನಸಭೆ ಇತ್ಯಾದಿಗಳಿಗೆ, ಹಿಂದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿನಿಯೋಗವಾಗಬೇಕಿತ್ತು. ಆದರೆ, ಇಂತಹ ಕಾರ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಮಾಡುತ್ತಲೇ ಇಲ್ಲ. ಬದಲಾಗಿ ಇತರ ಚಟುವಟಿಕೆಗಳಿಗೆ ಹಣವನ್ನು ವಿನಿಯೋಗಿಸಲಾಗುತ್ತಿದೆ. ಬಹುದೊಡ್ಡ ಜಾಗವನ್ನು ಮಸೀದಿ ಕಟ್ಟಲು ದಾನ ಮಾಡಲಾಗಿದೆ.
ಸಮಿತಿಯ ಸದಸ್ಯರು:
ಶ್ರೀ ಜಸ್ಟಿಸ್ ಜಿ. ಬಿಕ್ಷಾಪತಿ, ನಿವೃತ್ತ ನ್ಯಾಯಾಧೀಶರು, ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ
ಶ್ರೀ ಟಿ. ಎಸ್. ರಾವ್, IPS, ನಿವೃತ್ತ ಪೋಲೀಸ್ ಮಹಾ ನಿರ್ದೇಶಕರು, ಆಂಧ್ರಪ್ರದೇಶ ಸರಕಾರ
ಶ್ರೀಮತಿ ಡಾ ಪಿ. ಗೀರ್ವಾಣಿ, ನಿವೃತ್ತ ಉಪಕುಲಪತಿ, ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ತಿರುಪತಿ
ಶ್ರೀ ಡಾ ಆರ್. ಶ್ರೀಹರಿ, ನಿವೃತ್ತ ಉಪಕುಲಪತಿ, ದ್ರವಿಡ ವಿಶ್ವವಿದ್ಯಾಲಯ, ಕುಪ್ಪಂ
Thursday, August 03, 2006
ಇಂಡಿಯಾ, ನಿನ್ನನ್ನು ಆಳಲು ಒಬ್ಬ ಶುದ್ಧ ಇಂಡಿಯನ್ ಇಲ್ಲವಾ ?
ರವಿ ಬೆಳಗೆರೆ
ಇನ್ನು ಮೇಲೆ ಜಗತ್ತಿನ ಯಾವುದೇ ದೇಶದ ಯಾವುದೇ ಪತ್ರಿಕೆ ಸುದ್ದಿ ಬರೆದರೂ, `ಇಟಲಿ ಮೂಲದ ಭಾರತದ ಪ್ರಧಾನಿ ಸೋನಿಯಾಗಾಂ ಏನೆಂದರೆಂದರೆ... ' ಅಂತಲೇ ಬರೆಯುತ್ತದೆ.
ಇತಿಹಾಸ ರಿಪೀಟಾಗಿದೆ. ಭಾರತ ಇನ್ನೊಂದು ಸಲ ವಿದೇಶದವರ ಆಳ್ವಿಕೆಗೆ ಒಳಪಟ್ಟಿದೆ. ನೂರು ಕೋಟಿ ಜನರಿರುವ ದೇಶಕ್ಕೆ ಒಬ್ಬೇ ಒಬ್ಬ ಭಾರತೀಯ ಪ್ರಧಾನಿಯನ್ನು ಹುಡುಕಲಾಗಲಿಲ್ಲ. ಇದಲ್ಲವೇ ದುರಂತ? ಇದು ನಾಚಿಕೆಗೇಡು. ವಂದೇ ಮಾತ ರೋಮ್!' ಅಂತ ಬಿಜೆಪಿಯವರು ಒಬ್ಬರಾದ ಮೇಲೊಬ್ಬರಂತೆ ಮೊಬೈಲುಗಳಿಗೆ ಮೆಸೇಜು ಕಳಿಸಿ ನಿಡುಸುಯ್ಯುತ್ತಿದ್ದಾರೆ. ಮತ್ತೆ ನೆಹರೂ ಕುಟುಂಬದ ಕೂಸು ಕೆಂಪುಕೋಟೆಯ ಬುರುಜಿನ ಮೇಲೆ ನಿಂತು ಆಗಸ್ಟ್ ಪಂದ್ರಾದ ಪತಾಕೆ ಹಾರಿಸುವ ಕಾಲ ಬಂದಿದೆ.
ಇಲ್ಲಿ ಎಸ್ಸೆಂ ಕೃಷ್ಣ, ಪಕ್ಕದಲ್ಲಿ ನಾಯುಡು ಕೆತ್ತಾ ಪತ್ತಾ ಒದೆ ತಿಂದಿದ್ದಾರೆ. ಕೃಷ್ಣ ಒಬ್ಬರೇ ಅಲ್ಲ: ಅವರೊಂದಿಗೆ ಅನೈತಿಕ ಸಂಧಾನಗಳನ್ನು ಮಾಡಿಕೊಂಡ ಮಾದೇಗೌಡ, ರೈತ ಸಂಘದ ಪುಟ್ಟಣ್ಣನಯ್ಯನಂಥವರು ಕೂಡಾ ತಪರಾಕಿ ತಿಂದಿದ್ದಾರೆ. ಮೋಟಮ್ಮ, ಸಗೀರ್, ವಿಶ್ವನಾಥ್, ಮಲಕರೆಡ್ಡಿ ಮುಂತಾದ ಸಜ್ಜನ ಮಂತ್ರಿಗಳನ್ನು ಸೋಲಿಸಿದ ಕೈಯಲ್ಲೇ ಜಯಚಂದ್ರ, ದಿವಾಕರ ಬಾಬು, ಬೆಂಕಿ ಮಹದೇವ, ಚಂದ್ರೇಗೌಡ, ಉಸ್ತಾದ್, ರಮನಾಥ ರೈ, ಚಿಂಚನಸೂರ, ಶ್ರಿಕಂಠಯ್ಯ, ಕಮರುಲ್ಲ ಇಸ್ಲಾಂರಂತಹದ ನೀಚ ಮಂತ್ರಿಗಳನ್ನೂ ಮತದಾರ ಕೆನ್ನೆಗೆ ಬಾರಿಸಿ ಮನೆಗೆ ಕಳಿಸಿದ್ದಾನೆ. ಈ ಸೋಲು, ಅವಮಾನ, ಹೀನಾಯ ಸ್ಥಿತಿಯ ಅಷ್ಟೂ ಜವಾಬ್ದಾರಿ ಕೃಷ್ಣರದು ಮತ್ತು ಅವರ ಮೂರ್ಖತನದ್ದು.
ಎಸ್ಸೆಂ ಕೃಷ್ಣ ಕೆಲವು ಎಚ್ಚರಿಕೆಗಳನ್ನು ಸಾರಾಸಗಟಾಗಿ ignore ಮಾಡಿದರು. ಆರಂಭದಿಂದಲೂ ಅವರು ಜನರ ಕಣ್ಣಿಗೆ ಮಿತ್ರನಾಗಿ ಕಾಣಲಿಲ್ಲ. ಅವರ ಮಿತ್ರರ್‍ಯಾರೂ ಜನಸಾಮಾನ್ಯರ ದೃಷ್ಟಿಯಲ್ಲಿ ಗೌರವವಂತರಾಗಿರಲಿಲ್ಲ. ಪಂಚತಾರಾ ಹೊಟೇಲುಗಳಲ್ಲಿ ಸಣ್ಣ ಪ್ರಾಯದ ಹುಡುಗಿಯರ ಜೀವ ಹಿಸುಕುತ್ತ ಕೂತಿರುತ್ತಿದ್ದ ನಾರಾಯಣ-ಕೃಷ್ಣರ ಅರ್ಧಕಾಲದ ಆಡಳಿತ ನುಂಗಿದರು. ಇನ್ನರ್ಧ ನುಂಗಿದವನು yellow pages ನ ರಾಘವೇಂದ್ರ ಶಾಸ್ತ್ರಿ . ಅವನೇನು ರಾಜಕಾರಣಿಯೇ? ಅಕಾರಿಯೇ? ಆಡಳಿತ ಬಲ್ಲವನೇ? ಬುದ್ಧಿಜೀವಿಯೇ? ಇದ್ಯಾವುದೂ ಅಲ್ಲ. ಅಂಥವನನ್ನು ಸದಾ ಬೆನ್ನಿಗೆ ಶನಿಯನ್ನು ಕಟ್ಟಿಕೊಂಡಂತೆ ಕಟ್ಟಿಕೊಂಡು ತಿರುಗಿದ ಕೃಷ್ಣರಿಗೆ ತಾವು ಆಳುವ ಜನರ ಮನಸ್ಸೇನು ಎಂಬುದೂ ಕಡೆಗೂ ಗೊತ್ತಾಗಲಿಲ್ಲ. ಆತ ಒಬ್ಬೇ ಒಬ್ಬ ರೈತನನ್ನು ಹತ್ತಿರಕ್ಕೆಳೆದು ತಬ್ಬಿಕೊಳ್ಳಲಿಲ್ಲ. ಕೈ ಕುಲುಕಲಿಲ್ಲ, ಒಬ್ಬ ಊರಾಚಿನ ಅಸ್ಪ್ರಶ್ಯನ ಮನೆಯಲ್ಲಿ ನೀರುಕೇಳಿ ಕುಡಿಯಲಿಲ್ಲ.
ಎಸ್ಸೆ ಂ ಕೃಷ್ಣ ಮತ್ತು ನಾಯುಡು ಬೀಗತನ ಮಾಡಿದ್ದೇ ಐ.ಟಿ.-ಬಿ.ಟಿ.ಯವರೊಂದಿಗೆ. ಈ ನೆಲದ ರೈತ ಸಗಾಟಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಅವರೆಡೆಗೆ ತಿರುಗಿ ಕೂಡಾ ನೋಡದ ಕೃಷ್ಣ ಜಿಲ್ಲಾಕಾರಿಗಳೊಂದಿಗೆ ವಿಡಿಯೋ ಕಾನರೆನ್ಸಿಂಗ್ ಮಾಡಿಕೊಂಡು ಕೂತರು. ಅವರ ಮೇಲೆ ರೈತರಿಗಿದ್ದ ವಿಶ್ವಾಸ ಎಕ್ಕುಟ್ಟಿ ಹೋಯಿತು. ಇಂಗ್ಲೀಷ್ ಪತ್ರಿಕೆಗಳವರು, ಟೀವಿ ಛಾನಲ್ಲುಗಳವರು ಕೈತುಂಬ ಸೈಟು ಪಡೆದು ಕೃಷ್ಣರನ್ನು ಬೆಸ್ಟು ಚೀಫ್ ಮಿನಿಸ್ಟರು ಅಂತ ಹೊಗಳಿ ಮರ್ಯಾದೆ ಕಳೆದು ಕೊಂಡರೇ ಹೊರತು ಅದನ್ನು ಮತದಾರ ನಯಾ ಪೈಸೆಯಸ್ಟು ವಿಶ್ವಾಸದಿಂದ ನೋಡಲಿಲ್ಲ, ಓದಲಿಲ್ಲ. ಪ್ರತೀ ವಾರ ಒಂದಲ್ಲ ಒಂದು ರೀತಿಯಲ್ಲಿ ಕೃಷ್ಣರನ್ನು ಎಚ್ಟರಿಸಿ, ಅವರ ಸುತ್ತಲಿನ ಭ್ರಷ್ಟರ ಬಗ್ಗೆ ವಿವರ ನೀಡಿ ಇಂಥವರನ್ನು ದೂರವಿಡಿ ಅಂತ ಬರೆಯಿತು `ಪತ್ರಿಕೆ'. ಆದರೆ ಎಸ್ಸೆಂ ಕೃಷ್ಣ ಪರಿಮಳ ನಾಗಪ್ಪನವರ ಮನೆಬಾಗಿಲಲ್ಲಿ ನಿಂತು ಅದನ್ಯಾಕೆ ಓದ್ತೀರಿ? ಪುಂಡ ಪೋಕುರಿಗಳ ಪತ್ರಿಕೆಯನ್ನ? ಅಂದರು. ಅದೇ ಪರಿಮಳ ನಾಗಪ್ಪ ಇವತ್ತು ಕೃಷ್ಣರ ಪುಂಡು ಪೋಕರಿ ಶಿಷ್ಯರ ಮುಖಕ್ಕೆ ಎಕ್ಕಡದಲ್ಲಿ ಹೊಡೆದಂತೆ ಗೆದ್ದಿದ್ದಾರೆ. ಶುದ್ಧ ಅರ್ಬನ್ ಮತದಾರರನ್ನು ಓಲೈಸಿಕೊಂಡೇ ನಾಲ್ಕೂವರೆ ವರ್ಷ ಕಳೆದ ಕೃಷ್ಣ ಚಾಮರಾಜಪೇಟೆಯಲ್ಲಿ ಪಡೆದ ಓಟುಗಳಾದರೂ ಎಷ್ಟು? ಒಬ್ಬ ಬೆಸ್ಟು ಚೀಫ್ ಮಿನಿಸ್ಟರು ಪಡೆಯಬೇಕಾದ ಲೀಡಾ ಅದು?
ಇನ್ನು ರಾಜ್ಯದ ರಾಜಕಾರಣದಲ್ಲಿ ಕೃಷ್ಣರಿಗೆ ಕವಡೆ ಕಾಸಿನ ಕಿಮ್ಮತ್ತೂ ಉಳಿದಿಲ್ಲ. ಅವರು ಸೈಟು ಕೊಟ್ಟು ಬೆನ್ನು ಕೆರೆಸಿಕೊಂಡ ಪತ್ರಕರ್ತರೇ ಕೃಷ್ಣರ ಮನೆ ಕಂಪೌಡಿನ ಬಳಿ ಸುಳಿಯುತ್ತಿಲ್ಲ.
ಆದರೆ ರಾಜ್ಯದ ರಾಜಕೀಯ ಭವಿಷ್ಯ ಅತಂತ್ರಕ್ಕೆ ಬಿದ್ದಂತಾಗಿದೆ. ದೇವೇಗೌಡ ಕಾಂಗ್ರೆಸ್ ಸೇರಿ ಸರಕಾರ ರಚಿಸುತ್ತಾರೆ. ಅಂದರೆ ಬರಲಿರುವ ದಿನಗಳಲ್ಲಿ ರಾಜ್ಯಾದ್ಯಂತ ಕದನ ಕುತೂಹಲ ರಾಗದ ಮ್ಯಾಳವೇ! ದೇವೇಗೌಡರನ್ನು ಖುದ್ದು ಅವರ ಮಕ್ಕಳು ಸಹಿಸಿಕೊಳ್ಳುವುದು ಕಷ್ಟ. ಈಗಾಗಲೇ ಸಿದ್ರಾಮಯ್ಯ ಮುಖ್ಯಮಂತ್ರಿಯಾಗ ಕೂಡದು ಎಂಬ ರಾಗ ಆರಂಭವಾಗಿದೆ. ಮುಂದೆ ಏನನ್ನು ಕಾಣಲಿಕ್ಕಿದೆಯೋ? ಒಂದೇ ಸಂತೋಷವೆಂದರೆ ಮೂರು ಪಕ್ಷಗಳ ಪೈಕಿ ಯಾವ ಪಕ್ಷ ಒಪೋಸಿಷನ್‌ನಲ್ಲಿ ಕುಳಿತರೂ, ರಾಜ್ಯದಲ್ಲಿ ಒಂದು ಪ್ರಬಲ ಮತ್ತು vibrant ಆದ ವಿರೋಧ ಪಕ್ಷವಾಗಿ ವರ್ತಿಸಬೇಕಾಗುತ್ತದೆ. ಕೆಲವರ ಗೆಲುವುಗಳು ನಿಜಕ್ಕೂ ಈ ಸಲದ ಅಸೆಂಬ್ಲಿ ಹಾಲಿಗೆ ಚುರುಕು, ರಂಗು ಮತ್ತು ಕಳೆ ತಂದಿತ್ತಿವೆ. ಶಿರಾದ ಸತ್ಯನಾರಾಯಣ, ರಮೇಶ್ ಕುಮಾರ್, ಕೆ.ಆರ್.ಪೇಟೆ ಕೃಷ್ಣ , ವಾಟಾಳ್ ನಾಗರಾಜ್, ಎವಿ ರಾಮಸ್ವಾಮಿ, ಮಹಿಮಾ ಪಟೇಲ್, ಕುಮಾರ್ ಬಂಗಾರಪ್ಪ ಮುಂತಾದವರ ಗೆಲುವು ನಿಜಕ್ಕೂ ಸ್ವಾಗತಾರ್ಹ. ಆ ಮಟ್ಟಿಗೆ `ಪತ್ರಿಕೆ' ಯಾರ್‍ಯಾರು ಗೆಲ್ಲ ಬೇಕು ಅಂತ ಬಯಸಿತ್ತೋ, ಯಾರ್‍ಯಾರು ಗೆಲ್ಲುತ್ತಾರೆ ಅಂತ ಅಂದುಕೊಂಡಿತ್ತೋ, ಆ ಪಟ್ಟಿಯಲ್ಲಿ ೯೦% ನಷ್ಟು ನಿರೀಕ್ಷೆಗಳು ನಿಜವಾಗಿವೆ. ಕಳೆದ ಎಂಟು ವರ್ಷಗಳಿಂದ ಶತಾಯಗತಾಯ ವಿರೋಸಿಕೊಂಡು ಬಂದಿದ್ದ ಮಾಲಿಕಯ್ಯ ಗುತ್ತೇದಾರ ಮತ್ತು ಸುಭಾಷ್ ಗುತ್ತೇದಾರ ಎಂಬ ಹಂತಕರಿಬ್ಬರೂ ಸೋತು ಸರ್ವನಾಶವಾಗಿದ್ದಾರೆ. ಶಿವರಾಮೇಗೌಡನ ಸೋಲಿದೆಯಲ್ಲ ? ಅದನ್ನೇನು ನಾನು `ಪತ್ರಿಕೆ'ಯ ದಿಗ್ವಿಜಯ ಅಂತ ಭಾವಿಸಿಲ್ಲ. ಒಂದು ಹುಳು ಸೋಲಬೇಕಿತ್ತು ; ಸೋತಿದೆ. ಅದೇ ರೀತಿಯ ಮರ್ಡರಸ್ ರಾಜಕಾರಣಿ ಬಚ್ಚೇಗೌಡ, ಕೆ.ಆರ್.ಪೇಟೆಯ ಚಂದ್ರ ಶೇಖರ, ಕೆರೆಗೋಡು ಶಿವಕುಮಾರ, ಗಾಂ ನಗರದ ಬಾಂಬ್ ನಾಗ, ಸಾಗರದ ಕಾಗೋಡು ತಿಮ್ಮಪ್ಪ ಮುಂತಾದವರು ಸೋತಿದ್ದಾರೆ.
ಹಂಗ್ ಅಸೆಂಬ್ಲಿ ಆಗುತ್ತಿರುವುದು ಬೇಸರದ ಸಂಗತಿಯೇ ಆದರೂ, ಕರ್ನಾಟಕದ ಮಟ್ಟಿಗೆ ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಇನ್ನೂ ಒಂದಿಷ್ಟು ಉಳಿಸಿಕೊಂಡು ಬಂದಿರುವ ಜಾತ್ಯತೀತ ಜನತಾದಳ ಈ ಬಾರಿ ಪ್ರಖರಗೊಂಡಿರುವುದು ಸಮಾಧಾನದ ಸಂಗತಿ. ಹಡಗಲಿಯಿಂದ ಪ್ರಕಾಶ್, ಕನಕಪುರದಿಂದ ಸಿಂಧ್ಯಾ, ನಂಜನಗೂಡಿನಿಂದ ಜಯಕುಮಾರ್ ಮುಂತಾದವರು ಗೆದ್ದು ಬಂದಿರುವುದು ಆರೋಗ್ಯವಂತ ಲಕ್ಷಣವೇ. ಒಂದು ಕಡೆಯಿಂದ ಲೆಕ್ಕ ಹಾಕಿ ನೋಡಿದರೆ, ನನಗೆ ವೈಯುಕ್ತಿಕವಾಗಿ ಪರಿಚಯವಿರುವ ಸುಮಾರು ಇಪ್ಪತ್ತು ಶಾಸಕರು ಸಾಲಿಟ್ಟು ಗೆದ್ದು ಬಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಅವರ ಪೈಕಿ ಎಷ್ಟು ಜನ ಶತ್ರುಗಳಾಗುತ್ತಾರೋ? ಆ ಮಾತು ಬೇರೆ. ಆದರೆ ಹೊಸ ಸರಕಾರ , ಹೊಸ ಕಾಂಬಿನೇಷನ್ನು, ಹೊಸ ಮುಖಗಳು ಎಲ್ಲ ಸೇರಿ ಒಂದು ಹೊಸ ವಾತಾವರಣ ಮತ್ತು ಒಂದು ಹೊಸ hope ಸೃಷ್ಟಿಸಿದರೆ ಅದಕ್ಕಿಂತ ಸಂತೋಷ ಇನ್ನೊಂದಿರಲಾರದು. ಬಸವನಗುಡಿಯಿಂದ ಗೆದ್ದು ಬಂದಿರುವ ಚಂದ್ರಶೇಖರ್‌ರಂತಹ ಮಿತ್ರರೂ ಕಾಂಗ್ರೆಸ್‌ನಲ್ಲೇ ಇದ್ದರೂ, ನನ್ನಂಥವರಲ್ಲಿ ಒಂದು ಆಸೆ ಮೂಡಿಸುತ್ತಾರೆ. ಅಷ್ಟರಮಟ್ಟಿಗೆ ಆ ಚುನಾವಣೆಗಳು ತೃಪ್ತಿಕರವೇ.
ಆದರೆ ಪ್ರಧಾನಿಯಾಗಿ ಸೋನಿಯಾ ಗತಿ ಮತ್ತು ಭಾರತದ ಗತಿ ಏನಾಗಲಿದೆಯೋ ಎಂಬ ಕಳವಳಕ್ಕೆ ನಿಮ್ಮಂತೆಯೇ ನಾನೂ ಬಿದ್ದಿದ್ದೇನೆ. ಆಕೆ ವಿದೇಶಿಯಳು ಎಂಬುದು ಸುಲಭಕ್ಕೆ ಮರೆಯುವಂಥ ಮಾತಲ್ಲ. ನಮ್ಮ ಇಂದಿರಮ್ಮನ ಸೊಸೆಯಲ್ವಾ? ಇಷ್ಟು ವರ್ಷ ಇದ್ದ ಮೇಲೆ ನಮ್ಮ ಮನೆಯ ಹೆಣ್ಣು ಮಗಳೇ ಬಿಡು ಅಂತಾ ಅಂದುಕೊಳ್ಳುತ್ತೇವಾದರೂ, ಈ ದೇಶದ ಪ್ರಧಾನಿಯಾಗಿ ಆಕೆ ಇನ್ನೊಂದು ದೇಶದೊಂದಿಗೆ ವ್ಯವಹರಿಸುವಾಗ ಇಡೀ ದೇಶ ಒಂದು ಆತಂಕಕ್ಕೆ, ಅನುಮಾನಕ್ಕೆ ಬೀಳುವುದು ಸಹಜ. ಈ ಹಿಂದೆ ಹೊರಗಿನಿಂದ ಆಪತ್ತುಗಳು ಬಂದಾಗ ನಮ್ಮ ನೆಹರೂ, ನಮ್ಮ ಶಾಸ್ತ್ರೀಜಿ, ನಮ್ಮ ರಾಜೀವ್, ನಮ್ಮ ವಾಜಪೇಯಿ- ಇವರೆಲ್ಲ `ನೋಡ್ಕೋತಾರೆ ಬಿಡು'ಎಂಬಂಥ ಅನಿಸಿಕೆಯೊಂದು ಮನಸ್ಸಿನಲ್ಲಿರುತ್ತಿತ್ತು. ಆದರೆ ಸ್ವತಃ ಸೋನಿಯಾ ವಿದೇಶಿ ಮೂಲದವರಾಗಿರುವಾಗ ಆಕೆಯ ನಿಲುವು ಅದೆಷ್ಟರ ಮಟ್ಟಿಗೆ ಭಾರತದ ಆಸಕ್ತಿಗಳನ್ನು protect ಮಾಡುತ್ತದೋ ಎಂಬ ಆತಂಕ ಎಂಥವರನ್ನೂ ಕಾಡಿಯೇ ಕಾಡುತ್ತದೆ. ತನ್ನ ಅತ್ತೆ ಕೊಲೆಯಾಗಿ, ಆಕೆಯ ಶವದೆದುರೇ ರಾಜೀವ್ ಗಾಂ ಭಾರತದ ಪ್ರಧಾನಿಯಾಗಲು ಅಣಿಯಾದಾಗ ಇದೇ ಸೋನಿಯಾ ದೊಡ್ಡ ದನಿಯಲ್ಲಿ ಹಟ ತೆಗೆದಿದ್ದರು. ಈ ರಾಜಕೀಯ, ಈ ದೇಶ ನಮಗೆ ಹೇಳಿ ಮಾಡಿಸಿದ್ದುದಲ್ಲ ಅಂದಿದ್ದರು. ಈಗ ಅದೇ ಸೋನಿಯಾ ಪ್ರಧಾನಿಯಾಗುತ್ತಿದ್ದಾರೆ. ಅವರನ್ನು ಮುಲಾಯಂ, ಶರದ್‌ಪವಾರ್, ಲಾಲೂ, ದೇವೇಗೌಡ, ಜ್ಯೋತಿ ಬಸು, ಸುರ್ಜಿತ್- ಹೀಗೇ ಘಟಾನುಘಟಿಗಳು ಒಪ್ಪಿಕೊಂಡಾಗಿದೆ. ವಿದೇಶಿ ಮೂಲದ issue ಈಗ ದೊಡ್ಡ ಸಂಗತಿಯಾಗಿ ಉಳಿದಿಲ್ಲ. ಸುಪ್ರಿಂ ಕೋರ್ಟ್ ಕೂಡಾ ಆಕೆಯನ್ನು ಶುದ್ಧ ಭಾರತೀಯಳೆಂದು ಘೋಷಿಸಿಯಾಗಿದೆ. ಆ ಮಾತು ಅಲ್ಲಿಗೆ ಬಿಡೋಣ.
ಆದರೆ ಇವತ್ತಿನ ಭಾರತದ ರಾಜಕೀಯ ಸ್ಥಿತಿ ನೋಡಿ? ಇಡೀ ದೇಶ ನಾನಾ ನಮೂನೆಯ ಪಾಳೆಯಗಾರರ ಕೈಗೆ ಸಿಕ್ಕುಹೋಗಿದೆ. ಆ ರಾಜ್ಯಕ್ಕೆ ಅವನೇ ನಾಯಕ! ಅಂಥವರನ್ನೆಲ್ಲ ಒಟ್ಟುಗೂಡಿಸಿ ಒಂದು ಸರ್ಕಾರ ಅಂತ ರಚಿಸಿ ಹೇಗೋ ರಾಜ್ಯಭಾರ ತೂಗಿಸಿಕೊಂಡು ಹೋಗಬಹುದು ಮತ್ತು ಹೋಗಲೇ ಬೇಕು ಎಂಬುದನ್ನು ತೋರಿಸಿಕೊಟ್ಟದ್ದು ವಾಜಪೇಯಿ. ಆ ತಾಕತ್ತು ಆತನಿಗಿತ್ತು. ಆದರೆ ಸೋನಿಯಾಗೆ ಅಂಥ vision, ಅಂಥ ನಾಯಕತ್ವ, ಅಂಥಾ ಮುತ್ಸದ್ದಿತನ ಇದೆಯಾ ಎಂಬುದೇ ಪ್ರಶ್ನೆ. ರಾಜಕಾರಣದ ಪಾಠಗಳನ್ನು ಸೋನಿಯಾ ತನ್ನ ಅತ್ತೆಯಂತೆ ರಾತ್ರೋರಾತ್ರಿ ಕಲಿತ ಬುದ್ಧಿವಂತೆಯಲ್ಲ. ಆಕೆ ಚದುರಂಗದಲ್ಲಿ ಪಳಗಲಿಕ್ಕೆ ವರ್ಷಗಳೇ ಬೇಕಾದವು. ಇವತ್ತಿಗೂ ಆಕೆಯ ಮುಖದಲ್ಲಿ ಒಬ್ಬ ಆಡಳಿತಗಾರ್ತಿ ಕಾಣುವುದಿಲ್ಲ. ಈ ತೆರನಾದ ಪ್ರಾದೇಶಿಕ, ಪಾಳೇಗಾರಿ ಪಕ್ಷಗಳು, ಅನನುಭವಿ ನಾಯಕಿ, ಆಕೆಯ ಸುತ್ತಲಿನ ಭಟ್ಟಂಗಿ ಕೂಟಗಳು ಇವೆಲ್ಲ form ಆದಾಗಲೇ ದೇಶ ಆಪತ್ತಿಗೆ ಬೀಳುವ ಅಪಾಯವಿರುತ್ತದೆ.
ಅಲ್ಲದೆ, ಇಂದಿರಾಗಾಂ ಆಳಿದ ಕಾಲಕ್ಕೂ ಸೋನಿಯಾ ಆಳಲಿರುವ ಕಾಲಕ್ಕೂ ಹೋಲಿಸಿಕೊಂಡರೆ ದೇಶದ ಸಮಸ್ಯೆಗಳು ಅಗಾಧ ಮತ್ತು ಆತಂಕಕಾರಿ ಸ್ಥಿತಿ ತಲುಪಿವೆ. ಜಾಗತೀಕರಣ ನಮ್ಮ ವ್ಯಾಪಾರಿಗಳನ್ನ, ಉದ್ದಿಮೆದಾರರನ್ನ ತಿಂದು ಹಾಕಿ ಬಿಟ್ಟಿದೆ. ಕುಡಿಯುವ ನೀರಿನ ಸಮಸ್ಯೆ ಹಳ್ಳಿಹಳ್ಳಿಯನ್ನೂ ಕಂಗೆಡಿಸಿದೆ. ವಾಜಪೇಯಿ ಕಾಲದ ವಿತ್ತ ನೀತಿ ಷೇರು ಮಾರುಕಟ್ಟೆಯನ್ನು ನಾಶ ಮಾಡಿ ಹಾಕಿದೆ. ಇವರು ಪ್ರತಿಯೊಂದನ್ನು disinvestment ಮಾಡಿ, ಸರ್ಕಾರಿ ಉದ್ದಿಮೆಗಳನ್ನು ಮಾರಿ ಕಾರ್ಮಿಕ ವಲಯದಲ್ಲಿ ದುರ್ಭರವಾದ ಹತಾಶ ಸ್ಥಿತಿ ಉಂಟುಮಾಡಿದ್ದಾರೆ. ಕೋಟ್ಯಂತರ ಜನಕ್ಕೆ ಉದ್ಯೋಗ ಬೇಕು, ನೀರು ಬೇಕು, ರಸ್ತೆಗಳು ಬೇಕು, ಮುಂದೆ ಬದುಕು ಹಸನಾದಿತೆಂಬ hope ಬೇಕು. ಸೋನಿಯಾ ಕೈಯಲ್ಲಿ ಅದನ್ನೆಲ್ಲ ಕೊಡಮಾಡಲು ಸಾಧ್ಯವಾದೀತೇ?
ಸಾಧ್ಯವಾಗಲೀ ಅಂತಲೇ ಇಟ್ಟುಕೊಳ್ಳೋಣ. ಆದರೂ ನೂರು ಕೋಟಿ ಜನ ಸಂಖ್ಯೆಯಿರುವ ಈ ರಾಷ್ಟ್ರಕ್ಕೆ, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ಸಿಗೆ ಒಬ್ಬ ಭಾರತೀಯ ಪ್ರಜೆಯನ್ನು ಪ್ರಧಾನಿಯನ್ನಾಗಿ ಆಯ್ಕೆಮಾಡಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲ? ಅದು ನಿಜಕ್ಕೂ ನೋವೇ.
ಏಕೆಂದರೆ ಪ್ರಜಾಪ್ರಭುತ್ವ ಇಸ್ಲಾಂನಷ್ಟು ಪ್ರಭಾವಶಾಲಿಯಲ್ಲ !
ರವಿ ಬೆಳಗೆರೆ
ಈ ಹೆಂಗಸು ಸೋನಿಯಾ ಬೆಂಗಳೂರಿನ ಕೊರಳಿಗೆ ಶಿಲುಬೆ ಕಟ್ಟಿ, ಇಲ್ಲಿನ ಲಕ್ಷಾಂತರ ಜನರನ್ನು ಅಂತಾರಾಷ್ಟ್ರೀಯ ವಂಚಕನೊಬ್ಬನ ಕೈಗೆ ಕೊಡಲು ತೀರ್ಮಾನಿಸಿದ್ದಾಳೆ. ಅಕಾರಕ್ಕೆ ಬಂದಾಗಿನಿಂದ ಸೊಂಟದ ಎಲುಬೇ ಸ್ಥಿರವಾಗಿ ನಿಲ್ಲದಿರುವ ಧರಂಸಿಂಗ್ ಸರ್ಕಾರ ಸೋನಿಯಾ ಅಪ್ಪಣೆಯ ಮೇರೆಗೆ ಕೊರಳಿಗೆ ಶಿಲುಬೆ ಕಟ್ಟಿಕೊಂಡು ಬೆನ್ನಿಹಿನ್ ಎಂಬ ಶತಸಿದ್ಧ ವಂಚಕನ ಬೂಟು ನೆಕ್ಕಲು ನಿಂತುಬಿಟ್ಟಿದೆ.
ಬೆನ್ನಿಹಿನ್ ಎಂಬ ಕ್ರಿಶ್ಚಿಯನ್ ವಾಮಾಚಾರಿಗೆ ಕೋಟ್ಯಂತರ ರೂಪಾಯಿ ದೋಚುವ ಇರಾದೆ ಇದೆ. ಮತಾಂತರ ಕೂಡ ಅವನ ಅಜೆಂಡಾಗಳಲ್ಲೊಂದು. ಇವೆರಡೇ ಆಗಿದ್ದಿದ್ದರೆ, ಬೆನ್ನಿಹಿನ್ ಬಂದು ಭಾಷಣ ಮಾಡಿಕೊಂಡು ಹೋಗಲಿ ಅನ್ನಬಹುದಿತ್ತು. ಆದರೆ ಬೆನ್ನಿಹಿನ್ ನಮ್ಮ ದೇಶದ ಸಂಸ್ಕೃತಿ fabricಗೇನೇ ಕೊಳ್ಳಿಯಿಡುತ್ತಿರುವ ಮಲ್ಟಿ ನ್ಯಾಷನಲ್ ಕಂಪನಿಯಂಥವನು. ನಮ್ಮ ಬದುಕು, ದುಡಿಮೆ, ನಮ್ಮ ಔಷ, ಚಿಕಿತ್ಸಾ ಪದ್ಧತಿ, ಕಡೆಗೆ ಮಾನವ ಪ್ರಯತ್ನದ ಮೇಲೆಯೇ ವಿಶ್ವಾಸ ಹೋಗಿಬಿಡುವಂತೆ ಮಾಡಿಬಿಡಬಲ್ಲ ವಿನಾಶಕಾರಿ ಮಲ್ಟಿ ನ್ಯಾಷನಲ್ ಕಂಪೆನಿಯಂಥವನು ಆತ.
