Thursday, August 10, 2006

ತಿರುಪತಿಯಲ್ಲಿ ಮತಾಂತರ

ತಿರುಮಲ ತಿರುಪತಿ ಸಂರಕ್ಷಣಾ ಸಮಿತಿ (ಕರ್ನಾಟಕ)
ನಂ. ೫೫, ಯಾದವ ಸ್ಮೃತಿ, ಶೇಷಾದ್ರಿಪುರ, ೧ನೇ ಮುಖ್ಯ ರಸ್ತೆ, ಬೆಂಗಳೂರು - ೫೬೦೦೨೦
(ಪ್ರಕಟಣೆಯ ಕೃಪೆಗಾಗಿ)

ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಪರಮ ಪವಿತ್ರ ಕ್ಷೇತ್ರ ಭೂವೈಕುಂಠವೆನಿಸಿರುವ ತಿರುಮಲ ತಿರುಪತಿ ಪರಿಸರದಲ್ಲಿ ಅನೇಕ ರೀತಿಯ ಕ್ರಿಸ್ತೀಕರಣ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ.

ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು, ಪೇಜಾವರ ಮಠ, ಉಡುಪಿ ಇವರ ಆದೇಶದಂತೆ ಸತ್ಯ ಶೋಧನಾ ಸಮಿತಿಯೊಂದು ಎರಡು ದಿನಗಳ ಕಾಲ ತನಿಖೆ ನಡೆಸಿದೆ. ಆಂಧ್ರ ಪ್ರದೇಶದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಶ್ರೀ ಬಿಕ್ಷಾಪತಿಯವರ ನೇತೃತ್ವದ ಈ ಸಮಿತಿ ತನ್ನ ವರದಿಯಲ್ಲಿ ತಿರುಮಲ ತಿರುಪತಿ ಶ್ರೀ ಕ್ಷೇತ್ರದಲ್ಲಿ ತೀವ್ರವಾಗಿ ನಡೆಯುತ್ತಿರುವ ಕ್ರಿಸ್ತೀಕರಣದ ಚಟುವಟಿಕೆಗಳನ್ನು ಬಹಿರಂಗಗೊಳಿಸಿದೆ.

ಸತ್ಯ ಶೋಧನಾ ಸಮಿತಿಯು ಬಹಿರಂಗಗೊಳಿಸಿರುವ ವರದಿಯ ಸಂಕ್ಷಿಪ್ತ ರೂಪ

ಸಮಿತಿಯು ದಿನಾಂಕ ೨೧, ೨೨ ಜೂನ್ ೨೦೦೬ರಂದು ತಿರುಪತಿ-ತಿರುಮಲಕ್ಕೆ ಭೇಟಿ ನೀಡಿದಾಗ ೫೦ಕ್ಕೂ ಹೆಚ್ಚು ಸಾರ್ವಜನಿಕರು ಸಮಿತಿಯ ಸದಸ್ಯರನ್ನು ಭೇಟಿ ಮಾಡಿ ತಮ್ಮ ಗಮನಕ್ಕೆ ಬಂದ ಚಟುವಟಿಕೆಗಳನ್ನು ವಿವರಿಸಿದ್ದಾರೆ.

ಅಲ್ಲದೆ ಸಮಿತಿಯು TTDಯ ನಿರ್ವಾಹಕ ಮುಖ್ಯಸ್ಥ ಶ್ರೀ APVN ಶರ್ಮಾ, IAS ರವರನ್ನು ದಿನಾಂಕ ೨೨-೬-೦೬ರಂದು ಭೇಟಿ ಮಾಡಿತು. ಅದೇ ಸಂದರ್ಭದಲ್ಲಿ ಶ್ರೀ ಧರ್ಮಾ ರೆಡ್ಡಿ, ವಿಶೇಷಾಧಿಕಾರಿಗಳು, ಶ್ರೀ ಅರವಿಂದ ಕುಮಾರ್, IPS, ಮುಖ್ಯ ಸುರಕ್ಷಾ ಅಧಿಕಾರಿ, ಶ್ರೀ ರಾಮಚಂದ್ರ ರೆಡ್ಡಿ, ಕಾನೂನು ಅಧಿಕಾರಿ ಇವರೂ ಉಪಸ್ಥಿತರಿದ್ದರು. ಈ ಎಲ್ಲರೂ ನೀಡಿದ ಮಾಹಿತಿಯ ವಿಶ್ಲೇಷಣೆಯಿಂದ ಹೊರಬಂದ ಸತ್ಯಾಂಶಗಳು:

೧. ಕ್ರೈಸ್ತಮತ ಪ್ರಚಾರ ಮತ್ತು ಮತಾಂತರ ಪ್ರಯತ್ನದ ಚಟುವಟಿಕೆಗಳು
ಕ್ರಿಶ್ಚಿಯನ್ ಸಮುದಾಯದ ವ್ಯಕ್ತಿಗಳು ಹಾಗೂ ಮಿಶನರಿಗಳು ತಿರುಪತಿ-ತಿರುಮಲದಲ್ಲಿ ತಮ್ಮ ಮತಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಕಾಲೇಜುಗಳಲ್ಲಿ ಪರೀಕ್ಷೆ ನಡೆಯುವಾಗ ವಿದ್ಯಾರ್ಥಿಗಳಿಗೆ, ತಿರುಮಲದಿಂದ ತಿರುಪತಿಗೆ ಬಸ್‌ನಲ್ಲಿ ಬರುವಾಗ ಯಾತ್ರಾರ್ಥಿಗಳಿಗೆ, ಧರ್ಮದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಗೆ ಬೈಬಲ್ ಹಂಚುವ ಪ್ರಕರಣಗಳ ಬಗ್ಗೆ ದೂರುಗಳು ದಾಖಲಾಗಿವೆ.

೨. TTDಯ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೈಸ್ತಮತ ಪ್ರಚಾರ
* ಶ್ರೀ ವೇಂಕಟೇಶ್ವರ ವಿಶ್ವವಿದ್ಯಾಲಯದ (SV University) ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದೇವಸಂಗೀತಂ ವಿದ್ಯಾರ್ಥಿಗಳಿಗೆ ಕ್ರೈಸ್ತಮತ ಪ್ರಚಾರ ಮಾಡುವುದಲ್ಲದೆ ಚರ್ಚ್‌ಗೆ ಹೋಗಲು ಬಲವಂತ ಮಾಡಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ.
* ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀಮತಿ ವೀಣಾ ನೋಬಲ್ ದಾಸ್ ವಿಶ್ವವಿದ್ಯಾಲಯದ ಕಾಲೇಜುಗಳಿಂದ ವೇಂಕಟೇಶ್ವರ ಮತ್ತು ಪದ್ಮಾವತಿಯರ ಭಾವಚಿತ್ರಗಳನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಯೇಸುಕ್ರಿಸ್ತನ ಭಾವಚಿತ್ರ ಮತ್ತು ಶಿಲುಬೆಗಳನ್ನು ಸ್ಥಾಪಿಸಿದ್ದಾರೆ. ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಣೆಗೆ ತಿಲಕ ಇಡುವುದನ್ನು ನಿಷೇಧಿಸಿದ್ದಾರೆ.

೩. TTDಯಲ್ಲಿ ಉದ್ಯೋಗ
* TTDಯ ಕೆಲವು ಹುದ್ದೆಗಳಿಗೆ ಕ್ರೈಸ್ತರು ಮತ್ತು ಮುಸಲ್ಮಾನರನ್ನು ಕಾನೂನು ಮೀರಿ ನೇಮಿಸಿಕೊಳ್ಳಲಾಗಿದೆ. ಹೀಗಾಗಿ ತಿರುಮಲದಲ್ಲಿ ನೆಲೆಸಿರುವ ೪೦ ಕ್ರೈಸ್ತ ಕುಟುಂಬಗಳು ಪ್ರಾರ್ಥನಾಕೂಟ, ಸಭೆಗಳನ್ನು ನಡೆಸುತ್ತಿದ್ದಾರೆ. ತೋಟಗಾರಿಕೆ ಮೇಲ್ವಿಚಾರಕರಾಗಿರುವ ಕ್ರೈಸ್ತಮತಸ್ಥರಾದ ಗೋಪೀನಾಥ್ ``ಆ ಕಪ್ಪು ಶಿಲೆಗೆ ಹೂವಿನ ಹಾರ ಏಕೆ ಹಾಕುತ್ತೀರಿ?'' ಎಂದು ಶ್ರೀ ವೇಂಕಟೇಶ್ವರನ ಮೂರ್ತಿಯನ್ನು ಭಕ್ತಾದಿಗಳ ಎದುರೇ ನಿಂದಿಸುತ್ತಾರೆ.

ಗುತ್ತಿಗೆ ಕೆಲಸಗಾರರನ್ನು (Contract employees) ತೆಗೆದುಕೊಳ್ಳುವಾಗಲೂ ಹಿಂದುಗಳಲ್ಲದವರನ್ನು ಕಾನೂನಿನ ವಿರುದ್ಧವಾಗಿ ತೆಗೆದುಕೊಳ್ಳಲಾಗುತ್ತಿದೆ. ಸುಮಾರು ೪೦ ಮುಸ್ಲಿಂ ಕುಟುಂಬಗಳು ಅಂಗಡಿ ಮುಂಗಟ್ಟು ತೆರೆದು ತಿರುಮಲದಲ್ಲಿ ನೆಲೆಸಿವೆ.

