
“... ಹಿಂದೂ ವಾಯ್ಸ್” ಎಂಬ ಬುದ್ದಿಗೇಡಿ ಪತ್ರಿಕೆ ಸುಳ್ಳು ಹರಡುತ್ತಿದೆ. ...ರೀಲು ಬಿಡುತ್ತಿದೆ. ... ಉಗ್ರ ಹಿಂದುತ್ವವಾದಿಗಳಿಗೆ ಉಗಿಯುತ್ತಲೇ ಇದ್ದಾರೆ... ” “ರಾಮಾಯಣ ಮಹಾಭಾರತಗಳು ಭಾರತೀಯರು ಗೌರವಿಸುವ ಮಹಾನ್ ಪುರಾಣಗಳು. ಅವು ನಡೆದ ಘಟನೆಗಳಲ್ಲ...”
ಸ್ವಾಮೀ ವಿಕ್ರಾಂತಕರ್ನಾಟಕದ ಸಂಪಾದಕರೇ... ಮಕ್ಕಳ ವಿಭಾಗದಲ್ಲಿ ಬರೆಯೋ ರೀತೀನಾ ಇದು? ನಿಮ್ಮ ಎಡಪಂಥೀಯ ಜಗಳಾನ ಮಕ್ಕಳ ಆಟದ ಮೈದಾನಕ್ಕೂ ತರಬೇಡಿ. ಅವರ ಮನಸ್ಸನ್ನು ಹೊಲಸು ಮಾಡಬೇಡಿ.
ರಾಮಾಯಣ ನಡೀತೋ ಇಲ್ವೋ, ಆದ್ರೆ ರಾಮನನ್ನ ದೇವರು ಅಂತ ನಾವು ಪೂಜಿಸ್ತೀವಿ. ನಮ್ಮ ಮಕ್ಕಳು ದೊಡ್ಡೋರಾದ ಮೇಲೆ ದೇವ್ರನ್ನ ನಂಬ್ತಾರೋ ಬಿಡ್ತಾರೋ ಅದು ಅವ್ರಿಗೆ ಬಿಟ್ಟದ್ದು. ಅದುಬಿಟ್ಟು ಈಗ್ಲಿಂದಾನೇ ರಾಮ ನಿಜವಾದ ವ್ಯಕ್ತಿಯಲ್ಲಾ, ದೇವರಿಲ್ಲ... ಅಂತ ವಿಷವುಣಿಸೋ ಕಮ್ಯುನಿಸ್ಟ್ ದುರ್ಬುದ್ದಿ ಯಾಕೆ?
ಎಲ್ಲಾ ಧರ್ಮಗಳಲ್ಲೂ ದೇವರ ಬಗ್ಗೆ ಕಾಲ್ಪನಿಕ ಕಥೆಗಳು, ಅತಿಮಾನುಷ ಪ್ರಸಂಗಗಳು ಇದ್ದದ್ದೇ. ನಾವು ರಾಮಸೇತುವೆ ಬಗ್ಗೆ ಮಾತಾಡಿದ್ರೆ ಹುಬ್ಬೇರಿಸೋ ಈ ಜನ್ರಿಗೆ ನ್ಯಾಷನಲ್ ಜಿಯೋಗ್ರಫಿಕ್ಸ್ ನೋರು ನೋಹಾನ ನೌಕೆ ಹುಡುಕೋ ಪ್ರಯತ್ನ ಮಾಡೋದು ತಮಾಶಿ ಅನ್ಸಲ್ವಾ?
ಅಂದಹಾಗೆ, ಮೇಲಿನ ಚಿತ್ರದಲ್ಲಿ ಘಟೋತ್ಕಚನ ಅಸ್ಥಿಪಂಜರಾನ ಮೂಡಿಸೋ ಕೆಲಸ ಯಾರೋ ಚೆನ್ನಾಗಿ ಮಾಡಿದ್ದಾರೆ!
No comments:
Post a Comment