ಕಳೆದ ಹತ್ತು ವರ್ಷಗಳ ಇತಿಹಾಸ ತೆಗೆದು ನೋಡಿದರೆ, ಭಾರತವೆಂಬ ದೇಶ ಮಲ್ಟಿ ನ್ಯಾಷನಲ್ ಕಂಪನಿಗಳನ್ನು resist ಮಾಡಲು ಸಂಪೂರ್ಣವಾಗಿ ವಿಫಲಗೊಂಡಿರುವುದು ನಿಮಗೆ ಮನವರಿಕೆಯಾಗುತ್ತದೆ. ಬೆಂಗಳೂರಿನಲ್ಲಿ ಕೆಂಟುಕಿ ಚಿಕನ್ ಮಳಿಗೆ ತೆರೆದರೆ ಊರಿಗೇ ಬೆಂಕಿ ಹಚ್ಚುತ್ತೇವೆ ಅಂದರು ರೈತ ಸಂಘದವರು. ಈಗ ಜಾಗತೀಕರಣದ ಹೆಸರಿನಲ್ಲಿ ಬರಬಾರದ ಔಷಗಳೆಲ್ಲ ನಮ್ಮ ಮೆಡಿಕಲ್ ಸ್ಟೋರ್‌ಗಳಿಗೆ ಬಂದವು. ಯಾರೂ ಉಸಿರೆತ್ತಲಿಲ್ಲ. ಸ್ವದೇಶಿ ಆಂದೋಲನವೆಂಬ ರಾಜೀವ್ ದೀಕ್ಷಿತರ ಕೂಗು ನಿಷಲ ಆರ್ತನಾದವಾಯಿತು. ಇಡೀ ದೇಶ ಮಲ್ಟಿ ನ್ಯಾಷನಲ್‌ಗಳ ಕೈಗೆ ಸಿಕ್ಕುಹೋಯಿತು.
ಹೀಗೆ ಭಾರತವೆಂಬ ದೇಶ ಮಲ್ಟಿ ನ್ಯಾಷನಲ್ ಕಂಪನಿಗಳ ಮುಂದೆ ಮೊಳಕಾಲೂರಿ ಕೂತು ಸೋಲೊಪ್ಪಿಕೊಂಡಿರುವಾಗ, ಪಕ್ಕದ ದೇಶದಲ್ಲೇ ಇಸ್ಲಾಂ ಧರ್ಮ ಬೃಹತ್ ಮಲ್ಟಿ ನ್ಯಾಷನಲ್ ಕಂಪೆನಿಯೊಂದರ ವಿರುದ್ಧ ಜಯ ಗಳಿಸಿವೆ. ಇಸ್ಲಾಂನ ತಾಕತ್ತೇ ಅಂತಹುದಿರಬೇಕು. ಅಸಲಿಗೆ ಆಗಿದ್ದೇನು ಅಂದರೆ, ಪಾಕಿಸ್ತಾನದ ಕರಾಚಿಯ ಬಳಿ ದೇಹ್‌ಚುಹಾರ್ ಅಂತ ಒಂದು ಪಟ್ಟಣವಿದೆ. ಇದನ್ನ ಇತ್ತೀಚಿನ ವರ್ಷಗಳಲ್ಲಿ Education City ಅಂತ ಕರೆಯುತ್ತಾರೆ. ಅಲ್ಲಿ ಸಿಂಧ್ ಇನ್ಸ್‌ಟಿಟ್ಯೂಟ್ ಆಫ್ ಯುರಾಲಜಿ ಅಂಡ್ ಟ್ರಾನ್ಸ್‌ಪ್ಲಾಂಟೇಷನ್, ದಿ ಆಗಾಖಾನ್ ಹಾಸ್ಪಿಟಲ್ ಅಂಡ್ ಮೆಡಿಕಲ್ ಕಾಲೇಜ್ ಫೌಂಡೇಷನ್, ದಿ ಆಗಾಖಾನ್ ಯೂನಿವರ್ಸಿಟಿ, ಷಹೀದ್ ಜುಲೀಕರ್ ಅಲಿ ಭುಟ್ಟೋ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ- ಮುಂತಾದ ಬೃಹತ್ ಶೈಕ್ಷಣಿಕ ಸಂಸ್ಥೆಗಳಿವೆ. ಇಂಥ `ವಿದ್ಯಾನಗರಿ'ಯ ಹತ್ತಿರದಲ್ಲೊಂದು ಬಾಟ್ಲಿ ನೀರಿನ ಪ್ಲಾಂಟ್ ಹಾಕುತ್ತೇನೆ ಅಂತ ಹೊರಟಿತು ಬಹುರಾಷ್ಟ್ರೀಯ NESTLE ಕಂಪೆನಿ.
ಬೆಂಗಳೂರಿನಲ್ಲೇನಾದರೂ ಬಾಟ್ಲಿ ನೀರಿನ ಪ್ಲಾಂಟ್ ಹಾಕ್ತೀವಿ ಅಂತ ಬಂದಿದ್ದಿದ್ದರೆ, ಈ ಧರಂ ಸಿಂಗು, ಆರ್.ವಿ. ದೇಶ ಪಾಂಡೆ ಮುಂತಾದವರು ಹೆಗಲ ಮೇಲೆ ಮಡಿನೀರು ಹೊತ್ತುಕೊಂಡು ಹೋಗಿ ಕಂಪೆನಿಯವರ ಪಾದ ತೊಳೆದು ಕರೆತರುತ್ತಿದ್ದರು. ಆದರೆ ಪಾಕಿಸ್ತಾನದ ಪ್ರeವಂತ ಮುಸಲ್ಮಾನರು ಏನು ಮಾಡಿದರೋ ನೋಡಿ.
ನೆಸ್ಲೆ ಕಂಪನಿಯವರ ಪ್ರಕಾ ಕರಾಚಿ ಸಮೀಪದಲ್ಲಿ ಆದು ಹಾಕಲಿದ್ದ ಬಾಟ್ಲಿ ನೀರಿನ ಘಟಕದ ಉದ್ದೇಶ, ಅಫಘನಿಸ್ತಾನದಲ್ಲಿ ಯುದ್ಧ ಮಾಡುತ್ತಿರುವ ಅಮೇರಿಕನ್ ಸೈನಿಕರಿಗೆ ಕುಡಿಯುವ ನೀರು ಒದಗಿಸುವುದು. ಈ ಪ್ರದೇಶದ ಭೂಮಿಯಾಳದಲ್ಲಿ ಸಿಗುವ ನೀರು ಕುಡಿಯಲು ಶುದ್ಧವಲ್ಲವಾದ್ದರಿಂದ ಅದನ್ನು ಶುದ್ಧಕರಿಸಿ, ಕುಡಿಯಲು ಯೋಗ್ಯವನ್ನಾಗಿ ಮಾಡಿಕೊಡುತ್ತೇವೆ ಎಂಬುದು ಅವರ ಸಮರ್ಥನೆ. ನೆಸ್ಲೆಯವರಿಗೆ ಈ ಕಾಂಟ್ರಾಕ್ಟು ಕೊಡಿಸಿದ್ದು ದುಬೈನ ಒಂದು ಶ್ರೀಮಂತ ಸಂಸ್ಥೆ. ಅಲ್ಲಿ ನೀರು ತೆಗೆಯಲು ಬಿಟ್ಟದ್ದೇ ಆದರೆ, ಪ್ರದೇಶದ ಅಭಿವೃದ್ಧಿಗಾಗಿ ಹತ್ತು ಮಿಲಿಯನ್ ಡಾಲರುಗಳ ಬಂಡವಾಳ ಹಾಕಲು ತಾನು ಸಿದ್ಧ ಎಂಬುದಾಗಿ ನೆಸ್ಲೆ ಹೇಳಿತ್ತು.
ಆದರೆ ಪಾಕಿಸ್ತಾನದ ಮುಸಲ್ಮಾನ ಭಾರತೀಯ ಬಾಯಿಬಡುಕ ಹೋರಾಟಗಾರರಿಗಿಂತ ಬುದ್ಧಿವಂತ. ಅವನೇನು ಮಾಡಿದನೋ ನೋಡಿ. ಕರಾಚಿ ಪಕ್ಕದಲ್ಲಿ ಎಂಟು ಹೆಕ್ಟೇರುಗಳ ವಿಸ್ತಾರದಲ್ಲಿ ಈ ಪ್ಲಾಂಟ್ ಹಾಕಲಿರುವ ನೆಸ್ಲೆ ವರ್ಷಕ್ಕೆ ೩೦೬ ಮಿಲಿಯನ್ ಲೀಟರುಗಳಷ್ಟು ನೀರನ್ನು ನೆಲದಿಂದ ಬಸಿಯುತ್ತದೆ.
ಈಗಾಗಲೇ ಪಾಕಿಸ್ತಾನದಲ್ಲಿ AVA ಹೆಸರಿನಲ್ಲಿ bottled ನೀರು ಮಾರುತ್ತಿರುವ ನೆಸ್ಲೆ, ದೊಡ್ಡ ಮಟ್ಟದ ಲಾಭ ಮಾಡುತ್ತಿದೆ. ಅದರ `ಮಿಲ್ಕ್‌ಪ್ಯಾಕ್' ಕೂಡ ತುಂಬ ಪ್ರಸಿದ್ಧ, ತುಂಬ ದುಬಾರಿ. ಇಂಥ ನೆಸ್ಲೆಗೆ ಈಗ ಕರಾಚಿ ಸಮೀಪದಲ್ಲಿ ನೆಲಕ್ಕೆ ತೂತು ಹಾಕಲು ಅವಕಾಶ ಕೊಟ್ಟು ಬಿಟ್ಟರೆ, ಪಕ್ಕದಲ್ಲಿರುವ `ವಿದ್ಯಾನಗರಿ'ಗೆ ತಿಕ ತೊಳೆಯಲಿಕ್ಕೂ ನೀರಿಲ್ಲದಂತಾದೀತು. ನೀರಿನ ಅಂತರ್ಜಲ ಕಡಿಮೆಯಾಗಿ ಹೋಗುವುದರಿಂದ ಪಾಕಿ ರೈತ ಕಂಗಾಲಾಗಿ ಕಂಗಾಲಾಗಿ ಬಿಡುತ್ತಾನೆ. ಈ ಪ್ರಾಂತ್ಯಕ್ಕೆ ವರ್ಷದಲ್ಲಿ ಬೀಳುವುದೇ ಐದಿಂಚು ಮಳೆ. ಆ ಮಳೆಯಲ್ಲಿ ೭೦% ನಷ್ಟು ಆವಿಯಾಗಿ ಹೋಗುತ್ತದೆ. ಉಳಿದ ೧೫% ನೀರು ಮಾತ್ರ ಜನಜಳಕೆಗೆ ಲಭ್ಯ. ನೆಸ್ಲೆ ಕಂಪೆನಿ ಆ ನೀರನ್ನೂ ಗುನ್ನ ಹೊಡೆದು ತೆಗೆದುಬಿಟ್ಟರೆ ಗತಿಯೇನು?
ಹಾಗಂತ ಕೇಳಿದರೆ, ಅಮೆರಿಕದ ಮೊಳಕೈ ಕೆಳಗೆ ನೀರು ಕುಡಿಯುತ್ತಿರುವ ಮುಷರ್ರಫ್ ಸರ್ಕಾರ ಹೇಗಾದರೂ ಬಾಯಿ ಮುಚ್ಚಿಸಿ ನೆಸ್ಲೆ ಕಂಪೆನಿಗೆ ಅನುಮತಿ ಕೊಟ್ಟು ಬಿಟ್ಟೀತು. ಕೇವಲ ಜನರ ಬವಣೆ ಹೇಳಿಕೊಂಡರೆ, ನ್ಯಾಯಾಲಯವೂ ವಾದವನ್ನು ಮನ್ನಿಸುವುದಿಲ್ಲ. ಹಾಗಂದುಕೊಂಡು ಪಾಕಿಸ್ತಾನಿ ಮುಸಲ್ಮಾನ ಎಂಥ ತಂತ್ರ ಹೂಡಿದ ಗೊತ್ತೆ ?
`ಈ ನೆಲದಲ್ಲಿ ಬಾಟ್ಲಿ ನೀರಿನ ಪ್ಲಾಂಟ್ ಹಾಕುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು!' ಅಂದುಬಿಟ್ಟ.
ತಕ್ಷಣ ನ್ಯಾಯಾಲಯ ನೆಸ್ಲೆ ವಿರುದ್ಧ ತಡೆಯಾಜ್ಞೆ ನೀಡಿತು. ಅಷ್ಟೇಅಲ್ಲ : ಕರಾಚಿ ಪಕ್ಕದ ಈ ಪ್ರಾಂತ್ಯದಲ್ಲಿ ಯಾವತ್ತಿಗೂ ನೀರಿನ ಪ್ಲಾಂಟು ಹಾಕಲೇಕೂಡದೆಂದು ಶಾಶ್ವತವಾಗಿ ಸಿಂಧ್ ಹೈಕೋರ್ಟು ಆಜ್ಞೆ ಹೊರಡಿಸಿತು. ಇದಕ್ಕೋಸ್ಕರ ಇಸ್ಲಾಮಿಕ್ ಶಕ್ತಿಗಳು ಹೂಡಿದ ವಾದವೇನು ಗೊತ್ತೆ ?
`ಇಸ್ಲಾಂ ಧರ್ಮದ ಪ್ರಕಾರ ನೀರು ಅಲ್ಲಾಹುವಿನ ಸೃಷ್ಟಿ. ಎಲ್ಲರದೂ ಆಗಿರುವ ನೀರಿನ ಮೇಲೆ ಎಲ್ಲರಿಗೂ ಹಕ್ಕು ಇರತಕ್ಕದ್ದು. ಅದನ್ನು ಎಲ್ಲರೂ ಸಮನಾಗಿ ಉಪಯೋಗಿಸತಕ್ಕದ್ದು. ಅದನ್ನು ಎಲ್ಲರೂ ಸಮನಾಗಿ ಉಪಯೋಗಿಸ ತಕ್ಕದ್ದು. ಉಳಿದವರಿಗೆ ಉಪಯೋಗಿಸಲು ಆಗದಂತಹ ರೀತಿಯಲ್ಲಿ ಆ ನೀರನ್ನು ಯಾರೂ ನೆಲದಿಂದ ತೆಗೆಯಕೂಡದು. ಅದು ಇಸ್ಲಾಂ ವಿರೋ ಪ್ರಯತ್ನವಾದೀತು!' ಅಂದರು. ಆ ಮೇಲೆ ನೆಸ್ಲೆ ಕಂಪೆನಿ ಅಮೆರಿಕದ ವಕೀಲರನ್ನೆಲ್ಲ ಕರೆತಂದು ಬುದ್ಧಿ ಖರ್ಚು ಮಾಡಿಸಿದೆ. ಆದರೂ ಉಪಯೋಗವಾಗಿಲ್ಲ. ಕಡೆಗೆ ನೆಸ್ಲೆ ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ಹಿಂತಿರುಗಿದೆ.
ಇದನ್ನು ನೀವು ಮತೀಯವಾದಿಗಳ ಕೆಲಸ ಅಂತೀರೇನೋ? ಅನ್ನಿ. ಅವರ ನೀರು ಅವರು ಉಳಿಸಿಕೊಂಡರು. ಇಲ್ಲಿ ಅಮೆರಿಕಕ್ಕೇ ನೇರವಾಗಿ ಹುಟ್ಟಿದವರಂತಾಡುವ ನಮ್ಮ ಬುದ್ಧಿ ಜೀವಿಗಳು, ಕಣ್ಣೆದುರಿನಲ್ಲೇ ನಮ್ಮ ಬೇವಿನ ಮರದ ಬೀಜದಿಂದ ಹಿಡಿದು ಹಪ್ಪಳ ಸಂಡಿಗೆಯ ತನಕ ಎಲ್ಲದರದ್ದೂ ಪೇಟೆಂಟ್ ಆಗಿಹೋದರೂ ಖಿಮಕ್ಕೆನ್ನಲಿಲ್ಲ. ಬಾಬಾ ಬುಡನ್‌ಗಿರಿಯ ತುದಿಯಲ್ಲಿನ ಸಮಾ ಹಿಂದೂಗಳದಾ, ಮುಸಲ್ಮಾನರದಾ ಎಂಬ issue ಇಟ್ಟುಕೊಂಡು ಈ ಬುದ್ಧಿಜೀವಿ ಅನಂತಮೂರ್ತಿ ತಲೆಯೆಲ್ಲ ಮಾತನಾಡುತ್ತಾರೆ. ಸರ್ಕಾರ ಕೊಡುವ ಯಾವ ಸವಲತ್ತೂ ಬಿಡದೆ ಜನಿವಾರಕ್ಕೆ ಗಂಟು ಕಟ್ಟಿಕೊಳ್ಳುವ ಬುದ್ಧಿಜೀವಿ ಅನಂತ ಮೂರ್ತಿ, ಬೆನ್ನಿಹಿನ್‌ನಂಥ ವಂಚಕ ಬಂದು ಊರು ಕೊಳ್ಳೆ ಹೊಡೆಯಲಿದ್ದಾನೆ ಅಂದರೆ ಅದನ್ನು ವಿರೋಸಿ ಚಿಕ್ಕದೊಂದು ಮಾತೂ ಆಡುವುದಿಲ್ಲ. `ಹಣೆಗೆ ಕುಂಕುಮವಿಟ್ಟುಕೊಳ್ಳುವವರೆಲ್ಲ ಭಜರಂಗಿಗಳು' ಎಂಬಂತೆ ಮಾತಾಡುವ ಜಿ.ಕೆ.ಗೋವಿಂದರಾಯರು, ಇಡೀ ವಿಧಾನಸೌಧಕ್ಕೇ ಶಿಲುಬೆ ಕಟ್ಟಲಾಗುತ್ತಿದ್ದರೂ ಕಿವಿಗೆ ಮೇಣ ಬಿದ್ದವರಂತೆ ಸುಮ್ಮನಿರುತ್ತಾರೆ. ಏಕೆಂದರೆ ಕ್ರಿಶ್ಚಿಯನ್ನರನ್ನು hurt ಮಾಡಲಿಕ್ಕೆಯಾರಿಗೂ ಇಷ್ಟವಿಲ್ಲ. ಮುಸ್ಲಿಮರ ವಿರುದ್ಧ ಮಾತನಾಡಿದರೆ ಒದ್ದಾರೆಂಬ ಭಯ. ಕ್ರಿಶ್ಚಿಯನ್ನರ ವಿರುದ್ಧ ಮಾತನಾಡಿದರೆ, ಅವರು hurt ಆದಾರೆಂಬ ಆತಂಕ. ಏನು ಮಾತನಾಡಿದರೂ, ಯಾವ ಹೇಳಿಕೆ ಕೊಟ್ಟರೂ, ಎಷ್ಟು ಕೆಟ್ಟದಾಗಿ ಬರೆದರೂ ಸುಮ್ಮನಿರುವ, ಸಹಿಸಿಕೊಳ್ಳುವ crowd ಒಂದಿದೆಯಲ್ಲ, ಹಿಂದೂಗಳದು ? ಅದರೆಡೆಗೆ ಅನಂತಮೂರ್ತಿ ಕಲ್ಲೆ ಸೆಯುತ್ತಲೇ ಬಂದಿದ್ದಾರೆ.
ಸಂತೋಷದ ಸಂಗತಿಯೆಂದರೆ Benny Hynn ನಂತಹ ವಂಚಕ ಮತ ಪ್ರಚಾರಕನನ್ನು ಬೆಂಗಳೂರಿನ ಕ್ರಿಶ್ಚಿಯನ್ನರೇ ವಿರೋಸಿದ್ದಾರೆ. ಅವನನ್ನು ಊರೊಳಕ್ಕೆ ಬಿಡಬೇಡಿ ಅಂದಿದ್ದಾರೆ. ನಾನಾ ದೇಶಗಳ ಕ್ರಿಶ್ಚಿಯನ್ ಸಂಘಟನೆಗಳು ಅವನನ್ನು ಛೀಮಾರಿಗೀಡುಮಾಡಿದೆ. ಬೆನ್ನಿ ಹಿನ್ ಕೇವಲ ಮತಪ್ರಚಾರಕನಲ್ಲ : ಅವನೊಬ್ಬ ಬೃಹತ್‌ವಂಚಕ ಎಂಬುದು ನೂರಾರು ದೇಶಗಳ ಸರ್ಕಾರಗಳಿಗೇ ಮನವರಿಕೆಯಾಗಿದೆ. ಆದರೆ ಸೋನಿಯಾ ಗಾಂಯಂಥ ಅವಿವೇಕಿ, ಅವನಿಗೆ ವೀಸಾ ಕಲ್ಪಿಸಿಕೊಡುತ್ತಾಳೆ. ಅವನ ಖಾಸಗಿ ವಿಮಾನ ಭಾರತದ air spaceನಲ್ಲಿ ಓಡಾಡಲು ಬಿಡುತ್ತಾಳೆ. ಅವನ ಕಾರ್ಯಕ್ರಮಕ್ಕೆ ಅತ್ಯಂತ ಆಯಕಟ್ಟಿನ ಜಾಗವಾದ ಜಕ್ಕೂರು ವಿಮಾನ ಆಶ್ರಯದ ಬಯಲನ್ನೇ ಕೊಡಿಸುತ್ತಾಳೆ. ತನ್ನ ಪಕ್ಷದ ಮುಖ್ಯಮಂತ್ರಿಗೆ `ಬೆನ್ನಿಹಿನ್‌ನ ಕಾರ್ಯಕ್ರಮ ಅಬಾತವಾಗಿ ಸಾಗುವಂತೆ ನೋಡಿಕೊಳ್ಳಿ' ಎಂಬ ಸಂದೇಶ ಕಳಿಸುತ್ತಾಳೆ.
ಇದನ್ನು ನಮ್ಮ ದೇಶ ಪ್ರತಿಭಟಿಸುವುದೂ ಇಲ್ಲ! ಏಕೆಂದರೆ, ಪ್ರಜಾಪ್ರಭುತ್ವ ಇಸ್ಲಾಂನಷ್ಟು ಪ್ರಭಾವಶಾಲಿಯಲ್ಲ.
ಮೇರಾ ಭಾರತ್ ಮಹಾನ್!
ಬುದ್ಧಿಜೀವಿಗಳೇ ನಿಮಗೇನಾಗಿದೆ?
ರವಿ ಬೆಳಗೆರೆ
ಕರ್ನಾಟಕದ ಬುದ್ಧಿ ಜೀವಿಗಳಿಗೆ ಏನಾಗಿದೆ?
ಏನಿಲ್ಲ, ಸ್ವಲ್ಪ ಮಾತು ಜಾಸ್ತಿಯಾಗಿದೆ. ಬರವಣಿಗೆ, ಯೋಚನೆ ಎರಡೂ ಕಡಿಮೆ ಆಗಿದೆ.ರಾಜಕೀಯ ಮಾಡೋ ಚಪಲ ಶುರುವಾಗಿದೆ. ತಪ್ಪು ಯಾವುದು, ಸರಿ ಯಾವುದು ಅನ್ನೋ ವಿವೇಚನೆ ಕಳೆದುಕೊಂಡಾಗಿದೆ. ಹಾಗಂತ ಸಂಘ ಪರಿವಾರದವರಲ್ಲ, ಜನ ಸಾಮಾನ್ಯರೂ ಮಾತನಾಡತೊಡಗಿದ್ದಾರೆ. ಅದಕ್ಕೆ ಕಾರಣವೂ ಇದೆ.
ಕರ್ನಾಟಕಕ್ಕೆ ಸಂಬಂಧವೇ ಇಲ್ಲದ, ಹತ್ತು ಹನ್ನೊಂದು ವರ್ಷಗಳ ಹಿಂದಿನ ಒಂದು issue ನಿಮಗೆ ನೆನಪು ಮಾಡಿ ಕೊಡುತ್ತಿದ್ದೇನೆ. ಕಲಾವಿದ ಎಂ.ಎಫ್.ಹುಸೇನ್ ಬೆತ್ತಲೆ ಸರಸ್ವತಿಯ ಒಂದು ಚಿತ್ರ ಬರೆದಿದ್ದರು. ಅವರು ಚಪಲ ಹತ್ತಿಕೊಂಡಂವರಂತೆ ಮಾಧುರಿ ದೀಕ್ಷಿತಳ ಚಿತ್ರ ಬರೆದಾಗ ಯಾರೂ ತಕರಾರು ಮಾಡಿರಲಿಲ್ಲ. ಆದರೆ ದಿನನಿತ್ಯ ಮನೆಗಳಲ್ಲಿ ಮಕ್ಕಳೂ ಪೂಜೆ ಮಾಡುವ ಸರಸ್ವತಿಯನ್ನು ಬೆತ್ತಲೆ ಹೆಣ್ಣಾಗಿ ಚಿತ್ರಿಸಿ ತೋರಿಸಿದಾಗ ಕೆಲವರು ಸಿಟ್ಟಿ ಗೆದ್ದಿದ್ದರು. ಹುಸೇನ್‌ರ ಚಿತ್ರಗಳನ್ನು ಸುಡಲಾಯಿತು. ಅದನ್ನು ಯಥಾಪ್ರಕಾರ ಬುದ್ಧಿಜೀವಿ ವರ್ಗ ನಾಡಿನಾದ್ಯಂತ ಖಂಡಿಸಿದ್ದೂ ಆಯಿತು. ಕರ್ನಾಟಕದಲ್ಲಿ ಅದನ್ನು ತುಂಬ ತೀವ್ರವಾಗಿ ಖಂಡಿಸಿದ್ದು -ಪೀಠಿ ಗಿರೀಶ್ ಕಾರ್ನಾಡ್.
ಅಲ್ಲಿಂದಲೇ... : ಆನಂತರ ಕಾರ್ನಾಡರು ಮತ್ತೆ ದನಿಯೆತ್ತಿದ್ದು, ಬಾಬಾ ಬುಡನ್‌ಗಿರಿ ವಿವಾದದ ಸಂದರ್ಭದಲ್ಲಿ. ಅಲ್ಲಿ ಅವರು ಮುಸಲ್ಮಾನರ ಪರವಾಗಿ ನಿಂತರು. ದತ್ತಪೀಠ ವಾದಿಗಳನ್ನು ಪ್ರತಿಭಟಿಸಿ ಸಭೆ ನಡೆಸುತ್ತೇವೆಂದು ಹೊರಟರು. ಹಾಸನ ದಾಟುವುದೂ ಅವರಿಂದ ಆಗಲಿಲ್ಲ. ಅಲ್ಲಿನ ಹೊಟೇಲ್ ಅಶೋಕದಲ್ಲಿ ಚಾ ಕುಡಿದು, ಮೂತ್ರ ಮುಗಿಸಿ, ಮುಖ ತೊಳೆದುಕೊಂಡು ಅಲ್ಲಿಂದಲ್ಲೇ ಅಂತರ್ಧಾನರಾದರು. ಅರೆಸ್ಟಾಗಿ ಜೈಲಿಗೆ ಹೋದದ್ದು ಗೌರಿ ಲಂಕೇಶ್. ಮತ್ತೆ ಕಾರ್ನಾಡರು ಹೋರಾಟ ಗೀರಾಟದ ಮಾತು ಆಡಲೇ ಇಲ್ಲ.
ಪುಕ್ಕಟೆ ಸಿಕ್ಕಿತ್ತು : ಆಯ್ತು , ಕೆಲವು ಜಾತಿಯವರಿಗೆ ಅಥವಾ ಧರ್ಮದವರಿಗೆ ಅನ್ಯಾಯವಾದಾಗಲೆಲ್ಲ ಪೀಠಿ ಕಾರ್ನಾಡರು ನೊಂದವರ ಪರವಾಗಿ ನಿಲ್ಲುತ್ತಾರೆ. ಅದು ನಿಜವಾದ ಬುದ್ಧಿಜೀವಿಯ ಲಕ್ಷಣ ಎಂದೇ ಕೆಲವು ಜನ ಕಾರ್ನಾಡ್ ಅಭಿಮಾನಿಗಳು ಭಾವಿಸಿದ್ದರಲ್ಲ ? ಕಾರ್ನಾಡರು ಹಾಸನದಲ್ಲೇ ಹೋರಾಟವನ್ನು ಮತ್ತೊಂದನ್ನೂ ವಿಸರ್ಜಿಸಿ ಹೊರಟು ಹೋದ ನಂತರವೂ ಅವರಿಗೆ ಮೂರ್ತಿ ಭಂಜಕ ಬುದ್ಧಿಜೀವಿಯ ಇಮೇಜೊಂದು ಪುಕ್ಕಟೆಯಾಗಿ ಸಿಕ್ಕಿತ್ತು. ಆದರೆ ಮುಂದೆ ಕಾರ್ನಾಡರು ಏನು ಮಾಡಿದರು?
ಬೆನ್ನಿ ಬಂದಾಗ? : ಬೆಂಗಳೂರಿಗೆ ಬೆನ್ನಿಹಿನ್ ಬಂದ. ಅದನ್ನು ಪ್ರಜ್ಞಾವಂತರೆಲ್ಲ ವಿರೋಸಿದರು. ಅದರಲ್ಲಿ ಧರಂ ಸಿಂಗ್ ಸಂಪುಟ ಭಾಗವಹಿಸಿದ್ದನ್ನು ತೀವ್ರವಾಗಿ ಖಂಡಿಸಿದರು. ಜನ ಸಾಮಾನ್ಯರಿಗೂ ಕೂಡ ಬೆನ್ನಿಹಿನ್‌ನ ಸಭೆಗಳು ಅಸಹ್ಯ, ತಿರಸ್ಕಾರ ತರಿಸಿದ್ದವು. ಆದರೆ ಪೀಠಿ ಕಾರ್ನಾಡರು ನೆಪಮಾತ್ರಕ್ಕೂ ಪಿಟ್ಟೆನ್ನಲಿಲ್ಲ. ಹಾಸನದ ಮೂತ್ರಿಯಿಂದ ಹೊರಬರಲಿಲ್ಲ. ಒಂದು ರಾಜ್ಯ, ಅದರ ಅಕ್ಷರಸ್ಥ ಜನ ತಮ್ಮ ನಾಡಿನ ಒಬ್ಬ ಜ್ಞಾನಪೀಠ ಪ್ರಶಸ್ತಿ ವಿಜೇತ ಇಂಥ ವಿಷಯಗಳಲ್ಲಿ ಏನು ಪ್ರತಿಕ್ರಿಯಿಸುತ್ತಾನೋ ಎಂದು ನಿರೀಕ್ಷಿಸುವುದು ಸಹಜ. ಮುಸ್ಲಿಮರಾದ ಎಂ.ಎಫ್.ಹುಸೇನರ ಮೇಲೆ ದಾಳಿ ನಡೆದಾಗ ಲಾದರೆ; ಸರಸ್ವತಿಯನ್ನು ಬೆತ್ತಲೆಯಾಗಿ ತೋರಿಸಿದ್ದೇ ಸರಿ ಎಂಬಂತೆ ಮಾತನಾಡಿದ ನೀವು, ಬೆನ್ನಿಹಿನ್‌ನಂಥ ವಂಚಕನನ್ನು ಖಂಡಿಸುವುದೂ ಇಲ್ಲ ಅಂದರೆ -ನೀವು ಮುಸ್ಲಿಂ ಮತ್ತು ಕ್ರೈಸ್ತ ಪಕ್ಷಪಾತಿ ಅಂತ ತೀರ್ಮಾನ ಮಾಡಬೇಕಾಗುತ್ತದಲ್ಲವೆ? ಒಂದು ಸಮಾಜಿಕ ಪಿಡುಗನ್ನ ಖಂಡಿಸುವುದಕ್ಕೇಕೆ ಹಿಂಜರಿಕೆ? ನಿಮ್ಮದು double standard ಅಲ್ಲವೇ?
ಈ ಪ್ರಶ್ನೆಗಳನ್ನು ಭಜರಂಗ ದಳದವರೇ ಕೇಳಬೇಕೆಂದಿಲ್ಲ. ಬಲಪಂಥೀಯನಲ್ಲದ ನಾನಾದರೂ ಕೇಳುವುದು ಸಹಜ. ಆದರೆ ಪೀಠಿ ಮೌನವಾಗಿರುತ್ತದೆ. ಇದೇ ತರಹದ ದ್ವಂದ್ವ ನಿಲುವುಗಳನ್ನು ನಮ್ಮ ಬುದ್ಧಿಜೀವಿ ವರ್ಗ ಮೊದಲಿಂದಲೂ ಮಾಡಿಕೊಂಡು ಬಂದಿದೆ. ಕಡೇಪಕ್ಷ ಕಾರಂತರಿಗೆ, ಅಡಿಗರಿಗೆ, even ಲಂಕೇಶರಿಗೂ ತಾವು ನಂಬಿಕೊಂಡದ್ದನ್ನ ಪ್ರತಿಪಾದಿಸುವ, ಆ ನಿಲುವಿಗೆ ಬದ್ಧರಾಗಿರುವ ನೇರವಂತಿಕೆ ಇತ್ತು. ಪೀಠಿದ್ವಯರಿಗೆ ಅದೂ ಇಲ್ಲ. ಬೆನ್ನಿಹಿನ್ ಕಾರ್ಯಕ್ರಮವನ್ನು ಕಡೇ ಘಳಿಗೆಯಲ್ಲಿ ಪ್ರತಿಭಟಿಸಿದ ಬುದ್ಧಿಜೀವಿ ವರ್ಗ ಕೂಡ ಸಾಹಿಬಾಬಾ ಹಿಂಗೇ ಮಾಡ್ತಿರಲಿಲ್ವಾ? ಇದೂ ಹಂಗೇನೇ! ಅಂದರೇ ಹೊರತು ಅವತ್ತಿನ issueದ ಕೇಂದ್ರ ಬಿಂದುವಾಗಿದ್ದ ಬೆನ್ನಿಯನ್ನು ಖಡಾಖಂಡಿತವಾಗಿ ಕಪಾಳಕ್ಕೆ ಹೊಡೆಯುವ ಧೈರ್ಯ ಮಾಡಲಿಲ್ಲ.