೪. ತಿರುಮಲದಲ್ಲಿ ನಡೆಯುತ್ತಿರುವ ಇತರ ಕಾನೂನುಬಾಹಿರ ಚಟುವಟಿಕೆಗಳು
* TTD ಅಧಿಕಾರಿಯ ಬೇಜವಾಬ್ದಾರಿ ಹಾಗೂ ಅಶ್ರದ್ಧೆಯ ಫಲವಾಗಿ ತಿರುಮಲ-ತಿರುಪತಿಯಲ್ಲಿ ಮದ್ಯಮಾರಾಟ, ಮಾಂಸಮಾರಾಟ, ಜೂಜು, ಗೋಹತ್ಯೆಯಂತಹ ಘೋರಕೃತ್ಯಗಳು ನಡೆಯುತ್ತಿವೆ.
* ನಾಗಲಾಪುರದ TTD ಕಲ್ಯಾಣಮಂಟಪವನ್ನೇ ಕ್ರೈಸ್ತ ಪಾದ್ರಿಗಳು ತಮ್ಮ ಪ್ರಾರ್ಥನಾಸಭೆಗಳಿಗೆ ಉಪಯೋಗಿಸುತ್ತಿದ್ದಾರೆ.
* ಹೊಸದಾಗಿ ರಚನೆಯಾಗಿರುವ TTDಯ ಮಂಡಳಿಗೆ ಮತಾಂತರಿತ ವ್ಯಕ್ತಿ ಶ್ರೀ ರೋಸಯ್ಯ, IAS ರವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ತಿರುಮಲದಲ್ಲಿ ಭಕ್ತಾದಿಗಳ ಇಚ್ಛೆಗೆ ವಿರುದ್ಧವಾಗಿ mallಗಳು, food courtಗಳು ಮುಂತಾದ ಮನರಂಜನಾ ಚಟುವಟಿಕೆಗಳನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರಾರಂಭಿಸಲು ಮುಂದಾಗಿದೆ.

೫. ಪವಿತ್ರ ಸಪ್ತಗಿರಿ
`ತಿರುಮಲದ ಎಲ್ಲ ಏಳು ಬೆಟ್ಟಗಳೂ ಶ್ರೀ ವೇಂಕಟೇಶ್ವರನ ಅಧೀನ, ಅವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ' ಎಂದು ಆಂಧ್ರಪ್ರದೇಶದ ಉಚ್ಚನ್ಯಾಯಾಲಯದ ವಿಭಾಗೀಯ ಪೀಠವು ತನ್ನ ತೀರ್ಪೊಂದರಲ್ಲಿ ಆದೇಶ ಹೊರಡಿಸಿದೆ. ಈ ತೀರ್ಪನ್ನು ಮತ್ತು

ಕೋಟ್ಯಂತರ ಭಕ್ತಾದಿಗಳ ಭಾವನೆಗಳನ್ನು ತಿರಸ್ಕರಿಸಿ ತಿರುಮಲದ ಎರಡೇ ಬೆಟ್ಟಗಳನ್ನೊಳಗೊಂಡ ಸುಮಾರು ೨೭ ಚದರ ಕಿ. ಮೀ. ಕ್ಷೇತ್ರವನ್ನು ಮಾತ್ರ ತಿರುಮಲದ ಅಧೀನಕ್ಕೆ ಬಿಟ್ಟು ಉಳಿದ ಕ್ಷೇತ್ರವನ್ನು ಅದರ ವ್ಯಾಪ್ತಿಯಿಂದ ಹೊರತೆಗೆದು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಯೋಚನೆ ನಡೆದಿದೆ.

೬. TTDಯ ಸಂಪನ್ಮೂಲ
`ಹಿಂದು ಧರ್ಮ ಪರಿರಕ್ಷಣಾ ಸಮಿತಿ'ಯ `ಹಿಂದು' ಪದ ಕೈಬಿಟ್ಟು ಅದನ್ನು `ಧರ್ಮ ಪ್ರಚಾರ ಪರಿಷತ್' ಎಂದು ಮರುನಾಮಕರಣ ಮಾಡಲಾಗಿದೆ. ತಿರುಮಲದಲ್ಲಿ ಭಕ್ತಾದಿಗಳ ಕೊಡುಗೆಯಿಂದ ಸಂಗ್ರಹವಾಗುವ ಧನರಾಶಿಯು ಹಿಂದುಧರ್ಮದ ಪ್ರಚಾರಕ್ಕಾಗಿ, ತತ್ಸಂಬಂಧಿತ ಉಪನ್ಯಾಸಗಳು, ಹರಿಕಥೆ, ಪ್ರವಚನ, ಗಾಯನಸಭೆ ಇತ್ಯಾದಿಗಳಿಗೆ, ಹಿಂದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ವಿನಿಯೋಗವಾಗಬೇಕಿತ್ತು. ಆದರೆ, ಇಂತಹ ಕಾರ್ಯಗಳನ್ನು ಗಣನೀಯ ಪ್ರಮಾಣದಲ್ಲಿ ಮಾಡುತ್ತಲೇ ಇಲ್ಲ. ಬದಲಾಗಿ ಇತರ ಚಟುವಟಿಕೆಗಳಿಗೆ ಹಣವನ್ನು ವಿನಿಯೋಗಿಸಲಾಗುತ್ತಿದೆ. ಬಹುದೊಡ್ಡ ಜಾಗವನ್ನು ಮಸೀದಿ ಕಟ್ಟಲು ದಾನ ಮಾಡಲಾಗಿದೆ.

ಸಮಿತಿಯ ಸದಸ್ಯರು:

ಶ್ರೀ ಜಸ್ಟಿಸ್ ಜಿ. ಬಿಕ್ಷಾಪತಿ, ನಿವೃತ್ತ ನ್ಯಾಯಾಧೀಶರು, ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ
ಶ್ರೀ ಟಿ. ಎಸ್. ರಾವ್, IPS, ನಿವೃತ್ತ ಪೋಲೀಸ್ ಮಹಾ ನಿರ್ದೇಶಕರು, ಆಂಧ್ರಪ್ರದೇಶ ಸರಕಾರ
ಶ್ರೀಮತಿ ಡಾ ಪಿ. ಗೀರ್ವಾಣಿ, ನಿವೃತ್ತ ಉಪಕುಲಪತಿ, ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯ, ತಿರುಪತಿ
ಶ್ರೀ ಡಾ ಆರ್. ಶ್ರೀಹರಿ, ನಿವೃತ್ತ ಉಪಕುಲಪತಿ, ದ್ರವಿಡ ವಿಶ್ವವಿದ್ಯಾಲಯ, ಕುಪ್ಪಂ

9 comments:

Anonymous said...

ಓ ಜೀಸಸ್...

ಪ್ರಪಂಚವನ್ನೆಲ್ಲಾ ನಿನ್ನ ಅನುಯಾಯಿಗಳನ್ನಾಗಿ ಮಾಡಬೇಕೆನ್ನುವ ನಿನ್ನ ಹಿಂಬಾಲಕರ ದುರ್ಬುದ್ದಿ ಹೋಗಲಾಡಿಸು. ಸೋಪು ಮಾರುವ ಸೇಲ್ಸ್‌ಮನ್‌ಗಳಂತೆ ಮನೆ ಮನೆ ತಿರುಗಿ, ಮುಗ್ದ ಜನರನ್ನು ಆಮಿಷ ಒಡ್ಡಿ ಮತಾಂತರಕ್ಕೆ ಪ್ರಚೋದಿಸುವ ನಿನ್ನ ಹಿಂಬಾಲಕರಿಗೆ ಸದ್ಬುದ್ದಿ ಕರುಣಿಸು. ನಿನ್ನ ಅನುಯಾಯಿಗಳಿಗೆ ಇತರ ಧರ್ಮಗಳನ್ನು ಗೌರವಿಸುವ ಬುದ್ದಿ ಕೊಡು. ಇತರ ಧಾರ್ಮಿಕರ ಆಚರಣೆ, ವಿಧಿಗಳನ್ನು ಅಪಹಾಸ್ಯಮಾಡುವ ಕೀಳುಬುದ್ದಿಯನ್ನು ಹೋಗಲಾಡಿಸು.

ಆಮೆನ್...

Anonymous said...

ಆಧಾರ: www.samvada.org
=====================

`ಪ್ರಾಜೆಕ್ಟ್ ತೆಸ್ಸಾಲೋನಿಕಾ' ಹೊಡೆತವನ್ನು ಹಿಂದುಧರ್ಮವು ತಡೆಯಬಲ್ಲುದೇ?

ಕೆಲವು ತಿಂಗಳ ಹಿಂದೆ, ಒಬ್ಬ ಯುವ ಪ್ಯಾಲೆಸ್ಟೇನಿನ ಉಗ್ರಗಾಮಿಯ ಸಂದರ್ಶನದ ಕಾರ್ಯಕ್ರಮವನ್ನು ನಾನು ವೀಕ್ಷಿಸುತ್ತಿದ್ದೆ. ಅನೇಕ ಮುಗ್ದ ಜನರನ್ನು ಕೊಲೆ ಮಾಡಿದ್ದ ಆ ವ್ಯಕ್ತಿಯನ್ನು ಈ ರೀತಿ ಸಂದರ್ಶಿಸಿ, ಆತನಿಗೆ ತಾರಾಮೌಲ್ಯ ಗಳಿಸಿಕೊಟ್ಟಿದ್ದನ್ನು ಕಂಡು ವಾಕರಿಕೆ ಬಂದಂತಾಯಿತು. ಅತ್ಯಂತ ಹೆಚ್ಚು `ಶಾಕ್' ನೀಡಿದ ಸಂಗತಿಯೆಂದರೆ, ಇಸ್ರೇಲಿನ ಬೀದಿಗಳಲ್ಲಿ ಹೆಂಗಸರು ಮತ್ತು ಮಕ್ಕಳನ್ನೂ ಒಳಗೊಂಡಂತೆ ತಾನು ಮಾಡಿದ್ದ ಕೊಲೆಯ ಬಗ್ಗೆ ಈತನಿಗೆ ಸ್ವಲ್ಪವೂ ಪಾಪಪ್ರಜ್ಞೆಯಿಲ್ಲದಿರುವುದು. ಮತ್ತು ಇಂತಹ ಉಗ್ರಗಾಮಿಗಳ ತಾಯಿ-ತಂದೆಯರೂ ಇವರುಗಳ ಹಿಂಸಾಕೃತ್ಯಕ್ಕೆ ಬೆಂಬಲ ನೀಡಿರುವುದು. ಇವರು ಮಾಡುವ ಈ ಕೃತ್ಯಗಳಿಗೆ ಮತ್ತು ಅದಕ್ಕೆ ಸಿಗುವ ಬೆಂಬಲಗಳಿಗೆ ಕಾರಣವೆಂದರೆ: ಅವರು `ನೈಜ' ಮುಸಲ್ಮಾನರ ಧಾರ್ಮಿಕ ಕರ್ತವ್ಯವನ್ನಷ್ಟೇ ಮಾಡುತ್ತಿದ್ದಾರೆ ಎಂಬ ಗ್ರಹಿಕೆ. ಇವರುಗಳ ದೃಷ್ಟಿಯಲ್ಲಿ, ಈ ರೀತಿಯ ಮುಗ್ದ ಜನರ ಕೊಲೆಯೆಂದರೆ, ಪ್ರತಿಯೊಬ್ಬ ಮುಸಲ್ಮಾನನಿಗೂ ದೇವರೇ ಕೊಡಮಾಡಿಸಿರುವ ಧಾರ್ಮಿಕ ಕರ್ತವ್ಯ, ಅರ್ಥಾತ್ ಜಿಹಾದ್.

ನನ್ನ ಮಾತಾ-ಪಿತೃಗಳು ಕ್ಯಾಥೋಲಿಕ್ ಕ್ರಿಶ್ಚಿಯನ್ನರು. ಮತ್ತು ನನ್ನನ್ನು ಬೆಳೆಸಿದವರು ಕ್ಯಾಥೋಲಿಕ್ ಮಿಷನರಿಯಾಗಿದ್ದ ತಾಯಿ ಮತ್ತು ಸದಾ ನನ್ನನ್ನು ಶಿಕ್ಷಿಸುತ್ತಿದ್ದ ಕ್ರೈಸ್ತನಾಗಿ ಮರುಹುಟ್ಟು ಪಡೆದಿದ್ದ (ನಾನು `ತಾಯಿಯ ಗಂಡ' ಎಂದು ಕರೆಯುವ) ತಂದೆ. ಒಟ್ಟಿನಲ್ಲಿ ನಾನು ಒಂದು ಮಾದರಿ ಕ್ರೈಸ್ತ ವಾತಾವರಣದಲ್ಲಿ ಬೆಳೆದೆ ಮತ್ತು ನಾನು ಕೂಡಾ ನನ್ನ ತಂದೆ-ತಾಯಿಯರ ಹಾದಿಯಲ್ಲೇ ನಡೆದು, ಉಳಿದ ಮತ-ಸಂಪ್ರದಾಯಗಳ ಕುರಿತಾಗಿ ವೈರ ಉತ್ಪನ್ನ ಮಾಡುತ್ತಿದ್ದೆನೇನೋ. ಆದರೆ ನನ್ನ ಅದೃಷ್ಟದಿಂದ ಹಾಗಾಗಲಿಲ್ಲ. ನಾನು ನನ್ನ ಸಹಚರಿಯ ಚೀನೀ ಸ್ನೇಹಿತನೊಬ್ಬನನ್ನು ಭೇಟಿ ಮಾಡಿದೆ. ಈ ಭೇಟಿ ನನ್ನ ಜೀವನದ ಅತ್ಯಂತ ಪ್ರಮುಖ ತಿರುವು ಎಂಬುದು ಅಂದು ನನಗೆ ಗೋಚರವಾಗಿರಲಿಲ್ಲ. ಈ ಚೀನೀ ವಿದ್ಯಾರ್ಥಿಯು ಓರ್ವ ಬೌದ್ಧನಾಗಿದ್ದ ಮತ್ತು ಆತ ಧ್ಯಾನ ಮತ್ತದರ ಲಾಭಗಳ ಕುರಿತಾಗಿ ಮಾತನಾಡಿದ. ಆತನ ಮಾತುಗಳಿಂದ ನನ್ನ ಕುತೂಹಲ ಹೆಚ್ಚಾಗಿ, ನನ್ನ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಧ್ಯಾನದ ಕುರಿತಾದ ಪುಸ್ತಕಗಳಿಗೆ ಹುಡುಕಾಡಿದೆ. ಸ್ವಲ್ಪ ಹುಡುಕಾಡಿದ ನಂತರ, `ಭಾವಾತೀತ ಧ್ಯಾನ'ದ ಕುರಿತಾದ ಪುಸ್ತಕವೊಂದು ದೊರಕಿತು. ಈ `ಭಾವಾತೀತ ಧ್ಯಾನ'ವನ್ನು ಮಹರ್ಷಿ ಮಹೇಶ ಯೋಗಿಯವರು ಕಂಡುಹಿಡಿದಿದ್ದರು. ಆ ಪುಸ್ತಕವು ನನ್ನಲ್ಲಿ ಆಧ್ಯಾತ್ಮಿಕ ಮತ್ತು ಮಾನಸಿಕ ಬದಲಾವಣೆಗಳ ಆಂದೋಲನವನ್ನೇ
ಹುಟ್ಟು ಹಾಕಿತು ಮತ್ತು ಆ ನಂತರ ನಾನೆಂದೂ ಹಿಂತಿರುಗಿ ನೋಡಲೇ ಇಲ್ಲ. ನನ್ನ ಜ್ಞಾನತೃಷೆಯಿಂದಾಗಿ ನಾನು ಹೆಚ್ಚೆಚ್ಚು `ಭಾವಾತೀತ ಜ್ಞಾನ' ಮತ್ತದರ ಮೂಲವಾದ ಹಿಂದುಧರ್ಮದ ಕುರಿತಾಗಿ ಓದಿದೆ. ಹಿಂದು ಧರ್ಮದ ಕುರಿತಾಗಿ ನನಗೆ ಸಿಕ್ಕ ಎಲ್ಲ ಪುಸ್ತಕಗಳನ್ನೂ ನಾನು ಓದತೊಡಗಿದೆ.

ರಾಮಾಯಣದಲ್ಲಿ ರಾಮ ಮತ್ತವನ ಏಕೈಕ ಪತ್ನಿ ಸೀತೆಯ ಕುರಿತಾಗಿ ಓದಿದೆ. ಹಿಂದುಗಳು ರಾಮ ಮತ್ತು ಸೀತೆಯರನ್ನು ಆದರ್ಶ ದಂಪತಿಗಳೆಂದು ಮತ್ತು ಅವರು ತೋರಿಸಿದ ದಾರಿಯೇ ಅದರ್ಶ ಪುರುಷ-ಸ್ತ್ರೀ ಸಂಬಂಧದ ದಾರಿಯೆಂದು ಪರಿಗಣಿಸುತ್ತಾರೆ. ಇದು, ನಾನು ನನ್ನದೇ ಸ್ವಂತ ಕ್ರೈಸ್ತ ಕುಟುಂಬದಲ್ಲಿ ಕಂಡಿದ್ದ ಸಂಬಂಧಗಳಿಗಿಂತ ಭಿನ್ನವಾಗಿತ್ತು.

ಹಿಂದುಧರ್ಮದಲ್ಲಿರುವ ವಿವೇಕ ಮತ್ತು ಆಧ್ಯಾತ್ಮಿಕತೆಗಳಿಗೆ ಬೇರಾವುದೇ ಹೋಲಿಕೆಗಳಿಲ್ಲ. ಹಿಂದುಧರ್ಮಕ್ಕೆ ಸೇರಿದ ಪುಸ್ತಕಗಳು ಸ್ಪರ್ಶಿಸದ, ಜೀವನದ ಯಾವುದೇ ಸಂಗತಿಗಳೂ ಇರುವುದಕ್ಕೆ ಸಾಧ್ಯವಿಲ್ಲ. ನಿತ್ಯಜೀವನದ ಅತ್ಯಂತ ಸಾಧಾರಣ ಸಂಗತಿಗಳಿಂದ ಹಿಡಿದು ಉತ್ತರವೇ ಸಿಗದ ಹುಟ್ಟು-ಸಾವುಗಳ ಕುರಿತಾಗಿಯೂ ಇವುಗಳು ತಿಳಿಸಿಕೊಡುತ್ತವೆ. ನನ್ನನ್ನು ಅತ್ಯಂತ ಆಕರ್ಷಿಸಿದ ಸಂಗತಿಯೆಂದರೆ, ಹಿಂದುಧರ್ಮವು ಎಲ್ಲವನ್ನೂ ಒಳಗೊಂಡಿದೆ, ಎಲ್ಲರನ್ನೂ ಮತ್ತು ಎಲ್ಲ ನಂಬಿಕೆಗಳನ್ನೂ ಗೌರವಿಸುತ್ತದೆ. ಇದು, ಬಹಳ ಸಂಕುಚಿತವಾದ ನನ್ನ ಮೂಲ ಮತಾಚಾರಕ್ಕಿಂತ ತೀರ ಭಿನ್ನವಾದುದಾಗಿದೆ. ಮತ್ತು ದುರದೃಷ್ಟವಶಾತ್, ಇದರ ಅನುಯಾಯಿಗಳು ಹಿಂದು ಧರ್ಮವನ್ನು ನಾಶಪಡಿಸುವ ಅಭಿಯಾನವನ್ನೇ ಕೈಗೊಂಡಿದ್ದಾರೆ.