ನಗರಿ ಬಾಬಯ್ಯ : ಇನ್ನೊಬ್ಬರಿದ್ದಾರೆ, ನಗರಿ ಬಾಬಯ್ಯ. ಹಿರಿಯ ಇಂಗ್ಲಿಷ್ ಮೇಷ್ಟ್ರು. ಸಜ್ಜನರು. ನಕ್ಸಲ್ ಕ್ರಾಂತಿಕಾರಿ ಹೋರಾಟವನ್ನು ಬೆಂಬಲಿಸಿದರು. ಪೊಲೀಸ್ ಟಾರ್ಚರ್ ಮತ್ತು ಜೈಲು ಎರಡರನ್ನೂ ಅನುಭವಿಸಿದವರು. ಅವರನ್ನು ಎಡಪಂಥೀಯವರೆಲ್ಲರೂ ಗೌರವಿಸುತ್ತಾರೆ. ಎಲ್ಲೇ ದೌರ್ಜನ್ಯ, ಪೊಲೀಸರಿಂದ ಅನ್ಯಾಯ, ದಲಿತರ ಹತ್ಯಾಕಾಂಡ ಇತ್ಯಾದಿಗಳಾದಾಗ ಬಾಬಯ್ಯನವರು ಖುದ್ದಾಗಿ ಘಟನೆ ನಡೆದಲ್ಲಿಗೆ ಹೋಗಿ fact finding report ಒಂದು ನಿಷ್ಪಕ್ಷಪಾತದ ವರದಿ ಸಲ್ಲಿಸುತ್ತಾರೆ. ಅಂಥ ಬಾಬಯ್ಯ ಒಂದು ಸಲ ಪ್ರೆಸ್‌ಕ್ಲಬ್‌ನಲ್ಲಿ ರಾ.ಸೋಮನಾಥನ ಪಕ್ಕದಲ್ಲಿ ಕುಳಿತು ಹಾಯ್ ಬೆಂಗಳೂರು! ಕಚೇರಿಯಲ್ಲಿ ನಡೆದಿರುವ ಲೈಂಗಿಕ ಹಗರಣಗಳ ವಿರುದ್ಧ ಕ್ರಮಕೈಗೊಳ್ಳಬೇಕು ಅಂತ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿಕೆ ಕೊಟ್ಟರು. ನಾನು ಅವರಿಗೆ ತಕ್ಷಣ ಫೋನು ಮಾಡಿ, `ಇದೇನು ಬಾಬಯ್ಯನವರೇ ಹೀಗೆ ಮಾತಾಡ್ತಿದೀರಿ? ನೀವೇ ಖದ್ದಾಗಿ ನಮ್ಮ ಕಚೇರಿಗೆ ಬಂದು fact finding report ಕೊಡಿ. ನನ್ನ ಕಡೆಯಿಂದ ಅನ್ಯಾಯವಾಗಿದ್ದರೆ ನನ್ನ ವಿರುದ್ಧ ಚಳವಳಿ ಮಾಡಿ. ಅದು ಬಿಟ್ಟು,ತೀರ ಸೋಮನಾಥನಂಥವನ ಪಕ್ಕದಲ್ಲಿ ಕೂತು ಏನಂದರೆ ಅದನ್ನೇ ಮಾತಾಡಿದ್ದೀರಲ್ಲ?'ಅಂತ ಕೇಳಿದೆ.
ನಂಗೊತ್ತಾಗಲಿಲ್ಲ ಬೆಳಗೆರೇ, ಆ ಹುಡುಗ ಕರೆದ ಅಂತ ಹೋಗಿಬಿಟ್ಟೆ. ನಿಜಕ್ಕೂ ಏನು ನಡೆದಿದೆ ಅಂತ ನಾನು ವಿಚಾರಿಸ್ತೀನಿ... ಅಂದರು.
ಈತನಕ ಬಾಬಯ್ಯ ಯಾರನ್ನೂ ವಿಚಾರಿಸಿದ ಬಗ್ಗೆ ಮಾಹಿತಿ ಇಲ್ಲ. ಅದೇ ಸೋಮನಾಥ ಮೂವರು ವಿವಾಹಿತ- ವಿಚ್ಛೇದಿತ ಸ್ತ್ರೀಯರಿಗೆ ಮೂರು ಮನೆ ಮಾಡಿ ಕೊಟ್ಟು ಇಟ್ಟುಕೊಂಡ. ಅವರಲ್ಲಿ ಒಬ್ಬಾಕೆ `ಲಂಕೇಶ್ ಪತ್ರಿಕೆ' ಕಚೇರಿಗೇ ಹೋಗಿ ಗೌರಿ ಲಂಕೇಶ್ ಎದುರಿನಲ್ಲೇ ರಾ.ಸೋಮನಾಥನನ್ನು ಚಪ್ಪಲಿಯಲ್ಲಿ ಹೊಡೆದು ಬಂದಳು. ಬಾಬಯ್ಯ fact findinguಇನ್ನೂ ನಡೆಯುತ್ತಲೇ ಇದೆ. ನಮ್ಮ ಬುದ್ಧಿಜೀವಿಗಳು ಎಷ್ಟು ಬಲ ಹೀನರು, ಆತುರ ಗಾರರು, vulnerable and inconsistant fellows ಎಂಬುದಕ್ಕೆ ಈ ಉದಾಹರಣೆ ನೀಡಿದೆ.
ಜೀಸಸ್ ಆಗ್ಬೇಕು! : ನಂತರದ್ದು , ಪೀಠಿ ಅನಂತ ಮೂರ್ತಿಯವರ ನಿಲುವು ಮತ್ತು ದ್ವಂದ್ವಗಳ ಸಂಗತಿ. ಅನಂತಮೂರ್ತಿ ತಮ್ಮ ೬೦ನೇ ಹುಟ್ಟುಹಬ್ಬವನ್ನು ಉಡುಪಿಯ ಸಾರ್ವಜನಿಕ ವೇದಿಕೆಯೊಂದರ ಮೇಲೆ ಪತ್ನಿ ಎಸ್ತರ್ ಅವರ ಸಮೇತ ಅತ್ಯಂತ ಶಾಸ್ತ್ರೋಕ್ತವಾಗಿ ಆಚರಿಸಿಕೊಂಡರು. ವೇದಿಕೆಯ ಮೇಲೆಯೇ ಒಂದೇ ಲೋಟದಲ್ಲಿ ಹಾಲು ಹಂಚಿಕೊಂಡು, ಗಂಡ-ಹೆಂಡತಿ ಕುಡಿದರು. ಅವರ ಬುದ್ಧಿಜೀವಿತನ, ಕ್ರಾಂತಿ,ಬ್ರಾಹ್ಮಣ ವಿರೋಧ, ಜಾತಿನಾಶ ಸಿದ್ಧಾಂತಗಳಿಗಾಗಿ ಅವರನ್ನು ಇಷ್ಟಪಟ್ಟ ಅಭಿಮಾನಿಗಳ ಮುಖಕ್ಕೆ ಆ ಕಾರ್ಯಕ್ರಮ ಕೆರದಲ್ಲಿ ಹೊಡೆದಂತಾಗಿತ್ತು.
ಡಾಲರ್‍ಸ್ ಕಾಲನಿಯಲ್ಲಿ ಸರ್ಕಾರದ ಭಿಕ್ಷೆ ಪಡೆದು ಬಂಗಲೆ ಕಟ್ಟಿಸಿಕೊಂಡ ಅನಂತಮೂರ್ತಿ, ಏನು ಮಾಡೋದು ಬೆಳಗೆರೇ? ಜೀಸಸ್‌ಗೆ ಕೂಡ ಜೀಸಸ್ ಆಗಬೇಕು ಅನ್ನೋ ಆಸೆಯಿತ್ತು. ಗಾಂಜಿ ಕೂಡ ಗಾಂಜಿ ಆಗಬೇಕು ಅಂತ ಬಯಸ್ತಿದ್ರು. ನಾನು ಕೂಡ ಅನಂತಮೂರ್ತಿ ಆಗಬೇಕಿದೆ..! ಅಂತ ವೇದಾಂತ ಮಾತಾಡಿದ್ದರು. ಹೌದ್ದಲೆ ಪೀಠಿ! ಅಂದುಕೊಂಡು ಹಿಂತಿರುಗಿದ್ದೆ. ಅನಂತರದ ದಿನಗಳಲ್ಲಿ ಅನಂತಮೂರ್ತಿಯವರ ಆಷಾಢಭೂತಿತನದ ಬಗ್ಗೆ ನನಗೆ ಅನುಮಾನಗಳುಳಿಯಲಿಲ್ಲ. ಅವರನ್ನು ಟೀಕಿಸಿ ಬರೆದೆ. ನನ್ನ ಮೇಲೆ ಅನಂತ ಮೂರ್ತಿ ಇಹ-ಪರ ಎರಡಕ್ಕೂ ಆಗುವಷ್ಟು ದ್ವೇಷ ಸಾಸಿದರು.
ಅವನೇನಾದ? : ಇವತ್ತಿಗಾದರೂ ಪೀಠಿ ಮೂರ್ತಿ, ತಮ್ಮ ಹಾಗೂ ಪೇಜಾವರ ಮಠದ ಸ್ವಾಮಿಯ ನಡುವಿನ ಸ್ನೇಹ ಚೆದುರಗೊಟ್ಟಿಲ್ಲ. ಆ ಖಾಸಾತನ ಹಾಗೇ ಉಳಿಸಿಕೊಂಡು, ಬಿಜೆಪಿ ವಿರುದ್ಧದ ರ್‍ಹೆಟಾರಿಕ್ ಜಾರಿಯಲ್ಲಿಡುತ್ತಾರೆ. ಬಿಜೆಪಿ ವಿರುದ್ಧ ನೀವಿಬ್ಬರೂ ಬೆಂಬಲಿಸುವುದಾದರೆ ನಾನು ಅನಂತಕುಮಾರ್ ವಿರುದ್ಧ ರ್ಸ್ಪಸುತ್ತೇನೆ ಅಂತ ಪರಮಭ್ರಷ್ಟ ರಾಜಕಾರಣಿ ಎಸ್ಸೆಂ ಕೃಷ್ಣ ಹಾಗೂ ದೇವೇಗೌಡ ಅವರಿಗೆ ಪತ್ರ ಬರೆಯುತ್ತಾರೆ. ಕಡೇ ಪಕ್ಷ ಅಡಿಗರಿಗೆ ಬಲಪಂಥೀಯ ರ ಟಿಕೆಟ್ಟಿನೊಂದಿಗೆ ಚುನಾವಣೆಗೆ ನಿಂತು ಸೋಲುವ ಧೈರ್ಯವಾದರೂ ಇತ್ತು: ಇವರಿಗೆ ಅದೂ ಇಲ್ಲ. ಕಾಲದಿಂದ ಕಾಲಕ್ಕೆ ಹೆಗಡೆ, ಪಟೇಲ್, ಎಸ್ಸೆಂ ಕೃಷ್ಣ -ಹೀಗೆ ಅಕಾರರೂಢರೊಂದಿಗೆ ರಾಕ್ ಅಂಡ್ ರೋಲ್ ಮಾಡಿಕೊಂಡು ಬಂದರೇ ಹೊರತು, ಅನಂತಮೂರ್ತಿ ಯಾವತ್ತೂ ನಿರ್ಗತಿಕರ ಪರ ಹೋರಾಟಕ್ಕಿಳಿಯಲಿಲ್ಲ. ತುಂಗಾ ಮೂಲದ ಮಾತು ಅಲ್ಲಿಗೇಬಿಟ್ಟರು. ಇದರಿಂದಾಗಿಯೇ ದಲಿತ ಚಳವಳಿ ಹೋಳಾಯಿತು ಅಂತ ಇತ್ತಿಗೂ ದ.ಸಂ.ಸ ಕಾರ್ಯಕರ್ತರು ಹಲ್ಲು ಮಸೆಯುತ್ತಾರೆ. ಲಂಕೇಶರು ನೇರವಾಗಿ ಹೋರಾಟಗಳನ್ನು ಕಟ್ಟಿ ಬೆಳೆಸಲಿಲ್ಲ. ಆದರೆ ಸರ್ಕಾರದಿಂದ, ಅವರ ಪ್ರಲೋಭನೆಗಳಿಂದ ಕಡೆತನಕ ದೂರ ಉಳಿದರು. ಈ ಪೀಠಿ ಅದ್ಯಾವುದನ್ನೂ ಉಳಿಸಿಕೊಳ್ಳಲಿಲ್ಲ. ಎಲ್ಲಿಗೆ ಹೋಯಿತು ಇವರ ಮೂರ್ತಿ ಭಂಜಕತೆ?ಎಲ್ಲಿಗೆ ಹೋಯಿತು ಇವರ ಕ್ರಾಂತಿಕಾರಿ, ಜಾತಿ ವಿರೋ, ಶೋಷಿತರ ಪರ ನಿಲುವು ? ಕಡೆಗೆ, ಇವರೊಳಗಿನ ಒಬ್ಬ ಮನುಷ್ಯನಿದ್ದನಲ್ಲ ? ಅವನೇನಾದ ?
ಅಯ್ಯನಿಗೆ ಸನ್ಮಾನ : ನನಗೆ ಜಾಣಗೆರೆ ವೆಂಕಟರಾಮಯ್ಯನವರಂಥ ಅಥವಾ ನಾರಾಯಣ ಗೌಡನಂಥ ವೀರಾಭಿಮಾನಿ ಕನ್ನಡ ಹೋರಾಟಗಾರರು, ಅವರ ಎಲ್ಲ ಒರಟುತನ, ಭೋಳೆತನ, ತಪ್ಪು ಕನ್ನಡಗಳ ಸಮೇತ ಇಷ್ಟವಾಗುತ್ತಾರೆ. ಯಾಕೆಂದರೆ, ಅವರದು ಒಂದು ನಿಲುವು. ಅಚಲ ಬದ್ಧತೆ. ರಾಜ್ ಕುಟುಂಬದ ವಿರುದ್ಧ ದನಿ ತೆಗೆದದ್ದೇ ಜಾಣಗೆರೆ ವೆಂಕಟರಾಮಯ್ಯ. ರಾಜ್‌ಗೆ ಬಂದ ಆಪತ್ತು ಕನ್ನಡಕ್ಕೆ ಬರಬಹುದಾದ ಆಪತ್ತಿಗಿಂತ ದೊಡ್ಡದು ಅಂತ ಅವರಿಗನ್ನಿಸಲಿಲ್ಲ. ಕೆಲವು ಬುದ್ಧಿಜೀವಿ ಮಿತ್ರರು ಮದ್ರಾಸಿಗೆ ಹೋಗಿ ಅಯ್ಯ ನೆಡುಮಾರನ್‌ರನ್ನು ಓಲೈಸಿ, ರಾಜಕುಮಾರ್‌ರನ್ನು ಬಿಡುಗಡೆ ಮಾಡಿಸಿ ತಂದ ನಂತರ ಅವರಿಗೆ ಸನ್ಮಾನ ಮಾಡುತ್ತೇವೆಂದರು. ನಮ್ಮ ರುಂಡ ಕಡಿದರೂ ಸರಿಯೇ, ಸನ್ಮಾನ ಕಾರ್ಯಕ್ರಮ ನಡೆಯಲು ನಾವು ಬಿಡುವುದಿಲ್ಲ ಅಂದವರು ಬುದ್ಧಿಜೀವಿಗಳಲ್ಲ, ಭಾವನಾ ಜೀವಿಗಳಾದ ಹೋರಾಟಗಾರರು! ಮುಂದೆ ಅವೇ ಬುದ್ಧಿಜೀವಿ ಮಿತ್ರರು ಕನ್ನಡ ಸಿನಿಮಾ ಇಂಡಸ್ಟ್ರಿಯ ಸಮಸ್ಯೆಯನ್ನು ಈ ನಾಡಿನ ಸಮಸ್ತ ಕನ್ನಡ, ದಲಿತ, ರೈತ ಸಮಸ್ಯೆಗಳಿಗೆ ಸಮ ಎಂಬಂತೆ project ಮಾಡಿ ಐದು ಲಕ್ಷ ಕನ್ನಡಿಗರನ್ನು ಕರ್‍ಕೊಂಡು ಬರ್‍ತೀವಿ ಅಂತ ಹೂಂಕರಿಸಿದರು. ಎರಡನೇ ದಿನದ ಸಭೆಗೆ ಸಿನೆಮಾದವರೇ ಬರಲಿಲ್ಲ. ಐದು ಲಕ್ಷ ಕನ್ನಡಿಗರು ಹ್ಯಾಗೆ ವಾಪಸು ಹೋದರೋ ?ಗೊತ್ತೇ ಆಗಲಿಲ್ಲ.
ಬಾಬಾ ಬುಡನ್‌ಗಿರಿಯಲ್ಲಿ ಜಿ.ಕೆ.ಗೋವಿಂದರಾವ್ ಥರದ ಬುದ್ಧಿಜೀವಿಗಳು ಮಾಡಿದ್ದೂ ಅದನ್ನೇ. ಮಾತಿಗೆ ನಿಂತರೆ, ಇಡೀ ಜಗತ್ತಿನ್ನೇ ಎದುರು ಹಾಕಿಕೊಂಡು ಬಿಡುವ ತಾಕತ್ತಿರುವವರಂತೆ ಮಾತನಾಡುತ್ತಾರೆ. ಭಜರಂಗ ದಳದವರಂತೆ, ಅರೆಸ್ಸೆಸ್ಸಿನವರಂತೆ, ಬಿಜೆಪಿಯವರಂತೆ, ಕಮ್ಯುನಿಸ್ಟ್ ಟ್ರೇಡ್ ಯೂನಿಯನ್‌ಗಳ ನಾಯಕರಂತೆ - ಇವರು ಯಾವತ್ತೂ ಒಂದು ಚಳವಳಿ ಕಟ್ಟಲಾರರು. ಒಂದೇ ಒಂದು ಸಾಮಾಜಿಕ ಉಪಯೋಗದ ಕೆಲಸ ಮಾಡಲಾರರು. ಒಂದು ಬದುಕು ಕಟ್ಟಿಕೊಡುವ ಕೈಂಕರ್ಯಕ್ಕೆ ಮುಂದಾಗಲಾರರು.
ಯಾವತ್ತು ಮಿಡಿದರು? : ಕಾರ್ಗಿಲ್ ಯುದ್ಧದಲ್ಲಿ ನಮ್ಮದೇ ಅಕ್ಕಪಕ್ಕದ ಮನೆಗಳ ಹುಡುಗರು ಸತ್ತರು. ಇವರು ಮಾಡಿದ್ದೇನು? `ವಾಜಪೇಯಿ ಯುದ್ಧದಾಹಿ ಕಣ್ರೀ!' ಅಂತ ಅಬ್ಬರಿಸಿದರು. ಅದಾಯ್ತು. ನಮ್ಮ ಹುಡುಗರು ಸತ್ತ ರಲ್ಲ?ಅವರ ಕುಟುಂಬಗಳ ಗತಿಯೇನು ಅಂತ ಕೇಳಿದರೆ, ಉತ್ತರ ಕೂಡ ಕೊಡಲಿಲ್ಲ. ಉತ್ತರ ಕೊಟ್ಟವರು ಈ ನೆಲದ ಗಾರೆ ಕೆಲಸದವರು, ರಿಕ್ಷಾ ಡ್ರೈವರುಗಳು, ಸಣ್ಣಗಾತ್ರದ ಸಂಬಳದವರು, ಪ್ರಾಮಾಣಿಕ ದೇಶಭಕ್ತರು. ಈ ಬುದ್ಧಿಜೀವಿಗಳ ಪೈಕಿ ಯಾರೊಬ್ಬರಾದರೂ ಯುದ್ಧ ವೀರರ ಮನೆಗೆ ಅರಪಾವು ಅಕ್ಕಿ ಕಳಿಸಿದ್ದರಾ ? ಕೇಳಿ.
ಗುಜರಾತ್ ಹತ್ಯಾಕಾಂಡವಾಯಿತು. `ಲಬ್ಬೋ' ಅಂತ ಬೊಬ್ಬಿರಿದುಬಿಟ್ಟಿತು ಬುದ್ಧಿಜೀವಿ ಸಮೂಹ. ಹಿಂದೂ ಉಗ್ರರು ಕೊಂದ ಮುಸಲ್ಮಾನ ಶವಗಳನ್ನು ನೋಡಿ ನೋಡಿ ಕಣ್ಣೀರಿಟ್ಟಿತು. ಸಭೆ ನಡೆಸಿತು. ಠರಾವು ಪಾಸು ಮಾಡಿತು. ಎಲ್ಲ ಪತ್ರಿಕೆಗಳಲ್ಲೂ ಇವರ ಹೇಳಿಕೆಗಳು ಪ್ರಕಟವಾದವು. ಅಲ್ಲಿಗೆ ಮುಗಿಯಿತು.
ಈ ನರಮೇಧಕ್ಕೆ ಕೆಲವೇ ತಿಂಗಳಿಗೆ ಮುಂಚೆ ಅದೇ ಗುಜರಾತದಲ್ಲೊಂದು ಭೂಕಂಪವಾಗಿತ್ತು. ಸಾವಿರಾರು ಜನ ಸತ್ತಿದ್ದರು. ಇಡೀ ದೇಶ ಅವರಿಗಾಗಿ ಮರುಗಿ ತನ್ನ ಕೈಲಿದ್ದ ತುತ್ತು, ಗುಜರಾತಕ್ಕೆ ಕಳಿಸಿತು: ಹಿಂದೂ ಮುಸ್ಲಿಮರೆಂಬ ಭೇದವಿಲ್ಲದೆ. ಕಡೆಗೆ ಮುತ್ತಪ್ಪ ರೈ ನಂಥ ಭೂಗತ ಲೋಕದ ಮನುಷ್ಯ ಕೂಡ ಹಣ ಕಳಿಸಿದ. ಈ ಬುದ್ಧಿಜೀವಿಗಳ ಪೈಕಿ ಯಾರಾದರೂ ಅರ್ಧ ರೂಪಾಯಿ ಚಂದಾ ವಸೂಲು ಮಾಡಿ ಕಳಿಸಿದರಾ ಗುಜರಾತಕ್ಕೆ ?
ಪ್ರೀತಿಯ ಅಲೆ : ಮೊನ್ನೆಯ ಸುನಾಮಿ ಅವಘಡಕ್ಕೆ ಇವರು ಪ್ರತಿ ಕ್ರಿಯಿಸಿದ್ದು ಹೇಗೆ ? ಮನೆಮನೆ ಗಳಲ್ಲೂ ಕೂತು ಹಗಲೂ ರಾತ್ರಿ ಚಪಾತಿ ಲಟ್ಟಿಸಿ, ಸಮುದ್ರ ತೀರದ ಹಳ್ಳಿಗಳಿಗೆ ಲಾರಿಗಳಲ್ಲಿ ಕೊಂಡೊಯ್ದರು ಜನ. ಅವರ್‍ಯಾರೂ ಶ್ರೀಮಂತರಲ್ಲ, ಬುದ್ಧಿಜೀವಿಗಳು ಮೊದಲೇ ಅಲ್ಲ. ಮನುಷ್ಯನ ಸಂಕಟಕ್ಕೆ ಮನುಷ್ಯ ಮರುಗಬೇಕು ಅಂತ ಇಚ್ಛಿಸಿದ, ಹಾಗೆಯೇ ವರ್ತಿಸಿದ ಅತಿ ಸಾಮಾನ್ಯ ಜನ.
ಈ ಬುದ್ಧಿಜೀವಿಗಳು ಜೀವನದುದ್ದಕ್ಕೂ ಬರೆದದ್ದು ಆ ನಿರ್ಗತಿಕರ ಬಗ್ಗೆಯೇ! ಆದರೆ ಅವರನ್ನು ಸುನಾಮಿ ಅಲೆ ತಿಂದು ಹಾಕಿದಾಗ, ಈ ಜನ ರಜೆಯಲ್ಲಿದ್ದರು: ಲಾಂಗ್ ಲೀವ್! ತೀರ ಬಾಂಬೆ ಚಿತ್ರರಂಗದ ನಟ-ನಟಿಯರು, ತಂತ್ರಜ್ಞರು ಬಂದು show ಮಾಡಿ ಹಣ ಕೂಡಿಸಿಕೊಟ್ಟರು. ಜಾವೇದ್ ಅಖ್ತರ್‌ನಂಥ ಕವಿ `ಒಂದೊಂದು ಹನಿ ಪ್ರೇಮ, ಪ್ರೀತಿ, ಅಂತಃಕರಣ ಸೇರಿದರೆ ಉಂಟಾಗುವ ಅಲೆಯ ಮುಂದೆ ಸುನಾಮಿ ಅಲೆಯಾವ ಲೆಕ್ಕ? ಬನ್ನಿ. ಸಂತ್ರಸ್ತರಿಗೆ ಸಹಾಯ ಮಾಡೋಣ' ಅಂತ ಕರೆ ನೀಡಿದ. ಸಮಾಜ ಮುಖಿ ಚಿಂತನೆ ಅಂದರೆ ಅದು. ಜನಪರತೆ ಅಂದರೆ ಅದು.
ವರವರರಾವ್ ನಿಲುವು : ಆದರೆ ಇವರೇನು ಮಾಡಿದರು? ಇವರದು ಯಾವ ಜನಪರತೆ? ಹೋಗಲಿ, ತೆಗೆದುಕೊಂಡ ನಿಲುವುಗಳಿಗೆ ಬದ್ಧರಾಗಿಯಾದರೂ ಇರುತ್ತಾರಾ ? ಅವುಗಳ ಆಗುಹೋಗುಗಳ ಬಗ್ಗೆ ಯೋಚನೆಯನ್ನಾದರೂ ಮಾಡುತ್ತಾರಾ? ಅದೂ ಇಲ್ಲ. ಇವರ ಕಣ್ಣೆದುರಿಗೆ ಸಂಘ ಪರಿವಾರ ಎಂಬುದೊಂದು ಬೃಹತ್ `ಶತ್ರು'ವಿರುತ್ತದೆ. ಅದು ಏನನ್ನೇ ಮಾಡಿದರೂ, ಅದಕ್ಕೆ ಉಲ್ಟಾ ಹೊಡೆಯುವುದಷ್ಟೆ ಇವರ ಪ್ರಗತಿ ಪರತೆ. ಆಂಧ್ರದಿಂದ ಗದ್ದರ್ ಮತ್ತು ವರವರರಾವು ಬಂದರು. ತಕ್ಷಣ ನಮ್ಮ ಬುದ್ಧಿ ಜೀವಿಗಳು ಅವರೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಸಾಕೇತ್ ಸಾವಿನ ಸುದ್ಧಿ ಕೇಳಿ ಧಾವಿಸಿ ಬಂದ ವರವರರಾವು, ಆಂಧ್ರದಲ್ಲಿ ಸರ್ಕಾರ ಮತ್ತು ನಕ್ಸಲ್ ಚಳವಳಿಯ ಮಧ್ಯದ ಮಾತುಕತೆಯ ಮುಖ್ಯಕೊಂಡಿ. ಹಾಗೊಂದು ಪಾತ್ರ ವಹಿಸುವಲ್ಲಿನ ಸಾಧಕ ಬಾಧಕಗಳೆರಡೂ ವರವರರಾವ್‌ಗೆ ಗೊತ್ತು. ಇವತ್ತು ಕೂಡ ಅಲ್ಲಿ ಆತ ಹೇಳಿಕೆ ಕೊಟ್ಟಿದ್ದಾರೆ: `ಇನ್ನು ಸರ್ಕಾರದೊಂದಿಗೆ ಮಾತುಕತೆಯ ಪ್ರಶ್ನೆಯಿಲ್ಲ. ನಕ್ಸಲರು ಶಸ್ತ್ರ ಕೆಳಗಿಟ್ಟರೇನೇ ಮಾತುಕತೆ ಅಂತ ವೈ.ರಾಜ ಶೇಖರ ರೆಡ್ಡಿ ಸರ್ಕಾರ ಹೇಳುತ್ತಿದೆ. ನಕ್ಸಲರು ಶಸ್ತ್ರ ಕೆಳಗಿಡುವುದಿಲ್ಲ ಅನ್ನುತ್ತಿದ್ದಾರೆ. ಹೀಗಾಗಿ ಮಾತುಕತೆ ಮುರಿದುಬಿದ್ದಿದೆ. ನನ್ನ ಅಭಿಪ್ರಾಯದ ಪ್ರಕಾರ ನಕ್ಸಲರು ಶಸ್ತ್ರಾಸ್ತ್ರ ಕೆಳಗಿಡುವುದು ಬೇಕಾಗಿಲ್ಲ' ಅಂದಿದ್ದಾರೆ ವರವರರಾವು. ಅದು ಚಳವಳಿಯ ಆಳ-ಅಗಲ ಗೊತ್ತಿರುವ, ಅದರಲ್ಲಿ ಪಳಗಿರುವ, ಸರ್ಕಾರದೊಂದಿಗೆ ಮಾತಿಗಿಳಿಯಬಲ್ಲ ಅಪ್ಪಟ negotiater ನ ಮಾತು. ಆದರೆ ಇವರೇನು ಮಾಡಿದರು ನೋಡಿ?
ಜನನಂಬುತ್ತಾರಾ? : ವೆಂಕಟಂಪಲ್ಲಿ ಹತ್ಯಾಕಾಂಡದ ಸುದ್ಧಿ ಬಂದ ತಕ್ಷಣ, `ಹ್ಞಾಂ, ಇದು ತಪ್ಪು. ಅಲ್ಲಿ ಮೆಣಸಿನ ಹಾಡ್ಯದಲ್ಲಿ ಪೊಲೀಸರು ನಕ್ಸಲರನ್ನು ಕೊಂದಿದ್ದೂ ತಪ್ಪು. ವೆಂಕಟಂಪಲ್ಲಿಯಲ್ಲಿ ಪೊಲೀಸರನ್ನು ನಕ್ಸಲರು ಕೊಂದಿದ್ದೂ ತಪ್ಪು. ಹಿಂಸೇನ ನಾವು ಬೆಂಬಲಿಸಲ್ಲಪ್ಪ !'ಅಂದುಬಿಟ್ಟರು. ಇವರ ನಿಲುವು ರಾತ್ರೋ ರಾತ್ರಿ ಹೇಗೆ ಬದಲಾಯಿತೆಂದರೆ, ವೆಂಕಟಂಪಲ್ಲಿ ಹತ್ಯಾಕಾಂಡದ ಜವಾಬ್ದಾರಿಯನ್ನು ನಾವು ಹೊರಬೇಕಾಗಿ ಬರುತ್ತದೇನೋ ಎಂಬಂತೆ ವರ್ತಿಸಿಬಿಟ್ಟರು. ಸಾಕೇತ್ ಸಾವಿಗೆ ಕಣ್ಣೀರಿಟ್ಟ ವರು ಘಳಿಗೆಯೇ ಪೊಲೀಸರ ಸಾವಿಗೂ ಕಣ್ಣೀರಿಟ್ಟರೆ -ಇವರನ್ನು ಜನ ನಂಬುವುದು ಹೇಗೆ? ನಂಬುತ್ತಾರಾದರೂ ಯಾರು?
ಗೌರಿಯಂಥವಳಿಗೆ ಚಳಿವಳಿಯ ಪರಿಣಾಮಗಳು ಗೊತ್ತಿಲ್ಲ. ರಾಜ್ಯಾಂಗದ ವಿರುದ್ಧ ಪ್ರತಿಭಟಿಸುವುದು ಬೇರೆ, ಸಂವಿಧಾನ ಬದ್ಧ ಸರ್ಕಾರದ ವಿರುದ್ಧ ಬಂಡೇಳುವುದು ಬೇರೆ. ನಕ್ಸಲ್‌ಚಳವಳಿ ೧೯೬೯ರಿಂದಲೂ ಇದೆ. ಅನೇಕರನ್ನು ಹೊಸಕಿ ನಾಶ ಮಾಡಿಬಿಟ್ಟಿದೆ. ತಾನೂ ಕಾಲದಿಂದ ಕಾಲಕ್ಕೆ ನಶಿಸಿದೆ. ಆದರೆ ಮತ್ತೆ ಜಿಗಿತಿದೆ. ಈತನಕ ಭಾರತದಲ್ಲಿ ಲಕ್ಷಾಂತರ ನಕ್ಸಲೀಯರನ್ನು ಸರ್ಕಾರಗಳು ಕೊಂದು ಹಾಕಿವೆ. ಆದರೂ ಚಳವಳಿ ಮತ್ತೆ ಮತ್ತೆ ತಲೆಯೆತ್ತಿದೆ. ವರವರರಾವು, ಗದ್ದರ್, ತಾರ್ಕುಂಡೆ, ಕನ್ನಬೀರನ್‌ನಂಥವರು ಲಾಠಿ- ಜೈಲು ಜೀವಿಗಳು ನಾಶವೇ ಆಗಿಹೋದರು.
ನಮ್ಮ ಬುದ್ಧಿಜೀವಿಗಳಲ್ಲಿ ಆ ಸ್ಥಿರತೆಯೂ ಇಲ್ಲ, ಬದ್ಧತೆಯೂ ಇಲ್ಲ. ಇವರಿಗೆ ಬುದ್ಧಿ ಹೇಳುವವರು ಯಾರು?
Monday, July 31, 2006
ಬೆಳಗಾವಿ ನಗರದ ಮೇಲೆ ಮರಾಠಿಗರಿಗೆ ಯಾವುದೇ ಬಗೆಯ ಹಕ್ಕು ಇಲ್ಲ
ಪಾಟೀಲ ಪುಟ್ಟಪ್ಪ
ಬೆಳಗಾವಿ ನಗರದ ಮೇಲೆ ಮರಾಠಿಗರಿಗೆ ಯಾವುದೇ ಬಗೆಯ ಹಕ್ಕು ಇಲ್ಲ. ಹೊರಗಿನಿಂದ ಬಂದವರು ಮನೆಯೇ ತಮ್ಮದೆಂದು ಹೇಳುವಂತೆ ಅವರ ವಾದವಿದೆ. ಬೆಳಗಾವಿಯು ಮರಾಠಿಯಾಗಿದ್ದರೆ ಯುರೋಪಿನಿಂದ ಬಂದ ಬಾಸೆಲ್ ಮಿಶನ್ನಿನವರು ಅಲ್ಲಿ ಮರಾಠಿ ಶಾಲೆಯನ್ನೇ ಆರಂಭ ಮಾಡುತ್ತಿದ್ದರು. ಆದರೆ ಅವರು ೧೮೩೮ರಲ್ಲಿ ಬೆಳಗಾವಿಯಲ್ಲಿ ಕನ್ನಡದ ಶಾಲೆಯನ್ನು ಆರಂಭಿಸಿದರೆನ್ನುವುದು ಮಹತ್ವದ ಸಂಗತಿಯಾಗಿದೆ. ಆಗ ಅವರನ್ನು ಅಲ್ಲಿ ಕನ್ನಡ ಶಾಲೆಯನ್ನೇಕೆ ಆರಂಭಿಸಿದಿರಿ ಎಂದು ಯಾರೊಬ್ಬರೂ ಕೇಳಲಿಲ್ಲ.
ಬೆಳಗಾವಿ ನಗರದ ಸುತ್ತಮುತ್ತಲಿನ ಹೊಲಗಳೆಲ್ಲ ಕನ್ನಡಿಗರ ಒಡೆತನಕ್ಕೆ ಒಳಪಟ್ಟಿದ್ದವು. ಬೆಳಗಾವಿ ನಗರದ ಗ್ರಾಮ ದೇವತೆಗಳೆಲ್ಲ ಕನ್ನಡಿಗರ ದೇವತೆಗಳೇ ಆಗಿದ್ದವು. ಒಂದು ನಗರ ಯಾರದೆನ್ನುವ ಭಾವನೆಗೆ ಅಲ್ಲಿಯ ಪರಿಶಿಷ್ಟ ವರ್ಗದವರ ಭಾಷೆಯೇ ಮೂಲ ಕಾರಣವೆನಿಸಿದೆ. ಒಂದು ನಗರದ ಮೂಲಭಾಷೆಯನ್ನು ತಿಳಿಯಬೇಕೆನ್ನುವವರು ಅಲ್ಲಿಯ ಪರಿಶಿಷ್ಟ ವರ್ಗದವರು ವಾಸ ಮಾಡುವ ಸ್ಥಳಕ್ಕೆ ಹೋಗಿ ನೋಡಿದರೆ ಆ ಸ್ಥಳದ ಭಾಷೆ ಯಾವುದೆನ್ನುವುದು ತಿಳಿಯುತ್ತದೆ. ಉಳಿದ ಜನರು ಸ್ಥಳಾಂತರಗೊಳ್ಳುವಂತೆ ಪರಿಶಿಷ್ಟ ವರ್ಗದ ಜನರು ಎಂದೂ ಸ್ಥಳಾಂತರಗೊಳ್ಳುವುದಿಲ್ಲ. ಅವರು ಇದ್ದಲ್ಲಿಯೇ ಇರುತ್ತಾರೆ. ಆದರಿಂದ ಬೆಳಗಾವಿ ನಗರದ ಭಾಷೆ ಕನ್ನಡ ಎನ್ನುವುದನ್ನು ಅಲ್ಲಿ ವಾಸವಾಗಿರುವ ಪರಿಶಿಷ್ಟ ವರ್ಗದ ಜನರು ನಮಗೆ ತೋರಿಸಿಕೊಟ್ಟಿದ್ದಾರೆ.