ಬಾಲ್ಯದಲ್ಲಿ ನನ್ನ ಸ್ನೇಹಿತನಾಗಿದ್ದ ಜೋಶ್ ಜೊತೆ ನನಗೆ ಈಗಲೂ ಪತ್ರ ಸಂಪರ್ಕವಿದೆ. ಸೆಮಿನರಿಯೊಂದರಲ್ಲಿ ಶಿಕ್ಷಣ ಪಡೆದಿರುವ ಆತ ಬ್ಯಾಪ್ಟಿಸ್ಟ್ ಮಿಶನರಿಯಾಗಿ ಕೆಲಸ ಮಾಡುತ್ತಿದ್ದಾನೆ. ನಾನು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆತನನ್ನು ಭೇಟಿ ಮಾಡಿದೆ. ಆತ ಅದೇ ತಾನೇ ಭಾರತದಿಂದ ಬಂದಿದ್ದ ಮತ್ತು ನವೆಂಬರ್‌ನಲ್ಲಿ ಮತ್ತೆ ಭಾರತಕ್ಕೆ ಹಿಂತಿರುಗುವವನಿದ್ದ. ನಮ್ಮ ಭೇಟಿಯ ಸಂದರ್ಭದಲ್ಲಿ ನಡೆದ ಹೆಚ್ಚಿನ ಮಾತುಕತೆಗಳು `ಪ್ರಾಜೆಕ್ಟ್ ತೆಸ್ಸಲೋನಿಕಾ' ಎಂಬ ವಿಷಯದ ಕುರಿತಾಗಿ ನಡೆಯಿತು. ಆತನಿಗೆ ಅದರ ಉಸ್ತುವಾರಿ ವಹಿಸಿಕೊಟ್ಟಿದ್ದರು. `ಪ್ರಾಜೆಕ್ಟ್ ತೆಸ್ಸಲೋನಿಕಾ' ಕುರಿತಾಗಿ ಮಾತನಾಡಿದಾಗಲೆಲ್ಲ, ಆತ ಬಹಳ ಉತ್ಸಾಹದಿಂದ ಮಾತನಾಡುತ್ತಿದ್ದ, ಮತ್ತವನ ಉತ್ಸಾಹ ಭಯ ಹುಟ್ಟಿಸುವ ರೀತಿಯಲ್ಲಿತ್ತು. ಪ್ಯಾಲೆಸ್ಟೇನಿ ಉಗ್ರಗಾಮಿಯ ಸಂದರ್ಶನದ ಸಂದರ್ಭದಲ್ಲಿ ಆ ಉಗ್ರಗಾಮಿಯ ಕಣ್ಣುಗಳಲ್ಲಿ ಕಂಡ ತೀಕ್ಷ್ಣತೆಯನ್ನೇ ಇವನಲ್ಲೂ ನಾನು ಕಾಣುತ್ತಿದ್ದೆ.

`ಪ್ರಾಜೆಕ್ಟ್ ತೆಸ್ಸಲೋನಿಕಾ'ವು `ಜೋಶು‌ಆ ಪ್ರಾಜೆಕ್ಟ್-೨'ನ ಉಪಕಾರ್ಯಕ್ರಮವಾಗಿದೆ. `ಜೋಶು‌ಆ ಪ್ರಾಜೆಕ್ಟ್-೨' ೧೦೪೦ ಎಂಬ ಕಿಟಕಿಯಲ್ಲಿ (ಅಂದರೆ ಭೂಮಿಯ ಮೇಲಿನ ಅಕ್ಷಾಂಶ ೧೦ ಮತ್ತು ಅಕ್ಷಾಂಶ ೪೦ರ ಮಧ್ಯೆ ಬರುವ ಭೂಪ್ರದೇಶ) ಬರುವ ಜನರನ್ನೆಲ್ಲ ಕ್ರೈಸ್ತರನ್ನಾಗಿಸಲು ಮಾಡಿರುವ ಯೋಜನೆ ಮತ್ತು ವ್ಯಾಪ್ತಿಗೆ ಸಂಬಂಧಿಸಿದ್ದು. ಆದರೆ, `ಪ್ರಾಜೆಕ್ಟ್ ತೆಸ್ಸಲೋನಿಕಾ' ಆ ಕಾರ್ಯವನ್ನು ಆಚರಣೆಗೆ ತರಲು ಬೇಕಾದ ಸಣ್ಣ-ಸಣ್ಣ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ.

`ಜೋಶು‌ಆ ಪ್ರಾಜೆಕ್ಟ್-೨' `ಜನಜಾತಿಯ ದತ್ತು' ಎಂಬ ಕಾರ್ಯಕ್ರಮವನ್ನು ಹಾಕೊಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಚರ್ಚ್ ಕೂಡಾ ಒಂದೊಂದು ಜನರ ಗುಂಪನ್ನು ಗುರುತಿಸಿ ಅವರನ್ನು ದತ್ತು ತೆಗೆದುಕೊಳ್ಳುತ್ತದೆ. ಈ ರೀತಿ ಅವರು ಪ್ರಪ್ರಥಮವಾಗಿ ಗುರಿಯಿಟ್ಟದ್ದು ಬುಡಕಟ್ಟು ಅಥವಾ ಗುಡ್ಡಗಾಡು ಜನರೆನ್ನಿಸಿಕೊಳ್ಳುವ ಗುಂಪಿನ ಮೇಲೆ. ಆದರೆ, ಇವರ ಈ ಕಾರ್ಯಚಟುವಟಿಕೆ ಹಿಂದುಧರ್ಮವನ್ನು ಶಕ್ತಿಹೀನಗೊಳಿಸುವಲ್ಲಿ ವಿಫಲವಾಯಿತು. ಏಕೆಂದರೆ, ಮತಾಂತರಗೊಂಡ ನಂತರವೂ ಈ ಜನ ಹಿಂದು ಧರ್ಮದ ಆಚರಣೆಗಳನ್ನು, ಹಬ್ಬ-ಹರಿದಿನಗಳನ್ನು ಅನುಸರಿಸುತ್ತಲೇ ಇದ್ದರು. ಈ ಸಮಸ್ಯೆಗೆ ಉತ್ತರ ಹೇಳಲೆಂದೇ `ಪ್ರಾಜೆಕ್ಟ್ ತೆಸ್ಸಲೋನಿಕಾ'ವನ್ನು ೨೦೦೪ರಲ್ಲಿ ಪ್ರಾರಂಭಿಸಲಾಯಿತು. ಇದರ ವಿವರಗಳನ್ನು ತಿಳಿದುಕೊಳ್ಳುವ ಮೊದಲು, ಈ ಹೆಸರೇಕೆ ಬಂತೆಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಇಟಲಿ ದೇಶದ ಪೂರ್ವದಿಂದ ಹೊರಡುವ ಭೂಮಾರ್ಗ ಮತ್ತು ಏಜಿಯನ್ ಸಮುದ್ರದ ದಕ್ಷಿಣಕ್ಕಿರುವ ಡ್ಯಾನ್ಯೂಬ್‌ನ ದಾರಿಗಳು ಸೇರುವಲ್ಲಿ ಸಿಗುವ ಅತ್ಯಂತ ಆಯಕಟ್ಟಿನ ಬಂದರು ನಗರವೇ ತೆಸ್ಸಾಲೋನಿಕಾ. ಇದು ರೋಮನ್ ಸಾಮ್ರಾಜ್ಯದ ಪ್ರಾಂತವಾಗಿದ್ದ ಮ್ಯಾಸಡೋನಿಯಾದ ರಾಜಧಾನಿಯಾಗಿತ್ತು. ಈ ನಗರದ ಜನ ಶ್ರೀಮಂತರೂ, ತಂತ್ರಜ್ಞಾನದಲ್ಲಿ ಮುಂದುವರೆದವರೂ ಮತ್ತು ಸಾಂಸ್ಕೃತಿಕವಾಗಿ ತಮ್ಮದೇ ವೈಶಿಷ್ಟ್ಯವುಳ್ಳವರೂ ಆಗಿದ್ದರು. ಅಪೋಸಲ್‌ನ ಎರಡನೇ ಕ್ರೈಸ್ತ ಪ್ರಚಾರದ ಪರ್ಯಟನೆಯ ಸಂದರ್ಭದಲ್ಲಿ ಪಾಲ್ ಮತ್ತು ಸಿಲಾಸ್ ಎಂಬವರು ತೆಸ್ಸಲೋನಿಕಾಗೆ ಭೇಟಿ ನೀಡಿ ಅಲ್ಲಿ ಕ್ರೈಸ್ತ ಮತ ಪ್ರಚಾರವನ್ನು ಕೈಗೊಂಡರು. ಆದರೆ ಪಾಲ್‌ನ ಪ್ರಚಾರಕ್ಕೆ ಅಂದುಕೊಂಡಷ್ಟು ಉತ್ಸಾಹದ ಸ್ವಾಗತ ಸಿಗಲಿಲ್ಲ. ಪಾಲ್‌ನ ಪ್ರಚಾರದಿಂದ ರೋಸಿಹೋದ ಕೆಲವು ಸ್ಥಳೀಯರು, ಪಾಲ್‌ಗೆ ಆತಿಥ್ಯ ನೀಡಿದ್ದ ಜೇಸನ್ ಮತ್ತು ಆತನ ಸಹೋದರರನ್ನು ಹಿಡಿದುಕೊಂಡು, ನಗರದ ಅಧಿಕಾರಿಗಳ ಬಳಿಗೆ ಎಳೆದೊಯ್ದರು. ಅವರನ್ನು ದ್ರೋಹಿಗಳೆಂದು ಕರೆಯಲಾಯಿತು. ವಿಚಾರಣೆಯ ನಂತರ, ಅವರಿಗೆ ದಂಡ ವಿಧಿಸಿ ಬಿಡುಗಡೆ ಮಾಡಿಬಿಟ್ಟರು. ಕ್ರಿಸ್ತಶಕ ೩೯೦ರಲ್ಲಿ ಕ್ರೈಸ್ತ ದೊರೆ ಥಿಯೋಡೋಸಿಯಸ್ ಎಂಬವನು ನಗರದ ಜನರ ಪ್ರತಿಭಟನೆಯನ್ನು ತೀವ್ರವಾಗಿ ಹತ್ತಿಕ್ಕಿದನು. ಈ ಸಂದರ್ಭದಲಿ ೭೦೦೦ಕ್ಕೂ ಹೆಚ್ಚು ಜನರನ್ನು ಆತ ಕೊಲ್ಲಿಸಿದನು. ಆ ನಂತರದಲ್ಲಿ ನಗರದ ಹೆಚ್ಚಿನ ಜನ ಕ್ರೈಸ್ತರಾಗಿ ಪರಿವರ್ತಿತರಾದರು.

ಪಾಲ್‌ನ ಕಾಲದಲ್ಲಿ ಆ ನಗರದ ವಾತಾವರಣ ಹೇಗಿತ್ತೆಂಬುದನ್ನು ತಿಳಿದುಕೊಂಡಾಗ ಇಂದಿನ ಪ್ರಪಂಚದಲ್ಲಿ ಅದರ ಪ್ರಸ್ತುತತೆ ವಿಶದವಾಗುತ್ತದೆ. ಭೂಮಿಯ ಮೇಲಿನ ದಾರಿ ಮತ್ತು ಸಮುದ್ರದ ದಾರಿ, ಈ ಎರಡಕ್ಕೂ ಸಂಬಂಧಿಸಿದಂತೆ ಈ ನಗರವು ಅತ್ಯಂತ ಪ್ರಮುಖವಾಗಿತ್ತು. ಕ್ರೈಸ್ತರಾಗಿ ಮತಾಂತರ ಹೊಂದುವ ಮೊದಲು ಇಲ್ಲಿನ ಜನ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದರು. ಇಲ್ಲಿನ ಜನ ಬಹಳ ಸಹಿಷ್ಣುಗಳಾಗಿದ್ದರು. ಪಾಲ್ ಮತ್ತು ಜೇಸನ್‌ರು ಇವರನ್ನು ಕೆರಳಿಸಿದ ನಂತರವೂ, ಅವರನ್ನು ಕೊಲ್ಲದೆ ಬಿಟ್ಟದ್ದು ಅವರ ಸಹಿಷ್ಣುತೆಯನ್ನು ತೋರಿಸುತ್ತದೆ. ಸರಕಾರವೂ ಕ್ರೈಸ್ತ ಮಿಶನರಿಗಳ ಕಾರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ ಮತ್ತು ಅದರಿಂದಾಗುವ ಅಡ್ಡ ಪರಿಣಾಮಗಳಿಗೆ ಪರಿಹಾರ ಹುಡುಕಲಿಲ್ಲ.

ಪಾಲ್‌ನ ಸಮಯದಲ್ಲಿ ತೆಸ್ಸಲೋನಿಕಾದ ಜನರಿದ್ದ ವಾತಾವರಣದಲ್ಲೇ ಇಂದಿನ ಭಾರತದ ಹಿಂದುಗಳೂ ಇದ್ದಾರೆನಿಸುತ್ತದೆ. ಹಿಂದುಗಳೂ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದಾರೆ ಮತ್ತು ಉಳಿದ ಮತ-ಪಂಥಗಳ ಕುರಿತಾಗಿ ಅಪಾರ ಸಹಿಷ್ಣುತೆ ಹೊಂದಿದ್ದಾರೆ. ಭಾರತದಾದ್ಯಂತ ಮಿಶನರಿ ಚಟುವಟಿಕೆಗಳಿಂದ ಅಪಾರ ಹಾನಿಯಾಗುತ್ತಿದ್ದರೂ, ಇಲ್ಲಿನ ಸರಕಾರ ಅದರ ವಿಷಯದಲ್ಲಿ ಕುರುಡಾಗಿದೆ. ಈ ಸಂದರ್ಭವನ್ನು ನೋಡಿದಾಗ, ಈ ಕಾರ್ಯಕ್ರಮಕ್ಕೆ `ಪ್ರಾಜೆಕ್ಟ್ ತೆಸ್ಸಲೋನಿಕಾ' ಎಂದು ಹೆಸರು ನೀಡಿರುವುದು ಅತ್ಯಂತ ಪ್ರಸ್ತುತವೆನಿಸುತ್ತದೆ. ಪ್ರಾಜೆಕ್ಟ್ ತೆಸ್ಸಲೋನಿಕಾವು ಹಿಂದು ಸಂಸ್ಕೃತಿಯ, ಹಬ್ಬ ಮತ್ತು ಆಚರಣೆಗಳಿಗೆ ಆಧಾರ ಸ್ತಂಭವೆನಿಸಿರುವ ಜನರನ್ನು ಮತಾಂತರಿಸುವ ಉದ್ದೇಶ ಹೊಂದಿದೆ. ಪಾರಂಪರಿಕವಾವಿ ಮಿಶನರಿಗಳು ಕ್ರೈಸ್ತ ಮತವನ್ನು ಒಪ್ಪದ ಮತಗಳ ಹಬ್ಬ ಮತ್ತು ದೇವಾಲಯಗಳ ಮುಖಾಂತರ ನಡೆಯುವ ಸಾರ್ವಜನಿಕ ಆಚರಣೆಗಳಿಗೆ ಬಹಳ ವಿರೋಧ ಹೊಂದಿದ್ದಾರೆ. ಇವರು ಹೊಸ ದೇವಾಲಯ ನಿರ್ಮಾಣವಾಗದಂತೆ ಬಹಳ ಎಚ್ಚರ ವಹಿಸುತ್ತಿದ್ದಾರೆ. ಈ ಉದ್ದೇಶದಿಂದ ಮೇಸ್ತ್ರಿಗಳು, ಕರಕುಶಲಗಾರರು ಮತ್ತು ದೇವಾಲಯ ನಿರ್ಮಾಣದಲ್ಲಿ

ಕಾರ್ಯನಿರ್ವಹಿಸುವ ಇನ್ನಿತರ ಜಾತಿ ಮತ್ತು ವೃತ್ತಿಗೆ ಸೇರಿದ ಜನರನ್ನು ಮತಾಂತರಿಸುತ್ತಿದ್ದಾರೆ. ಟೆನ್ನೆಸ್‌ನ ಪ್ರಥಮ ಬ್ಯಾಪ್ಟಿಸ್ಟ್ ಚರ್ಚ್ ಆಫ಼್ ನ್ಯಾಶ್ವಿಲ್ಲೆಯು ವಾರ್ಷಿಕ ಕುಂಭಮೇಳಗಳು ನಡೆಯುವ ಪಟ್ಟಣಗಳನ್ನು ದತ್ತು ತೆಗೆದುಕೊಂಡು, ಅಲ್ಲಿನ ಸ್ಥಳೀಯರನ್ನು ಮತಾಂತರಿಸುವಲ್ಲಿ ನಿರತವಾಗಿದೆ. ಇದರಿಂದಾಗಿ ಕುಂಭಮೇಳಕ್ಕೆ ಮುಂದಿನ ಬಾರಿ ಬರುವವರಿಗೆ ಯಾವ ಅನುಕೂಲಗಳೂ ಹಾಗೂ ವ್ಯವಸ್ಥೆಯೂ ದೊರೆಯದೆ ತೊಂದರೆಗಳುಂಟಾಗಲೆಂಬುದೇ ಇದರ ಉದ್ದೇಶ. ಮತ್ತೊಂದು ಮಿಶನರಿ ಗುಂಪು ಕಾಶಿಯ ಬೆಸ್ತರನ್ನು ಮತಾಂತರಿಸುತ್ತಿದೆ. ಈ ಬೆಸ್ತರ ಸಹಾಯದಿಂದಲೇ ಅಲ್ಲಿಗೆ ಬರುವ ಹಿಂದುಗಳು ತಮ್ಮ ಪಿತೃಗಳಿಗೆ ಗಂಗೆಯಲ್ಲಿ ತರ್ಪಣ ನೀಡಿ ಪುನೀತರಾಗುವುದು. ಈ ಬೆಸ್ತರಿಗೆ ಬೇರೆ ವೃತ್ತಿಯ ವಿಷಯಗಳಲ್ಲಿ ಶಿಕ್ಷಣ ನೀಡಿ, ಅವರು ತಮ್ಮ ಬೆಸ್ತರ ಕೆಲಸವನ್ನು ಬಿಡಬೇಕು ಮತ್ತು ಇದರಿಂದ ಅಲ್ಲಿಗೆ ಬರುವ ಹಿಂದುಗಳಿಗೆ ತೊಂದರೆಯಾಗಬೇಕೆಂಬುದು ಈ ಕಾರ್ಯದ ಉದ್ದೇಶವಾಗಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳಿಗೆ, ಕುಂಭ ಮೇಳ ಮತ್ತು ಜಗನ್ನಾಥ ರಥಯಾತ್ರೆಗಳಿಗೆ ಕಡಿವಾಣ ಹಾಕಲು `ವಾತಾವರಣ ರಕ್ಷಣ ಕಾರ್ಯ'ದಲ್ಲಿ ನಿರತರಾಗಿರುವ ಗುಂಪುಗಳನ್ನು ಇದರ ವಿರುದ್ದ ಎತ್ತಿಕಟ್ಟುತ್ತಿದ್ದಾರೆ. ಇವರಿಗೆ ಬಹಳ ಚಿಂತೆಯುಂಟು ಮಾಡಿರುವುದು, ಬಹಳ ಜನಪ್ರಿಯವಾಗಿರುವ ದೂರದರ್ಶನದಲ್ಲಿ ಪ್ರಸಾರವಾಗುವ ಹಿಂದೂ ಕಾರ್ಯಕ್ರಮಗಳು. ಇದನ್ನು ತಡೆಯಲು, ಈ ಕಾರ್ಯಕ್ರಮಗಳು ಪ್ರಸಾರವಾಗುವ ಸಮಯವನ್ನು ಹೆಚ್ಚು ಹಣ ನೀಡಿ ಈ ಕ್ರೈಸ್ತ ಮಿಶನರಿಗಳು ಕೊಂಡುಕೊಳ್ಳುತ್ತಿದ್ದಾರೆ ಮತ್ತು ಈ ರೀತಿ ಕಾರ್ಯಕ್ರಮ ನಡೆಸಿಕೊಡುವ ಮೂಲಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಕಳೆದ ೨೦ ವರ್ಷಗಳಲ್ಲಿ ಮಿಶನರಿಗಳು ರಾಜಕೀಯವಾಗಿಯೂ ಬಹಳ ಬೆಳೆದಿದ್ದಾರೆ ಮತ್ತು ಇದಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ. ಇದರ ಪರಿಣಾಮವಾಗಿ ಆಳುವ ಪಕ್ಷ ಇವರ ಕಾರ್ಯಕ್ರಮಗಳ ಬಗ್ಗೆ ಕುರುಡಾಗಿಬಿಡುತ್ತದೆ. ಅದೇ ರೀತಿ, ಮಾದ್ಯಮದದಲ್ಲೂ ಸಾಕಷ್ಟು ಸಂಖ್ಯೆಯ ಜನ ಇವರ ಪರವಾಗಿದ್ದಾರೆ. ಎಷ್ಟರಮಟ್ಟಿಗೆಂದರೆ, ಯಾರಾದರೂ ಮಿಶನರಿಗಳ ಕಾರ್ಯವನ್ನು ವಿರೋಧಿಸಿದರೆಂದರೆ, ಅವರನ್ನು ಉಗ್ರಗಾಮಿಗಳೆಂದು, ಭಯೋತ್ಪಾದಕರೆಂದು ಹಣೆಪಟ್ಟಿ ಹಚ್ಚಿಬಿಡಲಾಗುತ್ತದೆ.