ಬೆಳಗಾವಿ ನಗರ ಕನ್ನಡದ್ದು ಎನ್ನುವ ಬಗ್ಗೆ ಯಾವುದೇ ತಂಟೆ ತಕರಾರುಗಳು ಇರಲಿಲ್ಲ. ೧೯೨೦ ರಷ್ಟು ಹಿಂದೆ ದೇಶದ ರಾಜಕೀಯ ಪಕ್ಷವಾದ ಕಾಂಗ್ರೆಸ್ ಪಕ್ಷದ ಸಂವಿಧಾನವನ್ನು ರಚನೆ ಮಾಡುವ ಕೆಲಸವನ್ನು ಕಾಂಗ್ರೆಸ್, ಕೇಸರಿ ಪತ್ರಿಕೆಯ ಸಂಪಾದಕರಾದ ನರಸಿಂಹ ಚಿಂತಾಮಣಿ ಕೇಳಕರರಿಗೆ ವಹಿಸಿಕೊಟ್ಟಿತು. ಅವರು ಕರ್ನಾಟಕ ಪ್ರಾಂತವನ್ನು ಕಾಂಗ್ರೆಸ್ ಸಂವಿಧಾನದಲ್ಲಿ ಸೇರ್ಪಡೆ ಮಾಡುವಾಗ ಬೆಳಗಾವಿ ನಗರ ಹಾಗೂ ಜಿಲ್ಲೆಗಳನ್ನು ಮಹಾರಾಷ್ಟ್ರ ಪ್ರಾಂತದಲ್ಲಿ ಇಡದೇ ಅವರು ಅವುಗಳನ್ನು ಕರ್ನಾಟಕ ಪ್ರಾಂತದಲ್ಲಿ ಇರಿಸಿದರು. ಈ ಕೇಳಕರರು ಕನ್ನಡಿಗರಾಗಿ ಇರದೇ ಅಚ್ಚ ಮರಾಠಿಗರೇ ಆಗಿದ್ದರು. ೧೯೨೪ ರಲ್ಲಿ ಮಹಾತ್ಮಾ ಗಾಂಧಿ ಅವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಧಿವೇಶನವು ಬೆಳಗಾವಿಯಲ್ಲಿ ಸೇರಿದ್ದಿತು. ಅದನ್ನು ಎಲ್ಲರೂ -ಅವರಲ್ಲಿ ಮರಾಠಿಗರೇ ಸೇರಿದ್ದಾರೆ- ಕರ್ನಾಟಕ ಅಧಿವೇಶನ ವೆಂದೇ ಕರೆದರು.
೧೯೨೯ ರಲ್ಲಿ ಬೆಳಗಾವಿ ನಗರದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಸೇರಬೇಕಾದಾಗ, ಅದು ಸೇರುವುದಕ್ಕೆ ಕನ್ನಡ ಜನರು ವಿರೋಧ ಮಾಡಿದರು. ಬೆಳಗಾವಿಯ್ಲಲಿ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಸೇರಿಸಿ, ಅದು ಮರಾಠಿ ಎಂದು ಸಾಧಿಸುವ ಗತ್ತುಗಾರಿಕೆ ಆ ಅಧಿವೇಶನವನ್ನು ಸೇರಿಸಲಾಗುತ್ತಿದೆ ಎಂದು ಕನ್ನಡ ಜನರು ವಿರೋಧಿಸಿದರು.
ಆಗ ಕೇಸರಿ ಪತ್ರಿಕೆಯ ಸಂಪಾದಕರಾದ ನರಸಿಂಹ ಚಿಂತಾಮಣಿ ಕೇಳಕರರು ಕನ್ನಡಿಗರ ಭಯ, ಸಂದೇಹಗಳನ್ನು ನಿವಾರಣೆ ಮಾಡಿದರು. 'ಬೆಳಗಾವಿ ಕನ್ನಡ ಎನ್ನುವುದು ನಿವಿರ್ವಾದ. ಅದರ ಮೇಲೆ ಮಹಾರಾಷ್ಟ್ರದ ಯಾವ ಹಕ್ಕುದಾರಿಕೆ ಇಲ್ಲ. ನಾವು ಅದನ್ನು ನಮ್ಮದೆಂದು ಸಾಧಿಸುವುದಿಲ್ಲ. ನಮಗೆ ಸಮ್ಮೇಳನ ಮಾಡುವುದಕ್ಕೆ ಅವಕಾಶ ಕೊಡಿ' ಎಂದು ಹೇಳಿದರು. ಕನ್ನಡಿಗರು ಮರಾಠಿ ಸಾಹಿತ್ಯ ಸಮ್ಮೇಳನ ಅಲ್ಲಿ ನಡೆಯುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಇದಾದ ಮೇಲೆ ೧೯೪೪ ರಲ್ಲಿ ರಾಜಗೋಪಾಲಾಚಾರಿ ಅವರು ಮುಸ್ಲಿಂರಿಗೆ ಸ್ವಯಂ ನಿರ್ಣಯ ಅಧಿಕಾರವನ್ನು ಕೊಡಬೇಕೆನ್ನುವ ತಮ್ಮ ತತ್ವ ಪ್ರಚಾರ ಮಾಡುತ್ತಾ ಬೆಳಗಾವಿ ನಗರಕ್ಕೆ ಬಂದು ಅಲ್ಲಿಯ ದರ್ಗಾದ ಬಯಲಿನಲ್ಲಿ ಸಾರ್ವಜನಿಕ ಭಾಷಣ ಮಾಡಿದರು.
ರಾಜಾಜಿ ಅನಿಸಿಕೆ: ಆ ಸಭೆಯಲ್ಲಿ ರಾಜಾಜಿ ಅವರ ಭಾಷಣವು ಮರಾಠಿಯಲ್ಲಿ ಭಾಷಾಂತರವಾಗುತ್ತಿತ್ತು. ಆಗ ಅಲ್ಲಿ ಸೇರಿದ್ದ ಕನ್ನಡ ಜನ ವರ್ಗ, `ಕನ್ನಡ ಕನ್ನಡ' ಎಂದು ಕೂಗತೊಡಗಿದರು. ಬಹು ಕುಶಾಗ್ರಮತಿಗಳಾಗಿದ್ದ ರಾಜಾಜಿ, ಗದ್ದಲ ಮಾಡುತ್ತಿದ್ದ ಜನರ ಕಡೆಗೆ ತಿರುಗಿ, `ನಿಮಗೆ ಏನು ಆಗಬೇಕೆಂದು' ಕೇಳಿದರು.
ಅಲ್ಲಿ ಗಲಾಟೆ ಎಬ್ಬಿಸಿದ ಜನರು, `ನಿಮ್ಮ ಭಾಷಣ ಕನ್ನಡದಲ್ಲಿ ಭಾಷಾಂತರಗೊಳ್ಳಬೇಕು' ಎಂದರು. ಆಗ ರಾಜಾಜಿ ಆ ಸಭೆಯಲ್ಲಿ ಸೇರಿದ್ದ ಜನರ ಮನೋಭಾವನೆ ಏನಿದೆ ಎನ್ನುವುದನ್ನು ತಿಳಿಯಬೇಕೆಂದು ಅಪೇಕ್ಷಿಸಿದರು. ಅಲ್ಲಿ ಸೇರಿದ್ದ ಎಷ್ಟು ಜನರಿಗೆ ಕನ್ನಡ ಬರುತ್ತದೆ, ಮರಾಠಿ ತಿಳಿಯುತ್ತದೆ ಎನ್ನುವುದನ್ನು ಪರಿಶೀಲನೆ ಮಾಡಿದರು. ಕನ್ನಡ ಹಾಗೂ ಮರಾಠಿ ಜನರು ಸಮಸಮನಾಗಿ ಕೈ ಎತ್ತಿ ತಮ್ಮ ಮನೋಗತವನ್ನು ತಿಳಿಸಿದರು.
ಆಗ ರಾಜಾಜಿಯವರು ಆ ಸಭೆಯಲ್ಲಿದ್ದ ಜನರನ್ನು ಉದ್ದೇಶಿಸಿ ಹೇಳಿದರು- ''ನೀವು ಕೈ ಎತ್ತಿರುವುದನ್ನು ನೋಡಿದರೆ, ನಿಮಗೆ ಯಾರಿಗೆ ಕನ್ನಡ ಬರುತ್ತದೆಯೋ, ಅವರಿಗೆ ಮರಾಠಿ ತಿಳಿಯುತ್ತಿದೆ. ಯಾರಿಗೆ ಮರಾಠಿ ತಿಳಿಯುತ್ತದೆಯೋ ಅವರಿಗೆ ಕನ್ನಡ ಬರುತ್ತದೆ. ಬೆಳಗಾವಿ ನಗರವು ಕನ್ನಡವಾದುದರಿಂದ ನನ್ನ ಭಾಷಣ ಕನ್ನಡದಲ್ಲಿ ಭಾಷಾಂತರಗೊಳ್ಳಬೇಕು''.
ಆಗ ಅನಂತರಾವ್ ಚಿಕ್ಕೋಡಿ ಅವರು ರಾಜಾಜಿಯವರ ಭಾಷಣವನ್ನು ಕನ್ನಡದಲ್ಲಿ ಭಾಷಾಂತರ ಮಾಡಿದರು. ಅವರ ಭಾಷಾಂತರ ಅದ್ಭುತವಾಗಿದ್ದಿತು. ಕನ್ನಡ ಬರುತ್ತಿದ್ದ ರಾಜಾಜಿಯವರು ತಮ್ಮ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದ ಚಿಕ್ಕೋಡಿ ಅವರನ್ನು ಬಹುವಾಗಿ ಮೆಚ್ಚಿಕೊಂಡರು.
ಅಲ್ಲಿ ಜನರನ್ನುದ್ದೇಶಿಸಿ ರಾಜಾಜಿಯವರು ಹೇಳಿದರು: ''ಗಡಿ ಪ್ರದೇಶಗಳಲ್ಲಿ ಇಂತಹ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ಮರಾಠಿ ಜನರು ಇಲ್ಲಿಯವರಾಗಿ ಕನ್ನಡವನ್ನು ಕಲಿತಿರದಿದ್ದರೆ ಅದು ಅವರ ತಪ್ಪು. ಅವರು ಕನ್ನಡ ಭಾಷೆಯನ್ನು ಕಲಿತು ಕನ್ನಡ ಜನರೊಂದಿಗೆ ಬೆರೆತು ಹೋಗಬೇಕು''.
ಆನಂತರ ಧರ್ ಸಮಿತಿ, ವಾಂಛೂ ಸಮಿತಿ ಹಾಗೂ ಕಾಂಗ್ರೆಸ್ಸಿನ ಜೆ.ವಿ.ಪಿ. (ಜವಾಹರಲಾಲ, ವಲ್ಲಭಬಾಯಿ ಹಾಗೂ ಪಟ್ಟಾಭಿ) ಸಮಿತಿ ಎಲ್ಲವೂ ಬೆಳಗಾವಿಯು ನಿರ್ವಿವಾದವಾಗಿಯೂ ಕನ್ನಡವೆಂದು ಹೇಳಿದವು.
ಮುಂದೆ ೧೯೫೫ ರಲ್ಲಿ ಸರ್ವೋನ್ನತ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾಯಮೂರ್ತಿ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ಪಂಡಿತ ಹೃದಯನಾಥ ಕುಂಜರೂ, ಸರ್ದಾರ ಕೆ.ಎಂ.ಫಣಿಕ್ಕರ, ತ್ರಿಸದಸ್ಯರ ಆಯೋಗವನ್ನು ಕೇಂದ್ರ ಸರಕಾರ ರಚನೆ ಮಾಡಿತು. ಈ ರಾಜ್ಯ ಪುನರ್ ಸಂಘಟನಾ ಆಯೋಗವು ದೇಶದಲ್ಲಿ ಸಂಚಾರ ಮಾಡಿ ಸಾವಿರಾರು ಸಾಕ್ಷಿ ಪುರಾವೆಯನ್ನು ಕೇಳಿ ತಿಳಿದುಕೊಂಡಿತು.
ಮಹಾರಾಷ್ಟ್ರ ವಾದ ತಿರಸ್ಕೃತ:
ಈಗ ಮಹಾರಾಷ್ಟ್ರದವರು ಮುಂದೆ ಮಾಡುತ್ತಿರುವ ಎಲ್ಲ ವಾದಗಳು ರಾಜ್ಯ ಪುನರ್‌ಸಂಘಟನಾ ಆಯೋಗದ ಮುಂದೆ ಬಂದವು. ಅವುಗಳನ್ನು ಮುಂದೆ ಪಾರ್ಲಿಮೆಂಟಿನಲ್ಲಿ ಈ ಆಯೋಗದ ವರದಿಯ ಚರ್ಚೆ ನಡೆದಾಗ, ಮಹಾರಾಷ್ಟ್ರದವರು ತಾವು ಹೇಳುವುದನ್ನೆಲ್ಲ ತಿದ್ದುಪಡಿಗಳ ಮೂಲಕ ಪಾರ್ಲಿಮೆಂಟಿನಲ್ಲಿ ಮಂಡಿಸಿದರು. ಅವೆಲ್ಲವುಗಳನ್ನು ಪಾರ್ಲಿಮೆಂಟು ತಿರಸ್ಕರಿಸಿತು.
ಲೋಕಸಭೆಯ ೫೪೫ ಜನ ಸದಸ್ಯರಲ್ಲಿ ಕರ್ನಾಟಕದವರು ಕೇವಲ ೨೭ ಜನ ಇದ್ದರು. ಮಹಾರಾಷ್ಟ್ರದವರು ಅಧಿಕ ಸಂಖ್ಯೆಯಲ್ಲಿದ್ದರು. ಆಗ ಲೋಕಸಭೆಯು ಮಹಾರಾಷ್ಟ್ರದವರು ಮುಂದೆ ಮಾಡಿದ ಎಲ್ಲ ವಾದಗಳನ್ನು ತಿರಸ್ಕರಿಸಿ ರಾ.ಪು. ಆಯೋಗದ ವರದಿಯನ್ನು ಒಪ್ಪಿಸಿಕೊಂಡಿತು.
ಮಹಾರಾಷ್ಟ್ರದವರು, ಕೊಂಕಣಿಯು ಮರಾಠಿ ಭಾಷೆಯ ಉಪಭಾಷೆ ಎಂದು ಸಾಧಿಸುತ್ತಿದ್ದುದನ್ನು ಆ ಆಯೋಗವನ್ನು ತಿರಸ್ಕರಿಸಿ ಕೊಂಕಣಿಯು ಮರಾಠಿಯ ಉಪಭಾಷೆಯಾಗಿರದೇ ಸ್ವತಂತ್ರ ಭಾಷೆ ಎಂದು ಹೇಳಿತು. ೧೯೫೬ ರಲ್ಲಿ ಕರ್ನಾಟಕ ರಾಜ್ಯ ರಚನೆ ನಡೆದ ಮೇಲೆ ಮರಾಠಿಗರು ಇಲ್ಲದ ವಾದಗಳನ್ನು ಎಬ್ಬಿಸಿ ಕಿತಾಪತಿ ಕೆಲಸಕ್ಕೆ ತೊಡಗಿದರು. ತಮಗೆ ಅನ್ಯಾಯವಾಗಿದೆ ಎಂದು ಬೊಬ್ಬೆ ಹಾಕುತ್ತ ದೇಶದ ಸಹಾನುಭೂತಿಯನ್ನು ತಮ್ಮೆಡೆಗೆ ಸೆಳೆದುಕೊಳ್ಳಬೇಕೆಂದರು. ಮಹಾರಾಷ್ಟ್ರದ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರವು ಕಾಂಗ್ರೆಸ್ ಕಾರ್ಯ ಸಮಿತಿಯ ಸಲಹೆ ಮೇರೆಗೆ ಒಂದು ಏಕಸದಸ್ಯ ಆಯೋಗವನ್ನು ರಚನೆ ಮಾಡಿತು. ಆಗ ಕಾಂಗ್ರೆಸ್ ಕಾರ್ಯ ಸಮಿತಿಯಲ್ಲಿ ಸರ್ವ ಸಮ್ಮತವಾದ ಒಂದು ತೀರ್ಮಾನಕ್ಕೆ ಬರಲಾಯಿತು. ಏಕಸದಸ್ಯ ಆಯೋಗವು ಏನು ತೀರ್ಮಾನ ಕೈಗೊಳ್ಳುವುದೋ ಅದು ಅಖೈರಾದದ್ದು ಎಂದು ಒಪ್ಪಿ ಅದನ್ನು ಸ್ವೀಕರಿಸಬೇಕು ಎಂದು ಹೇಳಲಾಯಿತು.
ಏಕಸದಸ್ಯ ಆಯೋಗದ ರಚನೆಯು ತಮ್ಮ ವಿಜಯವೆಂದು ಮರಾಠಿಗರು ಬೀಗಿದರು. ಆಯೋಗದ ವರದಿ ಬರುವವರೆಗೆ ಮಹಾರಾಷ್ಟ್ರಿಯರು ಅದರ ಪರವಾಗಿಯೇ ಇದ್ದರು. ಯಾವಾಗ ಆಯೋಗವು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಕೊಡಲಿಲ್ಲವೋ ಆವಾಗ ಮಹಾರಾಷ್ಟ್ರವು ಆ ವರದಿಯನ್ನು ವಿಕ್ಷಿಪ್ತವೆಂದು ಹೇಳಿ ತಿರಸ್ಕರಿಸಿತು.
ಮಹಾರಾಷ್ಟ್ರದವರು, ಮಹಾಜನ ಆಯೋಗದ ಎದುರು ೮೬೨ ಗ್ರಾಮ ಪಟ್ಟಗಳು ಕರ್ನಾಟಕದಿಂದ ತಮಗೆ ಬರಬೇಕೆಂದು ಕೇಳಿದ್ದರು. ಮಹಾಜನರು ಕರ್ನಾಟಕ ಮಹಾರಾಷ್ಟ್ರಗಳ ವಾದವನ್ನು ಕೂಲಂಕಷವಾಗಿ ಪರಿಶೀಲಿಸಿ ೨೬೨ ಗ್ರಾಮ ಪಟ್ಟಗಳು ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗಬೇಕೆಂದು, ಅದೇ ರೀತಿ ೨೩೮ ಗ್ರಾಮ ಪಟ್ಟಗಳು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕೆಂದು ವಾದ ಮಾಡಿದರು.
ಮಹಾಜನ ಆಯೋಗವು ಬೆಳಗಾವಿ ನಗರವನ್ನು ಕರ್ನಾಟಕದಲ್ಲಿ ಇರಿಸಿದಂತೆ ಕೇರಳದ ಭಾಗವಾಗಿದ್ದ ಕಾಸರಗೋಡನ್ನು ಕರ್ನಾಟಕಕ್ಕೆ ಬರಬೇಕೆಂದು ಹೇಳಿತ್ತು.
ಈ ಸಭ್ಯ ಗೃಹಸ್ಥರ ಒಡಂಬಡಿಕೆಯನ್ನು ಕಾರ್ಯರೂಪಕ್ಕೆ ತರುವುದು ತನ್ನ ಕರ್ತವ್ಯವೆಂದು ಕೇಂದ್ರ ಸರಕಾರ ತಿಳಿಯಬೇಕಾಗಿದ್ದಿತು. ಈ ಏಕ ಸದಸ್ಯ ಆಯೋಗಕ್ಕೆ ನ್ಯಾಯಮೂರ್ತಿ ಮೆಹರ ಚಂದ್ ಮಹಾಜನರನ್ನು ನೇಮಕ ಮಾಡುವಾಗ, ಮಹಾಜನರು ಆಗಿನ ಗೃಹಮಂತ್ರಿ ಗುಲ್ಜಾರಿಲಾಲ ನಂದಾ ಅವರಿಗೆ, ''ನನ್ನ ವರದಿಯನ್ನು ನೀವು ಶೀತಲ ಪೆಟ್ಟಿಗೆಯಲ್ಲಿ ಹಾಕಿ ಇಡುತ್ತೀರಿ. ಹಾಗಿದ್ದ ಮೇಲೆ ನಾನೇಕೆ ಕೃತಜ್ಞತೆ ಇಲ್ಲದ ಈ ಕೆಲಸ ಕೈಗೊಳ್ಳಬೇಕು'' ಎಂದು ಕೇಳಿದರು. ಆಗ ಗುಲ್ಜಾರಿಲಾಲ ನಂದಾ ಅವರು ನ್ಯಾಯಮೂರ್ತಿ ಮಹಾಜನರಿಗೆ ''ನೀವೇನು ವರದಿ ಮಾಡುತ್ತಿರೋ ಅದನ್ನು ಚಾಚೂ ತಪ್ಪದೇ ಅನುಷ್ಠಾನಕ್ಕೆ ತರುತ್ತೇನೆ'' ಎಂದು ಹೇಳಿದಾಗ ನ್ಯಾಯಮೂರ್ತಿ ಮಹಾಜನರು ಆಯೋಗದ ಕೆಲಸವನ್ನು ಸ್ವೀಕರಿಸಿದರು.
ಅವರ ವರದಿಯನ್ನು ಸ್ವೀಕರಿಸಿ ಅದನ್ನು ಕಾರ್ಯರೂಪಕ್ಕೆ ತರುವುದು ಕೇಂದ್ರ ಸರಕಾರವು ಒಪ್ಪಿದ ಜವಾಬ್ದಾರಿಯಾಗಿದ್ದಿತು. ಆದರೆ ಈಗ ಅದು ಊರು ಸುಟ್ಟರೂ ಹನುಮಪ್ಪ ಹೊರಗೆ ಎಂಬಂತೆ ಸುಮ್ಮನೆ ಕುಳಿತು ಬಿಟ್ಟಿದೆ. ಆ ವರದಿಯನ್ನು ಕಾರ್ಯರೂಪಕ್ಕೆ ತರದೇ ಕೇಂದ್ರ ಸರಕಾರಕ್ಕೆ ಬೇರೆ ಗತ್ಯಂತರವೇ ಇಲ್ಲ.
ಬುಷ್ ಬರಬೇಡವೆಂದದ್ದು ಮೋದಿಯನ್ನಾ : ನಿರ್ಗತಿಕ ಭಾರತವನ್ನಾ?
ರವಿ ಬೆಳಗೆರೆ
ಜಾಗತಿಕ ಮಟ್ಟದಲ್ಲಿ ನರೇಂದ್ರ ಮೋದಿಗೊಂದು ಛೀಮಾರಿ ಆಗಲೇಬೇಕಿತ್ತು. ಆಗಿದೆ. ಅಷ್ಟರ ಮಟ್ಟಿಗೆ it's fine. ಆದರೆ, ಹೀಗೊಂದು ಛೀಮಾರಿ ಹಾಕಿದ್ದಾರಲ್ಲಾ, ಅವರು ಯಾರು? ಅವರ ಬುಡದ ನೆಲ ಸ್ವಚ್ಛವಾಗಿದೆಯಾ ? ಅವರ ಎದೆಯ ಮೇಲೆ ರಕ್ತದ ಕಲೆಗಳಿಲ್ಲವಾ? ಅವರ ಕೈಯಲ್ಲಿನ ಬಂದೂಕಿನಲ್ಲಿ ಹೊಗೆಯಿಲ್ಲವಾ? ಅವರೇನು ಸಂತರಾ? ಹೋಗಲಿ, ಮನುಷ್ಯರಾ? ಅಥವಾ, ನಮ್ಮ ದೇಶವನ್ನು ಗುತ್ತಿಗೆಗೆ ಪಡೆದು ಕೊಂಡಿರುವ ಧಣಿಗಳಾ?
ಈ ಅಮೆರಿಕ ಎಂಬ ಉದ್ಧಟ ದೊಡ್ಡಣ್ಣನ ಅತಿರೇಕಗಳು ಯಾಕೋ ದಿನದಿನಕ್ಕೂ ಜಾಸ್ತಿಯಾಗುತ್ತಿವೆ. ನನಗೇನೂ ಮೋದಿಯ ಬಗ್ಗೆ ಪ್ರೀತಿಯಾಗಲಿ, ಅಭಿಮಾನವಾಗಲಿ, ಕನಿಷ್ಠ ಮೆಚ್ಚುಗೆಯಾಗಲಿ, ಏನೂ ಇಲ್ಲ. ಬಿಜೆಪಿಯ ಅನೇಕ ಬಾಯಿಬುಡುಕರ ಪೈಕಿ ಆತನೂ ಒಬ್ಬ. ನಮ್ಮ ದೇಶದ ಅನೇಕ ನಿರಂಕುಶ ಮದಗಜಗಳ ಸಾಲಿನಲ್ಲಿ ಮೋದಿಯದು ಅಗ್ರಸ್ಥಾನ. ಅಕಾರಕ್ಕಾಗಿ ಯಾವ ನೈತಿಕ ಪ್ರಪಾತಕ್ಕೆ ಧುಮುಕುವುದಕ್ಕೂ ಸಿದ್ಧವಿರುವ ಮನುಷ್ಯ ಅಂತ ನೋಡಿದ ತಕ್ಷಣ ಅನ್ನಿಸಿಬಿಡುತ್ತದೆ.
ಆದರೆ, ಆತ ನಮ್ಮ ಮನೆಯ ಸದಸ್ಯ. ಈ ದೇಶದ ಪ್ರಜೆ. ತನ್ನ ರಾಜ್ಯದ ಜನಗಳ ಪ್ರತಿನಿ. ಆತ ಬರೀ ಮೋದಿಯಲ್ಲ; ಒಂದು ರಾಜ್ಯದ ಮುಖ್ಯಮಂತ್ರಿ. ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಒಬ್ಬ ಅತಿಮುಖ್ಯ ಪಾತ್ರಧಾರಿ.
ನಮ್ಮ ಮನೆಯವರನ್ನು ತೆಗಳುವ, ತಿದ್ದಿಬುದ್ಧಿ ಹೇಳುವ, ಅಗತ್ಯಬಿದ್ದರೆ ಮನೆಯಾಚೆ ದೂಡುವ ಹಕ್ಕು ಮತ್ತು ಕರ್ತವ್ಯ ನಮ್ಮದು ಮಾತ್ರ. ಪಕ್ಕದ ಮನೆಯವರು ಶ್ರೀಮಂತ, ಅವನಿಂದ ನಮಗೆ ಕೋಟ್ಯಂತರ ಡಾಲರುಗಳ ಬಿಸಿನೆಸ್ ಹರಿದುಬರುತ್ತಿದೆ, ಎಂಬ ಮಾತ್ರಕ್ಕೇ ನಾವು ನಮ್ಮ ಸಂಸಾರದ ಓರೆ ಕೋರೆಗಳನ್ನು ಅವನ ಕೈಗೊಪ್ಪಿಸಲಾಗುವುದಿಲ್ಲವಲ್ಲ ? ಅದು ಆ ಶ್ರೀಮಂತನಿಗೆ ಅರ್ಥವಾಗಬೇಕು. ಬುಷ್ ಎಂಬ ಅರೆಬೆಂದ ಯುದ್ಧ ದಾಹಿಗೆ ಆಗಿಲ್ಲ.
ನಿಜ; ಗುಜರಾತ್‌ನಲ್ಲಿ ನಡೆದ ನರಮೇಧವಿದೆಯಲ್ಲಾ , ಅದು ನಮ್ಮನ್ನು ಸದಾ ಕುಟುಕುತ್ತಿರಲೇಬೇಕು, ನಮ್ಮನ್ನು ಪದೇ ಪದೆ ನಾಚಿಕೆಗೆ- ಅವಮಾನಕ್ಕೆ ದೂಡುತ್ತಲೇ ಇರಬೇಕು, ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸುತ್ತಲೇ ಇರಬೇಕು. ನಾವು ಎಂದೂ ಮರೆಯ ಬಾರದು ಪಾಠವಾಗಿ ಅದು ನಮ್ಮ ತಲೆಯಲ್ಲಿ ಗುಂಯ್‌ಗುಡುತ್ತಲೇ ಇರಬೇಕು. ಆದರೆ, ಈ ಸಂಕಟದ ಬೇಗುದಿಯನ್ನು ಜೀವಂತವಿರಿಸಲಿಕ್ಕೆ, ನಮಗೆ ಹೊರಗಿನವರ ಹಂಗಿನ ತುಪ್ಪ ಬೇಕಿಲ್ಲ.
ಹಾಗೆ ನೋಡಿದರೆ, ಈ ದೇಶಕ್ಕೆ ಹತ್ಯಾಕಾಂಡಗಳು ಹೊಸತೇನಲ್ಲ. ಅನೇಕ ದಶಕ ಶತಮಾನಗಳಿಂದಲೂ ನಾವದನ್ನು ಅನುಭವಿಸುತ್ತಲೇ ಬಂದಿದ್ದೇವೆ; ನಮ್ಮ ಹೆಚ್ಚುಗಾರಿಕೆಯೆಂದರೆ, ಅಂಥ ಪ್ರತಿಯೊಂದು ದುರಂತದ ನಂತರವೂ ನಾವು ಒಂದು ಜನಾಂಗವಾಗಿ-ಒಂದು ಸಂಸ್ಕೃತಿಯಾಗಿ-ಒಂದು ದೇಶವಾಗಿ ಭದ್ರಗೊಂಡು ಬೆಳೆಯುತ್ತಾ ಬಂದಿದ್ದೇವೆ. ಅಮೆರಿಕನ್ನರಿಗೆ ಇತಿಹಾಸದ ಪರಿಚಯವಿಲ್ಲ.
ವಿಭಜನೆಯ ಸಮಯದಲ್ಲಾದ ಮಾರಣ ಹೋಮಗಳ ಬಗ್ಗೆ ಇಡೀ ಜಗತ್ತಿಗೇ ಗೊತ್ತಿದೆ. ಅದೆಷ್ಟು ಸಾವಿರ ಹಿಂದೂ ಮುಸ್ಲಿಮರ ಕುಟುಂಬಗ ಳು ಸರ್ವನಾಶವಾಗಿ ಹೋದವು ಅನ್ನುವುದನ್ನು ಇತಿಹಾಸ ದಾಖಲಿಸಿದೆ. ಆದರೆ, ಆ ದುರಂತವೇ ಈ ದೇಶದ ಕೊನೆಯಾಗಲಿಲ್ಲ ; ಅದು ಹೊಸ ಬದುಕೊಂದರ ಆರಂಭವಾಯಿತು, ಹೊಸತಾಗಿ ಹುಟ್ಟಿದ ದೇಶಕ್ಕೊಂದು ಶಾಶ್ವತ ಪಾಠವಾಯಿತು. ಅದೇ ಶಾಶ್ವತ ಶಾಪವೂ ಆಯಿತು.
೧೯೫೦ರ ದಶಕದಲ್ಲಿ ತಮಿಳುನಾಡಿನಲ್ಲೊಂದು ನರಮೇಧ ನಡೆದಿತ್ತು. ತಮ್ಮನ್ನು ತಾವು ಉಚ್ಚ ಕುಲದವರು ಅಂತ ಕರೆದುಕೊಳ್ಳುವ ಕೆಲ ಹಿಂದೂ ಗುಂಪುಗಳವರು, ನೂರಾರು ಹರಿಜನರನ್ನು ಮನಸೋ ಇಚ್ಛೆ ಕೊಚ್ಚಿ ಹಾಕಿದ್ದರು. ಪ್ರತ್ಯಕ್ಷದರ್ಶಿಗಳಾಗಿದ್ದ ಪೊಲೀಸರಿಂದ ಮಾಡ ಲಾಗಿದ್ದು, ಸುಮ್ಮನೆ ಅಸಹಾಯಕವಾಗಿ ನಿಂತು ನೋಡುವುದೊಂದೇ. ಅವರಿಂದ ಅನಾಹುತ ತಡೆಯಲಾಗಿರಲಿಲ್ಲ. ಕಾಂಗ್ರೆಸ್ ಎಂಬ ಗಾಂಧಾರೀ ಗರ್ಭದಲ್ಲಿ ಹುಟ್ಟಿದ ಅಪರೂಪದ ನಾಯಕರಲ್ಲೊಬ್ಬರಾದ ಮುಖ್ಯಮಂತ್ರಿ ಕಾಮರಾಜ್, ನಾಚಿಕೆ-ಅವಮಾನಗಳಿಂದ ತಲೆಕೆಳಗೆ ಹಾಕಿ ನಿಂತಿದ್ದರು. He was ashamed of himself. ಅದಾದ ಮೇಲೆ, ೧೯೬೦ರ ದಶಕದ ಮಧ್ಯಭಾಗದಲ್ಲಿ ಅವತ್ತಿನ ಪೂರ್ವ ಪಾಕಿಸ್ತಾನದಲ್ಲಿ ನಡೆದ ಧರ್ಮ ದಳ್ಳಾರಿಯನ್ನು ಇತಿಹಾಸ ಬರೆದಿಟ್ಟಿದೆ. ಈಗ ಬಾಂಗ್ಲಾದೇಶ ಅಂತ ಕರೆಸಿಕೊಳ್ಳುವ ಆ ನೆಲದಲ್ಲಿ ಅವತ್ತು ಹಿಂದೂಗಳನ್ನು ಕೋಳಿಗಳ ಥರ ತರಿದು ಹಾಕಲಾಗಿತ್ತು. ಪಾಪದ ತರುಣಿಯರ ಮೇಲೆ ಸಾಮೂಹಿಕ ಅತ್ಯಾಚಾರಗಳಾಗಿದ್ದವು. ಅವರೆದೆ ಗಳನ್ನು ಕತ್ತರಿಸಿ ಎಸೆಯಲಾಗಿತ್ತು. ಹಿಂಸೆ ತಡೆಯಲಾರದೆ ಲಕ್ಷಗಟ್ಟಲೆ ಹಿಂದೂಗಳು ಭಾರತಕ್ಕೆ ರಾತ್ರೋರಾತ್ರಿ ಓಡಿಬಂದಿದ್ದರು. ಅತ್ಯಂತ ಮಾನವೀಯವಾಗಿ ವರ್ತಿಸಿದ ನೆಹರೂ ಅವತ್ತು ಅವರನ್ನೆಲ್ಲಾ ಮಧ್ಯಪ್ರದೇಶದ ಬಸ್ತಾರ್‌ಜಿಲ್ಲೆಯಲ್ಲಿರುವ ದಂಡಕಾರಣ್ಯದಲ್ಲಿ ನಿರಾಶ್ರಿತರ ಶಿಬಿರಗಳನ್ನು ಕಟ್ಟಿಸಿ ನಮ್ಮದೇ ದೇಶದ ಮಕ್ಕಳ ಹಾಗೆ ನೋಡಿಕೊಂಡಿದ್ದರು. ಆದರೆ, ಕೋಲ್ಕತ್ತಾದಿಂದ ಬಸ್ತಾರ್‌ಗೆ ಬರುವ ದಾರಿಯಲ್ಲಿ ಈ ನತದೃಷ್ಟ ಹಿಂದೂಗಳು ಹೇಳಿದ ಕಥೆ ಕೇಳಿ ದಾರಿಯುದ್ದಕ್ಕೂ ಭುಗಿಲೆದ್ದ ಹಿಂಸಾಚಾರವನ್ನೂ, ಮುಸ್ಲಿಂ ನರಮೇಧವನ್ನು ತಡೆಯಲು ಅವರಿಂದ ಆಗಿರಲಿಲ್ಲ. He was helpless.