ಭಾರತದ ಕ್ರೈಸ್ತರಲ್ಲದವರನ್ನು ಯಾವುದೇ ಸಾಧನದಿಂದಾಗಲೀ, ಮಾರ್ಗದಿಂದಾಗಲೀ ಮತಾಂತರಗೊಳಿಸುವಲ್ಲಿ ನನ್ನ ಸ್ನೇಹಿತ ಜೋಶ್‌ಗೆ ಯಾವುದೇ ಪಾಪಪ್ರಜ್ಞೆ ಕಾಣುವುದಿಲ್ಲ. ಅದರ ಬದಲಾಗಿ, ಆತನಿಗೆ ಅದರ ಬಗ್ಗೆ ಹೆಮ್ಮೆಯೆನಿಸುತ್ತದೆ ಮತ್ತು ತಾನೇನೋ ಸಾಧಿಸಿದೆನೆಂಬ ಅಭಿಮಾನವನ್ನವನು ಹೊಂದಿದ್ದಾನೆ. ತಾನು ಬೈಬಲ್‌ನಲ್ಲಿ ಹೇಳಿರುವ ದೇವವಾಣಿಯಂತೆ ನಡೆಯುತ್ತಿರುವೆನಷ್ಟೇ, ಎಂಬುದವನ ಬಲವಾದ ನಂಬಿಕೆಯಾಗಿದೆ - ಇಸ್ಲಾಮಿ ಭಯೋತ್ಪಾದಕನು ತನ್ನ ಸಂದರ್ಶನದಲ್ಲಿ ಹೇಳಿದಂತೆಯೇ. ಜೋಶ್‌ನಂತಹ ಕ್ರೈಸ್ತ ಜಿಹಾದಿಗಳು ಭಾರತದಲ್ಲಿ ನಡೆಯುತ್ತಿರುವ ಮಿಶನರಿ ಚಟುವಟಿಕೆಗಳಲ್ಲಿ ಅಗ್ರೇಸರರಾಗಿರುವಾಗ, ಭಾರತದ ಹಿಂದುಗಳಿಗೂ ತೆಸ್ಸಲೋನಿಕಾದ ಜನರ ಗತಿಯೇ ಬಾರದಿರಲೆಂದು ಹಾರೈಸಬೇಕಷ್ಟೆ.

Anonymous said...

ಕನ್ನಡಪ್ರಭ, ೧೧, ಆಗಸ್ಟ್ ೨೦೦೬
---------------------------
ಮತಾಂತರ ವಿರುದ್ಧ ಹೋರಾಟಕ್ಕೆ ಪೇಜಾವರಶ್ರೀ ಕರೆ
ಬೆಂಗಳೂರು: ತಿರುಪತಿ ವಿವಾದವನ್ನು ಸಾಂಕೇತಿಕವಾಗಿ ಇಟ್ಟುಕೊಂಡು ದೇಶದಲ್ಲಿ ನಡೆಯುತ್ತಿರುವ ಮತಾಂತರದ ವಿರುದ್ಧ ಹಿಂದುಗಳು ಸಂಘಟಿತರಾಗಿ ಹೋರಾಡಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮಿ ಕರೆ ನೀಡಿದ್ದಾರೆ.

ಕರ್ನಾಟಕ ಜನಹಿತ ವೇದಿಕೆ ಗುರುವಾರ ಬಸವನಗುಡಿಯ ಎಸ್‌ಬಿ‌ಎನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 'ತಿರುಮಲ ತಿರುಪತಿ ಮತಾಂತರ- ಒಂದು ಸಂವಾದ' ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಇಂದು ಮತಾಂತರ ಹಾಗೂ ಜಿಹಾದ್ ಭಯೋತ್ಪಾದನೆ ದುರ್ಯೋಧನ- ದುಶ್ಯಾಸನರಂತೆ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಹಿಂದೆ ನಾವು ತಿರುಪತಿ ತಿಮ್ಮಪ್ಪನೇ ರಕ್ಷಿಸು ಎಂದು ಬೇಡುತ್ತಿದ್ದರೆ, ಈಗ ನಾವೇ ತಿರುಪತಿ ತಿಮ್ಮಪ್ಪನನ್ನು ರಕ್ಷಿಸಬೇಕಾದ ಸ್ಥಿತಿ ಬಂದಿದೆ ಎಂದರು.

ದೇಶದೆಲ್ಲೆಡೆ ಮತಾಂತರ: ಅಲ್ಲಿನ ವಿಶ್ವವಿದ್ಯಾಲಯ ಭಾನುವಾರದಂದು ಚರ್ಚ್‌ಗಳಾಗುತ್ತಿದೆ. ಇದು ಬರೀ ತಿರುಪತಿ ತಿರುಮಲದ ವಿಷಯವಲ್ಲ. ದೇಶದೆಲ್ಲೆಡೆ ಮತಾಂತರ ಪ್ರಕ್ರಿಯೆ ಬೆಳೆಯುತ್ತಿದೆ. ಇದಕ್ಕಾಗಿ ಪ್ರತಿಯೊಂದು ಧರ್ಮವೂ ತನ್ನ ವ್ಯಾಪ್ತಿಯೊಳಗೆ ಕೆಲಸ ಮಾಡಬೇಕಿದೆ. ಉದ್ಯಮಿಗಳು ಹಲವು ಚಟುವಟಿಕೆಗಳಿಗೆ ಹಣ ಪೋಲು ಮಾಡುವ ಬದಲು ಸಮಾಜದ ಶೋಷಿತ ವರ್ಗದ ಪರವಾಗಿ ಕೆಲಸ ಮಾಡಬೇಕಿದೆ ಎಂದರು.

ಈಗಾಗಲೇ ತಿರುಮಲ ತಿರುಪತಿ ಸಂರಕ್ಷಣಾ ಸಮಿತಿಯ ಪ್ರಮುಖರೊಂದಿಗೆ ಸಚಿವ ದಿವಾಕರ ರೆಡ್ಡಿಯವರನ್ನು ಭೇಟಿ ಮಾಡಿ ಹಲವು ಬೇಡಿಕೆಗಳನ್ನು ನೀಡಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ತಕ್ಷಣವೇ ಹೋರಾಟಕ್ಕೆ ಸಿಧ್ಧರಾಗಬೇಕೆಂದು ಶ್ರೀಗಳು ಕರೆ ನೀಡಿದರು.

ಬೇಡಿಕೆಗಳು: ತಿರುಮಲ ಬೆಟ್ಟವನ್ನೊಳಗೊಂಡ ಏಳು ಬೆಟ್ಟಗಳನ್ನು ಶ್ರೀ ವೆಂಕಟೇಶ್ವರ ಸ್ವಾಮಿಯ ಆಸ್ತಿ ಎಂದು ಘೋಷಿಸಬೇಕು. ಇಲ್ಲಿ ಹಿಂದುಗಳಿಗೆ ಮಾತ್ರ ಧಾರ್ಮಿಕ ಚಟುವಟಿಕೆ ನಡೆಸಲು ಬಿಡಬೇಕು. ಅಲ್ಲಿನ ವಿದ್ಯಾಲಯಗಳಲ್ಲಿ ಅನ್ಯಮತ ಪ್ರಚಾರ ನಿಲ್ಲಿಸಬೇಕು. ತಿರುಮಲ ತಿರುಪತಿ ಮಂಡಲಿ, ಹಿಂದೂ ದೇವಾಲಯ ಸಮಿತಿ, ಆಡಳಿತ ಮಂಡಳಿಗಳಲ್ಲಿ ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರನ್ನು ನೇಮಿಸಬೇಕು. ತಿರುಮಲಕ್ಕೆ ರೋಪ್‌ವೇ ಬೇಡ. ಪ್ರವಾಸೋದ್ಯಮಕ್ಕೆ ತಿರುಮಲ ಬಾಗಿಲನ್ನು ತೆರೆಯಬಾರದು. ತಿರುಮಲದಲ್ಲಿ ಕಾರ್ಮಿಕರಾಗಿರುವ ಇತರ ಧರ್ಮೀಯರನ್ನು ಗುರುತಿಸಿ ಅವರನ್ನು ಹೊರಹಾಕಬೇಕು.

ಇದೇ ಸಂದರ್ಭ ಮಾತನಾಡಿದ ನ್ಯಾಯಮೂರ್ತಿ ಎಂ. ರಾಮಕೃಷ್ಣ, ಹಿಂದೂ ಧರ್ಮದಲ್ಲಿರುವ ಶೋಷಿತರು, ಅಲ್ಪಸಂಖ್ಯಾತರನ್ನು ಗುರುತಿಸಿ ಅವರಿಗೆ ಆಸೆ ತೋರಿಸುವ ಮೂಲಕ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕಾಗಿ ಹಿಂದುಗಳು ಸಂಘಟಿತರಾಗಿ ಶೋಷಿತರ ಬೇಡಿಕೆಗೆ ಓಗೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜೀ ಮಹಾರಾಜ್, ಮೋಹನ್ ಕುಮಾರ್, ಕರ್ನಾಟಕ ಜನಹಿತ ವೇದಿಕೆ ಅಧ್ಯಕ್ಷ ಸಾಯಿದತ್ತ ಮತ್ತಿತರರು ಹಾಜರಿದ್ದರು.