ಅಷ್ಟೊಂದು ಹಿಂದೆ ಯಾಕೆ; ೧೯೮೪ರಲ್ಲಿ ಇಂದಿರಾಗಾಂಯ ಹತ್ಯೆಯಾಗುತ್ತಿದ್ದಂತೆಯೇ ಮೂರು ದಿನಗಳ ಕಾಲ ದೆಹಲಿಯಲ್ಲಿ ನಿರಂತರವಾಗಿ ನಡೆಯಿತಲ್ಲಾ ಸಿಖ್ ಹತ್ಯಾಸರಣಿ, ಅದನ್ನು ಮರೆಯುವುದು ಸಾಧ್ಯವೆ? ಆಗಲೂ ಪೊಲೀಸರು ಅಪರಾಧಕ್ಕೆ ಪ್ರತ್ಯಕ್ಷದರ್ಶಿಗಳಾಗಿದ್ದರು. ಪ್ರಧಾನಿ ಗದ್ದುಗೆಗೇರಿದ ರಾಜೀವ್ ಗಾಂಯಂತೂ, ಹೆಚ್ಚು-ಕಡಿಮೆ ಈ ನರಮೇಧವನ್ನು ಡಿಫೆಂಡ್ ಮಾಡಿಕೊಳ್ಳುವಂಥ insensitive ಧಾಟಿಯಲ್ಲೇ ಮಾತಾಡಿಬಿಟ್ಟರು.
ಆದಾದ ಮೇಲೆ ಆಯೋಧ್ಯೆ ಸಂಭವಿಸಿತು. ಮುಂಬೈಯಲ್ಲಿ ಬಾಂಬ್ ಸೋಟಗಳಾದವು. ಕಾಶ್ಮೀರ ಕಂಗೆಟ್ಟು ಹೋಯಿತು. ಗುಜರಾತ್‌ಗೆ ಬೆಂಕಿ ಬಿದ್ದಿತು.
ಇವೆಲ್ಲವನ್ನೂ ಸಹಿಸಿಕೊಂಡು ಈ ದೇಶ ಇವತ್ತು ಒಂದು ದೇಶವಾಗಿ ಯಾಕೆ ಉಳಿದಿದೆಯೆಂದರೆ, ಇಲ್ಲಿನ ಸಂಸ್ಕೃತಿಯಲ್ಲಿ ಮಾನವೀಯತೆಯೆಂ ಬುದೂ ಕೌಟುಂಬಿಕ ವಿವೇಚನೆಯೆಂಬುದೂ ಗುಪ್ತಗಾಮಿನಿಯಾಗಿ ಹೊಸೆದುಕೊಂಡಿದೆ. ಜಗಳವಾಡಿದ ತಕ್ಷಣ ಡೈವರ್ಸ್‌ಕೊಟ್ಟು ಬಿಡುವ ಪಾಶ್ಚಾತ್ಯ ಸಂಸ್ಕಾರವಲ್ಲ ನಮ್ಮದು. ಹಾಗಂತ, ಎಲ್ಲ ಕೋಮುದಳ್ಳುರಿಗಳೂ-ಧರ್ಮಹತ್ಯೆಗಳೂ ಸಹಜ ಅಂತಾಗಲಿ, ನ್ಯಾಯಸಮ್ಮತ ಅಂತಾಗ ಲಿ ಅಲ್ಲ. ಅವು ಎಂದಿದ್ದರೂ ನಾಚಿಕೆಗೇಡಿನ ಸಂಗತಿಗಳೇ. ಆದರೆ, ಅಂಥ ಹುಯಿಲುಗಳಿಂದ ಅಲುಗಾಡದಷ್ಟು ಗಟ್ಟಿಯಾಗಿ ಬೆಳೆದಿದೆ, ಉಳಿದಿದೆ, ನಮ್ಮ ಡೆಮಾಕ್ರಸಿ. ಇಲ್ಲಿನ ತಪ್ಪಿತಸ್ಥರಿಗೆ ಇಲ್ಲೇ ಶಿಕ್ಷೆ ಕೊಡುವ ವ್ಯವಸ್ಥೆಯಿದೆ. ಮೋದಿ ನೀಚ ಅಂತಾದರೆ, ಆ ನೀಚತನಕ್ಕೆ ಪಾಠ ಕಲಿಸುವಷ್ಟು ವಿವೇಚನೆ ಮತ್ತು ಪ್ರಜ್ಞೆ ನಮ್ಮ ಪ್ರಜಾತಂತ್ರಕ್ಕಿದೆ. ಇವತ್ತು ಎಡವಿದರೂ ನಾಳೆ ತನ್ನನ್ನು ತಾನು ತಿದ್ದಿಕೊಂಡು ಪುಟಿದೇಳುವ ಶಕ್ತಿಯಿದೆ. ಹಾಗಾಗೇ, ನಮ್ಮ ಪ್ರಜಾತಂತ್ರಕ್ಕೆ ಅವಮಾನವಾಗುವುದನ್ನು ನಾವು ಮೋದಿ ಅನ್ನುವ ವ್ಯಕ್ತಿಗಾದ ಅವಮಾನದಷ್ಟು ಸಲೀಸಾಗಿ ಸಹಿಸುವುದು ಸಾಧ್ಯವಿಲ್ಲ.
ಬುಷ್‌ಗಿದು ಗೊತ್ತಿಲ್ಲ. ನಮ್ಮ ಸಾಂವಿಧಾನಿಕ ಪ್ರಜ್ಞೆಯನ್ನೇ ತನ್ನ ಉದ್ಧಟತನದಿಂದ ಅವಮಾನಿಸಿಬಿಟ್ಟಿದ್ದಾನೆ. ಬಿಜೆಪಿಯ ಮೋದಿಯನ್ನು ಕೆಳಕ್ಕೆ ದೂಡಿದರೆ, ಯುಪಿಎ ಸರ್ಕಾರ ಖುಷಿಯಿಂದ ಕುಣಿದು ತನ್ನ ಜೊತೆ ಡ್ಯುಯೆಟ್ ಹಾಡುತ್ತದೆ ಅಂದು ಕೊಂಡಿದ್ದನೇನೋ. ನಮ್ಮ ಪುಣ್ಯ; ನಮ್ಮ ರಾಜಕಾರಣಕ್ಕಿನ್ನೂ ಅಂಥ ವಿವೇಚನಾ ದಾರಿದ್ರ್ಯಬಡಿದಿಲ್ಲ. ಮೋದಿಯನ್ನು ವೈಯಕ್ತಿಕವಾಗಿ ಒಪ್ಪದಿದ್ದರೂ, ಕಾಂಗ್ರೆಸ್ ಮತ್ತು ಕಮ್ಯು ನಿಷ್ಟ್ ಧುರೀಣರು ಬುಷ್‌ನ ಅತಿಬುದ್ಧಿವಂತಿಕೆಗೆ ಕ್ಯಾಕರಿಸಿ ಉಗಿದಿದ್ದಾರೆ. ಸರ್ಕಾರ ಮತ್ತು ವಿರೋಧ ಪಕ್ಷಗಳೆಲ್ಲವೂ ಒಂದೇ ದನಿಯಿಂದ ಮೋದಿಯ ಗಾದಿಗೆ ಮತ್ತು ಆ ಮೂಲಕ ನಮ್ಮ ಪ್ರಜಾತಂತ್ರಕ್ಕೆ ಆದ ಅವಮಾನವನ್ನು ಪ್ರತಿಭಟಿಸಿವೆ. ಇಲ್ಲಿ ಮೋದಿ ಮುಖ್ಯವಲ್ಲ ಅನ್ನುವುದ ನ್ನು ಎಲ್ಲ ನಾಯಕರೂ ಅರ್ಥ ಮಾಡಿಕೊಂಡಿದ್ದಾರೆ. ಇದೇ ನಿಜವಾದ ದೇಶಪ್ರೇಮದ ಹಾಗೂ ಪ್ರಜಾತಂತ್ರದ ಶಕ್ತಿ.
ಆದು ಒತ್ತಟ್ಟಿಗಿರಲಿ ಬಿಡಿ; ಈಗ, ಯಾವ ಆಧಾರದ ಮೇಲೆ ಅಮೆರಿಕದ ಸರ್ಕಾರ ನರೇಂದ್ರ ಮೋದಿಗೆ ವೀಸಾ ನಿರಾಕರಿಸಿತು ಅನ್ನುವುದನ್ನಷ್ಟು ನೋಡಿ. ತನ್ನ ದೇಶದ `ಇಮಿಗ್ರೇಷನ್ ಮತ್ತು ನ್ಯಾಷನಾಲಿಟಿ ಆಕ್ಟ್' ಸೆಕ್ಷನ್ 212(a)(2)(G) ಪ್ರಕಾರ, ಧಾರ್ಮಿಕ ಸ್ವಾತಂತ್ರ್ಯವನ್ನು ತೀವ್ರವಾಗಿ ಉಲ್ಲಂಘಿಸುವಂಥ- ಹತ್ತಿಕ್ಕುವಂಥ ಕೆಲಸಕ್ಕೆ ಹೊಣೆಯಾದ ಯಾವುದೇ ವಿದೇಶಿ ಸರ್ಕಾರಿ ಅಕಾರಿಗೂ ವೀಸಾ ಕೊಡುವಂತಿಲ್ಲ ಅಂತ ಅಮೆರಿಕ ಹೇಳಿದೆ. ಆದರೆ, ಹೀಗೆ ಹೇಳುವ ಮೂಲಕ ಅದು ಮೋಸ ಮಾಡುತ್ತಿದೆ!
ಅಮೆರಿಕ ತನ್ನ ಯಾವ ಕಾಯ್ದೆಯ ಯಾವ ಸೆಕ್ಷನ್ನಿನ ನೆಪ ಮುಂದೆ ಮಾಡಿದೆಯೋ ಆ ಸೆಕ್ಷನ್ನು ನಿಜವಾಗಿಯೂ ಏನು ಹೇಳುತ್ತದೆ ಗೊತ್ತೆ ?
`... ಯಾವುದೇ ವಿದೇಶಿಗ, ತಾನು ಸರ್ಕಾರಿ ಹುದ್ದೆಯಲ್ಲಿದ್ದಾಗ, ಕಳೆದ ಇಪ್ಪತ್ನಾಲ್ಕು ತಿಂಗಳ ಅವಯಲ್ಲಿ, ನೇರವಾಗಿ ಅಥವಾ ಪರೋಕ್ಷ ವಾಗಿ, ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘಿಸುವಂಥ ಗಲಭೆಗಳಿಗೆ ಕಾರಣವಾಗಿದ್ದರೆ, ೧೯೯೮ರ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ- ಸೆಕ್ಷನ್ ಮೂರರ ಪ್ರಕಾರ, ಆತನಿಗೂ ಆತನ ಕುಟುಂಬಕ್ಕೂ ವೀಸಾ ಕೊಡುವಂತಿಲ್ಲ' ಅಂತಿದೆ. ಅಂದರೆ, ಅಮೆರಿಕ ಅರ್ಧ ಸತ್ಯವನ್ನು ಮಾತ್ರ ಹೇಳುತ್ತಿದೆ!
ಒಂದು ವೇಳೆ ಅಮೆರಿಕ ಹೇಳುವಂತೆ ಗುಜರಾತ್‌ನ ಹತ್ಯಾಕಾಂಡಕ್ಕೆ ನರೇಂದ್ರ ಮೋದಿಯೇ ಹೊಣೆ ಅಂತಿಟ್ಟುಕೊಂಡರೂ, ಅದು ಘಟಿಸಿದ್ದು ೨೦೦೨ರ ಫೆಬ್ರವರಿ ಕೊನೆ ಮತ್ತು ಮಾರ್ಚ್ ಮೊದಲ ವಾರದೊಳಗೆ. ಅಂದರೆ, ಅದು ಎರಡು ವರ್ಷಕ್ಕಿಂತಲೂ ಇಪ್ಪತ್ನಾಲ್ಕು ತಿಂಗಳುಗಳಿ ಗಿಂತಲೂ-ಹಳೆಯದು! ಹಾಗಿದ್ದ ಮೇಲೆ, ಕಾನೂನಿನ ಪ್ರಕಾರ, ಮೋದಿಗೆ ವೀಸಾ ಕೊಡಲು ಅಮೆರಿಕ ಉದ್ಧರಿಸಿದ ಕಾಯ್ದೆಗಳು-ಸೆಕ್ಷನ್‌ಗಳು ಅಡಿಯಾಗುವುದೇ ಇಲ್ಲ.
ಹೋಗಲಿ, ಮೋದಿ ವಿರುದ್ಧ ಅಮೆರಿಕ ಮಾಡಿರುವ ಆರೋಪಗಳು ಭಾರತದ ಕೋರ್ಟುಗಳಲ್ಲಿ ಸಾಬೀತಾದರೂ ಆಗಿವೆಯಾ, ಯಾವು ದಾದರೊಂದು ಕೋರ್ಟಾದರೂ ಮೋದಿಗೆ ಶಿಕ್ಷೆ ಘೋಷಿಸಿದೆಯಾ ಅಂದರೆ ಅದೂ ಇಲ್ಲ. ಸರ್ಕಾರ ನೇಮಿಸಿದ ನಾನಾವತಿ-ಶಾ ಕಮಿಷನ್ ಇನ್ನೂ ತನ್ನ ವರದಿ ಕೊಡಬೇಕಿವೆ. ವಿಚಾರಣೆ ನಡೆಯಬೇಕಿದೆ ಆದರೆ, ಈ ಬಗ್ಗೆ ತಲೆಕೆಡಸಿಕೊಳ್ಳದ ಅಮೆರಿಕ, ಗುಜರಾತ್ ಗಲಭೆಯ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೊಟ್ಟ ವರದಿಯನ್ನೂ, ಕೆಲವು ಎನ್‌ಜಿಓಗಳು ನೀಡಿದ ದೂರನ್ನೂ, ಸೆಕ್ರೆಟರಿ ಆಫ್ ಸ್ಟೇಟ್ ಕೊಂಡ ಲೀಜಾ ರೈಸ್‌ಗೆ ಅಮೆರಿಕದ ಸಂಸದ ಜೋ ಪಿಟ್ಸ್ ಬರೆದ ಪತ್ರವನ್ನೂ ಆಧರಿಸಿ ಮೋದಿಗೆ- ಇಂಡಿಯಾಕ್ಕೆ ಮಂಗಳಾರತಿಯೆತ್ತಿಬಿಟ್ಟಿದೆ. ಇಲ್ಲಿ ನಾವು ಗಮನಿಸಬೇಕಾದ್ದು, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ವರದಿಗೆ ಕಾನೂನಿನ ಚೌಕಟ್ಟಾಗಲಿ-ಬಂಧ ವಾಗಲಿ ಇಲ್ಲ ಅನ್ನುವುದ ನ್ನ. ಆ ಆಯೋಗದ ಎಲ್ಲ ವರದಿಗಳನ್ನೂ ಅಮೆರಿಕ ಗಂಭೀರವಾಗೇ ತೆಗೆದುಕೊಳ್ಳುವುದಾದರೆ, ಕಾಶ್ಮೀರದಲ್ಲಿನ ಮಾನವ ಹಕ್ಕು ಉಲ್ಲಂಘನೆ ಗಳಿಗೆ ಪಾಕಿಸ್ತಾನವನ್ನೇ ಹೊಣೆಯಾಗಿಸಿ ಅದು ಕೊಟ್ಟಿರುವ ವರದಿಯನ್ನೂ ಗಂಭೀರವಾಗಿ ಪರಿಗಣಿಸಬೇಕು, ಮತ್ತು ಪರ್ವೇಜ್ ಮುಷರ್ರಫ್‌ಗೂ ವೀಸಾ ನಿರಾಕರಿಸಬೇಕು!
ಮೋದಿ ವಿರುದ್ಧ ಅಮೆರಿಕಾದಲ್ಲಿ ಲಾಬಿ ನಡೆಸಿರುವ ಇಂಡಿಯನ್ ಅಮೆರಿಕನ್ನರು, ಮೋದಿ ಒಬ್ಬ ಹಿಟ್ಲರ್‌ಪ್ರೇಮಿ ಅಂತ ದೂರಿ, ಅದಕ್ಕೆ ಸಾಕ್ಷಿಯಾಗಿ ಗುಜರಾತ್‌ನ ಕೆಲವು ಶಾಲಾ ಪಠ್ಯಗಳ ಸಾಲುಗಳನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಅವರು ಹೋಮ್‌ವರ್ಕ್ ಸರಿಯಾಗಿ ಮಾಡಿಲ್ಲ! ಆ ಪುಸ್ತಕಗಳು ಪ್ರಕಟವಾಗಿದ್ದು ೧೯೮೬ರಿಂದ ೧೯೯೨ರ ನಡುವಿನ ಅವಯಲ್ಲಿ ; ಆಗ ಮೋದಿ ಅಕಾರದಲ್ಲಿರಲೇ ಇಲ್ಲ ! ಸ್ವಲ್ಪ ಕೇರ್‌ಫುಲ್ ಆಗಿ ಹುಡುಕಿದ್ದರೆ, ಅವರಿಗೆ ಮೋದಿ ಬಗ್ಗೆ ಇದಕ್ಕಿಂತಲೂ ಭಯಂಕರವಾದ facts and figures ಸಿಗುತ್ತಿದ್ದವೇನೋ. ಆದರೆ, ಅವಮಾನಿಸುವ ಭರದಲ್ಲಿ ಅವಸರಕ್ಕೆ ಬಿದ್ದು ಬಿಟ್ಟರು.
ಅಮೆರಿಕಕ್ಕೆ ನಿಜಕ್ಕೂ ಗುಜರಾತ್ ನರಮೇಧದಿಂದ ಆಗಬೇಕಾದ್ದು ಏನೂ ಇಲ್ಲ. ಮುಸ್ಲಿಮರ ಬಗ್ಗೆ ಆ ದೇಶಕ್ಕೆ ಎಂಥಾ ಕಾಳಜಿ ಇದೆ ಅನ್ನುವುದನ್ನು ನಾವು ಇರಾಕ್‌ನ ಅಬು ಫರೇಬ್‌ನಿಂದ ನೇರವಾಗಿ ಹರಿದು ಬಂದ ಟೀವಿ ಚಿತ್ರಗಳಲ್ಲಿ ಕಂಡಿದ್ದೇವೆ. ಇರಾಕಿನ ಬೀದಿಗಳಲ್ಲಿ ಅಮೆರಿಕನ್ ಸೈನಿಕರು ನಡೆಸಿದ ಪ್ರಳಯೋನ್ಮಾದದ ನೃತ್ಯವನ್ನು ನೋಡಿದ್ದೇವೆ.
ಮೋದಿಯ ವಿಷಯದಲ್ಲಿ ಅಮೆರಿಕಕ್ಕೂ ಮತ್ತು ಅಲ್ಲಿನ ಸರ್ಕಾರವನ್ನು ನಿಯಂತ್ರಿಸುತ್ತಿರುವ ಕ್ರಿಶ್ಚಿಯನ್ ಮಿಷನರಿಗಳಿಗೂ ಇರಬಹುದಾದ ಒಂದು ಅತಿದೊಡ್ಡ ದೂರೆಂದರೆ ಆತನ ಮತಾಂತರ ನಿಷೇಧ ಕಾಯ್ದೆ!
ಬುಷ್ ಮೇಲೆ ಚರ್ಚುಗಳ ಪ್ರಭಾವ ಎಷ್ಟಿದೆ ಅನ್ನುವುದು ಇವತ್ತು ರಹಸ್ಯವಾಗೇನೂ ಉಳಿದಿಲ್ಲ. ಹಾಗಾಗಿ, ಮೋದಿಯ ಮತಾಂತರ ನಿಷೇಧ ಕಾಯ್ದೆಯೇ ಅಮೆರಿಕನ್ ಸರ್ಕಾರದ ಕೆಂಗಣ್ಣಿನ ಮೂಲ ಅನ್ನುವುದನ್ನು ಗುರುತಿಸುವುದಕ್ಕೆ ದಿವ್ಯದೃಷ್ಟಿ ಯೇನೂ ಬೇಡ.
ಆದರೆ, ಈ ಮತಾಂತರದ ಕಾಯ್ದೆಯೇನೂ ಮೋದಿ ಕಂಡುಹಿಡಿದಿದ್ದಲ್ಲ ಅನ್ನುವುದು ಅಮೆರಿಕನ್ನರಿಗೆ ಗೊತ್ತಿರಬೇಕಿತ್ತು. ಕ್ರಿಶ್ಚಿಯನ್ನು ಬಡ ಜನರಿಗೆ ಆಮಿಷ ತೋರಿಸಿ ಅವರನ್ನು ತಮ್ಮ ಧರ್ಮಕ್ಕೆಳೆದು ಕೊಳ್ಳುತ್ತಿದ್ದರ ಬಗ್ಗೆ ಜಸ್ಟಿಸ್ ನಿಯೋಗಿ ಕಮಿಷನ್ ನೀಡಿದ ವರದಿಯಾಧಾರದ ಮೇಲೆ, ೧೯೬೦-೭೦ರ ದಶಕದಲ್ಲೇ ಮಧ್ಯಪ್ರದೇಶ ಒರಿಸ್ಸಾ ಹಾಗೂ ಅರುಣಾಚಲ ಪ್ರದೇಶ ಸರ್ಕಾರಗಳು ಮತಾಂತರ ನಿಷೇಧವನ್ನು ಜಾರಿಗೆ ತಂದಿದ್ದವು. ಅಂಥದ್ದೊಂದು ಕ್ರಮಕ್ಕೆ ಪ್ರೋತ್ಸಾಹ ಕೊಟ್ಟಿದ್ದು, ಶ್ರೀಮತಿ ಇಂದಿರಾಗಾಂ!
ಬುಷ್‌ಗೆ ಇದು ಗೊತ್ತಿಲ್ಲ. ಭಾರತೀಯರ ದೇಶ ಪ್ರೇಮದ ತೀವ್ರತೆಯೂ ಅವನಿಗೆ ಗೊತ್ತಿಲ್ಲ. ಅದನ್ನು ಗೊತ್ತು ಪಡಿಸಬೇಕು. ಯಾವುದೋ ಎನ್‌ಜಿಓಗಳ-ಆಯೋಗಗಳ ವರದಿಯನ್ನಾಧರಿಸಿ ಅವನು ನಮಗೆ ಅವಮಾನ ಮಾಡಬಲ್ಲನಾದರೆ, ಅದೇ ತಂತ್ರದ ಮೇಲೆ ನಮ್ಮವರು ಅವನ ಸರ್ಕಾರದ ಅಕಾರಿಗಳಿಗೆ ವೀಸಾ ನಿರಾಕರಿಸಲಾರರೆ? ಅಮೆರಿಕ ಸರ್ಕಾರದ ವಿರುದ್ಧ ಅಂಥ ಸಾವಿರಾರು ವರದಿಗಳು ಬಂದಿವೆ. ಮನ್ ಮೋಹನ್‌ಸಿಂಗ್ ಸ್ವಲ್ಪ ಧಾರ್ಷ್ಟ್ಯ ತೋರಿಸಬೇಕು, ಅಷ್ಟೆ.
ಕಪಾಳಕ್ಕೆ ಹೊಡೆಯದ ಹೊರತು, ದೊಡ್ಡಣ್ಣನಿಗೆ ತನ್ನ ತಮ್ಮಂದಿರು ತನ್ನೆರಕ್ಕೆ ಬೆಳೆದು ನಿಂತಿದ್ದಾರೆ ಅನ್ನುವುದು ಗೊತ್ತಾಗುವುದಿಲ್ಲ.
ಅಂಥದೊಂದು ಫತ್ವಾ ಹೊರಟರೂ ಸುಮ್ಮನೇ ಇದೆ ಬುದ್ಧಿಜೀವಿ!
ರವಿ ಬೆಳಗೆರೆ
ಅಯೋಧ್ಯೆಯಲ್ಲಿ ಮತ್ತೆ ರಕ್ತ ಹರಿದಿದೆ. ಯಥಾಪ್ರಕಾರ ಬಿಜೆಪಿಗಳು ಕೈಯಲ್ಲಿ ದಂಡ ಹಿಡಿದುಕೊಂಡು ದೇಶವನ್ನು ಬಂದ್ ಮಾಡಿಸಲು ಹೊರಟುಬಿಟ್ಟಿದ್ದಾರೆ. ಬಂದ್ ಯಾತಕ್ಕೆ ಅನ್ನುವುದು ಯಾರಿಗೂ ಗೊತ್ತಿಲ್ಲ. ನಮ್ಮ ಗಂಡೆದೆಯ ಸಿಆರ್‌ಪಿಎಫ್ ಯೋಧರು ಉಗ್ರರನ್ನು ಗುಂಡಿಕ್ಕಿ ನೆಲಕ್ಕುರುಳಿಸಿದ್ದು ಬಂದ್ ಮಾಡಿ ಪ್ರತಿಭಟಿಸಬೇಕಾದ ವಿಷಯವಾ? ಅವರ ಸಾಹಸ ಮೆಚ್ಚಿ ಎದೆಯುಬ್ಬಿಸಿ ರಸ್ತೆಯಲ್ಲಿ ನಡೆಯುವ ಬದಲು ಬಾಗಿಲು ಹಾಕಿಕೊಂಡು ಮನೆಯಲ್ಲೇ ಇರಿ ಅನ್ನುವಂತೆ ಆಡಿಬಿಟ್ಟಿತು ಬಿಜೆಪಿ.
ಪ್ರತಿಯೊಂದಕ್ಕೂ ರಾಜಕೀಯದ ಲೇಪನ ಮಾಡಿದರೆ ಆಗುವುದೇ ಹೀಗೆ. ಆಯೋಧ್ಯೆಯೂ ಸೇರಿದಂತೆ ಇವತ್ತಿನ ಈ ದೇಶದ ಸಮಸ್ತ ಪಾಪಗಳಿಗೂ ಮೂಲ ಕಾರಣವೇ ಇಂಥ ಕರ್ಮಠ ಕೈಗೆ ಅಕಾರ ಸಿಕ್ಕರೆ ಏನಾಗುತ್ತದೆ ಅನ್ನುವುದನ್ನು ಈ ದೇಶ ಸಾವಿರಾರು ವರ್ಷಗಳಿಂದಲೂ ನೋಡುತ್ತಲೇ ಬಂದಿದೆ, ಅನುಭವಿಸುತ್ತಲೇ ಬಂದಿದೆ. ವಿಧವೆಯರ ಕೇಶಮಂಡನವಾಗಬೇಕು ಅನ್ನುವ ಕಟ್ಟಳೆ ಬಂದಿದ್ದು, ವಿಧವಾ ವಿವಾಹ ನಿಷಿದ್ಧವಾಗಿದ್ದು, ಸತಿಪದ್ಧತಿ ಹುಟ್ಟಿದ್ದು, ಎಲ್ಲಕ್ಕೂ ಕಾರಣ ಧರ್ಮದ ಕರ್ಮಠ ವ್ಯಾಖ್ಯಾನಗಳೇ. ದಾಸಯ್ಯ ಹಾಡಿದ್ದೇ ಹಾಡು ಅನ್ನುವ ಹಾಗೆ ಕರ್ಮಠರು ಹೇಳಿದ್ದೇ ಧರ್ಮವಾಯಿತು. ಭಗವದ್ಗೀತೆಯನ್ನೂ-ವೇದಗಳನ್ನೂ,ಬೈಬಲ್-ಕುರಾನ್‌ಗಳನ್ನೂ ಪಾಮರರು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದೇ ಇಂಥವರ ಸೃಷ್ಟಿಗೆ ಕಾರಣವಾಯಿತು. ನಮ್ಮ ಅಜ್ಞಾನವನ್ನು ಕರ್ಮಠರು ಅತ್ಯಂತ ವ್ಯವಸ್ಥಿತವಾಗೇ ಬಳಸಿಕೊಂಡರು.
ಈಗ, ಉತ್ತರಪ್ರದೇಶದಿಂದ ಇನ್ನೊಂದು ಕರ್ಮಠ ಅನರ್ಥದ ವರದಿ ಬಂದಿದೆ. ಆ ರಾಜ್ಯದ ಮುಜಫರ್‌ನಗರದ ಹತ್ತಿರವಿರುವ ದೇವ್‌ಬಂದ್ ಅನ್ನುವ ಊರನ್ನು ನೋಡಿದರೆ, ತಾಲಿಬಾನ್ ಆಡಳಿತವಿದ್ದ ಅಫಘಾನಿಸ್ತಾನವನ್ನು ನೋಡುವುದೇ ಬೇಡ! ಅಲ್ಲೊಂದು ಮುಸ್ಲಿಂ ಪಂಚಾಯ್ತಿಯಿದೆ. ತಾಲಿಬಾನ್‌ನಿಂದಲೇ ನೇರವಾಗಿ ಬಂದವರಂತಿದ್ದಾರೆ ಪಂಚಾಯ್ತಿದಾರರು. ಅವರೀಗ, ಇಮ್ರಾನಾ ಅನ್ನುವ ಹೆಣ್ಣುಮಗಳಿಗೆ ಅವಳ ಸ್ವಂತ ಮಾವನ ಜೊತೆ ಮದುವೆ ಮಾಡಿಸಲು ಹೊರಟುಬಿಟ್ಟಿದ್ದಾರೆ. ಈ ಮಾವ ಅನ್ನಿಸಿಕೊಂಡ ಮನುಷ್ಯ ಅವಳ ಮೇಲೆ ಅತ್ಯಾಚಾರವೆಸಗಿದ್ದ! ಪೊಲೀಸರು ಅವನನ್ನು ಬಂಸಿ ಎಳೆದೊಯ್ದು ಲಾಕಪ್ಪಿಗೆ ತಳ್ಳಿದರು.
ಆಮೇಲೆ ಆದ್ಯಾರು ಕರೆದರೋ ಏನೋ ಈ ಪಂಚಾಯ್ತಿದಾರರನ್ನ; ಅವರು ಖುದ್ದಾಗಿ ತಾವೇ ಇಮ್ರಾನಾಳ ಮನೆಗೆ ಬಂದು, ಪಂಚಾಯ್ತಿ ನಡೆಸಿ, ಅವಳು ತನ್ನ `ಗಂಡನನ್ನು ಮತ್ತು ಐದು ಜನ ಮಕ್ಕಳನ್ನು ಬಿಟ್ಟು ತನ್ನ ಮಾವನನ್ನೇ ಮದುವೆಯಾಗಬೇಕು, ಗಂಡನನ್ನು ಇನ್ನು ಮುಂದೆ `ಮಗ' ನಂತೆ ಕಾಣಬೇಕು ಅನ್ನುವ ಒಂದು ಅನಾಹುತಕಾರೀ ತೀರ್ಪು ಕೊಟ್ಟುಬಿಟ್ಟರು. ಸಾಲದೆಂಬಂತೆ, ಈ ಮಾವನೆಂಬ ಮಹಾಶಯನ ಪತ್ನಿಯಾಗುವ ಅರ್ಹತೆ ಪಡೆಯುವುದಕ್ಕಾಗಿ ಅವಳು ಏಳು ತಿಂಗಳ ಕಾಲ ಏಕಾಂತವಾಸ ಮಾಡಿ `ಪವಿತ್ರ'ಗೊಳ್ಳಬೇಕು ಅಂತಲೂ ಆಣತಿ ಮಾಡಿದರು. ಆದರೆ, ಮಾವನನ್ನು ಶಿಕ್ಷೆಸುವ ಬಗ್ಗೆ ಮಾತೇ ಆಡಲಿಲ್ಲ!
ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಇಲ್ಲೊಂದು ಜಾತ್ಯತೀತ ವ್ಯವಸ್ಥೆಯಿದೆ. ಹೀಗಿರುವಾಗ, ಜವಾಬ್ದಾರಿಯಿರುವ ಯಾವುದೇ ನಾಯಕನಾದರೂ ಪಾಪದ ಇಮ್ರಾನಳ ಸಹಾಯಕ್ಕೆ ಧಾವಿಸಬೇಕಿತ್ತು. ಆದರೆ ಆ ರಾಜಕಾರಣಿಗಳಿಗೆ ತಮ್ಮ ವೋಟ್‌ಬ್ಯಾಂಕಿನ ಕರ್ಮಠ ತನವಿರುತ್ತದಲ್ಲಾ! ಅದಕ್ಕೇ, ಮುಲಾಯಂ ಸಿಂಗ್ ಅನ್ನುವ ಆ ರಾಜ್ಯದ ಮುಖ್ಯಮಂತ್ರಿ, `...ತುಂಬಾ ಯೋಚಿಸಿದ ಮೇಲೆ ಇಂಥದ್ದೊಂದು ತೀರ್ಪನ್ನ ಪಂಚಾಯ್ತಿ ಕೊಟ್ಟಿರಬೇಕು' ಅಂತ ಹೇಳಿ ಕೈತೊಳೆದುಕೊಂಡು ಬಿಟ್ಟರು! ಕಾಂಗ್ರೆಸ್ ಎಂಬ ಎಡಬಿಡಂಗಿ ಪಕ್ಷದ ವಕ್ತಾರ ಸಲ್ಮಾನ್ ಖುರ್ಷಿದ್, ವೈಯಕ್ತಿಕ ಕಾನೂನನ್ನು ಮಾನ್ಯ ಮಾಡುವ ಈ ದೇಶದ ಕಾನೂನನ್ನು ನಾವು ಮಾನ್ಯ ಮಾಡಲೇಬೇಕು.' ಅನ್ನುವ ಒಂದು ಪರಮ ಎಡವಟ್ಟು ಹೇಳಿಕೆ ಕೊಟ್ಟರು.
ವೈಯಕ್ತಿಕ ಕಾನೂನುಗಳನ್ನು ಮಾನ್ಯ ಮಾಡಬಾರದೆಂದು ಯಾರೂ ಹೇಳುತ್ತಿಲ್ಲ. ಆದರೆ, ಎಲ್ಲ ಕಾನೂನಿಗೂ ಒಂದು ಮಾನವೀಯ ಮುಖ ಇರಬೇಕಲ್ಲವೆ? ಅಮಾನವೀಯ ತೀರ್ಪೊಂದು ಮುಖಕ್ಕೇ ರಾಚುತ್ತಿದ್ದರೂ, ಅದಕ್ಕೂ-ತನಗೂ ಸಂಬಂಧವಿಲ್ಲದಂತೆ ಮುಖ ತಿರುಗಿಸಿಕೊಳ್ಳುವುದು ಪಾಷಂಡಿತನ. ನಿಜವಾದ ಸಾಮಾಜಿಕ ಕಾಳಜಿಗಿಂತ ರಾಜಕೀಯವೇ ಮುಖ್ಯಅನ್ನುವಂತಾಗಿಬಿಟ್ಟರೆ ನಮ್ಮ ನಾಯಕರುಗಳು ಏನಾಗುತ್ತಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ ಸಾಕು.