Anonymous said...

ಈ ಹಿಂದೆ ಮುಸಲ್ಮಾನರು ಬಲವಂತದಿಂದ ಹಿಂದುಗಳ ಮತಾಂತರ ಮಾಡಿದರು. ಕ್ರೈಸ್ತರು ನಯವಂಚಕತನ, ಹಣಬಲದಿಂದ ಇಂದು ಆ ಕಾರ್ಯ ಮಾಡಹೊರಟಿದ್ದಾರೆ. ಈ ಮತಾಂತರಿಗಳಿಂದ ಇಂದು ಒಂದು ಧರ್ಮದವರಿಗೆ ಇನ್ನೊಂದು ಧರ್ಮದವರಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ. ಎಲ್ಲರನ್ನೂ ಸಂಶಯದೃಷ್ಟಿಯಿಂದ ನೋಡುವ ಹಾಗಾಗಿದೆ. ಇದಕ್ಕೆ ತಕ್ಕಂತೆ ಹಿಂದೂಗಳಲ್ಲಿಯೇ ಒಗ್ಗಟ್ಟು ಇಲ್ಲದೆ ಪರಸ್ಪರ ಬಡಿದಾಡುತ್ತಿದ್ದಾರೆ. ನಮ್ಮ ಸನಾತನ ಧರ್ಮದಲ್ಲಿದ್ದ ಜ್ಞಾನ, ಸತ್ಯಾನ್ವೇಷಣೆ, ಓದಾರ್ಯ ಮನೋಭಾವಗಳು ಇಂದಿನ ಹಿಂದೂಗಳಲ್ಲಿ ಮಾಯವಾಗಿವೆ. ತಿರುಳನ್ನು ಮರೆತು ಕರಟಕ್ಕೆ ಹೊಡೆದಾಡಿದಂತೆ ಯಾವ್ಯಾವುದೋ ಅನಗತ್ಯ ವಿಷಯಕ್ಕೆ (ಅಯ್ಯಪ್ಪಸ್ವಾಮಿ ಪ್ರಕರಣ) ನಾವು ಹಿಂದೂಗಳು ಹೊಡೆದಾಡುತ್ತಿದ್ದೇವೆ.

ಮೊದಲು ನಾವು ಹಿಂದೂಗಳೆಲ್ಲಾ ಸಂಘಟಿತರಾಗಬೇಕು. ನಮ್ಮನಮ್ಮಲ್ಲಿ ಪರಸ್ಪರ ಸಹೋದರ ಮನೋಭಾವ ಮೂಡಬೇಕು. ಹಾಗಾದಾಗ ಮಾತ್ರ ಇತರ ಧರ್ಮೀಯರ ಆಕ್ರಮಣವನ್ನು ನಾವು ಎದುರಿಸಲು ಸಾಧ್ಯ.

ಎಲ್ಲಾ ಅನ್ಯಧರ್ಮೀಯರನ್ನು ಸಂಶಯದೃಷ್ಟಿಯಿಂದ ನೋಡಬೇಕೆಂದಲ್ಲ. ಮಾನವೀಯ ಗುಣವುಳ್ಳ ಉತ್ತಮ ಸಂಸ್ಕೃತಿಯ ಅಸಂಖ್ಯಾತ ಮುಸ್ಲೀಮರು, ಕ್ರೈಸ್ತರು ಇದ್ದಾರೆ. ಜೀಹಾದಿಗಳಿಂದ, ಮತಾಂತರಿಗಳಿಂದ ಅಂತಹವರಿಗೆ ಕೆಟ್ಟಹೆಸರು ಬಂದಿದೆ.

Anonymous said...

see the following shocking videos...

In English:
http://video.yahoo.com/video/play?vid=3c13e5d869a1ccff0620b77daf703c92.703761

In Kannada:
http://video.yahoo.com/video/play?vid=3c13e5d869a1ccff0620b77daf703c92.704124

Anonymous said...

Its evident that the christian churches particularly, the vatican, had embarked on a mission to convert the whole of this world in to a christian faith. And it has been openly declared by the POPE john paul in 1998, when he visited india. He said, "The first millenium, we brought the whole of europe under christianity. In the second millenium, we brought the whole of america and africa under christianity. In the third millenum, we have to bring the whole of Asia under christianity"

Anonymous said...

Semitic religionಗಳೆಲ್ಲಾ ಹೇಳೋದು ಒಂದೇ. (ಮುಖ್ಯವಾಗಿ ಇಸ್ಲಾಮ್ ಮತ್ತು ಕ್ರೈಸ್ತಧರ್ಮ.)- ನಿಮ್ಮ ಧರ್ಮವನ್ನು ಹರಡು ಅಂತ. ಹೇಗೆ ಪ್ರಚಾರ ಮಾಡ್ತೀರಿ, ಮತಾಂತರ ಮಾಡಿಸ್ತೀರಿ ಅನ್ನೋದು ಮುಖ್ಯ ಅಲ್ಲ. ಅಥವಾ ತಂತ್ರಾನೂ ಮುಖ್ಯ ಅಲ್ಲ. ಈ ತಂತ್ರಗಳಲ್ಲಿ ಹಿಂಸೇನೂ ಒಂದು. ಇವತ್ತು ನೋಡಿ ಆಫ್ರಿಕಾ ಉರೀತಿದೆ. ಇಲ್ಲಿ, ಅಮೆgಕಾದಲ್ಲಿ ಇರೋ ಕರಿಯರಿಗೆ ಬಿಳಿಯರ ಮೇಲೆ ಒಂದು ರೀತಿ ಸಿಟ್ಟಿದೆ, ಅಸಮಾಧಾನದ ಹೊಗೆಯಿದೆ. ಈ ಅಸಮಾಧಾನವನ್ನೇ ನೆಪಮಾಡಿಕೊಂಡು ಕರಿಯರನ್ನು ಇಸ್ಲಾಮಿಗೆ ಮತಾಂತರ ಮಾಡಿಕೊಳ್ಳೋ ಪ್ರಚೋದನೆ ಈಗ ನಡೀತಾ ಇಲ್ಲವೇ? ನಾನು ಕುರಾನ್ ಅನ್ನು ಓದಿದ್ದೇನೆ. ಅದರಲ್ಲಿಯೂ ಹಿಂಸೆಯ ಪ್ರತಿಪಾದನೆ ಇದೆ. ಅದರೆ, ವೈದಿಕ ಧರ್ಮಗಳ ಸಾರವನ್ನೆಲ್ಲಾ ಬಸವಣ್ಣ ಹೇಗೆ ಒಂದೇ ವಾಕ್ಯದಲ್ಲಿ ಹೇಳಿದ್ದಾನೆ ನೋಡಿ `ದಯೆಯೇ ಧರ್ಮದ ಮೂಲವಯ್ಯ', ರಾಮ ಲಂಕೆಯನ್ನು ಗೆದ್ದಮೇಲೆ ಅಲ್ಲಿ ತಾನು ರಾಜ್ಯವಾಳಲಿಲ್ಲ. ವಿಭೀಷಣನಿಗೆ ಪಟ್ಟ ಕಟ್ಟಿದ. ಆದರೆ, ಬೇರೆ ಮತಗಳು ಇದನ್ನು ಮಾಡಲಿಲ್ಲ. ಮೊಗಲರು ನಮ್ಮ ದೇಶದ ವಿವಿಧ ಕಡೆ ಆಕ್ರಮಣ ಮಾಡಿದ ಮೇಲೆ ಆಯಾ ಪ್ರದೇಶಗಳನ್ನು ಗೆದ್ದಾಗ ಮೊದಲು ಮಾಡಿದ್ದು, ಅಲ್ಲಿ ಅಪತ್ಯ ಸಾಸಿದ್ದು ನಂತರ ಅಲ್ಲಿನ ದೇವಸ್ಥಾನಗಳನ್ನು ಒಡೆದದ್ದು. ಅದು ಅವರ ತಪ್ಪಲ್ಲ. ಅದನ್ನು ಅವರ ಧರ್ಮವೇ ಹೇಳುತ್ತೆ. ಈಗ ಆಫ್ಗಾನಿಸ್ತಾನದಲ್ಲಿತ್ತಲ್ಲ ಬಾಮಿಯನ್ ಬುದ್ಧನ ಪ್ರತಿಮೆಯನ್ನು, ಅದನ್ನೇ ತೆಗೆದುಕೊಳ್ಳಿ ಅದನ್ನೂ ತಾಲಿಬಾನ್‌ರವರು ಮುರಿದುಬೀಳಿಸಿದರು. ಅದೂ ಅವರ ತಪ್ಪಲ್ಲ. ವಿಗ್ರಹಾರಧನೆ ತಪ್ಪು, ವಿಗ್ರಹಗಳನ್ನು ಒಡೀಬೇಕು ಅಂತ ಅವರ ಧರ್ಮವೇ ಹೇಳುತ್ತೆ. ನಿಮಗೆ ಎರಡು ರೆಫೆರೆನ್ಸ್ ಕೊಡ್ತೀನಿ ಓದಿನೋಡಿ, ಸೀತಾರಾಮ್ ಗೋಯಲ್‌ರು ಬರೆದ - Hindu Temples What happened to them? ಅನ್ನೋದು ಮತ್ತೊಂದು Samuel Huntington ಬರೆದಿರುವ 'Clash of civilizations' ಅಂತ. ಇವೆರಡನ್ನೂ ಓದಿ ನೋಡಿ, ನಾನೇನು ಹೇಳ್ತೀನಿ ಅಂತ ಗೊತ್ತಾಗುತ್ತೆ.

-ಸಾಹಿತಿ ಎಸ್.ಎಲ್. ಭೈರಪ್ಪ ವಿಶ್ವ ಕನ್ನಡ ಸಮ್ಮೇಳನ (೨೦೦೬) ರಲ್ಲಿ ಹೇಳಿದ್ದು.

Anonymous said...

ಅಲ್ಲೊಂದು ಇಲ್ಲೊಂದು ಸ್ವಯಂಪ್ರೇರಿತವಾಗಿ ನಡೆಯುವ ಮತಾಂತರಕ್ಕೆ ಯಾರ ವಿರೋಧವೂ ಇರುವುದಿಲ್ಲ. ಆದರೆ ಇಂದು ನಡೆಯುತ್ತಿರುವ ಮತಾಂತರಗಳೆಲ್ಲಾ ೯೯% ಲೌಕಿಕ ಆಮಿಷಗಳಿಂದ, ಮತ್ತು ಪರಧರ್ಮ ನಿಂದನೆಯಿಂದ ನಡೆಯುತ್ತಿರುವುದಾಗಿದೆ. ಹಣ, ನೌಕರಿ, ಸೈಕಲ್ಲು, ದನ-ಕರುಗಳು ಗಳನ್ನು ನೀಡಿ ಮತಾಂತರಕ್ಕೆ ಪುಸಲಾಯಿಸುವ ಕ್ರೈಸ್ತ ಮಿಷನರಿಗಳಿಗೂ, ಚುನಾವಣೆಗಳಲ್ಲಿ ಸೀರೆ, ಕುಪ್ಪಸ, ಹೆಂಡ, ಹಣ ನೀಡಿ ಓಟು ದಕ್ಕಿಸಿಕೊಳ್ಳುವ ಭ್ರಷ್ಟ ರಾಜಕಾರಣಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ.

ಅಂದಹಾಗೆ ಪೋಪ್ ಜಾನ್ ಪಾಲ್ ಹೇಳಿದ್ದೆನ್ನಲಾದ ಈ ಮೇಲೆ ನೀಡಿರುವ ಹೇಳಿಕೆ ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ. ಪೋಪರು ಬಲಾತ್ಕಾರದ ಮತಾಂತರವನ್ನು ಒಪ್ಪಿದ್ದರೋ ಬಿಟ್ಟಿದ್ದರೋ ಗೊತ್ತಿಲ್ಲ. ಆದರೆ ಅವರ ಶಿಷ್ಯರಂತೂ ಅದನ್ನು ಯಾವುದೇ ಮುಲಾಜಿಲ್ಲದೆ ಭಾರತದಲ್ಲಿ ಮಾಡುತ್ತಿದ್ದಾರೆಂಬುದು ಅಕ್ಷರಸಃ ಸತ್ಯ. ಈ ಕೃತ್ಯಕ್ಕೆ ದೊಡ್ಡವರ ಸಹಕಾರ, ಸಹಮತಿ ಇಲ್ಲವೆನ್ನುವುದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟವೇ.

ಅಷ್ಟಕ್ಕೂ ಒಂದು ಧರ್ಮವನ್ನು ಹೇಗಾದರೂ ಮಾಡಿ ಪ್ರಪಂಚಕ್ಕೆಲ್ಲಾ ಹರಡಬೇಕೆನ್ನುವ ದುರಾಸೆ ಏಕೆ? ಸಣ್ಣಪುಟ್ಟ ಕಂಪನಿಗಳನ್ನು ನುಂಗಿ ದೈತ್ಯವಾಗಿ ಬೆಳೆಯುವ ಪಾಶ್ಚಾತ್ಯ ಜಗತ್ತಿನ ಕಾರ್ಪೊರೇಟ್ ಮನೋಭಾವ ಧಾರ್ಮಿಕ ಜಗತ್ತನ್ನೂ ಆಕ್ರಮಿಸಬೇಕೆ? ಒಂದು ಧರ್ಮದ ಬಗ್ಗೆ ಪ್ರಪಂಚದಲ್ಲೆಲ್ಲಾ ಪ್ರಚಾರ ಮಾಡಿ ತಿಳುವಳಿಕೆ ನೀಡುವುದರಲ್ಲಿ ಯಾವ ತಪ್ಪೂ ಇಲ್ಲ. ಹಿಂದೆ ಬೌದ್ಧ ಧರ್ಮವೂ ಭಾರತದಲ್ಲಿ ಜನಿಸಿ ನಂತರ ಪ್ರಪಂಚದಾದ್ಯಂತ ಪ್ರಸಾರವಾಯಿತಲ್ಲವೇ. ಆದರೆ ಈ ರೀತಿ ಪ್ರಸಾರ ಮಾಡುವಾಗ ಆಮಿಷ ಒಡ್ಡುವುದು, ಇನ್ನೊಂದು ಧರ್ಮವನ್ನು ಹೀಯಾಳಿಸುವಷ್ಟು ಕೀಳು ಮನೋಭಾವನೆ ಬೇಡ. ಈ ಅನೈತಿಕ ಮತಾಂತರದ ಜೊತೆಗೆ "ನಿಮ್ಮ ರಾಮ ಕೈಲಾಗದ ದೇವರು. ತನ್ನ ಹೆಂಡತಿಯನ್ನು ಕಾಪಾಡಲು ಕಪಿಗಳ ಸಹಾಯ ಬೇಕಾಯ್ತು"(ಮೈಸೂರಿನಲ್ಲಿ ನಡೆದ ಮತಾಂತರ ಪ್ರಸಂಗ), "ವಿಗ್ರಹಾರಾಧನೆ ಸೂಳೆಗಾರಿಕೆಗೆ ಸಮ" (ಬೆಂಗಳೂರಿನಲ್ಲಿ ನಡೆದ ಬೆನ್ನಿಹಿಂ ಸಭೆ) ಇಂತಹ ಅಪಪ್ರಚಾರವನ್ನು ಹಿಂದೂಗಳು ಸಹಿಸಿಕೊಳ್ಳಬೇಕಾಗಿದೆ. "ದೇವರೊಬ್ಬ ನಾಮ ಹಲವು", "ಅನೇಕ ನದಿಗಳು ಸಾಗರವನ್ನು ಸೇರುವಂತೆ, ಎಲ್ಲಾ ಧರ್ಮಗಳೂ ದೇವರನ್ನು ಸೇರಲು ಇರುವ ಮಾರ್ಗಗಳಾಗಿವೆ". ಈ ಅಂಶವನ್ನು ಕ್ರೈಸ್ತ, ಇಸ್ಲಾಂ ಧರ್ಮಿಗಳು ಒಪ್ಪಿಕೊಳ್ಳುವವರೆಗೂ ಕೋಮುವಾರು ಗಲಭೆಗಳು, ಭಯೋತ್ಪಾದನೆ ಆತಂಕ ಇದ್ದೇ ಇರುತ್ತದೆ.

ಇದರ ಜೊತೆಗೆ ನಮ್ಮ ಹಿಂದೂಗಳಲ್ಲಿರುವ ಕೆಲವು ಅಶ್ಪೃಷ್ಯತೆ, ಬಡತನ, ಅಜ್ಞಾನ, ವಿವಿಧ ಜಾತಿಗಳ ಸಂಘರ್ಷ, ಮೂಢ ಆಚರಣೆಗಳು ಮತಾಂತರಿಗಳಿಗೆ ತಮ್ಮ ಕಾರ್ಯ ಸಾಧಿಸಲು ಅನುಕೂಲಕರವಾಗಿದೆ. ನಮ್ಮಲ್ಲೂ ನೂನ್ಯತೆಗಳಿವೆ ನಿಜ. ಆದರೆ ಮಿಷನರಿಗಳ ನಡವಳಿಕೆ ಉರಿಯುತ್ತಿರುವ ಮನೆಯಲ್ಲಿ ಬೀಡಿ ಅಂಟಿಸಿಕೊಳ್ಳುವಷ್ಟು ಹೇಯಕರವಾದದ್ದು.

ಎಲ್ಲಾಧರ್ಮದ ಸಂಸ್ಥಾಪಕರೂ ದೈವಮಾನವರೆಂಬುದರಲ್ಲಿ ಸಂದೇಹವಿಲ್ಲ. ಕೃಷ್ಣ, ಬುದ್ದ, ಕ್ರಿಸ್ತ, ಮಹಮ್ಮದ್, ಅವರಲ್ಲಿ ದೈವತ್ವ ಇರದಿದ್ದರೆ, ಅವರ ಉಪದೇಶಗಳಲ್ಲಿ ಮಾನವೀಯತೆ ಇರದಿದ್ದರೆ, ಇಂದು ಕೋಟ್ಯಾಂತರ ಮಂದಿ ಅವರ ಅನುಯಾಯಿಗಳು ಇರುತ್ತಿರಲಿಲ್ಲ. ಪ್ರತಿಯೊಂದು ಧರ್ಮದ ಜನಾಂಗದಲ್ಲೂ ಇರುವ ಕೋಟ್ಯಾಂತರ ಮುಗ್ದ ಮನಸ್ಸುಗಳು ಇರುತ್ತಿರಲಿಲ್ಲ.

ದೇವರು ಹೇಳಿದಲೆನ್ನಲಾದ ಮಾತುಗಳನ್ನು ಪುಸ್ತಕರೂಪದಲ್ಲಿ ಬರೆದಿಟ್ಟವನು ಮನುಷ್ಯ ತಾನೆ!

ಮತಾಂತರ ನೋಡಿ: http://en.wikipedia.org/wiki/Religious_conversion

-ಅನಾಮಧೇಯ

Anonymous said...

www.hinduwisdom.info ದಲ್ಲಿ Politics of Conversion ಎಂಬ ಚಾಪ್ಟರ ಅನ್ನ ಒಮ್ಮೆ ಓದಿ ಜೀವನವನ್ನು ಪಾವನವಾಗಿಸಿಕೊಳ್ಳಿರಿ.