ದೇವ್‌ಬಂದ್ ಪಂಚಾಯ್ತಿಯ ತೀರ್ಪನ್ನು ಅನೇಕ ಮುಸ್ಲಿಂ ಸಂಘಟನೆಗಳೇ ಒಪ್ಪಿಕೊಂಡಿಲ್ಲ. ಮದೀನಾ ಯೂನಿವರ್ಸಿಟಿಯ ವೈಸ್‌ಛಾನ್ಸಲರ್ ಪ್ರೊ.ಅಬ್ದುಲ್‌ಕರೀಮ್ ಮದಾನಿಯವರು, ಇಂಥದ್ದೊಂದು ಅರ್ಥಹೀನ ತೀರ್ಪಿಗೆ ಇಸ್ಲಾಂನಲ್ಲಿ ಅವಕಾಶವೇ ಇಲ್ಲ ಅಂದಿದ್ದಾರೆ. ಇಂಥ ಕಾನೂನು ಮುಂದುವರೆದರೆ, ಮುಂದೆ ತನ್ನ ಸೊಸೆಯ ಮೇಲೆ ಕಣ್ಣು ಹಾಕಿದ ಯಾವ ಮಾವ ಬೇಕಿದ್ದರೂ ಅವಳ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ತನ್ನವಳಾಗಿಸಿಕೊಂಡು ಬಿಡಬಹುದಾದ ಅಪಾಯವಿದೆ ಅಂತ ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷೆ ಖೈಸ್ತಾ ಅಂಬರ್ ಹೇಳಿದ್ದಾರೆ. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಕಾನೂನು ಸಲಹೆಗಾರ ಜಫರ್‍ಯಾಬ್ ಜಿಲಾನಿ ಅವರೂ ಕೂಡ, ಆ ಮಂಡಳಿಯು ದೇವ್‌ಬಂದ್‌ನ ಫತ್ವಾವನ್ನು ಬೆಂಬಲಿಸಿರುವುದನ್ನೂ ಲೆಕ್ಕಿಸದೆ,`ಯಾರೂ ಯಾಕೆ ರೇಪ್ ಮಾಡಿದ ಪಾಪಿಯನ್ನು ಶಿಕ್ಷಿಸುವ ಬಗ್ಗೆ ಮಾತಾಡುತ್ತಿಲ್ಲ?' ಅಂತ ಕೇಳಿದ್ದಾರೆ.
ಇಷ್ಟಾದರೂ, ಕರ್ಮಠ ಮುಸ್ಲಿಂ ಸಂಘಟನೆಗಳು ಮತ್ತು ದೇವ್‌ಬಂದ್‌ನ ಮುಸ್ಲಿಂ ಪಂಚಾಯ್ತಿದಾರರು ಮಾತ್ರ, ಇಮ್ರಾನಾಳ ಮೇಲೆ ಆತ್ಯಾಚಾರ ನಡೆಸಿದ್ದು ಅವಳ ಮಾವ ಅಲ್ಲದೆ ಬೇರ್‍ಯಾರಾದರೂ ಆಗಿದ್ದಿದ್ದರೆ ಅವಳು ತನ್ನ ಗಂಡನ ಜೊತೆಯೇ ಬದುಕು ನಡೆಸಬಹುದಿತ್ತು. ಆದರೀಗ ಅವಳು ತನ್ನ ಮದುವೆ ಮುರಿದುಕೊಳ್ಳಲೇಬೇಕು'ಅಂತ ಸಾಸುತ್ತಿದ್ದಾರೆ. ಅಪರಾಯನ್ನು ರಕ್ಷಿಸಿ, ರಕ್ಷಿಸಬೇಕಾದವಳನ್ನು ಶಿಕ್ಷಿಸಲು ಟೊಂಕಕಟ್ಟಿ ನಿಂತು ಬಿಟ್ಟಿದ್ದಾರೆ.
ನಾಡಿನ ಬುದ್ಧಿಜೀವಿಗಳೂ ನಾಯಕ ಶಿಖಾಮಣಿಗಳೂ ಮುಖಕ್ಕೆ ಕೂಲಿಂಗ್ ಗ್ಲಾಸ್ ಏರಿಸಿಕೊಂಡು ತಣ್ಣಗೆ ಕೂತುಬಿಟ್ಟಿದ್ದಾರೆ. ಇಂಥ ಫತ್ವಾ ಮತ್ತು ಬುದ್ಧಿಜೀವಿಗಳ ಇಂಥ ಜಾಣ ಮೌನ ಹೊಸದೇನಲ್ಲ. ಸ್ವಲ್ಪ ದಿನಗಳ ಹಿಂದೆ, ಇನ್ನೊಬ್ಬ ಮುಸ್ಲಿಂ ಹೆಣ್ಣು ಮಗಳಿಗೂ ಇಂಥದ್ದೇ ವಿಚಿತ್ರ ತೀರ್ಪು ಸಿಕ್ಕಿತ್ತು. ಮದುವೆಯಾದ ತಕ್ಷಣ ಅವಳನ್ನು ಹಳ್ಳಿಯಲ್ಲೇ ಬಿಟ್ಟು ಸೇನೆಯ ಕೆಲಸಕ್ಕೆಂದು ಹೋದ ಅವಳ ಗಂಡ, ಆಮೇಲೆ ಸೇನೆಯಿಂದಲೇ ಕಣ್ಮರೆಯಾಗಿ ಬಿಟ್ಟಿದ್ದ. ಅವನು ಯುದ್ಧದಲ್ಲಿ ತೀರಿಕೊಂಡಿರಬಹುದು ಅಂತಲೇ ಎಲ್ಲರೂ ಭಾವಿಸಿದ್ದರು. ಒಂದಷ್ಟು ದಿನ ಕಾದು, ಇನ್ನವನು ಬರುವ ಸಾಧ್ಯತೆಗಳಿಲ್ಲ ಅನ್ನಿಸಿದ ಮೇಲೆ ಅವಳ ಹಿರಿಯರು ಅವಳಿಗೆ ಇನ್ನೊಂದು ಮದುವೆ ಮಾಡಿದರು. ಅವಳು ಗರ್ಭವತಿಯೂ ಆದಳು. ಆಗ ಪ್ರತ್ಯಕ್ಷನಾಗಿಬಿಟ್ಟನಲ್ಲ ಅವಳ ಮೊದಲ ಗಂಡ! ಅವನು ಪಾಕಿಸ್ತಾನದ ಜೈಲಿನಲ್ಲಿದ್ದನಂತೆ.
ಬಿಡುಗಡೆಗೊಂಡವನೇ ನೇರವಾಗಿ ಹಳ್ಳಿಗೆ ಬಂದು, ತನ್ನ ಹೆಂಡತಿಯ ಮೇಲೆ ಹಕ್ಕು ಸಾಸಲು ಹೊರಟು ಬಿಟ್ಟ. ಪಂಚಾಯ್ತಿ ಸೇರಿತು. ಅವಳು ತನ್ನ ಎರಡನೇ ಮದುವೆ ಮುರಿದುಕೊಂಡು ಮೊದಲ ಗಂಡನ ಜೊತೆಯೇ ಬಾಳ್ವೆ ನಡೆಸಬೇಕು ಅನ್ನುವ ತೀರ್ಪು ಹೊರಬಿತ್ತು. ಆಗ ಸೇನೆಯ ಆಸಾಮಿ ಹೊಸ ತಕರಾರು ತೆಗೆದ; ತಾನು ಅವಳ ಮಗುವನ್ನು ಸ್ವೀಕರಿಸಲಾರೆ ಅಂದ. ಆಗ ಪಂಚಾಯ್ತಿದಾರರು ತೀರ್ಪನ್ನು ಸ್ವಲ್ಪ ಬದಲಿಸಿದರು; ಅವಳು ತನ್ನ ಮಗುವನ್ನು ಹೆತ್ತು ಎರಡನೇ ಗಂಡನಿಗೆ ಕೊಟ್ಟು, ಆಮೇಲೆ ಮೊದಲ ಗಂಡನ ಜೊತೆ ಸಂಸಾರ ಮಾಡತಕ್ಕದ್ದು ಅಂದುಬಿಟ್ಟರು!
ಹೆಣ್ಣು ಅನ್ನುವ ಮನಸ್ಸು ಇಲ್ಲೊಂದು commodityಯಾಗಿ ಹೋಗಿತ್ತು. ಈ ದೇಶದ ಕಾನೂನಾಗಲೀ ಬುದ್ಧಿಜೀವಿಯಾಗಲೀ, `ಪುರೋಗಾಮಿ'ಚಿಂತನೆಯ ಸಂಘಟನೆಗಳಾಗಲೀ ಆಗಲೂ ಚಕಾರವೆತ್ತಿರಲಿಲ್ಲ. ಈಗಲೂ ಬಾಯಿಬಿಟ್ಟಿಲ್ಲ.
ಇದೂ ಒಂದು ರೀತಿಯ ಕರ್ಮಠತನವೇ; ಶತಾಯಗತಾಯ ತಮ್ಮ ಹಿತವನ್ನಷ್ಟೇ ಕಾಯ್ದುಕೊಳ್ಳುವ selective ಮಡಿವಂತಿಕೆಯಿದು.
ಕರ್ಮಠತನವೆನ್ನುವುದು ಧರ್ಮಕ್ಕೆ ಸಂಬಂಧಪಟ್ಟ ವಿಷಯವಲ್ಲ; ಅದು ಮನಸ್ಸಿಗೆ ಸಂಬಂಧಪಟ್ಟಿದ್ದು. ಒಂದಿಡೀ ಧರ್ಮದ ಎಲ್ಲರೂ ಮೂಲಭೂತವಾದಿಗಳಾಗಿರುವುದಿಲ್ಲ. ಆದರೆ, ಅವರು ತಮ್ಮ ತನವನ್ನು assert ಮಾಡಿಕೊಳ್ಳುವವರೂ ಆಗಿರುವುದಿಲ್ಲ. ಹಾಗಾಗೇ, ಅವರ ದನಿಯನ್ನು ಕರ್ಮಠರು ಬಹಳ ಸುಲಭವಾಗಿ ಮುಳುಗಿಸಿಬಿಡುತ್ತಾರೆ. ತಾವು ಹೇಳಿದ್ದೇ ತಮ್ಮ ಧರ್ಮದ ಸಾರ ಅನ್ನುವಂತೆ ಜಗತ್ತು ನಂಬುವ ಹಾಗೆ ಮಾಡುತ್ತಾರೆ. ಮುಸ್ಲಿ ವೈಯಕ್ತಿಕ ಕಾನೂನು ಮಂಡಳಿಗಳೂ ಭಜರಂಗಿಗಳೂ ತಾವೇ ತಮ್ಮ ಧರ್ಮದ ಅಕೃತ ಮುಖಗಳು ಅನ್ನುವಂತಾಡುತ್ತಾರೆ. ಅರ್ಥಹೀನ ಫತ್ವಾಗಳೂ ತಿಳಿಗೇಡಿ ಬಂದ್‌ಗಳೂ, ಬಂದ್ ಹೆಸರಿನಲ್ಲಿ ಧರ್ಮದಹನಗಳೂ ಸಂಭವಿಸುತ್ತವೆ.
ಇವತ್ತು ಅಯೋಧ್ಯೆ ಅನ್ನುವುದು ಒಂದು ರಕ್ತ ಸಿಕ್ತ ಸಮಸ್ಯೆಯಾಗಿರುವುದೂ ಇಂಥ ಕರ್ಮಠತನದಿಂದಲೇ, ರಾಜಕಾರಣಿಗಳ ಪಾಖಂಡಿತನದಿಂದಲೇ. ಯಾವತ್ತೋ ಬಗೆಹರಿದುಹೋಗಬಹುದಾಗಿದ್ದ-ಅಥವಾ, ಸಮಸ್ಯೆ ಅನ್ನುವ ಸ್ವರೂಪವನ್ನೇ ಪಡೆಯದೆ ನಿರುಮ್ಮಳವಾಗಿ ಇದ್ದು ಬಿಡಬಹುದಾಗಿದ್ದ- ವಿಷಯ ಇವತ್ತು ವ್ರಣವಾಗಿದೆ. ಮೊನ್ನೆ ನಡೆದ ಉಗ್ರಗಾಮಿಗಳ ದಾಳಿ ಅಯೋಧ್ಯೆಯ ಮಟ್ಟಿಗೆ ಇದು ಮೊದಲನೆಯದಿರಬಹುದು. ಆದರೆ, ಇದೇ ಕೊನೆಯದಂತೂ ಖಂಡಿತ ಇರಲಾರದು. ದೇವಸ್ಥಾನಗಳು-ಮಸೀದಿಗಳೇ ಕರ್ಮಠರ ಸಾಫ್ಟ್‌ಟಾರ್ಗೆಟ್‌ಗಳಾಗಿದ್ದರಿಂದ ಇಂಥ ದಾಳಿಗಳು ಇನ್ನು ಮುಂದೆ ಎಲ್ಲೆಡೆಯೂ ನಡೆಯಬಹುದು. ಇಂಡಿಯಾ-ಪಾಕಿಸ್ತಾನಗಳ ಸಮಸ್ತ ಗಡಿ ಸಮಸ್ಯೆಗಳೂ ಬಗೆಹರಿದರೂ ಕೂಡ, ಈ ಧಾರ್ಮಿಕ ಯುದ್ಧಗಳು ಕೊನೆಯಾಗುತ್ತವೆ ಅನ್ನುವ ನಂಬಿಕೆಯೇನೂ ಇಲ್ಲ. ಯಾಕೆಂದರೆ, ಕರ್ಮಠ ತನವೆನ್ನುವುದು ದೇಶ-ದೇಶಗಳ ನಡುವೆ ಇರುವ ಗೋಡೆಯಲ್ಲ, ಹೊಡೆದುರುಳಿಸುವುದಕ್ಕೆ.
ಈ ಅನಾಹುತಗಳು ತಪ್ಪಬೇಕಿದ್ದರೆ, ಧಾರ್ಮಿಕ ಗ್ರಂಥಗಳನ್ನು ಅಪಭ್ರಂಶಗೊಳಿಸಿ interpret ಮಾಡುವವರ ಅನಾಹುತಕಾರೀ ಧೋರಣೆಗಳು ಬದಲಾಗಬೇಕು. ಧರ್ಮ ಇರುವುದು ಮನುಷ್ಯನ ಬದುಕನ್ನು ಉತ್ತಮ ಗೊಳಿಸುವುದಕ್ಕೇ ಹೊರತು, ಅಸಹನೀಯಗೊಳಿಸುವುದಕ್ಕಲ್ಲ ಅನ್ನುವುದನ್ನು ನಾವು ಅರ್ಥ ಮಾಡಿಕೊಂಡು ಬಿಟ್ಟರೂ ಸಾಕು. ಅನಾಹುತಕಾರಿ ಧರ್ಮ ವ್ಯಾಖ್ಯಾನಗಳನ್ನೂ- ವ್ಯಾಖ್ಯಾನಿಗಳನ್ನೂ ಮೂಲೆಗೆಸೆಯಬಹುದು.
ಯಾಕೆಂದರೆ, ಯಾವ ಧರ್ಮವೂ ಜೀವವಿರೋಯಲ್ಲ. ಧರ್ಮವನ್ನು ತಮ್ಮ ಸ್ವತ್ತು ಮಾಡಿಕೊಂಡವರು ಮಾತ್ರ ಜೀವವಿರೋಗಳು. ಎರಡರ ನಡುವಿನ ವ್ಯತ್ಯಾಸ ನಮಗೆ ಗೊತ್ತಿರಬೇಕು.
ನಮ್ಮ ವಿಚಾರವಾದಿಗಳ ಮುಂದೆ ಭಯೋತ್ಪಾದನೆಯ ಪ್ರಶ್ನೆಯಿಡುತ್ತಾ...
ರವಿ ಬೆಳಗೆರೆ
ಒಬ್ಬ ಮುಸಲ್ಮಾನ ಯಾಕೆ ಉಗ್ರವಾದಿಯಾಗುತ್ತಾನೆ?
ಅದು ನಂತರದ ಪ್ರಶ್ನೆ. ಒಬ್ಬ ಮುಸಲ್ಮಾನ ಹೇಗೆ ಉಗ್ರವಾದಿಯಾಗುತ್ತಾನೆ?ಎಂಬುದು ತಕ್ಷಣಕ್ಕೆ ಉತ್ತರ ಹುಡುಕ ಬೇಕಾಗಿರುವ ಪ್ರಶ್ನೆ.
ನಾನು ತುಂಬ ಆರ್ಡಿನರಿಯಾದ, ತುಂಬ ಸಜ್ಜನರಾದ, ಸಭ್ಯರಾದ, ಸ್ನೇಹಪರರೂ ಆದ ಬಳ್ಳಾರಿಯ ಬಡ ಮುಸಲ್ಮಾನರ ಗಲ್ಲಿಗಳಲ್ಲಿ ಆಡಿ ಬೆಳೆದವನು. ಇವತ್ತಿಗೂ ನನ್ನ ಸ್ನೇಹ ವಲಯದಲ್ಲಿ, ನನ್ನ ನೇತೃತ್ವದ ಸಂಸ್ಥೆಗಳಲ್ಲಿ ಅನೇಕ ಮುಸಲ್ಮಾನರಿದ್ದಾರೆ. ಅವರನ್ನು ಜಾತಿಯ ಕಾರಣಕ್ಕೆ ದ್ವೇಷಿಸುವುದು ನನ್ನಿಂದ ಸಾಧ್ಯವಾಗಿಲ್ಲ, ಈ ತನಕ. ಯಾರನ್ನೂ ಜಾತಿಯ ಕಾರಣಕ್ಕೆ ಪ್ರೀತಿಸುವುದು ಅಥವಾ ದ್ವೇಷಿಸುವುದು ನನಗೆ ಸಾಧ್ಯವಿಲ್ಲ. ಹಾಗೆ ಮಾಡುವವರು ನನ್ನ ದೃಷ್ಟಿಯಲ್ಲಿ ಬಾಲಿಶ ಅನ್ನಿಸುತ್ತಾರೆ. ನಮ್ಮ ಸೋಷಲಿಸ್ಟರು, ವಿಚಾರವಾದಿಗಳೆನ್ನಿಸಿಕೊಂಡವರು ಬ್ರಾಹ್ಮಣರ ವಿರುದ್ಧ ಹೂಂಕರಿಸಿ, ಬೈದು, ಅವಹೇಳನ ಮಾಡುತ್ತಿದ್ದರೆ ಅದು stupidity ಅನ್ನಿಸುತ್ತದೆ. ಹಾಗೇನೇ, ಮುಸಲ್ಮಾನರನ್ನು ಯಾರಾದರೂ ಖಂಡಿಸಿ, ಹೀಯಾಳಿಸಿ ಮಾತನಾಡುತ್ತಿದ್ದರೆ ಅದೂ ಮೂರ್ಖತನ ಅನ್ನಿಸುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ`ಮುಸ್ಲಿಮರು ಅಲ್ಪ ಸಂಖ್ಯಾತರು. ಅವರಲ್ಲಿ insecurity ಇರುವುದು ಸಹಜ. ಆದ್ದರಿಂದಲೇ ತಮ್ಮ ಧರ್ಮ, ಭಾಷೆ, ಮಸೀದಿಗಳ ವಿಷಯ ಬಂದಾಗ ಅವರು ವ್ಯಗ್ರಗೊಂಡು ದಂಗೆಯೇಳುತ್ತಾರೆ. ಅದು ಸಹಜ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು' ಅಂತ ಇವೇ ಸೋಷಲಿಸ್ಟ್ ಶಿಖಾಮಣಿಗಳು ಮಾತನಾಡಿದಾಗ ಇವರು ಬೌದ್ಧಿಕವಾಗಿ ಬೆಳೆದೇ ಇಲ್ಲ ಅನ್ನಿಸುತ್ತದೆ.
ನಾನು ಯಾವತ್ತೂ ರಾಜಕಾರಣಿಯ ಧಾಟಿಯಲ್ಲಿ ಬರೆದವನಲ್ಲ, ಮಾತನಾಡಿದವನಲ್ಲ. ಮನುಷ್ಯನ ಸಂಕಟ ನನಗೆ ಅರ್ಥವಾದಂತೆಯೇ ಅವನ ಸಣ್ಣತನ, ಧೂರ್ತತೆಗಳೂ ಅರ್ಥವಾಗುತ್ತವೆ. ಇವತ್ತು ಬೆಂಗಳೂರಿನ ಶಿವಾಜಿನಗರದ ಒಬ್ಬ ಹುಡುಗ, ಆಂಧ್ರದ ನಲ್ಗೊಂಡ ಜಿಲ್ಲೆಯ ಒಬ್ಬ ಯುವಕ, ಹೈದರಾಬಾದಿನ ಒಬ್ಬ ಗೃಹಸ್ಥ- ಭಯೋತ್ಪಾದಕರಾಗಿ ಪರಿವರ್ತಿತರಾಗಿ ದೇಶದ ಮೇಲೆ ಬಂದೂಕು ತಿರುವುತ್ತಾರೆಂದರೆ- ಅವರದು ಯಾವುದೇ ಜಾತಿಯಿರಲಿ, ಅವರು ಅಲ್ಪ ಸಂಖ್ಯಾತರೇ ಇರಲಿ, ಮಹಾನ್‌ಧಾರ್ಮಿಕರೇ ಇರಲಿ- ಇವರನ್ನು ಗೋಡೆಗೆ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಬೇಕು ಅಂತಲೇ ವಾದಿಸುತ್ತೇನೆ. ಹಾಗಂತ, ಈ ಮುಸಲ್ಮಾನರೆಲ್ಲಾ ಹೀಗೇ ಕಣ್ರೀ ಅನ್ನುವುದೂ ತಪ್ಪು.`ಮುಸಲ್ಮಾನರನ್ನು ಎಲ್ಲರೂ ಅನುಮಾನದಿಂದ ನೋಡುತ್ತಿದ್ದಾರೇ! ಅವರನ್ನು ರಕ್ಷಿಸಬೇಕೂ!' ಅಂತ ವಿಚಾರವಾದಿಗಳು ಬಾಯಿ ಬಡಿದುಕೊಳ್ಳುವುದೂ ತಪ್ಪೇ.
ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ shoot outನ ನಂತರ ಯಾವ ಶಿವಾಜಿನಗರದ ಮುಸ್ಲಿಮನೂ ಭೀತಗೊಂಡು, ತತ್ತರಿಸುತ್ತಾ, ಘಳಿಗೆಗೊಮ್ಮೆ ಹಿಂದಕ್ಕೂ ಮುಂದಕ್ಕೂ ನೋಡುತ್ತ ಓಡಾಡುತ್ತಿಲ್ಲ. ಆ ಕರ್ಮ ಬಂದಿರುವುದು, ಬೆಂಗಳೂರಿಗರಿಗೆ! ಮಸೀದಿ ಕೆಡವಿದ ಕೂಡಲೆ `ಹಿಂದೂಗಳು ಹೀಗೆ ಮಾಡಬಾರದಿತ್ತು' ಅಂತ ವಿಚಾರವಾದಿಗಳು ಹೇಳಿಕೆ ಕೊಟ್ಟರು. ದಸರೆಗೆ ದೀಪ ಹಚ್ಚಿದರೆ `ಇದು ಪುರೋಹಿತಶಾಹಿ ಮನಸ್ಸು' ಅಂತ ಬರಗೂರು ರಾಮಚಂದ್ರಪ್ಪನವರು ತಿಥಿ ಮಾಡಿಸೋ ಬ್ರಾಹ್ಮಣರಿಂದ ಹಿಡಿದು ಎಲ್ಲರನ್ನೂ ಬೈದರು. ಅಂಥ ಶ್ರೇಷ್ಠ ಸಂಸ್ಥೆಯಾದ IISc ಯೊಳಕ್ಕೆ ಎ.ಕೆ.೫೬ಹಿಡಿದುಕೊಂಡು ನುಗ್ಗಿ ಶ್ರೇಷ್ಠ ವಿಜ್ಞಾನಿಯೊಬ್ಬನನ್ನು ಕೊಂದು ಹಾಕಿದರೆ ಮುಸ್ಲಿಂ ಉಗ್ರಗಾಮಿಯ `ಮೌಲ್ವಿ' ಮನಸ್ಸನ್ನು ಯಾವನಾದರೂ ವಿಚಾರವಾದಿ ಖಂಡಿಸಿದನಾ ಕೇಳಿ? ಇವರು ಹಗಲು ವೇಷದ ಜನ. ಬೈಸಿಕೊಂಡರೆ ಬಯ್ಯುವ, ಕೈಲಾಗದವರನ್ನು ಖಂಡಿಸುವ, ಸುಮ್ಮನಿರುವವರನ್ನು ದಂಡಿಸುವ ಖೋಟಾ ಕ್ರಾಂತಿಕಾರಿಗಳನ್ನು ನಾವು ಗೌರವಿಸಿಕೊಂಡು ಬಂದಿದ್ದೇವೆ.`ಯಾರೋ ಮುಸ್ಲಿಂ ಉಗ್ರರು ಮಾಡಿರಬಹುದಾದ ಕೆಲಸವಿದು. ಮುಸ್ಲಿಮರೇ ಮಾಡಿದ್ದಾರೆಂಬುದಕ್ಕೆ ಇನ್ನೂ ಸಾಕ್ಷ್ಯವಿಲ್ಲ. ಮುಸ್ಲಿಂ ಉಗ್ರರು ಮಾಡಿದ್ದರೂ ಮಾಡಿರಬಹುದು. ಅಂದ ಮಾತ್ರಕ್ಕೆ ನಾವು ಮುಸ್ಲಿಮರೆಲ್ಲರನ್ನೂ ಅನುಮಾನದಿಂದ ನೋಡಬಾರದು' ಅಂತ ಬರೆಯುತ್ತಾರೆ. `ಇದು ಕರ್ಮಠ, ಜಾತ್ಯಂಧ, ಮುಸ್ಲಿಂ ಮೌಲ್ವಿ ಮನಸುಗಳ, ದೇಶದ್ರೋಹಿಗಳ, ಪಾಖಂಡಿಗಳ ಕೆಲಸ' ಅಂತ ಮಾತನಾಡುವ ಧೈರ್ಯ ಇವರಿಗಿಲ್ಲ.
`ಛೆಛೆ, ನಾವು ಮುಸ್ಲಿಮರಲ್ಲಿರುವ ಪುರೋಹಿತಶಾಹಿಯನ್ನೂ ಖಂಡಿಸುತ್ತೇವೆ. ನಮ್ಮ ಅರ್ಥದಲ್ಲಿ ಪುರೋಹಿತಶಾಹಿ ಅಂದ್ರೆ, ಕೇವಲ ಬ್ರಾಹ್ಮಣರು ಅಂತ ಅಂದುಕೋಬೇಡಿ' ಎಂದು ಮತ್ತೆ ವಿಚಾರವಾದಿಗಳು ಹಗ್ಗ ಹೊಸೆಯುತ್ತಾರೆ. ನೆಮ್ಮದಿಯಾಗಿದ್ದ ಬೆಂಗಳೂರಿನ ಸ್ವಾಸ್ಥ್ಯವನ್ನು ಹಾಳುಗೆಡವಿದ ಮುಸ್ಲಿಂ ಭಯೋತ್ಪಾದಕರ ವಿರುದ್ಧ ಒಬ್ಬ ಬುದ್ಧಿಜೀವಿ, ಒಂದು ಸಾಂಕೇತಿಕ ಉಪವಾಸ ಮಾಡಿದನಾ?ಅದೇ ಒಂದು ಮಸೀದಿಯ ಗೋಡೆ ನಡುಗಲಿ?ಈ ಮಂದಿ ಯಾವ ಪರಿ ಒಂದು ಜಾತಿಯ ಸೌಖ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೋ ನೋಡುತ್ತಿರಿ.
ಯಾವುದೇ ಧರ್ಮ, ಅದು ಎಷ್ಟೇ ಮಹತ್ವಪೂರ್ಣದ್ದಾಗಿರಲಿ : ಅದರ ಅನುಯಾಯಿಗಳು ಅರ್ಥಹೀನ ಸ್ವೇಚ್ಛಾಚಾರಕ್ಕೆ, ಉಗ್ರವಾದಕ್ಕೆ, ಹಿಂಸಾಚಾರಕ್ಕೆ ಇಳಿದಾಗ ಅದನ್ನು ಖಂಡಿಸಬೇಕು. ಆ ಧರ್ಮದ ಕಿಡಿಗೇಡಿಗಳನ್ನು ಬುಡಸಮೇತ ಕಿತ್ತು ಚೆಲ್ಲಬೇಕು. `ಧರ್ಮಕ್ಕೆ ಆಪತ್ತು ಬಂದಾಗ ಅದಕ್ಕಾಗಿ ಹೋರಾಟ ಮಾಡು' ಅಂತ ಹೇಳಿರುವುದೇ ನಮ್ಮ ಸಮರ್ಥನೆ ಎಂದು ಯಾರಾದರೂ ಹೇಳಿದರೆ,`ದೇಶಕ್ಕೆ ಆಪತ್ತು ಬಂದಾದ ಕೆಡವಿ ಕೊಲ್ಲು ಅಂತ ನಮ್ಮ ಸಂವಿಧಾನ ಹೇಳಿದೆ' ಎಂಬ ಉತ್ತರ ನೀಡಬೇಕು. ಅಂತಹ ಒಬ್ಬೇ ಒಬ್ಬ ನಾಯಕ, ಬುದ್ಧಿಜೀವಿ, ವಿಚಾರ ವಾದಿ- ಹತ್ತಿರದಲ್ಲೆಲ್ಲಾದರೂ ಕಾಣಿಸುತ್ತಾನಾ? ಕಂಡರೆ ಹೇಳಿ. ಕಡೇಪಕ್ಷ, ಮುಸ್ಲಿಂ ಸಮಾಜದ ಹಿರಿಯರಲ್ಲಾದರೂ ಕೆಲವರು ಪ್ರಜ್ಞಾವಂತರು ಈ ಉಗ್ರವಾದಿ ಮಾರ್ಗವನ್ನು ಖಂಡಿಸಿ ಹೇಳಿಕೆ ಕೊಟ್ಟರಾ?ನಾನು ಗಮನಿಸಿಲ್ಲ.
ಇವತ್ತು ಓಟುಗಳಿಗಾಗಿ, ಜನಪ್ರಿಯತೆಗಾಗಿ, ಖೊಟ್ಟಿ ಸಿದ್ಧಾಂತಗಳಿಗಾಗಿ ಒಂದೇ ಒಂದು ಉಗ್ರವಾದಿ ಚಟುವಟಿಕೆಯನ್ನು ಪ್ರತಿಭಟಿಸದೆ ಸಹಿಸಿಕೊಂಡರೆ, ನಾಳೆ ಇದಕ್ಕಿಂತ ದೊಡ್ಡ ಮೆನೇಸ್ ಇನ್ನೊಂದಿರಲಾರದು. ಸಿಖ್ಖರ ಉಗ್ರಗಾಮಿತ್ವವನ್ನು ಆರಂಭದಲ್ಲಿ ಸಹಿಸಿಕೊಂಡ ಸಿಖ್ಖರೇ ಕಡೆಗೆ ನಾಶವಾಗಿ ಹೋದರು. `ಖಲಿಸ್ತಾನ್'ಯಾರಿಗೂ ಬೇಡದ ಚಳವಳಿಯಾಗಿತ್ತು. ಕಾಶ್ಮೀರದ ಜನ ಇವತ್ತು ಉಗ್ರರನ್ನು ಶಪಿಸಿದಷ್ಟು ಮತ್ಯಾರನ್ನೂ ಶಪಿಸುವುದಿಲ್ಲ. ಮೊದಲ ಸುತ್ತಿನ ಉಗ್ರರನ್ನು ಮನೆಗೆ ಕರೆದು ಇಟ್ಟುಕೊಂಡ ಅವಿವೇಕಿಗಳು ಅವರೇ. ನಾವು ಇತಿಹಾಸದಿಂದ ಪಾಠ ಕಲಿಯದಿದ್ದರೆ ನಾಶವಾಗಿ ಹೋದೇವು. ಹಿಂದೂ ಸನ್ಯಾಸಿ ಎಂಬ ಕಾರಣಕ್ಕೆ ಸಾಯಿಬಾಬಾನ ಸಲಿಂಗ ಚೇಷ್ಟೆ, ಬೂದಿ ವಂಚನೆ, ಖೊಟ್ಟಿ ಪವಾಡಗಳನ್ನು ಬೆಂಬಲಿಸುವವರಿಗೂ, ಅಲ್ಪ ಸಂಖ್ಯಾತರೆಂಬ ಕಾರಣಕ್ಕೆ ಕಿಡಿಗೇಡಿ ಮೌಲ್ವಿಗಳನ್ನು ಸಹಿಸುವುದಕ್ಕೂ ಅಸಲು ವ್ಯತ್ಯಾಸವಿಲ್ಲ.
ಇಷ್ಟಕ್ಕೂ ಒಬ್ಬ ಸಜ್ಜನ ಮುಸಲ್ಮಾನ ಹೇಗೆ ಭಯೋತ್ಪಾದಕನಾಗುತ್ತಾನೆ ಗೊತ್ತೆ? ಅದೊಂದು ವ್ಯವಸ್ಥಿತ ಪ್ರಕ್ರಿಯೆ. ಇಂದು ಅನೇಕ ಮುಸ್ಲಿಂ ಧರ್ಮ ಮಂದಿರಗಳಲ್ಲಿರುವ ಚಿಕ್ಕ ಮಟ್ಟದ ಧರ್ಮಗುರುಗಳು, ಮೌಲ್ವಿಗಳು, ಮದನಿಗಳು ಸ್ಥಳೀಯರಲ್ಲ. ಕೇಳಿದರೆ ಲಖನೌದವರು ಅನ್ನುತ್ತಾರೆ. ಅವರು ಬಾಂಗ್ಲಾದೇಶಿಗಳಾಗಿದ್ದರೆ ಗೊತ್ತು ಆಗುವುದಿಲ್ಲ. ಪ್ರತಿನಿತ್ಯ ನಮಾಜಿಗೆ ಬರುವ ಸಜ್ಜನ ಮುಸ್ಲಿಂ ಯುವಕನೊಬ್ಬನನ್ನು ಆ ಯುವಕನಿಗೆ ಧರ್ಮ-ದೇವರು-ನಂಬಿಕೆ-ನಮಾಜು ಇಷ್ಟು ಬಿಟ್ಟರೆ ಬೇರೆ ಯಾವ ವಿಚಾರವೂ ಗೊತ್ತಿರುವುದಿಲ್ಲ. ಅವನು ಅಪ್ಪಟ ನಿರುಪದ್ರವಿ. ನಮಗೆಲ್ಲ ಇರುವಂತೆಯೇ ಅವನಿಗೂ ಮನೆಯಲ್ಲಿ ಕಷ್ಟ-ಕಾರ್ಪಣ್ಯ, ನಿರುದ್ಯೋಗ, ತಂಗಿಯರ ಮದುವೆ ಮುಂತಾದ ಜಂಜಡಗಳಿರುತ್ತದೆ. ಅಂಥ ಒಬ್ಬ ಯುವಕನನ್ನು ಗುರುತಿಸಿ, ಮಾತನಾಡಿಸಿ, ಯಾವಾಗಾದರೊಮ್ಮೆ ಊರಿಗೆ ಬರುವ ಧರ್ಮಪ್ರಚಾರಕನಿಗೆ ಅವನನ್ನು ಪರಿಚಯಿಸುತ್ತಾನೆ ಬಾಂಗ್ಲಾದೇಶಿ. ಅಲ್ಲಿಂದ ರಿಕ್ರೂಟ್‌ಮೆಂಟ್ ಪ್ರಕ್ರಿಯೆ ಆರಂಭವಾಗುತ್ತದೆ. ಧರ್ಮ ಪ್ರಚಾರಕ ತಲೆ ತೊಳೆಯುತ್ತಾನೆ. ಧರ್ಮ ಅಪಾಯದಲ್ಲಿದೆ ಅಂತಾನೆ. ಇಸ್ರೇಲಿಗಳ ಕುರಿತು ಹೇಳುತ್ತಾನೆ. ಅಮೆರಿಕನ್ನರನ್ನು ಬಯ್ಯುತ್ತಾನೆ. ಭಾರತಿಯರಿನ್ನೇನು? ಅನ್ನುತ್ತಾನೆ. ಗುಜರಾತದ ಕತೆ ಹೇಳುತ್ತಾನೆ. ಒಂದು ಸಲ ನೀನೇ ಸೌದಿ ಅರೇಬಿಯಾಕ್ಕೆ ಹೋಗಿ ನೋಡಿಕೊಂಡು ಬಾ : ಇಡೀ ವಿಶ್ವ ಹಾಗಾಗಬೇಕು ಅನ್ನುತ್ತಾನೆ. ಆಮೇಲಿಂದ ವೀಸಾ -ಪಾಸ್‌ಪೋರ್ಟು ಯಾವುದೂ ತಡವಾಗುವುದಿಲ್ಲ. ಅಲ್ಲಿಂದ ಹಿಂತಿರುಗುವ ಹೊತ್ತಿಗೆ ಈ ಸಜ್ಜನ ಮುಸಲ್ಮಾನ ಆಲ್ಮೋಸ್ಟ್ ಉಗ್ರವಾದಿಯೇ!
ಶಿವಾಜಿನಗರ, ಆಂಧ್ರದ ನಲ್ಗೊಂಡ, ಕರಾವಳಿಯ ಮಂಗಳೂರು, ಕೇರಳದ ಚಿಕ್ಕಪುಟ್ಟ ಹಳ್ಳಿಗಳು, ಚೆನ್ನೈನಂಥ `ಇಂಗ್ಲಿಷರಿಗೆ ಹುಟ್ಟಿದ' ಊರಿನಲ್ಲೂ ಭಯೋತ್ಪಾದಕರು ತಯಾರಾಗುತ್ತಾರೆಂದರೆ- ಅವರು ತಯಾರಾಗುವುದು ಹೀಗೇ. ಇಸ್ರೇಲಿಗಳ ವಿರುದ್ಧದ ಅವರ ಹೋರಾಟ ತುಂಬ ಸಮರ್ಥನೀಯವಾಗಿರಬಹುದು. ಅಮೆರಿಕನ್ನರ ವಿರುದ್ಧ ಸೌದಿಗಳ ಅಸಹನೆ ಕೂಡ ಸಮರ್ಥನೀಯವೇ ಆಗಿರಬಹುದು. ಆದರೆ ರಕ್ತದಾಹಕ್ಕೆ ಬಿದ್ದವರಿಗೆ ಕ್ರಮೇಣ ಎಲ್ಲವೂ ಅವರಂತೆಯೇ ಆಗಬೇಕೆಂಬ ಹಟ ಹುಟ್ಟುತ್ತದೆ. ಕೈಲಿರುವುದು ಕೇವಲ ಸುತ್ತಿಗೆ ಅಂತಾದಾಗ, ಸುತ್ತಲಿನದೆಲ್ಲ ಮೊಳೆ ಅಂತಲೇ ಅನ್ನಿಸತೊಡಗುತ್ತದೆ. ಇಲ್ಲದಿದ್ದರೆ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಕೊಲೆಯಾದ ಪ್ರೊಫೆಸರ್ ಪುರಿ, ಯಾವತ್ತು ಮುಸ್ಲಿಂ ವಿರೋ ಕೆಲಸ ಮಾಡಿದ್ದ? ಆತನಿಗೆ ಎಷ್ಟು ಜನ ಮುಸಲ್ಮಾನ ಮಿತ್ರರಿದ್ದರೋ?
ಮುಸ್ಲಿಮರಲ್ಲದವರಿಗೂ ಇಸ್ಲಾಂ ಒಂದು ವೈಜ್ಞಾನಿಕ ಧರ್ಮ ಅನ್ನಿಸಬಹುದು. ಖುರಾನ್ ನಮ್ಮ ಅಕಾಡೆಮಿಕ್ ಆಸಕ್ತಿಗಳನ್ನು ಕೆರಳಿಸಬಹುದು. ಇಸ್ಲಾಮಿಕ್ law ಗಿಂತ ಆಸಕ್ತಿಕರ ಸಬ್ಜೆಕ್ಟು ಬೇಕೆ? ಇದೆಲ್ಲದರ ಜೊತೆಯಲ್ಲೇ ನಾವು ನಮ್ಮ ನಡುವಿನ ಮುಸ್ಲಿಮರು ಸುಶಿಕ್ಷಿತರಾಗಲಿ, ಶ್ರೀಮಂತರಾಗಲಿ, ಕ್ರೀಡಾಪಟುಗಳಾಗಲಿ, ವಿಜ್ಞಾನಿಗಳಾಗಲಿ, ಸಾಹಿತಿಗಳಾಗಲಿ, ರಾಜಕಾರಣಿಗಳಾಗಲಿ- ಅಂತ ಬಯಸುತ್ತೇವೆ. ಅವರನ್ನು ಕೇವಲ ಭಾರತೀಯರನ್ನಾಗಿ ನೋಡುತ್ತೇವೆ. ಮುಸ್ಲಿಮರನ್ನು ನಾವು ನೋಡಿಕೊಂಡಷ್ಟು ಚೆನ್ನಾಗಿ ಚೀನಾ, ರಷಿಯಾಗಳು ಕೂಡ ನೋಡಿಕೊಂಡಿಲ್ಲ. ಅಷ್ಟೇಕೆ, ಪಾಕಿಸ್ತಾನಕ್ಕಿಂತ ಭಾರತದಲ್ಲಿ ಮುಸಲ್ಮಾನರು ಹೆಚ್ಚು ಸಂತೋಷವಾಗಿದ್ದಾರೆ. ಕೂಳಿಗೆ ಗತಿಯಿಲ್ಲದ ಸುಮಾರು ಎರಡು ಕೋಟಿ ಬಾಂಗ್ಲಾದೇಶೀಯರಿಗೆ ಭಾರತ ಇವತ್ತಿಗೂ ಆಶ್ರಯ ನೀಡಿದೆ. ಮುಂಬಯಿ ಮತ್ತು ಕಲ್ಕತ್ತಾಗಳಲ್ಲಿ ಅಷ್ಟೂ ಟ್ಯಾಕ್ಸಿ ಡ್ರೈವರುಗಳು ಬಾಂಗ್ಲಾದೇಶೀಯರು. ಅವರ ಕಳ್ಳ ಓಟುಗಳಿಗಾಗಿ ನಮ್ಮ ರಾಜಕಾರಣಿಗಳು ಅವರನ್ನು ಸಹಿಸಿಕೊಂಡರು. ಬಾಂಗ್ಲಾದೇಶಕ್ಕೆ ನಾವು ಮಾಡಿದ ಸೈನಿಕ ಸಹಾಯವನ್ನು ಆ ದೇಶ ಶತಶತಮಾನ ಕಳೆದರೂ ವಾಪಸು ಮರಳಿಸಲಾರದು.
ಆದರೆ ಆದದ್ದೇನು? ಬಾಂಗ್ಲಾದಿಂದ ಹೊರಟ ವಿದ್ರೋಹದ, ದೇಶದ್ರೋಹದ ಬಂದೂಕು ಬೆಂಗಳೂರಿನ ತನಕ ತಲುಪಿತು. ಇಲ್ಲಿನ ಅವಿವೇಕಿಗಳು ಕೆಲವರು ವಿನಾಕಾರಣ ದೇಶದ್ರೋಹಿಗಳಾದರು. ರಸ್ತೆ ಪಕ್ಕದಲ್ಲಿ ಅವರ ಮಸೀದಿ ಕಾಣಿಸಿದರೆ,`ಗಾಡೀನ ಹಾರ್ನ್ ಮಾಡಿ ಅವರ ಮನಸು ಕೆಡಿಸುವುದು ಬೇಡ' ಅಂತ ಯೋಚಿಸಿ, ಅವರಿಗೆ ಗೌರವಕೊಟ್ಟು ಸದ್ದಿಲ್ಲದೆ ಮುಂದಕ್ಕೆ ಹೋಗುವ ಸಭ್ಯ ಬೆಂಗಳೂರಿಗನ ಎದೆಗೇ ಗುಂಡು ಬಿದ್ದಿದೆ.
ಸುಮ್ಮನಿರು ಅಂದರೆ, ಇನ್ನೆಷ್ಟು ದಿನ?
Saturday, July 29, 2006
`ಡ ವಿನ್ಸಿ ಕೋಡ್'ನಲ್ಲಿ ಕಳಚಿಬಿದ್ದ ನಮ್ಮ ಕೀರ್ತಿ ಕೋಡು!
ವಿಶ್ವೇಶ್ವರ ಭಟ್:
ಇಂಥ ವಿಚಿತ್ರಗಳು, ತಿರಸಟ್ಟುಗಳು ನಡೆಯೋದು ನಮ್ಮ ದೇಶದಲ್ಲಿ ಮಾತ್ರ. ಈ ವಿಷಯದಲ್ಲಿ ನಮ್ಮನ್ನು ಮೀರಿಸುವವರು ಸದ್ಯಕ್ಕೆ ಯಾರು ಇಲ್ಲವೆಂಬುದು ನನ್ನ ಭಾವನೆ. ಅದೆಂಥ ದೇಶ ನಮ್ಮದು, ಇಲ್ಲಿ ಯಾವುದೂ ವಿವಾದಗಳಿಲ್ಲದೇ ಮೋಕಳೀಕ್ ಆಗುವುದಿಲ್ಲ.
`ಡ ವಿನ್ಸಿ ಕೋಡ್' ಚಿತ್ರದ ಸುತ್ತ ಕವಿದಿರುವ ವಿವಾದವನ್ನು ನೀವು ಗಮನಿಸುತ್ತಿರಬೇಕು. ಇದು ಚಿತ್ರವಾಗುವುದಕ್ಕಿಂತ ಮೊದಲೇ, ಇದೇ ಹೆಸರಿನಲ್ಲಿ ಕಾದಂಬರಿಯಾಗಿತ್ತು. ಮೂರು ವರ್ಷಗಳ ಹಿಂದೆಯೇ ಬಿಡುಗಡೆಯಾಗಿತ್ತು. ಈ ಕೃತಿ ೪೪ ಭಾಷೆಗಳಿಗೆ ಅನುವಾದಗೊಂಡಿತ್ತು. ಈ ಕಾದಂಬರಿ ಜನಪ್ರಿಯವಾಗಬಹುದೆಂದು ಅದನ್ನು ಬರೆದ ೪೨ವರ್ಷದ ಅಮೆರಿಕದ ಡಾನ್ ಬ್ರೌನ್ ಕನಸುಮನಸಿನಲ್ಲೂ ಊಹಿಸಿರಲಿಲ್ಲ. `ಡಿಜಿಟಲ್ ಫೋರ್‌ಟ್ರೆಸ್' ಸೇರಿದಂತೆ ಆತನ ಮೊದಲ ಮೂರು ಕಾದಂಬರಿಗಳ ಹತ್ತು ಸಾವಿರ ಪ್ರತಿಗಳು ಸಹ ಮಾರಾಟವಾಗಿರಲಿಲ್ಲ. ಯಾವಾಗ `ದ ವಿನ್ಸಿ ಕೋಡ್' ಪ್ರಕಟವಾಯಿತೋ, ಅದು ಮೊದಲ ವಾರವೇ `ನ್ಯೂಯಾರ್ಕ್ ಟೈಮ್ಸ್'ಪತ್ರಿಕೆಯ ಟಾಪ್ ಟೆನ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆಯಿತೋ ಡಾನ್ ಬ್ರೌನ್‌ನ ದೆಸೆ ತಿರುಗಿ ಹೋಯಿತು. ಟೈಮ್ ಮ್ಯಾಗಜಿನ್ ಆತನನ್ನು ವಿಶ್ವದ ನೂರು ಪ್ರಭಾವಿ ವ್ಯಕ್ತಿಗಳಲ್ಲೊಬ್ಬ ಎಂದು ಹೇಳಿದ್ದು ಪುಸ್ತಕ ಮಾರಾಟಕ್ಕೆ ಮತ್ತಷ್ಟು ಇಂಬು ನೀಡಿತು.
ಹಾಗೆಂದು `ಡ ವಿನ್ಸಿ ಕೋಡ್' ಅಂಥ ಹೋಳಿಕೊಳ್ಳುವಂಥ ಕಾದಂಬರಿಯೇನೂ ಆಗಿರಲಿಲ್ಲ. ಭಾಷೆ, ನಿರೂಪಣೆ, ಶೈಲಿಯ ದೃಷ್ಟಿಯಿಂದಲೂ ಅದ್ಭುತವೆನಿಸುವ ಕೃತಿಯೂ ಆಗಿರಲಿಲ್ಲ. ಪತ್ತೇದಾರಿ-ಥ್ರಿಲ್ಲರ್-ಸಂಚು- ಈ ಮೂರರ ಮಿಶ್ರಣವನ್ನು ಹೊಂದಿದ ಈ ಕಾದಂಬರಿ, ಗಟ್ಟಿ ವಿಮರ್ಶಕರಿಂದ ಪ್ರಶಂಸೆಗೆ ಒಳಗಾದ ಕೃತಿಯೂ ಆಗಿರಲಿಲ್ಲ. ಆದರೆ ಇವ್ಯಾವೂ ಮಾರಾಟದ ಮೇಲೆ ಪ್ರಭಾವ ಬೀರಲಿಲ್ಲ. ಬಿಡುಗಡೆಯಾಗಿ ಎರಡು ವರ್ಷಗಳ ನಂತರವೂ ಅದರ ಜನಪ್ರಿಯತೆಗೆ ಧಕ್ಕೆಯಾಗಲಿಲ್ಲ. ಹಾಗೆಂದು ಈ ಕೃತಿ ಎಲ್ಲೂ ಸಣ್ಣ ಪುಟ್ಟ ವಿವಾದವನ್ನು ಹುಟ್ಟು ಹಾಕಲಿಲ್ಲ. ಹಾಗೆ ನೋಡಿದರೆ `ಡ ವಿನ್ಸಿ ಕೋಡ್'ನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಆದರೆ ಯಾವಾಗ ಈ ಕಾದಂಬರಿಯನ್ನು ಆಧರಿಸಿ ನಿರ್ದೇಶಕ ರಾನ್ ಹೋವರ್ಡ್ ಅದೇ ಹೆಸರಿನಲ್ಲಿ ಸಿನಿಮಾ ಮಾಡಿದನೋ, ಶುರುವಾಯಿತು ನೋಡಿ ವಿವಾದ. ಈ ಚಿತ್ರವನ್ನು ನಿಷೇಸಬೇಕು, ಏಸುವಿಗೆ ಅವಮಾನ ಮಾಡಲಾಗಿದೆ, ಕ್ರಿಶ್ಚಿಯನ್ ಧರ್ಮದ ಅವಹೇಳನ ಮಾಡಲಾಗಿದೆ, ಡಾನ್ ಬ್ರೌನ್‌ನನ್ನು ಮುಗಿಸಿ, ಕಾದಂಬರಿಯನ್ನು ಸುಟ್ಟು ಹಾಕಿ ಎಂಬ ಮಾತುಗಳು ಕೇಳಿಬರಲಾರಂಭಿಸಿದವು. ಆಸ್ಕರ್ ಪ್ರಶಸ್ತಿ ಪುರಸ್ಕೃತ ಟಾಮ್ ಹ್ಯಾಂಕ್ಸ್ ಅಭಿನಯದ ಈ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ವಿಶ್ವದೆಲ್ಲೆಡೆ ಪ್ರದರ್ಶನದಿಂದ ೨೨೪ ದಶಲಕ್ಷ ಡಾಲರ್ ದಾಖಲೆಯ ಹಣ ಗಳಿಸಿತು. ಇದು ಈ ಕತೆಯ ಒಂದು ಘಟ್ಟ.
ಈ ಕತೆ ವಿವಾದಕ್ಕೆ ತಿರುಗಲು ಕಾರಣಗಳೇನೆಂಬ ಇನ್ನೊಂದು ಘಟ್ಟವನ್ನು ಗಮನಿಸೋಣ. ಅಷ್ಟಕ್ಕೂ ಈ ಕಾದಂಬರಿ-ಚಿತ್ರದಲ್ಲಿ ಇರುವುದಾದರೂ ಏನು? ಪ್ಯಾರಿಸ್‌ನ ಪ್ರಸಿದ್ಧ ಲಾವ್ರ್ ಮ್ಯೂಸಿಯಂನ ಕ್ಯೂರೇಟರ್ ಜಾಕ್ ಸುನೀರ್ ಅನುಮಾನಾಸ್ಪದವಾಗಿ ಹತ್ಯೆಗೀಡಾದಾಗ ಹಾರ್ವರ್ಡ್ ವಿಶ್ವವಿದ್ಯಾಲಯದ ಧಾರ್ಮಿಕ ಸಂಕೇತಶಾಸ್ತ್ರದ ಪ್ರಾಧ್ಯಾಪಕ ಪ್ರೊ. ರಾಬರ್ಡ್ ಲ್ಯಾಂಗ್‌ಡನ್‌ನನ್ನು ಈ ಕೊಲೆ ರಹಸ್ಯ ಭೇದಿಸುವಂತೆ ಕರೆಸಲಾಗುತ್ತದೆ. ಸುನೀರ್ ಮೃತದೇಹ ಮ್ಯೂಸಿಯಂನಲ್ಲಿ ನಗ್ನವಾಗಿ ಬಿದ್ದಿರುತ್ತದೆ. ಅದು ಖ್ಯಾತ ಕಲಾವಿದ ಲಿಯೋನಾರ್ಡೋ ಡಾ ವಿನ್ಸಿಯ ಕಲಾಕೃತಿ `ವಿಟ್ರುವಿಯನ್ ಮ್ಯಾನ್'ರೀತಿಯಂತೆ ಕಾಣುತ್ತದೆ. ಈ ಚಿತ್ರದಲ್ಲಿ ದೇಹದ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಕೆಲವು ಸಂಕೇತಗಳು, ಸಂದೇಶಗಳಿರುತ್ತವೆ. ವಿನ್ಸಿಯ ಪ್ರಸಿದ್ಧ ಕಲಾಕೃತಿಗಳಾದ `ಮೊನಾಲಿಸಾ'ಹಾಗೂ `ಲಾಸ್ಟ್ ಸಪ್ಟರ್'ನಲ್ಲಿ ಸಹ ಅಲ್ಲಲ್ಲಿ ಹುದುಗಿದ ಸಂದೇಶಗಳಿರುವಂತೆ ಈ ಕೃತಿಯಲ್ಲೂ ಅದು ಇದ್ದಿರಬಹುದೆಂದು ಭಾವಿಸಲಾಗುತ್ತದೆ. ಅನಂತರ ಇದೇ ರಹಸ್ಯ ಭೇದಿಸಲು ಸಹಾಯಕವಾಗುತ್ತದೆ.
ಅಲ್ಲದೇ ಈ ಕಾದಂಬರಿಯಲ್ಲಿ ಏಸುಗೆ ಸಂಬಂಸಿದ ಕೆಲವು ಉಲ್ಲೇಖಗಳು ವಿವಾದಕ್ಕೆ ಮತ್ತಷ್ಟು ಕಾವನ್ನು ಕೊಡುತ್ತವೆ. ಮೇರಿ ಮ್ಯಾಗ್ಡಲಿನ್ ಎಂಬ ವೇಶ್ಯೆಯೊಂದಿಗೆ ಏಸುವಿಗೆ ದೈಹಿಕ ಸಂಬಂಧ ಇತ್ತು ಹಾಗೂ ಇವರಿಬ್ಬರಿಗೂ ಒಬ್ಬ ಹೆಣ್ಣು ಮಗಳು ಹುಟ್ಟಿದಳು. ಈಕೆಗೆ ಹುಟ್ಟಿದ ಸಂತತಿ ಇಂದಿಗೂ ಮುಂದುವರಿದುಕೊಂಡು ಬಂದಿದೆಯೆಂದು ಡಾನ್ ಬ್ರೌನ್ ಬರೆದಿದ್ದು, ಎಲ್ಲರ ಹುಬ್ಬುಗಳೇರಲು ಮುಖ್ಯ ಕಾರಣ. ಕ್ರೈಸ್ತರ ಒಂದು ಗುಂಪು ಇಂದಿಗೂ ಮ್ಯಾಗ್ಡಲಿನ್‌ಳನ್ನು ಗೌರವದಿಂದ ಪೂಜಿಸುತ್ತದೆಂದೂ, ಚರ್ಚ್ ಈ ರಹಸ್ಯವನ್ನು ಗೌಪ್ಯವಾಗಿ ಕಾದಿಟ್ಟಿಯೆಂದೂ, ಯಾರಾದರೂ ಬಹಿರಂಗಪಡಿಸಿದರೆ ಅಂಥವರನ್ನು ಮುಗಿಸಿ ಬಿಡುವ ಬೆದರಿಕೆಯನ್ನು ಹಾಕುತ್ತಿದೆಯೆಂದು ಡಾನ್ ಬ್ರೌನ್ ತಮ್ಮ ಕಾದಂಬರಿಯಲ್ಲಿ ಬರೆಯುತ್ತಾರೆ.
ಸರಿ, ಈ ವಿವಾದಕ್ಕೆ ಬ್ರೌನ್ ಏನಂತಾನೆ?
ಇದು ಐತಿಹಾಸಿಕ ಸಂಗತಿಗಳನ್ನು ಆಧರಿಸಿದ ಶುದ್ಧ ಕಾಲ್ಪನಿಕ ಕತೆ ಅಂತಾನೆ. ಮೊದಲೇ ಹೇಳಿದ್ದೇನೆ ಇದು ಕಾದಂಬರಿ ಅಂತ. ಯಾಕೆ ಅನಗತ್ಯ ವಿವಾದ? -ಇದು ಬ್ರೌನ್‌ನ ವಾದ.
ಹಾಗೆ ನೋಡಿದರೆ ಈ ವಿವಾದ ಇಲ್ಲಿಗೆ ಅಂತ್ಯವಾಗಬೇಕಿತ್ತು. ವಿಚಿತ್ರವೆಂದರೆ ವಿವಾದ ಆರಂಭವಾಗುವುದೇ ಇಲ್ಲಿ. ಕೋಟಿಗಟ್ಟಲೆ ಪ್ರತಿಗಳು ಮಾರಾಟವಾದ ಬಳಿಕ ಸ್ವಲ್ಪವೂ ವಿವಾದವಾಗದ ಪುಸ್ತಕ, ಏಕಾಏಕಿ ಸುದ್ದಿಯಾಗುವುದೆಂದರೆ ಅದರಲ್ಲಿ ಏನೋ ಇರಲೇಬೇಕು. ಆಷ್ಟಕ್ಕೂ ಈ ಚಿತ್ರ ಭಾರತದಲ್ಲಿ ಹುಟ್ಟಿಸಿದ ವಿವಾದ ಮಾತ್ರ ಅನೇಕ ಗುಮಾನಿಗಳಿಗೆ ಈಡು ಮಾಡಿದ್ದು ಸತ್ಯ.
ಈ ಚಿತ್ರಕ್ಕೆ ಕ್ಯಾಥೋಲಿಕ್ ರಾಷ್ಟ್ರವಾದ ಫಿಲಿಪ್ಪೀನ್ಸ್ `ಎ'ಸರ್ಟಿಫಿಕೇಟ್ ನೀಡಿ ಸುಮ್ಮನಾಯಿತು. ಇದನ್ನು ನಿಷೇಸಬೇಕೆಂದು ಕ್ರೈಸ್ತರ ಧರ್ಮಗುರು ಪೋಪ್ ಸಹ ಒತ್ತಾಯಿಸಲಿಲ್ಲ. ಅದೆಷ್ಟೇ ಪ್ರತಿಭಟನೆ, ಕೋಲಾಹಲಗಳಾದರೂ ಕ್ರೈಸ್ತರೇ ಬಹುಸಂಖ್ಯಾತರಾಗಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ಯಾವ ಸರಕಾರವೂ ಈ ವಿವಾದದಲ್ಲಿ ಮಧ್ಯ ಪ್ರವೇಶಿಸಲಿಲ್ಲ. ಚಿತ್ರವನ್ನು ನಿಷೇಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದವು.
ಆದರೆ ಭಾರತ ಸರಕಾರ ಮಾತ್ರ ನಿದ್ದೆ ಮಾಡಲಿಲ್ಲ.
ಈ ಚಿತ್ರವನ್ನು ನಿಷೇಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸುವ ನ್ಯಾಯಪೀಠದಲ್ಲಿ ತಾವೇ ಸ್ವತಃ ಹೋಗಿ ಕೇಂದ್ರ ವಾರ್ತಾ ಹಾಗೂ ಪ್ರಸಾರ ಖಾತೆ ಮಂತ್ರಿ ಪ್ರಿಯರಂಜನ್ ದಾಸ್ ಮುನ್ಯಿ ಕುಳಿತುಬಿಟ್ಟರು! ಸಿನಿಮಾವನ್ನು ನಿಷೇಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲು ಈ ದಾಸ್‌ಮುನ್ಯಿ ಯಾರು? ಅವರಿಗೆ ಚಿತ್ರದ ಬಗ್ಗೆ ಏನು ಗೊತ್ತು? ಅವರೇಕೆ ಏಕಾಏಕಿ ಕಾರ್ಯಪ್ರವೃತ್ತರಾದರು? ಅವರ ಅರ್ಹತೆಗಳೇನು? ಈ ಚಿತ್ರ ಯಾವುದೇ ಅಡೆತಡೆಗಳಿಲ್ಲದೇ ಕ್ಯಾಥೋಲಿಕ್ ಚರ್ಚ್‌ನ ಕೇಂದ್ರವಾದ ರೋಮ್‌ನಲ್ಲಿ ಬಿಡುಗಡೆಯಾಯಿತು. ಆದರೆ ಭಾರತದಲ್ಲಿ ಬಿಡುಗಡೆಯಾಗಲಿಲ್ಲ.
ಕೇಂದ್ರ ಸರಕಾರ ಆದೇಶಿಸಿತ್ತು -ತನ್ನ ಅನುಮತಿಯಿಲ್ಲದೇ ಬಿಡುಗಡೆ ಮಾಡುವಂತಿಲ್ಲ. ದಾಸ್‌ಮುನ್ಯಿ ಮತ್ತು ಕ್ರಿಶ್ಚಿಯನ್ ಚರ್ಚ್ ಸಂಘಟನೆಯ ಪ್ರತಿನಿಗಳು ಹಾಗೂ ತಮ್ಮ ಸಚಿವಾಲಯದ ಮೂವರು ಅಕಾರಿಗಳನ್ನು ಇಟ್ಟುಕೊಂಡು ಒಂದು ಸಮಿತಿ ರಚಿಸಿಕೊಂಡರು. ಈ ಚಿತ್ರದ ವಿತರಕರಾದ ಸೋನಿ ಪಿಕ್ಚರ್‍ಸ್‌ಗೆ ತನ್ನ ಗ್ರೀನ್ ಸಿಗ್ನಲ್ ಇಲ್ಲದೇ ಚಿತ್ರ ಬಿಡುಗಡೆ ಮಾಡದಂತೆ ತಾಕೀತು ಮಾಡಿತು. ಅನಂತರ ಸೆನ್ಸಾರ್ ಮಂಡಳಿ ಸಚಿವರ ಆದೇಶದ ಮೇರೆಗೆ ಜಾಗೃತವಾಯಿತು. ಈ ಸಮಿತಿ ಚಿತ್ರ ನೋಡಿದ ಬಳಿಕ, ಸಿನಿಮಾದ ಆರಂಭ ಹಾಗೂ ಅಂತ್ಯದಲ್ಲಿ `ಇದೊಂದು ಕಾಲ್ಪನಿಕ ಕತೆ'ಎಂದು ದೊಡ್ಡದಾಗಿ ಬರೆಯುವಂತೆ ಸೂಚಿಸಿತು. ಅದನ್ನು ಬಿಟ್ಟರೆ, ಮತ್ತ್ಯಾವ ಬದಲಾವಣೆಯನ್ನೂ ಸೂಚಿಸಲಿಲ್ಲ. ಅದಕ್ಕಿಂತ ಮುಖ್ಯವಾಗಿ ಬೇರಾವ ಬದಲಾವಣೆ ಮಾಡಲು ಸಾಧ್ಯವೂ ಇರಲಿಲ್ಲ.
ಕೇಂದ್ರದ ಯುಪಿಎ ಸರಕಾರ ನಿದ್ದೆಯಲ್ಲಿ ದಿಡಗ್ಗನೆ ಎದ್ದು ಕುಳಿತವರಂತೆ ಹಠಾತ್ತನೆ ಮೈ ಕೊಡವಿಕೊಂಡು ಉತ್ತಿಷ್ಠವಾಗಿದ್ದಕ್ಕೆ ಯಾರಾದರೂ ಕಾರಣ ಹೇಳಿಯಾರು. ವ್ಯಾಟಿಕನ್ ಹೇಳುವ ಮೊದಲೇ ನಮ್ಮ ಮಂತ್ರಿಗಳು ಆದೇಶಕ್ಕೆ ಎದುರು ನೋಡುತ್ತಿರುತ್ತಾರೆ. ಈ ಆದೇಶ ಹತ್ತನೇ ಜನಪಥದಿಂದ ಬರುವ ಮುನ್ನವೇ, ತಾವೇ ಕಾರ್ಯಪ್ರವೃತ್ತರಾಗಿರುತ್ತಾರೆ. ಈ ಎರಡು ಕಾರಣಗಳನ್ನು ಬಿಟ್ಟರೇ, ದಾಸ್‌ಮುನ್ಯಿ ಸಿನಿಮಾ ನೋಡಲು ಮುನ್ನುಗ್ಗಿ ಕುಳಿತುಕೊಳ್ಳುವ ಅಗತ್ಯವೇ ಇರಲಿಲ್ಲ.
`ಡ ವಿನ್ಸಿ ಕೋಡ್'ಪುಸ್ತಕವನ್ನು ಲೆಬನಾನ್ ಹಾಗೂ ಜೋರ್ಡಾನ್ ನಿಷೇಸಿದವು. ಬಿಟ್ಟರೆ ಮತ್ಯಾವ ದೇಶವೂ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಈ ವಿಷಯದಲ್ಲಿ ಅತೀವ ಆಸಕ್ತಿ ತೋರಿದ್ದು ಭಾರತ ಮಾತ್ರ. ಕೇವಲ ಶೇ.೨.೩೭ರಷ್ಟು ಕ್ರಿಶ್ಚಿಯನ್‌ರನ್ನು ಹೊಂದಿರುವ ಭಾರತದ ಈ ಉತ್ಸಾಹ ಅನೇಕ ಪಾಶ್ಚಿಮಾತ್ಯ ದೇಶಗಳ ನಗೆಪಾಟಲಿಗೆ ಗುರಿಯಾಗಿದ್ದು ದುರ್ದೈವ. ಅವರಿಗಾಗದ ಗಾಯಕ್ಕಿಂತ ನಮಗಾದ ನೋವು ಅವರಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು. ಇಷ್ಟೂ ಸಾಲದೆಂಬಂತೆ ಕೆಲ ಮುಸ್ಲಿಂ ಸಂಘಟನೆಗಳು ಈ ಚಿತ್ರ ನಿಷೇಧಕ್ಕೆ ಒತ್ತಾಯಿಸಿದ್ದು ಭಲೇ ತಮಾಷೆಯಾಗಿತ್ತು.
ಯಾರಿಗೋ `ಪ್ರಿಯ'ರಾಗಲು, ಯಾರನ್ನೋ `ರಂಜಿಸಲು' ತನ್ನನ್ನು ಹಾಗೂ ಸರಕಾರವನ್ನು ಯಾರದ್ದೋ `ದಾಸ'ರನ್ನಾಗಿ ಮಾಡುವುದಿದೆಯಲ್ಲ ಅದು ನಾಚಿಕೆಗೇಡು. ಶುದ್ಧ ಬೌದ್ಧಿಕ ದಿವಾಳಿತನ.
ಖ್ಯಾತ ಕಲಾವಿದ ಎಂ.ಎಫ್.ಹುಸೇನ್ ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿ ಅವಹೇಳನ ಮಾಡಿದರೆ, `ಅದರಲ್ಲಿ ತಪ್ಪೇನೂ ಇಲ್ಲ. ಅದು ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಸಿದ ವಿಚಾರ. ಅದನ್ನು ವಿರೋಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಚಾರ ಮಾಡಿದಂತೆ'ಎಂದು ನಮ್ಮ ಬುದ್ಧಿಜೀವಿಗಳು ಬೊಬ್ಬೆ ಹೊಡೆಯುತ್ತಾರೆ. ಈ ವಿವಾದವನ್ನು ನೋಡುತ್ತಾ, ತಾನಿದ್ದೇನೆ, ತನಗೆ ಕಣ್ಣು-ಕಿವಿಗಳಿವೆ ಎಂಬುದನ್ನು ಸಹ ಮರೆತು ಸರಕಾರ ಕುಳಿತುಬಿಡುತ್ತದೆ. ಯಾವ ಮಂತ್ರಿಯೂ ತುಟಿಪಿಟಿಕ್ಕೆನ್ನುವುದಿಲ್ಲ. ಆದರೆ ಜಗತ್ತಿನೆಲ್ಲೆಡೆ ಪ್ರದರ್ಶನವಾದರೂ, ಯಾವ ಅಹಿತಕರ ಘಟನೆಗಳಾಗದಿದ್ದರೂ `ಡ ವಿನ್ಸಿ ಕೋಡ್'ನ್ನು ನಿಷೇಸಿದರೆ ಹೇಗೆ, ನಿಷೇಸಲಾಗದಿದ್ದರೆ ಏನು ಮಾಡಬೇಕೆಂದು ಸರಕಾರ ಯೋಚಿಸುವುದಿದೆಯಲ್ಲ, ಇದು ಗಾಬರಿ ಹುಟ್ಟಿಸುವ ವಿಚಾರ.
ಪುಸ್ತಕವಿರಬಹುದು, ಸಿನಿಮಾವಿರಬಹುದು ಅದನ್ನು ನಿಷೇಸುವ ಕಲ್ಪನೆಯೇ ಆಘಾತಕಾರಿಯಾದದ್ದು. `ರಂಗ್ ದೇ ಬಸಂತಿ'ಚಿತ್ರ ಬಿಡುಗಡೆಗೆ ಮುನ್ನ ವಿವಾದಕ್ಕೊಳಗಾದಾಗ ಈ ಚಿತ್ರವನ್ನು ಸೈನಿಕ ಅಕಾರಿಗಳು ವೀಕ್ಷಿಸಿ, ಪ್ರದರ್ಶನಕ್ಕೆ ಅನುಮತಿ ನೀಡಿದರು. `ಬಾಂಬೆ'ಚಿತ್ರ ಶಿವಸೇನೆ ನಾಯಕ ಬಾಳಠಾಕ್ರೆ ನೋಡಿ ಅನುಮತಿ ನೀಡಿದ ನಂತರವೇ ತೆರೆಕಂಡಿದ್ದು. ಅಲ್ಪಸಂಖ್ಯಾತರಿಗೆ ನೋವಾಗುವುದೆಂದು ಭಾವಿಸಿ ಸಲ್ಮಾನ್ ರಶ್ದಿಯ `ಸೆಟಾನಿಕ್ ವರ್ಸಸ್'ಪುಸ್ತಕವನ್ನು ನಿಷೇಸಲಾಯಿತು. ಗೊತ್ತಿರಲಿ, `ಜೀಸಸ್ ಕ್ರೈಸ್ಟ್ ಸೂಪರ್‌ಸ್ಟಾರ್'ಎಂಬ ಚಿತ್ರದ ಮೇಲೆ ನಿಷೇಧ ಹೇರಿದ ವಿಶ್ವದ ಏಕೈಕ ಪ್ರಜಾಪ್ರಭುತ್ವ ದೇಶವೆಂದರೆ ಭಾರತ! ಬೇರೆ ಯಾವ ದೇಶವೂ ಈ ಚಿತ್ರದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ.
ಬೇರೆಯವರಿಗಿಲ್ಲದ ಕಾಳಜಿ ನಮಗೇಕೆ? ಅವರ ಕಾಳಜಿಯೆಲ್ಲವನ್ನೂ ನಾವೇ ಗುತ್ತಿಗೆ ಪಡೆದಿದ್ದೇವಾ? ಬಗ್ಗಿ ಎನ್ನದಿದ್ದರೂ ಮೊದಲೇ ಬಾಗಿ, ಬೆಂಡಾಗಿ ಬೋರಲಾಗುವ ನಮ್ಮ ದಾಸ್ಯತ್ವಕ್ಕೆ ಏನನ್ನೋಣ? `ಡ ವಿನ್ಸಿ ಕೋಡ್' ಚಿತ್ರ ಜಗತ್ತಿನಾದ್ಯಂತ ಪ್ರದರ್ಶಿತವಾಗುತ್ತಿದೆ. ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಅದು ಯಾವ ಹಿಂಸೆಗೂ ಪ್ರಚೋದನೆಯಾಗಿಲ್ಲ. ಜಗತ್ತಿನ ಎಲ್ಲ ಕ್ರೈಸ್ತರು ಈ ಚಿತ್ರವನ್ನು ಸಹಜವಾಗಿ, ಮುಕ್ತವಾಗಿ ಸ್ವೀಕರಿಸುತ್ತಿರುವಾಗ ಭಾರತೀಯ ಕ್ರೈಸ್ತರು ನಿಷೇಧದ ಮಾತನಾಡುತ್ತಿರುವುದೇಕೆ? ಪುಸ್ತಕ ಬಂದಾಗ ನಿಷೇಸಬೇಕೆಂದು ಅನಿಸದಿದ್ದುದು ಈಗೇಕೆ ಅನಿಸುತ್ತಿದೆ? ಇದೊಂದು ಕಾಲ್ಪನಿಕ, ಕಟ್ಟುಕತೆಯೆಂದು ಸ್ವತಃ ಲೇಖಕನೇ ಹೇಳಿದ್ದಾನೆ. ಹೀಗಿರುವಾಗ ನಮಗೇಕೆ ತುರಿಕೆಯಾಗ ಬೇಕು?
ದುಷ್ಟರಿಗೆ ಮಣಿಯಲಾರೆವು ಅಂದ್ರೆ ಮಣಿಸಲಾರೆವು ಎಂದೂ ಅರ್ಥ!
ವಿಶ್ವೇಶ್ವರ ಭಟ್:
ನಮ್ಮ ದೇಶದ ಎಲ್ಲ ನಗರಗಳನ್ನು ತಲ್ಲಣಗೊಳಿಸಲು ಬಾಂಬ್‌ಗಳನ್ನೇ ಹಾಕಬೇಕಿಲ್ಲ, ಟ್ರೇನ್ ಸೋಟವನ್ನೂ ಮಾಡಬೇಕಿಲ್ಲ, ಭಯೋತ್ಪಾದಕ ಕೃತ್ಯವನ್ನೂ ಎಸಗಬೇಕಿಲ್ಲ. ಎರಡು ದಿನ ಉಧೋ ಎಂದು ಮಳೆ ಸುರಿದರೂ ಸಾಕು. ಎಲ್ಲ ನಗರಗಳೂ ಭಯೋತ್ಪಾದಕ ದಾಳಿಗೆ ಸಿಲುಕಿದಂತೆ ಬಾಲ ಮುದುಡಿಕೊಂಡು ಸ್ತಬ್ಧವಾಗುತ್ತವೆ. ಹಾಗಂತ ಇದೇನು ಪ್ರಕೃತಿ ವಿಕೋಪವೂ ಅಲ್ಲ, ವರುಣನ ಮುನಿಸೂ ಅಲ್ಲ. ಒಂದೇ ಒಂದು ದಿನದ ಮಳೆಯನ್ನು ಸಹಿಸಿಕೊಳ್ಳುವ ಸಹನೆ, ಶಕ್ತಿ ನಮ್ಮ ಯಾವ ನಗರಗಳಿಗೂ ಇಲ್ಲ. ಅವು ಅಷ್ಟೊಂದು ಶಿಥಿಲ, ಪೊಳ್ಳು.
ಮೊನ್ನೆ ದಿಲ್ಲಿಯಲ್ಲಿ ಎರಡು ದಿನ ಮಳೆ ಸುರಿಯಿತು. ಇಡೀ ದಿಲ್ಲಿ ಗಪ್. ಅಲ್ಲಿನ ರಸ್ತೆಗಳು `ನಗರದಲಿ ಇದೇನಿದು ನದಿಯೊಂದು ಓಡಿದೆ' ಎಂಬಂತೆ ಜಲಾವೃತಗೊಂಡಿದ್ದವು. ಕೇಂದ್ರ ಸರ್ಕಾರ ಕೈಕಟ್ಟಿ ಸುಮ್ಮನೆ ಕುಳಿತಿತ್ತು. ಏನಿಲ್ಲವೆಂದರೂ ದಿಲ್ಲಿಯ ಕಾಲುಭಾಗ ತೇಲುತ್ತಿತ್ತು. ಮುಂಬೈ, ದಿಲ್ಲಿ, ಬೆಂಗಳೂರು, ಚೆನ್ನೈನಲ್ಲಿ ಜೋರಾಗಿ ನಾಲ್ಕು ಹನಿ ಮಳೆ ಸುರಿದರೆ ಜನಜೀವನ ಗಾಳುಮೇಳು. ಅದರಲ್ಲೂ ಮಳೆರಾಯನಿಗೆ `ಹುಯ್ಯೋ, ಹುಯ್ಯೋ' ಎಂದು ತಿದಿ ಊದಿದರೆ ಮುಗಿದೇ ಹೋಯಿತು. ಬಾಂಬ್ ದಾಳಿ ಮಾಡಬೇಕಿಲ್ಲ. ನಮ್ಮ ನಗರಗಳನ್ನು ಆ ಪರಿ ಗಬ್ಬೆಬ್ಬಿಸಿಬಿಟ್ಟಿದ್ದೇವೆ. ನಮ್ಮ ನಗರಗಳು ನಮ್ಮ ಸ್ವಾರ್ಥ, ದುರಾಸೆ, ಲಜ್ಜೆಗೇಡಿತನ, ಭ್ರಷ್ಟತೆಯ ನಾಗರಿಕತೆಯಂತೆ ಭಾಸವಾಗುತ್ತದೆ.
ಎಂಥ ವಿಪರ್ಯಾಸ ನೋಡಿ, ಎಲ್ಲರ ಮನೆಗಳೂ ಫಳಫಳ. ಆದರೆ ಹೊರಗೆ ಕಾಲಿಟ್ಟರೆ ಕೊಚ್ಚೆ. ಎಲ್ಲರದ್ದೂ ಸುಂದರ ಮಹಲು. ಹೊರಗೆ ಮಾತ್ರ ಗಲೀಜು. ನಮ್ಮ ಮನೆಯಷ್ಟೇ ಸುಂದರವಾಗಿದ್ದರೆ ಸಾಕು, ಹೊರಗೇನಾದರೂ ನಮಗೆ ಸಂಬಂಧವೇ ಇಲ್ಲ. ಮನೆ ಮುಂದಿನ ರಸ್ತೆ, ಗಟಾರದ ತೂಬು ಕಟ್ಟಿದರೆ ನೀರು ನಮ್ಮ ಮನೆಯ ಹೊಸ್ತಿಲೊಳಗೇ ನುಗ್ಗುತ್ತದೆಂಬುದನ್ನೂ ಯೋಚಿಸುವುದಿಲ್ಲ. ಇದು ತಗ್ಗು ಪ್ರದೇಶಗಳಲ್ಲಿ ವಾಸಿಸುವವರದ್ದೊಂದೇ ಗೋಳಲ್ಲ. ನಗರವಾಸಿಗಳೆಲ್ಲರ ಮಳೆಗಾಲದ ಬವಣೆ.
ಇರಲಿ, ಮೊನ್ನೆ ಮುಂಬಯಿ ರೈಲಿನಲ್ಲಿ ಸೋಟಗಳಾಗಿ ಇನ್ನೂರಕ್ಕೂ ಹೆಚ್ಚು ಮಂದಿ ಸತ್ತು, ಏಳು ನೂರಕ್ಕೂ ಹೆಚ್ಚು ಜನರಿಗೆ ಗಾಯಗಳಾದಾಗ, ಕೇವಲ ೨೪ ಗಂಟೆಯೊಳಗೆ ಮುಂಬಯಿ ಸಹಜಸ್ಥಿತಿಗೆ ಮರಳಿತು ಎಂದು ಎಲ್ಲ ಪತ್ರಿಕೆಗಳು ಬರೆದವು. ಇಡೀ ಘಟನೆಗೆ ಮುಂಬಯಿ ವಾಸಿಗಳು ತೋರಿದ ಪ್ರತಿಕ್ರಿಯೆ ಅದ್ಭುತವಾದುದು, ಬಾಂಬ್ ಸೋಟದಿಂದ ಮುಂಬಯಿ ತಲ್ಲಣಗೊಳ್ಳಲಿಲ್ಲ, ಘಟನೆಯ ಮರುದಿನ ಜನಜೀವನ ಮಾಮೂಲಿನಂತಿತ್ತು, ರೈಲು ಸಂಚಾರಕ್ಕೂ ವ್ಯತ್ಯಯವುಂಟಾಗಲಿಲ್ಲ, ಏನೂ ಆಗಿಯೇ ಇಲ್ಲವೆಂಬಂತೆ ಜನರು ಪ್ರತಿಕ್ರಿಯಿಸಿದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದವು.
ಆದರೆ ಅಸಲಿ ಚಿತ್ರಣವೇ ಬೇರೆ ಎಂದು ಮುಂಬಯಿಯಿಂದ ಬಂದ ಪತ್ರಕರ್ತ ಮಿತ್ರರೊಬ್ಬರು ಹೇಳುತ್ತಿದ್ದರು. ಮುಂಬಯಿ ಅದೆಷ್ಟು ಯಾಂತ್ರಿಕವಾಗಿದೆಯೆಂದರೆ ಇಂಥ ಪ್ರಮುಖ ದುರ್ಘಟನೆ ಸಂಭವಿಸಿದಾಗಲೂ ಅಲ್ಲಿನ ಜನರಿಗೆ ಕಂಬನಿ ಮಿಡಿಯಲು, ಪ್ರತಿಭಟನೆ ವ್ಯಕ್ತಪಡಿಸಲು ಪುರುಸೊತ್ತಿರಲಿಲ್ಲ. ಪಕ್ಕದ ಮನೆಯವನೇ ಬಾಂಬ್ ಸೋಟಕ್ಕೆ ಬಲಿಯಾದಾಗಲೂ ಸಹಾಯಹಸ್ತ ಚಾಚಲು ಸಮಯವಿರಲಿಲ್ಲ. ಅಲ್ಲಲ್ಲಿ ಕೆಲವರು ನೆರವಿಗೆ ಬಂದಿರಬಹುದು, ರಕ್ತದಾನ ಮಾಡಿರಬಹುದು. ಆದರೆ ಹೆಚ್ಚಿನವರ ಪ್ರತಿಕ್ರಿಯೆ ತಣ್ಣಗಿತ್ತು. ಹೀಗಿರುವಾಗ ಜನಜೀವನ ಮಾಮೂಲಿಗೆ ಬಾರದಿರುವುದೇ? ಹಾಗೆ ನೋಡಿದರೆ ಮುಂಬಯಿ ವಾಸಿಗಳು ಇಂಥ ಘಟನೆಯಾದಾಗಲೂ ಪ್ರತಿಕ್ರಿಯಿಸಲೇ ಇಲ್ಲ. ಒಂದು ವೇಳೆ ಪ್ರತಿಕ್ರಿಯಿಸಿದ್ದರೆ ೨೪ ಗಂಟೆಯೊಳಗೆ ಜನಜೀವನ ಸಹಜಸ್ಥಿತಿಗೆ ಮರಳುತ್ತಿರಲೇ ಇಲ್ಲ. ಬಹುತೇಕ ಮಂದಿಗೆ ಇದೊಂದು ಕೆಟ್ಟ ನೆನಪು ಎಂಬುದನ್ನು ಬಿಟ್ಟರೆ ದೊಡ್ಡ ದುರ್ಘಟನೆಯಾಗಿ ಕಾಡಲೇ ಇಲ್ಲ.
ಇದು ಜನರ ಪ್ರತಿಕ್ರಿಯೆಯಾದರೆ, ಸರ್ಕಾರಗಳದ್ದು ಸಹ ಭಿನ್ನವಾಗೇನೂ ಇರಲಿಲ್ಲ. ಮುಂಬಯಿ ನಗರಿ ಮೇಲೆ ಇಂಥ ಆಪತ್ತು ಎಗರಿ ಬರಬಹುದೆಂದು ಸೂಚನೆಯಿತ್ತು. ಗುಪ್ತಚಾರ ದಳಕ್ಕೆ ಸಣ್ಣ ಸುಳಿವಿತ್ತು. ಆದರೆ ಸಕಾಲಕ್ಕೆ ಎಚ್ಚರಗೊಳ್ಳುವಲ್ಲಿ ಅದು ವಿಫಲವಾಯಿತು. ಬಾಂಬ್ ಸೋಟದ ನಂತರ ನಮ್ಮ ಪ್ರಧಾನಿ ಪ್ರತಿಕ್ರಿಯಿಸಿದ ರೀತಿ ನೋಡಿ. ದೇಶವನ್ನುದ್ದೇಶಿಸಿ ೨೪ ಗಂಟೆಗಳ ನಂತರ ಪ್ರಧಾನಿ ಮಾತಾಡಿದರು. ಅದರಲ್ಲಿ ಹೊಸತೇನೂ ಇರಲಿಲ್ಲ. `ಭಯೋತ್ಪಾದಕ ಕೃತ್ಯಗಳು ನಮ್ಮನ್ನು ಅರಗೊಳಿಸಲಾರವು' ಎಂಬ `ಬೃಹನ್ನಳೆಯ ಗರ್ಜನೆ' ಮಾಡಿದರು.
ಪಾಕ್ ಪ್ರಣೀತ ಭಯೋತ್ಪಾದಕ ಸಂಘಟನೆಗಳು ಭಾರತದ ಬೆನ್ನು ಮುರಿಯಲು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು, ಎಲ್ಲ ನಗರ, ಪುಣ್ಯ ಕ್ಷೇತ್ರ, ದೇಗುಲಗಳನ್ನು ಗುರಿಯಾಗಿಟ್ಟುಕೊಂಡು ಅಲ್ಲೆಲ್ಲ ಬಾಂಬ್ ಸೋಟಿಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರೆ, ನಮ್ಮ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮಾತ್ರ`ಜಗತ್ತಿನ ಯಾವ ದುಷ್ಟಶಕ್ತಿಗೂ ಭಾರತ ಮಣಿಯುವುದಿಲ್ಲ' ಎಂಬ ಪ್ರಯೋಜನಕ್ಕೆ ಬಾರದ ಮಾತುಗಳನ್ನು ಆಡುತ್ತಿದ್ದರು.
ಕಳೆದ ಎರಡು ವರ್ಷಗಳಲ್ಲಿ ೨೫ಕ್ಕಿಂತ ಹೆಚ್ಚು ಬಾಂಬ್‌ಸೋಟ ಸಂಭವಿಸಿದ ನಂತರವೂ ಪ್ರಧಾನಿಯಾದವರು ದೃಢಚಿತ್ತದಿಂದ ಭಯೋತ್ಪಾದಕ ಶಕ್ತಿಗಳನ್ನು ಬಗ್ಗುಬಡಿಯುವುದನ್ನು ಬಿಟ್ಟು, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಈ ಸಮಸ್ಯೆಗೆ ಬೆಂಬಲ ಪಡೆದು ದುಷ್ಟಶಕ್ತಿಗಳನ್ನು ಸದೆಬಡಿಯುವುದನ್ನು ಬಿಟ್ಟು `ನಾವು ಯಾರಿಗೂ ಮಣಿಯುವುದಿಲ್ಲ' ಎಂಬ ಉತ್ತರಕುಮಾರನ ಪೌರುಷ ಮೆರೆದರೆ ಏನೂ ಆಗುವುದಿಲ್ಲ. ಮುಂಬಯಿಯಲ್ಲಿ ಸೋ ಸಂಭವಿಸಿದ ೪೮ ಗಂಟೆಗಳವರೆಗೂ ಪ್ರಧಾನಿಗೆ ಈ ಕೃತ್ಯದ ಹಿಂದಿರುವ ಶಕ್ತಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಇದ್ದರೂ ಸ್ಪಷ್ಟವಾಗಿ ಹೇಳಿರಲಿಲ್ಲ. `ನಮ್ಮ ಗಡಿಯಲ್ಲಿ ಕ್ರಿಯಾಶೀವಾಗಿರುವ ಭಯೋತ್ಪಾದಕ ಶಕ್ತಿಗಳು ಈ ಕೃತ್ಯವೆಸಗಿವೆ' ಎಂದು ಅನುಮಾನಪಡುತ್ತಲೇ, ಗಟ್ಟಿಯಾಗಿ ಬೊಟ್ಟು ಮಾಡಿ ಹೇಳಿದರೆ ಭಯೋತ್ಪಾದಕರು ಬೇಸರಿಸಿಕೊಂಡಾರು ಎಂಬ ಧಾಟಿಯಲ್ಲೇ ಪ್ರಧಾನಿ ಹೇಳುತ್ತಿದ್ದರು. ಇದು ನಿಜಕ್ಕೂ ದುರ್ದೈವ. ಭಯೋತ್ಪಾದನೆಗೆ ನಾವು ನೀಡುತ್ತಿರುವ ಉತ್ತರ ಇದು!
ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ ೨೫೦ಕ್ಕೂ ಹೆಚ್ಚು ಬಾಂಬ್ ಸೋಟಗಳಾಗಿವೆ. ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕಾಶ್ಮೀರದಲ್ಲಿ ಬಾಂಬ್ ಸೋಟಿಸದ ದಿನಗಳಿರಲಿಕ್ಕಿಲ್ಲ. ಈ ಎಲ್ಲ ದುಷ್ಕೃತ್ಯಗಳ ಹಿಂದೆ ಯಾವ ದೇಶದ ಕೈವಾಡವಿದೆ, ಯಾವ ಇಸ್ಲಾಮಿಕ್ ಸಂಘಟನೆಗಳು ಕೈಜೋಡಿಸಿವೆ ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಮಾಹಿತಿಯಿದೆ. ಆದರೆ ಸರ್ಕಾರ ಮಾಡಿದ್ದಾದರೂ ಏನು?
ದೇಶದಲ್ಲಿನ ಕೆಲವು ಇಸ್ಲಾಮಿಕ್ ಸಂಘಟನೆಗಳು ಈ ಭಯೋತ್ಪಾದಕ ಪಡೆಗಳಿಗೆ ಖುದ್ದು ನೆರವು ನೀಡುತ್ತಿವೆಯೆಂಬುದೂ ಸರ್ಕಾರಕ್ಕೆ ಗೊತ್ತು. ಆದರೆ ಸರ್ಕಾರ ಇವರ ವಿರುದ್ಧ ಯಾವ ಕ್ರಮ ಕೈಗೊಂಡಿದೆ? ಮುಂಬಯಿ ಸೋಟದ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಗಳ ಸಹಾಯವಿದ್ದೇ ಇದೆ. ಪಾಕಿಸ್ತಾನದಲ್ಲಿ ಕುಳಿತು ಇಂಥ ಕೃತ್ಯ ಎಸಗಲು ಸಾಧ್ಯವೇ ಇಲ್ಲ. ಪಾಕ್ ಪ್ರಾಯೋಜಿತ ಲಷ್ಕರ್-ಎ-ತಯ್ಬಾ, ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದಂಥ ಸಂಘಟನೆಗಳೇ ಈ ಘಟನೆಯ ಹಿಂದಿವೆಯೆಂಬುದು ಜಗತ್ತಿಗೇ ಗೊತ್ತಿದ್ದರೂ, ನಮ್ಮ ಮಂತ್ರಿಗಳು, ಅಕಾರಿಗಳು ಹೇಳುವುದನ್ನು ಕೇಳಬೇಕು.`ಮುಂಬಯಿ ಸೋಟಕ್ಕೆ ತಾವೇ ಕಾರಣವೆಂದು ಯಾವ ಉಗ್ರ ಸಂಘಟನೆಗಳೂ ಹೊಣೆಗಾರಿಕೆ ಹೊತ್ತಿಲ್ಲ. ಹೀಗಾಗಿ ಈಗಲೇ ಏನನ್ನೂ ಹೇಳುವಂತಿಲ್ಲ' ಎಂದು ಹೇಳಿಕೆ ನೀಡುತ್ತಾರೆ. ಇದೆಂಥ ಬೇಜವಾಬ್ದಾರಿತನ? ಇದೆಂಥ ಮೂರ್ಖ ಹೇಳಿಕೆ? ಅಪರಾಧ ಮಾಡಿದವನೇ ಅಪರಾಧದ ಬಗ್ಗೆ ಹೇಳಲಿ ಎಂದು ಇವರೆಲ್ಲ ಕಾದು ಕುಳಿತಿದ್ದಾರಾ?
ಈ ಮಧ್ಯೆ ಉತ್ತರಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್, `ಸಿಮಿ ಅಪ್ಪಟ ಸೆಕ್ಯುಲರ್ ಸಂಘಟನೆ' ಎಂದು ಭಯೋತ್ಪಾದಕ ಸಂಘಟನೆ ಪರವಾಗಿ ವಕಾಲತ್ತು ವಹಿಸಿ ಮಾತಾಡುತ್ತಾರೆ. ಇಡೀ ದೇಶ ಸುಮ್ಮನೆ ಕೇಳಿಸಿಕೊಳ್ಳುತ್ತದೆ. ಬೇರೆ ಯಾವ ದೇಶದಲ್ಲೂ ಇಂಥ ಹುಚ್ಚಾಟ ನಡೆಯಲಿಕ್ಕಿಲ್ಲ. ಪಾಕ್ ಪ್ರಾಯೋಜಿತ ಡಜನ್ ಗಟ್ಟಲೆ ಉಗ್ರಗಾಮಿ ಸಂಘಟನೆಗಳು ಒಂದೊಂದು ಗುರಿ, ಉದ್ದೇಶ, ಕಾರ್ಯ ಸಾಧನೆಯಿಟ್ಟುಕೊಂಡು ಭಾರತದ ಮೇಲೆ ಅಘೋಷಿತ ಯುದ್ಧವನ್ನೇ ಸಾರಿವೆ. ಆದರೆ ಸರ್ಕಾರ ಮಾತ್ರ ಕಣ್ಮುಚ್ಚಿ ಶಾಂತಿಮಂತ್ರ ಬೋಸುತ್ತಿದೆ. `ಯಾವ ದುಷ್ಟಶಕ್ತಿಗಳಿಗೂ ಮಣಿಯಲಾರೆವು' ಎಂದು ಪ್ರಧಾನಿ ಟಿವಿ ಮುಂದೆ ಹೇಳುತ್ತಾರೆ. What's this nonsense? ಯುದ್ಧ ಸಾರಿದವರ ಮುಂದೆ ಇನ್ನೂ ಶಾಂತಿಪಠಣ ಮಾಡುತ್ತಿದ್ದಾರಲ್ಲ? ಇದನ್ನು ಅಸಾಮರ್ಥ್ಯವೆನ್ನೋಣ, ಅಸಹಾಯಕವೆನ್ನೋಣವಾ?
ಇಲ್ಲೊಂದು ಪ್ರಸಂಗವನ್ನು ಹೇಳಬೇಕು. ಜಿಹಾದಿ ಉಗ್ರಗಾಮಿಗಳು ಮುಂಬಯಿ ರೈಲುಗಳಲ್ಲಿ ಸರಣಿ ಬಾಂಬ್‌ಗಳನ್ನು ಸೋಟಿಸುತ್ತಿದ್ದಾಗ ಲೆಬನಾನ್‌ನ ಹಸನ್ ನಸರುಲ್ಲಾ ನೇತೃತ್ವದ ಭಯೋತ್ಪಾದಕ ಸಂಘಟನೆ ಹಿಜ್‌ಬುಲ್ಲಾ, ಇಸ್ರೇಲ್‌ನ ಇಬ್ಬರು ಸೈನಿಕರನ್ನು ಅಪಹರಿಸಿತ್ತು. ಆದರೆ ಇಸ್ರೇಲ್ ಶಾಂತಿಮಂತ್ರ ಪಠಿಸುತ್ತಾ, ಬುದ್ಧಿವಾದ ಹೇಳುತ್ತಾ ಕುಳಿತುಕೊಳ್ಳಲಿಲ್ಲ. ಇಸ್ರೇಲ್ ಪ್ರಧಾನಿ ಇಹುದ್ ಒಲ್ಮೆಟ್ ಹುಜ್‌ಬುಲ್ಲಾ ಕೃತ್ಯವನ್ನು ಯುದ್ಧ ಪ್ರೇರಕ ಎಂದು ಪ್ರತಿಕ್ರಿಯಿಸಿದರು. ತನ್ನ ಕೇವಲ ಇಬ್ಬರು ಸೈನಿಕರನ್ನು ಅಪಹರಿಸಿದ್ದನ್ನೇ ಗಂಭೀರವಾಗಿ ಪರಿಗಣಿಸಿದ ಇಸ್ರೇಲ್, ಲೆಬನಾನ್ ಮೇಲೆ ದಾಳಿಗೆ ನಿರ್ಧರಿಸಿತು. ಇಸ್ರೇಲ್‌ನ ವಾಯುಪಡೆ ಕೇವಲ ಆರು ತಾಸಿನೊಳಗೆ ಲೆಬನಾನ್ ಮೇಲೆ ಬಾಂಬ್ ದಾಳಿ ಮಾಡಿತು. ಜನವಸತಿ ಕಟ್ಟಡ, ಸೇತುವೆ, ರಸ್ತೆ, ವಿಮಾನ ನಿಲ್ದಾಣಗಳ ಮೇಲೆ ಇಸ್ರೇಲ್ ಬಾಂಬ್ ಹಾಕಿತು. ಇದಕ್ಕೆ ಪ್ರತಿಯಾಗಿ ಲೆಬನಾನ್ ಇಸ್ರೇಲ್‌ನ ಶ್ಲೋಮಿ ಪಟ್ಟಣಕ್ಕೆ ಬಾಂಬ್ ಎಸೆಯಿತು.
ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಇಸ್ರೇಲ್ ಲೆಬನಾನ್‌ನ ಬೈರೂತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂರು ರನ್‌ವೇಗಳನ್ನು ಧ್ವಂಸಗೊಳಿಸಿತು. ಇಸ್ರೇಲ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ನಮ್ಮ ತಂಟೆಗೆ ಬಂದರೆ ಹಿಜ್‌ಬುಲ್ಲಾ ನಾಯಕ ಹಸನ್ ನಸರುಲ್ಲಾನನ್ನು ಕೊಲ್ಲುವುದಾಗಿ ಇಸ್ರೇಲ್ ಆಂತರಿಕ ಭದ್ರತಾ ಸಚಿವ ಬಹಿರಂಗವಾಗಿ ಹೇಳಿಕೆ ನೀಡಿದ. ಇಸ್ರೇಲ್ ಪ್ರತಿಕ್ರಿಯಿಸಿದ ರೀತಿಗೆ ಲೆಬನಾನ್ ಜಂಘಾಬಲವೇ ಉಡುಗಿ ಹೋಯಿತು. ಎರಡು ದಿನಗಳಲ್ಲಿ ಲೆಬನಾನ್‌ನ ೬೧ ಮಂದಿ ಸತ್ತರು. ಕೇವಲ ತನ್ನ ಇಬ್ಬರು ಸೈನಿಕರ ಅಪಹರಣಕ್ಕೆ ಇಸ್ರೇಲ್ ನೀಡಿದ ತಿರುಗೇಟು ಇದು!
ಇಸ್ರೇಲ್ ಹೊಡೆತಕ್ಕೆ ಬೆಚ್ಚಿಬಿದ್ದ ಲೆಬನಾನ್ ವಿಶ್ವಸಂಸ್ಥೆ ಮುಂದೆ ಸಹಾಯಕ್ಕಾಗಿ ಅಂಗಲಾಚಿತು. ಯುದ್ಧ ನಿಲ್ಲಿಸುವಂತೆ ಇಸ್ರೇಲ್‌ಗೆ ಆದೇಶಿಸಬೇಕೆಂದು ಒತ್ತಾಯಿಸಿತು. ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಷ್‌ನ ಮೇಲೆ ಸಹ ಒತ್ತಡ ಹೇರಿತು. ಪ್ರತೀಕಾರದ ತೀಕ್ಷ್ಣತೆ ಬಲ್ಲ ಬುಷ್ ಇಸ್ರೇಲನ್ನು ಸುಮ್ಮನಿರಿಸುವ ಉಸಾಬರಿಗೆ ಹೋಗಲಿಲ್ಲ. ಅದರ ಬದಲು ಗಡಿಯಾಚಿನ ಭಯೋತ್ಪಾದನೆಯನ್ನು ತತ್‌ಕ್ಷಣ ನಿಲ್ಲಿಸುವಂತೆ ಲೆಬನಾನ್‌ಗೇ ತಿರುಗೇಟು ಕೊಟ್ಟ! ಮೂರು ದಿನಗಳೊಳಗೆ ಲೆಬನಾನ್ `ಕುಂಯೋ ಮುರ್ರೋ' ಎಂದು ತೆಪ್ಪಗಾಯಿತು.
ಒಂದು ವೇಳೆ ಇದೇ ಘಟನೆ ಭಾರತದಲ್ಲಾಗಿದ್ದರೆ, ನಮ್ಮ ಸರ್ಕಾರ ಹೇಗೆ ನಡೆದುಕೊಳ್ಳುತ್ತಿತ್ತು? ಇಂಥ ಸಂದರ್ಭಗಳಲ್ಲಿ ಹಿಂದೆ ನಮ್ಮ ಸರ್ಕಾರಗಳು ಹೇಗೆ ವರ್ತಿಸಿವೆ ಎಂಬುದು ನಮಗೆ ಗೊತ್ತಿದೆ. ಮುಂಬಯಿ ಸೋಟದಲ್ಲಿ ಇನ್ನೂರು ಜನ ಸತ್ತಾಗಲೂ ನಾವು ಭಯೋತ್ಪಾದಕ ಸಂಘಟನೆಗಳಿಗೆ, ಅವನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ತಿರುಗೇಟು ಕೊಡುವುದಿರಲಿ, ಒಂದು ಸಣ್ಣ ಬಿಸಿಯನ್ನೂ ಮುಟ್ಟಿಸುವುದಿಲ್ಲವೆಂದರೆ, ನಮ್ಮ ಸರ್ಕಾರ, ನಾಯಕರು ಅದೆಷ್ಟು ನಿರ್ಲಜ್ಜರು, ಷಂಡರಾಗಿರಬಹುದು ಯೋಚಿಸಿ.
ಇಷ್ಟಾದ ನಂತರ ನಾವು ಕೈಗೊಂಡ ದೊಡ್ಡ ನಿರ್ಧಾರವೆಂದರೆ ಪಾಕ್ ಜತೆಗೆ ಕಾರ್ಯದರ್ಶಿ ಮಟ್ಟದ ಮಾತುಕತೆಯನ್ನು ಸ್ಥಗಿತಗೊಳಿಸುವುದು, ಅಷ್ಟೇ. ಎರಡೂ ದೇಶಗಳ ಮುಖ್ಯಸ್ಥರ ಮಾತುಕತೆಯೇ ಆಚರಣೆಗೆ ಬರದಿರುವಾಗ ಕಾರ್ಯದರ್ಶಿಗಳದ್ದ್ಯಾವ ಲೆಕ್ಕ? ಇದರಿಂದ ಭಾರತ ಸಾಸಿದ್ದಾದರೂ ಏನು?
ಇನ್ನು ಕೆಲವೇ ದಿನಗಳಲ್ಲಿ ಮುಂಬಯಿ ರೈಲು ಸೋಟ ಘಟನೆಯನ್ನು ನೆನಪಿನ ಚೀಲದಲ್ಲಿಟ್ಟು ಮರೆತುಬಿಡುತ್ತೇವೆ. ಸತ್ತವರ ನೆನಪೂ ಆಗುವುದಿಲ್ಲ. ತನಿಖೆ, ವಿಚಾರಣೆ ಎಂದು ಸರ್ಕಾರ ತಿಪ್ಪೆ ಸಾರಿಸುತ್ತದೆ. ಸರ್ಕಾರ ಈಗ ನೀಡಿದ ಭದ್ರತಾ ಕ್ರಮಗಳನ್ನೆಲ್ಲ ವಾಪಸ್ ಪಡೆಯುತ್ತದೆ. ಎಲ್ಲವೂ ಸುಮ್ಮನಾಯಿತೆಂದು ಅಂದುಕೊಳ್ಳುತ್ತೇವೆ.
ಆದರೆ ಉಗ್ರರು ಸುಮ್ಮನಿರುವುದಿಲ್ಲ. ಗೊತ್ತಿರಲಿ. ಮುಂದಿನ ಸೋಟ ಸಂಭವಿಸುವವರೆಗಷ್ಟೇ ವಿರಾಮ. ಛೀ! ನಮಗೊಂದಿಷ್ಟು...!?
Subscribe to:
Posts (Atom)